ನವದೆಹಲಿ : Indian Currency : ಇತ್ತೀಚಿನ ದಿನಗಳಲ್ಲಿ ವಿಶೇಷ ರೀತಿಯ ನೋಟುಗಳ ವಿಶೇಷ ಚಲಾವಣೆ ಬಂದಿದೆ. ಜನ ಕೂಡಾ ಈ ರೀತಿಯ ನೋಟುಗಳನ್ನು ತಮ್ಮದಾಗಿಸಲು ಉತ್ಸಾಹ ತೋರುತ್ತಿದ್ದಾರೆ. ಈ ನೋಟುಗಳ ಖರೀದಿಗೆ ಭಾರೀ ಖರ್ಚು ಮಾಡುತ್ತಿದ್ದಾರೆ. ನಿಮ್ಮ ಬಳಿ 10, 20, 50 ಅಥವಾ 100 ನೋಟು ಇದ್ದು, ಅದರ ಸರಣಿ ಸಂಖ್ಯೆ 786 ಆಗಿದ್ದರೆ, ನೀವು ಕೂಡಾ ಮನೆಯಲ್ಲಿ ಕುಳಿತು ಲಕ್ಷಾಂತರ ರೂಪಾಯಿಗಳನ್ನುಸಂಪಾದಿಸಬಹುದು. ಅನೇಕರಿಗೆ ಹಳೆಯ ನೋಟುಗಳು (old notes) ಮತ್ತು ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸವಿರುತ್ತದೆ. ಹೀಗೆ ಸಂಗ್ರಹಿಸಿದ ನೋಟುಗಳನ್ನು ಮಾರಾಟ ಮಾಡಿದರೆ ಹೆಚ್ಚು ಹಣವನ್ನು ಗಳಿಸಬಹುದು. ಇದಕ್ಕಾಗಿ ಅನೇಕ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ (online paltform) ಬಿಡ್‌ಗಳನ್ನು ಆಹ್ವಾನಿಸಲಾಗುತ್ತಿದೆ.
ನಿಮ್ಮ ಬಳಿ 786 ಸರಣಿ ಸಂಖ್ಯೆಯ 1, 2, 5, 10, 20, 50 ಅಥವಾ 100 ರೂಪಾಯಿಗಳ ನೋಟುಗಳಿದ್ದರೆ, ಅದಕ್ಕೆ ಬದಲಾಗಿ ಲಕ್ಷಾಂತರ ರೂಪಾಯಿಯನ್ನು ಸಂಪಾದಿಸಬಹುದು. ebay ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ಈ ಎಲ್ಲಾ ನೋಟುಗಳನ್ನು ಆನ್‌ಲೈನ್‌ನಲ್ಲಿ (old note selling) ಮಾರಾಟ ಮಾಡಬಹುದು.
ಇದನ್ನೂ ಓದಿ : RBI Master Stroke: ಅಮೆರಿಕ ಮೂಲದ ಮಾಸ್ಟರ್ ಕಾರ್ಡ್ ಗೆ ಹೊಸ ಗ್ರಾಹಕರ ನಿಷೇಧ..!
ಒಂದು ನೋಟಿನ ಬದಲಿಗೆ ಸಿಗಲಿದೆ 3 ಲಕ್ಷ ರೂಪಾಯಿಗಳು :
ವಿಶೇಷ ರೀತಿಯ ನೋಟುಗಳ ಆನ್‌ಲೈನ್ ಖರೀದಿ ಮತ್ತು ಮಾರಾಟವನ್ನು ebay ವೆಬ್‌ಸೈಟ್‌ನಲ್ಲಿ ಮಾಡಲಾಗುತ್ತದೆ. ಯಾರು ಬೇಕಾದರೂ ಇದರಲ್ಲಿ ಭಾಗವಹಿಸಬಹುದು. 786 ಸರಣಿ ಸಂಖ್ಯೆಯ ನೋಟುಗಳು ನಿಮ್ಮಲ್ಲಿದ್ದರೆ, ಆ ನೋಟನ್ನು ಆನ್‌ಲೈನ್ ನಲ್ಲಿ ಬಿಡ್ (onlne note selling) ಮಾಡಬಹುದು. ಈ ಮೂಲಕ ಮನೆಯಲ್ಲಿ ಕುಳಿತು ಸುಲಭವಾಗಿ 3 ಲಕ್ಷ ರೂ. ಗಳಿಸಬಹುದು. ಈ ಸರಣಿ ಸಂಖ್ಯೆಯ ನೋಟು ಪಡೆಯಲು ಅನೇಕ ಜನರು ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಲು ಸಿದ್ದರಿರುತ್ತಾರೆ. ವಾಸ್ತವವಾಗಿ, ಈ ಸಂಖ್ಯೆಯ ನೋಟುಗಳನ್ನು ಪರ್ಸ್‌ನಲ್ಲಿ ಇಡುವುದು ಬಹಳ ಶುಭ (good luck) ಎನ್ನುವುದು ಅನೇಕರ ನಂಬಿಕೆ. ಈ ಕಾರಣದಿಂದಾಗಿಯೇ ಅವರು ಇದಕ್ಕಾಗಿ ಯಾವಾಗಲೂ ಹೆಚ್ಚಿನ ಹಣವನ್ನು ಖರ್ಚು ಮಾಡಲು ಸಿದ್ಧರಿರುತ್ತಾರೆ.
ನೋಟುಗಳನ್ನು ಮಾರಾಟ ಮಾಡುವುದು ಹೇಗೆ ತಿಳಿಯಿರಿ :
ಮೊದಲಿಗೆ www.ebay.com ಗೆ ಹೋಗಿ.
ಹೊಂ ಪೇಜ್ ನಲ್ಲಿ ನೋಂದಾಯಿಸಲು ಕ್ಲಿಕ್ ಮಾಡಿ.
ನಿಮ್ಮಲ್ಲಿರುವ ನೋಟಿನ ಫೋಟೋ ತೆಗೆದು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿ.
ebay ಮೂಲಕ ಈ ವಿಶೇಷ ನೋಟ್ ಖರೀದಿಸಲು ಆಸಕ್ತಿಯಿರುವ ಜನರಿಗೆ ನೋಟಿಫಿಕೆಶನ್ ತಲುಪುತ್ತದೆ
ನೋಟು ಖರೀದಿಸಲು ಆಸಕ್ತಿ ಇರುವವರು ನಿಮ್ಮನ್ನು ಸಂಪರ್ಕಿಸುತ್ತಾರೆ.
ಅಥವಾ ನಿಮ್ಮ ನೋಟನ್ನು ಮಾರಾಟ ಮಾಡಲು ನೀವು ಕೂಡಾ ಅವರನ್ನು ಸಂಪರ್ಕಿಸಬಹುದು.
ಇದನ್ನೂ ಓದಿ : 7th Pay Commission: ಸರ್ಕಾರಿ ನೌಕರರ DA ಶೇ. 28ಕ್ಕೆ ಏರಿಕೆಯಾದರೂ ಕೂಡ ನೌಕರರ ಈ ಖುಷಿ ಪರಿಪೂರ್ಣವಲ್ಲ, ಕಾರಣ ಇಲ್ಲಿದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ