Market Crash: ಮಾರುಕಟ್ಟೆಯಲ್ಲಿ 'Black Mondey' ಪ್ರಭಾವ, 2000ಕ್ಕೂ ಹೆಚ್ಚು ಅಂಕಗಳಿಂದ ಕುಸಿದ Sensex, ಹೂಡಿಕೆದಾರರ 8 ಲಕ್ಷ ಕೋಟಿ ರೂ. ಗುಳುಂ

Market Crash: ಸತತ ಐದು ದಿನಗಳಿಂದ ಕುಸಿಯುತ್ತಿರುವ ಷೇರು  ಸೂಚ್ಯಂಕ ನಿಲ್ಲುವ ಮಾತೆ ಎತ್ತುತ್ತಿಲ್ಲ ಮತ್ತು ಇಂದು ಸೆನ್ಸೆಕ್ಸ್ (Sensex) 2000 ಕ್ಕೂ ಹೆಚ್ಚು ಅಂಕಗಳಿಂದ ಕುಸಿದು ತನ್ನ ವಹಿವಾಟು ಮುಂದುವರೆಸಿದೆ. ನಿಫ್ಟಿ (Nifty) ಮತ್ತು ಸೆನ್ಸೆಕ್ಸ್ ಎರಡೂ ಶೇ.3 ರಷ್ಟು ಕುಸಿತ ಕಂಡಿವೆ.

Written by - Nitin Tabib | Last Updated : Jan 24, 2022, 03:07 PM IST
  • ಸತತ ಐದನೇ ದಿನವೂ ಮುಂದುವರೆದ ಮಾರುಕಟ್ಟೆ ಕುಸಿತ.
  • ಇಂದು ಸೆನ್ಸೆಕ್ಸ್ 2000ಕ್ಕೂ ಹೆಚ್ಚು ಅಂಕಗಳಿಂದ ಕುಸಿತ.
  • ಬ್ಲಾಕ್ ಮಂಡೆ ಪ್ರಭಾವ ನಿಫ್ಟಿಯಲ್ಲಿಯೂ ಕೂಡ ಶೇ.3 ರಷ್ಟು ಕುಸಿತ
Market Crash: ಮಾರುಕಟ್ಟೆಯಲ್ಲಿ 'Black Mondey' ಪ್ರಭಾವ, 2000ಕ್ಕೂ ಹೆಚ್ಚು ಅಂಕಗಳಿಂದ ಕುಸಿದ Sensex, ಹೂಡಿಕೆದಾರರ 8 ಲಕ್ಷ ಕೋಟಿ ರೂ. ಗುಳುಂ title=
Market Crash (Representational Image)

Market Crash: ವಾರದ ಮೊದಲ ವಹಿವಾಟಿನ ದಿನವಾದ ಸೋಮವಾರದಂದು ಮಾರುಕಟ್ಟೆ ಯಾವ ರೀತಿ ಕುಸಿದಿದೆ ಎಂದರೆ ಇಂದಿನ ದಿನವನ್ನು ಮಾರುಕಟ್ಟೆಯ ‘Black Mondey’  ಎಂದು ಕರೆದರೂ ಕೂಡ ತಪ್ಪಾಗಲಾರದು.  ಬಿಎಸ್‌ಇ ಸೆನ್ಸೆಕ್ಸ್ ಇಂದು 2000ಕ್ಕೂ ಹೆಚ್ಚು ಅಂಕಗಳಿಂದ ಕುಸಿದಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಶೇ.3-3ಕ್ಕಿಂತ ಹೆಚ್ಚು ಕುಸಿತದೊಂದಿಗೆ ವಹಿವಾಟು ನಡೆಸುತ್ತಿವೆ.

ಮಾರುಕಟ್ಟೆ ಕುಸಿಯಲು ಇಲ್ಲಿವೆ 5 ಪ್ರಮುಖ ಕಾರಣಗಳು (Reasons For Market Crash)
- ವಿದೇಶಿ ಹೂಡಿಕೆದಾರರ ಬಿಕವಾಲಿ ಮುಂದುವರೆದಿದೆ ಹಾಗೂ ಅಮೆರಿಕಾದ ಫೆಡ್ ರಿಸರ್ವ್ ಬಡ್ಡಿ ದರಗಳನ್ನು ಹೆಚ್ಚಿಸುವ ಆತಂಕ ಅವರಲ್ಲಿ ಮೂಡಿದೆ.
- ಪೇಟಿಎಂ, ಕಾರ್ ಟ್ರೇಡ್, ಪಿಬಿ ಫಿಟ್ನೆಸ್ ಗಳಂತಹ ಟೆಕ್ ಸ್ಟಾಕ್ ಗಳಲ್ಲಿನ ಭಾರಿ ಕುಸಿತದ ಪ್ರಭಾವ ಷೇರು ಮಾರುಕಟ್ಟೆಯಲ್ಲಿ ಕಾಣಿಸುತ್ತಿದೆ.
- ದೇಶಾದ್ಯಂತ ನಿತ್ಯ 3 ಲಕ್ಷಕ್ಕೂ ಅಧಿಕ ಕೊರೊನಾ ವೈರಸ್ ಪ್ರಕರಣಗಳು ಕಂಡುಬರುತ್ತಿವೆ. ಹೀಗಿರುವಾಗ ಹೂಡಿಕೆದಾರರಲ್ಲಿ ಶಂಕೆ ಮನೆ ಮಾಡಿದೆ.
- ಮೆಟಲ್ ಸೇರದಂತೆ ಇತರ ಕಚ್ಚಾ ಸಾಮಗ್ರಿಗಳ ಬೆಲೆ ಏರಿಕೆಯಿಂದ ಕಂಪನಿಗಳ ಹೂಡಿಕೆಯಲ್ಲಿ ಏರಿಕೆಯಾಗುತ್ತಿದ್ದು, ಕಂಪನಿಗಳಿಗೆ ಆದಾಯ ಕಡಿಮೆಯಾಗುವ ಭಯ ಕಾಡುತ್ತಿದೆ.
- ಹಣದುಬ್ಬರ ಹಾಗೂ ಅಕಾಲಿಕ ಮಳೆಯ ಹಿನ್ನೆಲೆ ಗ್ರಾಹಕರ ಬಳಕೆ ನಿರೀಕ್ಷೆಗೆ ತಕ್ಕಂತೆ ಕಾಣಿಸುತ್ತಿಲ್ಲ

ಹೂಡಿಕೆದಾರರಿಂದ 8 ಲಕ್ಷ ಕೋಟಿ ರೂ
ಇಂದಿನ ಪತನದಲ್ಲಿ ಮಾರುಕಟ್ಟೆ ಬಂಡವಾಳವನ್ನು (Stock Market) ಗಮನಿಸಿದರೆ, ಹೂಡಿಕೆದಾರರ  ಒಟ್ಟು 8 ಲಕ್ಷ ಕೋಟಿ ರೂಪಾಯಿಗಳು ಮುಳುಗಿಹೋಗಿವೆ. ಶುಕ್ರವಾರ ನೋಡಿದರೆ ಮಾರುಕಟ್ಟೆ ಬಂಡವಾಳ 270 ಲಕ್ಷ ಕೋಟಿಗಳಷ್ಟು ಇದ್ದು, ಇಂದು 262 ಲಕ್ಷ ಕೋಟಿಗೆ ಇಳಿಕೆಯಾಗಿದೆ.

ಮಧ್ಯಾಹ್ನ 2:00ಕ್ಕೆ ಮಾರುಕಟ್ಟೆ ಸ್ಥಿತಿ
ನಿಫ್ಟಿಯ ಸ್ಥಿತಿಯನ್ನು ನೀವು ನೋಡಿದರೆ, ಮಧ್ಯಾಹ್ನ 2.00ರವರೆಗೆ Nifty 447.30 ಪಾಯಿಂಟ್ ಅಥವಾ ಸುಮಾರು ಶೇ.3 ರಷ್ಟು ಕುಸಿತದೊಂದಿಗೆ 17,169.85 ನಲ್ಲಿ ವಹಿವಾಟು ನಡೆಸುತ್ತಿದೆ. ಅಂದರೆ ನಿಫ್ಟಿ ತನ್ನ 17200 ರ ಪ್ರಮುಖ ಮಾನಸಿಕ ಮಟ್ಟವನ್ನು ಸಹ ಮುರಿದಿದೆ. ಇನ್ನೊಂದೆಡೆ, ಸೆನ್ಸೆಕ್ಸ್ 57,570ರಲ್ಲಿ  ವಹಿವಾಟು ನಡೆಸುತ್ತಿದೆ, ಅಂದರೆ 1466.82 ಪಾಯಿಂಟ್ ಅಥವಾ ಶೇ.3ರಷ್ಟು ಕಳೆದುಕೊಂಡಿದೆ.

ಇದನ್ನೂ ಓದಿ-ಹೊಸ ಸೇವೆ ಆರಂಭಿಸಿದ SBI, ಎಲ್ಲಾ ಗ್ರಾಹಕರಿಗೂ ಸಿಗಲಿದೆ ಭರ್ಜರಿ ಲಾಭ

ಸತತ ಐದನೇ ದಿನವೂ ಷೇರುಪೇಟೆ ಕುಸಿತ - ವಾರದಲ್ಲಿ 18 ಲಕ್ಷ ಕೋಟಿ ರೂ.
ಷೇರುಪೇಟೆಯಲ್ಲಿ ಸತತ ಐದನೇ ದಿನದ ಕುಸಿತದಿಂದಾಗಿ, ಒಟ್ಟಾರೆ ಮಾರುಕಟ್ಟೆ ಐದು ದಿನಗಳಲ್ಲಿ 3471 ಪಾಯಿಂಟ್‌ಗಳನ್ನು ಕಳೆದುಕೊಂಡಿದೆ. ಕಳೆದ ವಾರವೂ ಸತತ ನಾಲ್ಕು ದಿನಗಳ ಕುಸಿತದಲ್ಲಿ ಸೆನ್ಸೆಕ್ಸ್ 2271 ಅಂಕ ಕುಸಿದಿತ್ತು. ಇಂದಿನ 1224 ಅಂಕಗಳ ಕುಸಿತ ಪರಿಗಣಿಸಿದರೆ, ಒಟ್ಟಾರೆ ಮಾರುಕಟ್ಟೆಯಲ್ಲಿ 3500 ಅಂಕಗಳ ಕುಸಿತ ಕಂಡಿದೆ. ಕಳೆದ ವಾರದ ಸೆನ್ಸೆಕ್ಸ್‌ನ ಕುಸಿತದಲ್ಲಿ ಕೇವಲ ಬುಧವಾರ ಮತ್ತು ಗುರುವಾರ ಎರಡೇ ದಿನಗಳಲ್ಲಿ ಮಾರುಕಟ್ಟೆ ಕ್ರಮೇಣವಾಗಿ 656 ಅಂಕಗಳು ಮತ್ತು 634 ಅಂಕಗಳಿಂದ ಕುಸಿತ ದಾಖಲಿಸಿದೆ. ಕಳೆದ ಸೋಮವಾರ 280 ಲಕ್ಷ ಕೋಟಿಯಷ್ಟಿದ್ದ ಮಾರುಕಟ್ಟೆ ಬಂಡವಾಳ ಒಂದು ವಾರದಲ್ಲಿ 18 ಲಕ್ಷ ಕೋಟಿ ರೂ.ಗಳಷ್ಟು ಕಳೆದುಕೊಂಡಿದೆ..

ಇದನ್ನೂ ಓದಿ-ಈ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದರೆ ಗ್ರಾಹಕರಿಗೆ ಸಿಗಲಿದೆ 8 ಲಕ್ಷ ರೂಪಾಯಿಗಳ ಲಾಭ

ಹೂಡಿಕೆದಾರರ ಆತಂಕ ಹೆಚ್ಚಿಸಿದ ಇಂದಿನ ಕುಸಿತ
ಇಂದು ಬೆಳಗ್ಗೆ ಮಾರುಕಟ್ಟೆ ಆರಂಭವಾಗುತ್ತಲೇ, ಮೇಲ್ನೋಟಕ್ಕೆ ಮಾರುಕಟ್ಟೆ ಉನ್ನತ ಮಟ್ಟದಲ್ಲಿ ವ್ಯವಹಾರ ನಡೆಸಬಹುದು ಎಂಬ ಸಂಕೇತಗಳು ಗೋಚರಿಸಿದ್ದವು. ಆದರೆ, ನಂತರ ಮಾರುಕಟ್ಟೆ ಕೆಂಪು ಜೋನ್ ನಲ್ಲಿಯೇ ತೆರೆದುಕೊಂಡಿದೆ ಮತ್ತು ಪ್ರತಿಕ್ಷಣ ಇದರಲ್ಲಿ ಕುಸಿತ ಉಂಟಾಗುತ್ತಿರುವುದು ಕಂಡುಬಂದಿದೆ. ಮಾರುಕಟ್ಟೆಯ ಈ ಕುಸಿತ ಹೂಡಿಕೆದಾರರಲ್ಲಿ ಭಾರಿ ಆತಂಕ ಮೂಡಿಸಿದೆ ಹಾಗೂ ಮಾರುಕಟ್ಟೆಯ ಪಾಲಿಗೆ ಇದು ಒಳ್ಳೆಯ ಸಂಕೇತವಲ್ಲ ಎನ್ನಲಾಗಿದೆ.

ಇದನ್ನೂ ಓದಿ-Oben Electric Motorcycle: ಒಂದು ಬಾರಿ ಫುಲ್ ಚಾರ್ಜ್‌ನಲ್ಲಿ 200KM ವರೆಗೆ ಕ್ರಮಿಸುತ್ತಂತೆ ಈ ಎಲೆಕ್ಟ್ರಿಕ್ ಮೋಟಾರ್‌ಸೈಕಲ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News