ನವದೆಹಲಿ : ನಿಸ್ಸಾನ್ ಹೊಸ ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ವಾಹನವನ್ನು (Nissan Electric Car) ಘೋಷಿಸಿದೆ. ನಿಸ್ಸಾನ್ ಮೈಕ್ರಾದ ಯಶಸ್ಸಿನ ನಂತರ, ಈ ಕಾರನ್ನು ಮಾರುಕಟ್ಟೆಗೆ ತರುತ್ತಿದೆ. ಇದನ್ನು ಭಾರತದಲ್ಲಿ ಮೊದಲು ಮಾರಾಟ ಮಾಡಲಾಗಿತ್ತು. ಮೈಕ್ರಾದ ಎಲೆಕ್ಟ್ರಿಕ್ ಅವತಾರವನ್ನು ಪರಿಚಯಿಸಲಾಗುತ್ತಿದ್ದು, ಯುರೋಪಿಯನ್ ಮಾರುಕಟ್ಟೆಯಲ್ಲಿ ಇದು ಮೊದಲಿಗೆ ಮಾರಾಟವಾಗಲಿದೆ. ಭಾರತದಲ್ಲೂ ಎಲೆಕ್ಟ್ರಿಕ್ ವಾಹನಗಳ ಟ್ರೆಂಡ್ (Electric vehicle trend) ಆರಂಭವಾಗಿದ್ದು, ಕ್ರಮೇಣ ನಿಸ್ಸಾನ್ ದೇಶದಲ್ಲಿ ಲಾಂಚ್ ಮಾಡಿದರೂ ಆಶ್ಚರ್ಯವಿಲ್ಲ. ಈ ಕಾರನ್ನು ಫ್ರಾನ್ಸ್ನ ನಿಸ್ಸಾನ್ ಕಾರ್ಖಾನೆಯಲ್ಲಿ ತಯಾರಿಸಲಾಗುವುದು ಮತ್ತು ಇದು ತುಂಬಾ ಅಗ್ಗದ ಕಾರೂ ಆಗಿರಲಿದೆ.
ಈ ಹೊಸ ಎಲೆಕ್ಟ್ರಿಕ್ ವಾಹನವು (Electric vehicle) ನಿಸ್ಸಾನ್ನ ಆಂಬಿಷನ್ 2030ರ ಭಾಗವಾಗಿದೆ ಎಂದು ಈ ಜಪಾನೀಸ್ ಬ್ರ್ಯಾಂಡ್ ಹೇಳಿದೆ. ಉಳಿದ EV ಗಳಲ್ಲಿ ನಿಸ್ಸಾನ್ ಏರಿಯಾ, ಹೊಸ ಎಲೆಕ್ಟ್ರಿಕ್ ಕ್ರಾಸ್ಒವರ್, ಹೊಸ ಕಶ್ಕೈ ಮತ್ತು ಎಕ್ಸ್-ಟ್ರಯಲ್ ಸೇರಿವೆ. ಈ ಕಾಂಪ್ಯಾಕ್ಟ್ ಇವಿಯನ್ನು (Compact EV) ನಿಸ್ಸಾನ್ ವಿನ್ಯಾಸಗೊಳಿಸಿದೆ ಮತ್ತು ರೆನಾಲ್ಟ್ ಉತ್ಪಾದಿಸುತ್ತದೆ. ಈ ಎಲೆಕ್ಟ್ರಿಕ್ ಕಾರನ್ನು CMF C-EV ಪ್ಲಾಟ್ಫಾರ್ಮ್ನಲ್ಲಿ ನಿರ್ಮಿಸಲಾಗುತ್ತಿದೆ. ಈ ಪ್ಲಾಟ್ ಫಾರಂನೊಂದಿಗೆ ಎರಡೂ ಕಂಪನಿಗಳು ತಮ್ಮ ಉತ್ಪನ್ನಗಳಿಗೆ ವಿಭಿನ್ನ ಮತ್ತು ವಿಶಿಷ್ಟ ಶೈಲಿಯನ್ನು ನೀಡುವುದು ಸುಲಭವಾಗಲಿದೆ (New Electric car).
ಇದನ್ನೂ ಓದಿ : Kisan Credit Card : ಈಗ ಮನೆಯಲ್ಲಿ ಕುಳಿತೆ ಪಡಿಬಹುದು 'SBI ಕಿಸಾನ್ ಕ್ರೆಡಿಟ್ ಕಾರ್ಡ್' : ಹೇಗೆ ಇಲ್ಲಿದೆ ನೋಡಿ
ಟೀಸರ್ನಲ್ಲಿ ಕಾರಿನ ಹೆಡ್ಲ್ಯಾಂಪ್ಗಳು :
ನಿಸ್ಸಾನ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವಿನಿ ಗುಪ್ತಾ (Ashwini Gupta) ಅವರು, "ಈ ಎಲ್ಲಾ-ಹೊಸ ಮಾದರಿಯನ್ನು ನಿಸ್ಸಾನ್ ವಿನ್ಯಾಸಗೊಳಿಸಿದೆ. ಇದರ ಎಂಜಿನಿಯರಿಂಗ್ ಮತ್ತು ಉತ್ಪಾದನೆಯ ಕಾರ್ಯವನ್ನು, ನಿಸಾನ್ (Nissan) ಪೂರ್ಣಗೊಳಿಸಲಿದೆ. ಇದಕ್ಕಾಗಿ, ಹೊಸ ಸಾಮಾನ್ಯ ಅಥವಾ ಸಂಯೋಜಿತ ವೇದಿಕೆಯನ್ನು ಬಳಸಿಕೊಳ್ಳಲಾಗುವುದು. ಇದರಿಂದಾಗಿ ಈ ಒಪ್ಪಂದದ ಗರಿಷ್ಟ ಲಾಭವನ್ನು ಪಡೆಯುವುದು ಸಾಧ್ಯವಾಗುತ್ತದೆ. ಹೊಸ ಟೀಸರ್ ಕಾರಿನ ಸುತ್ತಿನ ಹೆಡ್ಲ್ಯಾಂಪ್ಗಳು (Head lamp) ಮತ್ತು ಅದರ ಸುತ್ತಲೂ ಇರುವ LED DRL ಗಳನ್ನು ತೋರಿಸುತ್ತದೆ.
ಕಂಪನಿಯು ಈ ಕಾರನ್ನು ಯುರೋಪಿನಲ್ಲಿ ಮಾತ್ರ ಮಾರಾಟ ಮಾಡುವ ಬಗ್ಗೆ ಹೇಳಿದೆ.
ಇದನ್ನೂ ಓದಿ : SBI: ನೀವು ಕುಳಿತಲ್ಲಿಯೇ ಎಸ್ಬಿಐ ಡೆಬಿಟ್ ಕಾರ್ಡ್ ಪಿನ್ ಅನ್ನು ರಚಿಸಬಹುದು; ಇಲ್ಲಿದೆ ಸುಲಭ ಮಾರ್ಗ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.