ಜನವರಿ 31 ರ ನಂತರ ನಿಷ್ಪ್ರಯೋಜಕ ನಿಮ್ಮ Fastag ! ನೀಡಬೇಕು ಡಬಲ್ ಟ್ಯಾಕ್ಸ್

FASTag Update: ಜನವರಿ 31 ರೊಳಗೆ KYC ಪೂರ್ಣಗೊಳಿಸದ ಫಾಸ್ಟ್ಯಾಗ್‌ಗಳನ್ನು  ಬ್ಲಾಕ್ ಲಿಸ್ಟ್ ಗೆ ಸೇರಿಸಲಾಗುವುದು ಅಥವಾ ನಿಷ್ಕ್ರಿಯಗೊಳಿಸಲಾಗುವುದು ಎಂದು NHAI  ಹೇಳಿದೆ. 

Written by - Ranjitha R K | Last Updated : Jan 15, 2024, 04:34 PM IST
  • ಟೋಲ್ ಪಾವತಿಸಲು ಫಾಸ್ಟ್ಯಾಗ್ ಬಳಸುವ ಜನರಿಗೆ ಇದು ಬಹಳ ಮುಖ್ಯವಾದ ಸುದ್ದಿಯಾಗಿದೆ.
  • ಜನವರಿ 31 ರೊಳಗೆ KYC ಪೂರ್ಣಗೊಳಿಸಬೇಕು
  • KYC ಪೂರ್ಣಗೊಳಿಸದ ಫಾಸ್ಟ್ಯಾಗ್‌ಗಳನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಲಾಗುವುದು
ಜನವರಿ 31 ರ ನಂತರ ನಿಷ್ಪ್ರಯೋಜಕ ನಿಮ್ಮ Fastag ! ನೀಡಬೇಕು ಡಬಲ್ ಟ್ಯಾಕ್ಸ್ title=

FASTag Update : ಟೋಲ್ ಪಾವತಿಸಲು ಫಾಸ್ಟ್ಯಾಗ್ ಬಳಸುವ ಜನರಿಗೆ ಇದು ಬಹಳ ಮುಖ್ಯವಾದ ಸುದ್ದಿಯಾಗಿದೆ. ನಿಮ್ಮ ಫಾಸ್ಟ್ಯಾಗ್‌ನ KYC ಅಪೂರ್ಣವಾಗಿದ್ದರೆ, ಜನವರಿ 31 ರ ನಂತರ ಅದನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಒಂದು ವಾಹನ ಒಂದು ಫಾಸ್ಟ್‌ಟ್ಯಾಗ್ ಅಭಿಯಾನದಡಿಯಲ್ಲಿ ಫಾಸ್ಟ್ಯಾಗ್‌ನ ಉತ್ತಮ ಅನುಭವವನ್ನು ಹೆಚ್ಚಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೋಮವಾರ ತಿಳಿಸಿದೆ. ಜನವರಿ 31 ರೊಳಗೆ KYC ಪೂರ್ಣಗೊಳಿಸದ ಫಾಸ್ಟ್ಯಾಗ್‌ಗಳನ್ನು  ಬ್ಲಾಕ್ ಲಿಸ್ಟ್ ಗೆ ಸೇರಿಸಲಾಗುವುದು ಅಥವಾ ನಿಷ್ಕ್ರಿಯಗೊಳಿಸಲಾಗುವುದು ಎಂದು ಹೇಳಿದೆ.  ಒಂದೇ ಫಾಸ್ಟ್ಯಾಗ್ ಅನ್ನು ಉತ್ತೇಜಿಸಲು, ಒಂದೇ ವಾಹನದಲ್ಲಿ ಒಂದಕ್ಕಿಂತ ಹೆಚ್ಚು ಫಾಸ್ಟ್ಯಾಗ್ ಹೊಂದಿರುವವರ ಖಾತೆಗಳನ್ನು ಲಿಸ್ಟ್ ಗೆ ಸೇರಿಸಲಾಗುವುದು ಎಂದು NHAI ಹೇಳಿದೆ. ಫಾಸ್ಟ್ಯಾಗ್‌ನ KYC ಯನ್ನು ಜನವರಿ 31 ರೊಳಗೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಇಲ್ಲವಾದರೆ ಜೇಬಿನ ಮೇಲಿನ ದುಪ್ಪಟ್ಟು ಹೊರೆ ಬೀಳುವುದು. ಯಾಕೆಂದರೆ ಟೋಲ್ ತೆರಿಗೆಯನ್ನು ನಗದು ರೂಪದಲ್ಲಿ ಪಾವತಿಸಿದರೆ, ಎರಡು ಪಟ್ಟು ತೆರಿಗೆಯನ್ನು ಪಾವತಿಸಬೇಕಾಗುತ್ತದೆ. 

KYC ಅಗತ್ಯ : 
ನಿಮ್ಮ ಫಾಸ್ಟ್ಯಾಗ್‌ನ KYC ಪೂರ್ಣಗೊಂಡಿಲ್ಲ ಎಂದಾದರೆ ಯಾವುದೇ ರೀತಿಯ  ವಿಳಂಬ ಮಾಡದೇ ಈ ಕಾರ್ಯವನ್ನು ಪೂರ್ಣಗೊಳಿಸಿ.ಇಲ್ಲವಾದರೆ ಜೇಬಿನ ಮೇಲೆ ಹೆಚ್ಚಿನ ಹೊರೆ ಬೀಳುತ್ತದೆ. ನಿಮ್ಮ ಫಾಸ್ಟ್ಯಾಗ್‌ನ KYC ಅನ್ನು ಪೂರ್ಣಗೊಳಿಸದಿದ್ದಲ್ಲಿ ನಿಮ್ಮ ಫಾಸ್ಟ್ಯಾಗ್ ನಿಷ್ಕ್ರಿಯವಾಗುತ್ತದೆ. ಅಷ್ಟೇ ಅಲ್ಲ ಡಬಲ್ ಟೋಲ್ ಟ್ಯಾಕ್ಸ್ ಕೂಡಾ ಕಟ್ಟಬೇಕಾಗುತ್ತದೆ. KYC ಅನ್ನು ಪೂರ್ಣಗೊಳಿಸಲು ಫಾಸ್ಟ್ಯಾಗ್ ಹೊಂದಿರುವವರಿಗೆ NHAI ಸೂಚನೆ ನೀಡಿದೆ. ಒಂದು ವಾಹನ ಒಂದು ಫಾಸ್ಟ್ಯಾಗ್ ಯೋಜನೆಯನ್ನು ಜಾರಿಗೊಳಿಸಲು ಜನವರಿ 31ರ ಗಡುವನ್ನು NHAI ನಿಗದಿಪಡಿಸಿದೆ. ಒಂದು ವೇಳೆ ಈ ದಿನಾಂಕದೊಳಗೆ KYC ಯನ್ನು ಪೂರ್ಣಗೊಳಿಸದಿದ್ದಲ್ಲಿ ಫಾಸ್ಟ್ಯಾಗ್ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.

ಇದನ್ನೂ ಓದಿ : Stock market: ಮೊದಲ ಬಾರಿಗೆ 73,000 ಗಡಿ ದಾಟಿದ ಸೆನ್ಸೆಕ್ಸ್, 22,000 ಗಡಿ ದಾಟಿದ ನಿಫ್ಟಿ!

ಒಂದು ವಾಹನದಲ್ಲಿ ಒಂದಕ್ಕಿಂತ ಹೆಚ್ಚು ಫಾಸ್ಟ್ಯಾಗ್ ಬಳಸುವವರು ಅನೇಕರಿದ್ದಾರೆ.ಆದರೆ,  ಈ ರೀತಿ ಮಾಡುವುದು ತಪ್ಪು ಎಂದು NHAI ಘೋಷಿಸಿದೆ. ಪ್ರತಿ ವಾಹನಕ್ಕೂ Fastag ತೆಗೆದುಕೊಳ್ಳಬೇಕು. RBI ಮಾರ್ಗಸೂಚಿಗಳ ಅಡಿಯಲ್ಲಿ, KYC ಇಲ್ಲದ ಫಾಸ್ಟ್ಯಾಗ್ ಅನ್ನು ನಿಷ್ಕ್ರಿಯಗೊಳಿಸಲಾಗುವುದು ಎಂದು NHAI ಹೇಳಿದೆ. ಫಾಸ್ಟ್ಯಾಗ್‌ನ ವ್ಯಾಪ್ತಿಯು ಶೇಕಡಾ 98 ಕ್ಕೆ ತಲುಪಿದೆ ಎಂಬುದು ಗಮನಾರ್ಹ. ಪ್ರಸ್ತುತ 8 ಕೋಟಿಗೂ ಹೆಚ್ಚು ಜನರು ಇದನ್ನು ಬಳಸುತ್ತಿದ್ದಾರೆ.

ಇದನ್ನೂ ಓದಿ :  ಸಂಕ್ರಾಂತಿ ವೇಳೆ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ: ಇದೇ ತಿಂಗಳು ವೇತನ ಪರಿಷ್ಕರಣೆ ಖಚಿತ !ಪಿಂಚಣಿ ದಾರರಿಗೂ ಲಾಭ !

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News