Marriage Benefit: ಮದುವೆಯಾಗುವವರಿಗೆ ಸರ್ಕಾರ ನೀಡುತ್ತದೆ 51 ಸಾವಿರ! ಷರತ್ತುಗಳನ್ನು ಪಾಲಿಸಿದರೆ ಮಾತ್ರ !

Marriage Benefits Scheme : ಈ ಯೋಜನೆಯಲ್ಲಿ ಮದುವೆಯಾದ ಮೇಲೆ ಸರ್ಕಾರದ ವತಿಯಿಂದ ಹಣ ನೀಡಲಾಗುತ್ತಿದೆ. ಆದರೆ, ಈ ಮೊತ್ತವನ್ನು ಪಡೆಯಲು, ಕೆಲವು ಷರತ್ತುಗಳನ್ನು ಅನುಸರಿಸುವುದು ಅಗತ್ಯವಾಗಿದೆ.

Written by - Ranjitha R K | Last Updated : May 2, 2023, 04:10 PM IST
  • ಜನರ ಅನುಕೂಲಕ್ಕಾಗಿ ಹಲವು ಯೋಜನೆ ಜಾರಿಗೆ
  • ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆ
  • ಮದುವೆಯಾದರೆ ಸಿಗುವುದು ಈ ಹಣ
Marriage Benefit: ಮದುವೆಯಾಗುವವರಿಗೆ ಸರ್ಕಾರ ನೀಡುತ್ತದೆ 51 ಸಾವಿರ! ಷರತ್ತುಗಳನ್ನು ಪಾಲಿಸಿದರೆ ಮಾತ್ರ !  title=

ನವದೆಹಲಿ : ವಿವಿಧ ವರ್ಗದ ಜನರ ಅನುಕೂಲಕ್ಕಾಗಿ ಸರ್ಕಾರವು ಹಲವು ರೀತಿಯ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳ ಮೂಲಕ ಜನರಿಗೆ ಸಾಕಷ್ಟು ಪ್ರಯೋಜನಗಳನ್ನು ಸಹ ನೀಡಲಾಗುತ್ತದೆ. ಉತ್ತರ ಪ್ರದೇಶದ ಯೋಗಿ ಸರ್ಕಾರವು ಜನರ ಹಿತದೃಷ್ಟಿಯಿಂದ ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ಯೋಜನೆಗಳಲ್ಲಿ ಒಂದು ಮದುವೆಗೆ ಸಂಬಂಧಿಸಿದ್ದಾಗಿದೆ.  ಮದುವೆಯಾದ ಮೇಲೆ ಸರ್ಕಾರದ ವತಿಯಿಂದ ಹಣ ನೀಡಲಾಗುತ್ತಿದೆ. ಆದರೆ ಈ ಮೊತ್ತವನ್ನು ಪಡೆಯಲು, ಕೆಲವು ಷರತ್ತುಗಳನ್ನು ಅನುಸರಿಸುವುದು ಅಗತ್ಯವಾಗಿದೆ.

ಮುಖ್ಯಮಂತ್ರಿ  ಸಾಮೂಹಿಕ ವಿವಾಹ ಯೋಜನೆ :
ಅಕ್ಟೋಬರ್ 2017 ರಿಂದ, "ಮುಖ್ಯಮಂತ್ರಿ  ಸಾಮೂಹಿಕ ವಿವಾಹ ಯೋಜನೆ"ಯನ್ನು ಉತ್ತರ ಪ್ರದೇಶ ಸರ್ಕಾರ ನಡೆಸುತ್ತಿದೆ. ಈ ಯೋಜನೆಯ ಅಡಿಯಲ್ಲಿ ವಿವಿಧ ಸಮುದಾಯಗಳು ಮತ್ತು ಧರ್ಮಗಳ ಸಂಪ್ರದಾಯಗಳ ಪ್ರಕಾರ ವಿವಾಹ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ವಿವಾಹ ಸಮಾರಂಭದಲ್ಲಿ ಅನಗತ್ಯ ಪ್ರದರ್ಶನ ಮತ್ತು ವ್ಯರ್ಥ ಖರ್ಚುಗಳನ್ನು ತೊಡೆದುಹಾಕುವುದು ಯೋಜನೆಯ ಉದ್ದೇಶವಾಗಿದೆ.

ಇದನ್ನೂ ಓದಿ : Renault Kiger 2023: ಭಾರಿ ಅಬ್ಬರ ಸೃಷ್ಟಿಸಲು ಬಂದೆ ಬಿಟ್ತು 8 ಲಕ್ಷಕ್ಕೂ ಕಡಿಮೆ ಬೆಲೆಯ ಎಸ್ಯುವಿ, ಪಂಚ್, ಬ್ರೆಜ್ಜಾಗೆ ನೇರ ಪೈಪೋಟಿ

ಈ ಯೋಜನೆಯಡಿ ಇಷ್ಟು ಪ್ರಯೋಜನವನ್ನು ಪಡೆಯಬಹುದು : 
ಯಾವ  ಕುಟುಂಬಗಳ ವಾರ್ಷಿಕ ಆದಾಯ ಮಿತಿ  2 ಲಕ್ಷದ ಅಡಿಯಲ್ಲಿ ಬರುತ್ತದೆಯೋ ಅವರು ಈ ಯೋಜನೆಯಡಿಯಲ್ಲಿ ಪ್ರಯೋಜನಗಳನ್ನು ಪಡೆಯುತ್ತಾರೆ. ಈ ಯೋಜನೆಯಡಿ ವಿಧವೆ, ಪರಿತ್ಯಕ್ತ, ವಿಚ್ಛೇದಿತ ಮಹಿಳೆಯರ ವಿವಾಹಕ್ಕೂ ಅವಕಾಶವಿದೆ. ಈ ಯೋಜನೆಯಲ್ಲಿ ವೈವಾಹಿಕ ಜೀವನ ನಡೆಸಲು ಅನುಕೂಲವಾಗಿಸುವ ನಿಟ್ಟಿನಲ್ಲಿ ಮದುವೆಯ ವಿಧಿವಿಧಾನಗಳಿಗೆ ಬೇಕಾಗುವ ಬಟ್ಟೆ, , ಕಾಲುಂಗುರ, ಕಾಲ್ಗೆಜ್ಜೆ ಪಾತ್ರೆ ಮುಂತಾದ ವಸ್ತುಗಳನ್ನು ಖರೀದಿಸಲು 35,000 ಅನುದಾನವನ್ನು ವಧುವಿನ ಖಾತೆಗೆ ಹಾಕಲಾಗುತ್ತದೆ. ಅಲ್ಲದೆ  10,000 ನಗದನ್ನು ವಿವಾಹ ಸಂದರ್ಭದಲ್ಲಿ ನೀಡಲಾಗುವುದು. 

ಯೋಜನೆಯ ಪ್ರಯೋಜನ ಪಡೆಯಲು ಇಲ್ಲಿ ಅರ್ಜಿ ಸಲ್ಲಿಸಬಹುದು :
ಇದಲ್ಲದೆ, ಪ್ರತಿ ಜೋಡಿಯ ವಿವಾಹ ಸಮಾರಂಭಕ್ಕೆ 6,000 ರೂ.ಗಳನ್ನು ಖರ್ಚು ಮಾಡುವ ಸಲುವಾಗಿ ನೀಡಲಾಗುತ್ತದೆ. ಈ ರೀತಿಯಾಗಿ, ಯೋಜನೆಯಡಿ, ದಂಪತಿಗಳ ಮದುವೆಗೆ ಒಟ್ಟು 51,000 ರೂ. ಸರ್ಕಾರದ ವತಿಯಿಂದ ನೀಡಲಾಗುವುದು. ಈ ಯೋಜನೆಯ ಲಾಭ ಪಡೆಯಲು ನಗರ ಪಾಲಿಕೆ (ನಗರ ಪಂಚಾಯತ್, ಪುರಸಭೆ, ನಗರಸಭೆ), ಕ್ಷೇತ್ರ ಪಂಚಾಯತ್, ಜಿಲ್ಲಾ ಪಂಚಾಯತ್ ಮಟ್ಟದ ನೋಂದಣಿ ಮಾಡಬೇಕಾಗುತ್ತದೆ. ಕನಿಷ್ಠ 10 ಜೋಡಿಗಳ ವಿವಾಹವನ್ನು ಸಾಮೂಹಿಕ ವಿವಾಹದಲ್ಲಿ ಆಯೋಜಿಸಲು ವ್ಯವಸ್ಥೆ ಮಾಡಲಾಗುತ್ತದೆ.  

ಇದನ್ನೂ ಓದಿ : Pension News: ದೇಶದ ಲಕ್ಷಾಂತರ ಪಿಂಚಣಿದಾರರಿಗೆ ಸಂತಸದ ಸುದ್ದಿ ಪ್ರಕಟಿಸಿದ ಕೇಂದ್ರ ಸರ್ಕಾರ, ಮೇ 3 ದಿನಾಂಕ ಬರೆದಿಟ್ಟುಕೊಳ್ಳಿ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News