Offline NEFT-RTGS: ತಂತ್ರಜ್ಞಾನದ ಈ ಯುಗದಲ್ಲಿ ಆನ್ಲೈನ್ ಬ್ಯಾಂಕಿಂಗ್ ಮೂಲಕ ತಕ್ಷಣ ಹಾಗೂ ಸುಲಭವಾಗಿ ಹಣವನ್ನು ವರ್ಗಾಯಿಸಬಹುದು. ನಗರ ಪ್ರದೇಶಗಳಲ್ಲಿ ಮೊಬೈಲ್, ಕಂಪ್ಯೂಟರ್ ಹಾಗೂ 24x7 ಇಂಟರ್ನೆಟ್ ಸೌಲಭ್ಯ ಇರುವುದರಿಂದ ಜನರಿಗೆ ಇದರಲ್ಲಿ ಹೆಚ್ಚಿನ ತೊಂದರೆ ಎದುರಾಗುವುದಿಲ್ಲ. ನಗರದಲ್ಲಿನ ಜನರು NEFT ಹಾಗೂ RTGS ಮೂಲಕ ಯಾವಾಗ ಬೇಕಾದರೂ ಹಣವನ್ನು ವರ್ಗಾಗಿಸಬಹುದು. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಬಂದಾಗ ಇಂಟರ್ನೆಟ್ ಸಂಪರ್ಕದ ಕೊರತೆಯ ಕಾರಣ ಮತ್ತು ಪ್ರತಿಯೊಬ್ಬ ವ್ಯಕ್ತಿಯ ಬಳಿ ಸ್ಮಾರ್ಟ್ ಫೋನ್ ಅಥವಾ ಕಂಪ್ಯೂಟರ್ ಇಲ್ಲದೆ ಇರುವ ಕಾರಣ ಜನರು ಈ ಸೇವೆಗಳ ಲಾಭ ಪಡೆದುಕೊಳ್ಳುವುದು ಸಾಧ್ಯವಾಗುವುದಿಲ್ಲ. ಈ ಸಮಸ್ಯೆಗೆ ಅಂತ್ಯ ಹಾಡಲು ಇದೀಗ NEFT ಹಾಗೂ RTGS ಸೇವೆಗಳನ್ನು ಆಫ್ಲೈನ್ ನಲ್ಲಿಯೂ ಕೂಡ ಆರಂಭಿಸಲಾಗಿದೆ.
ಆಫ್ಲೈನ್ ಹಣ ವರ್ಗಾವಣೆಯ ಪ್ರಕ್ರಿಯೆ
ಮೊಬೈಲ್, ಕಂಪ್ಯೂಟರ್ ಅಥವಾ ಇಂಟರ್ನೆಟ್ ಸಂಪರ್ಕ ಇಲ್ಲದೆ ಇರುವ ಅಥವಾ ಸರಿಯಾಗಿ ಇಲ್ಲದೆ ಇರುವವರಿಗೆ NEFT ಹಾಗೂ RTGS ಆಫ್ಲೈನ್ ಸೇವೆ ತುಂಬಾ ಲಾಭಕಾರಿಯಾಗಿದೆ. ಇದಲ್ಲದೆ ಆನ್ಲೈನ್ ಬ್ಯಾಂಕಿಂಗ್ ತಂತ್ರಜ್ಞಾನ ತಿಳಿದಿಲ್ಲದವರಿಗೂ ಕೂಡ ಈ ಸೇವೆ ತುಂಬಾ ಸಹಕಾರಿಯಾಗಿದೆ. ಈ ಆಫ್ ಲೈನ್ ಬ್ಯಾಂಕಿಂಗ್ ಸೇವೆಯ ಲಾಭ ಪಡೆಯಲು ಮೊದಲು ನೀವು ಖಾತೆ ಹೊಂದಿರುವ ನಿಮ್ಮ ಬ್ಯಾಂಕ್ ನ ಹತ್ತಿರದ ಶಾಖೆಗೆ ಭೇಟಿ ನೀಡಬೇಕು. ಆದರೆ, ಆ ಬ್ಯಾಂಕ್ ನಲ್ಲಿ ಈ ಸೇವೆ ಲಭ್ಯವಿದೆ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಿ.
ಈ ರೀತಿ ಬಳಸಿ ಆಫ್ಲೈನ್ NEFT ಹಾಗೂ RTGS ಸೇವೆ
NEFT ಮತ್ತು RTGS ಗಾಗಿ, ನೀವು ಬ್ಯಾಂಕಿನಲ್ಲಿ NEFT ಅಥವಾ RTGS ನಿಧಿ ವರ್ಗಾವಣೆ ವಿನಂತಿಯ ಫಾರ್ಮ್ ಭರ್ತಿ ಮಾಡಬೇಕು. ಇದರಲ್ಲಿ, ನೀವು ಹಣವನ್ನು ಕಳುಹಿಸಬೇಕಾದ ವ್ಯಕ್ತಿಯ ಹೆಸರು, ಖಾತೆ ಸಂಖ್ಯೆ, ಬ್ಯಾಂಕ್ ಹೆಸರು, ಐಎಫ್‌ಎಸ್‌ಸಿ ಕೋಡ್ ಮತ್ತು ಮೊತ್ತವನ್ನು ತುಂಬಬೇಕು. ಈ ನಮೂನೆಯೊಂದಿಗೆ, ನೀವು ವರ್ಗಾವಣೆ ಮಾಡಬಯಸುವ ಮೊತ್ತದ ಚೆಕ್ ಅನ್ನು ಲಗತ್ತಿಸಬೇಕು. ಅದರ ನಂತರ ಅದನ್ನು ಬ್ಯಾಂಕಿನಲ್ಲಿ ಜಮಾ ಮಾಡಿ ಮತ್ತು ನಿಮ್ಮ ಹಣವನ್ನು NEFT ಅಥವಾ RTGS ಮೂಲಕ ವರ್ಗಾಯಿಸಲಾಗುತ್ತದೆ. ಇದಕ್ಕಾಗಿ ನೀವು ಬ್ಯಾಂಕಿಗೆ ಸ್ವಲ್ಪ ಶುಲ್ಕವನ್ನು ಪಾವತಿಸಬೇಕು.
ಇದನ್ನೂ ಓದಿ-EPFO- ಆಧಾರ್ ಲಿಂಕ್ Alert! ಈ ದಿನಾಂಕದ ಒಳಗೆ ಈ ದಾಖಲೆಗಳನ್ನು ಲಿಂಕ್ ಮಾಡಿ! ಹೇಗೆ ಇಲ್ಲಿದೆ ನೋಡಿ
ಹಣ ವರ್ಗಾವಣೆಗೆ IFSC ಕೋಡ್ ಅತ್ಯಾವಶ್ಯಕ
ಆಫ್‌ಲೈನ್ NEFT ಮತ್ತು RTGS ಮೂಲಕ ಹಣವನ್ನು ವರ್ಗಾಯಿಸಲು, ನೀವು ಹಣವನ್ನು ಕಳುಹಿಸಲು ಬಯಸುವ ಬ್ಯಾಂಕಿನ ಶಾಖೆಯ IFSC ಕೋಡ್ ಅನ್ನು ಹೊಂದಿರುವುದು ಅವಶ್ಯಕ. ಇದು 11 ಸಂಖ್ಯೆಗಳ ಕೋಡ್ ಆಗಿದ್ದು, ಪ್ರತಿ ಶಾಖೆಗೆ ಇದು ವಿಭಿನ್ನವಾಗಿರುತ್ತದೆ. ಆದ್ದರಿಂದ ನೀವು IFSC ಕೋಡ್ ಅನ್ನು ತಿಳಿದಿರಬೇಕು.
ಇದನ್ನೂ ಓದಿ-PF ಖಾತೆಗೆ ಸಂಬಂಧಿಸಿದ ಈ ಕೆಲಸವನ್ನು ಬೇಗ ಮಾಡಿ : ಇಲ್ಲದಿದ್ದರೆ 7 ಲಕ್ಷಕ್ಕಿಂತ ಹೆಚ್ಚು ಹಣ ಕಳೆದುಕೊಳ್ಳಬೇಕಾಗುತ್ತದೆ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ