Petrol Price: ಪೆಟ್ರೋಲ್ ಮಾರಾಟದಿಂದ ತೈಲ ಕಂಪನಿಗೆ ಲೀಟರ್‌ಗೆ 10 ರೂ. ಲಾಭ!

Petrol Diesel Price: ಪೆಟ್ರೋಲ್‌ ಮಾರಾಟದಿಂದ ಲಾಭ ಆಗುತ್ತಿದ್ದರೂ ಡೀಸೆಲ್‌ನಿಂದಾಗುತ್ತಿರುವ ನಷ್ಟ ಭರಿಸಿಕೊಳ್ಳುವ ಉದ್ದೇಶದಿಂದ ಈ 3 ಕಂಪೆನಿಗಳು ತೈಲ ಮಾರಾಟ ದರದಲ್ಲಿ ಪರಿಷ್ಕರಣೆ ಮಾಡಿಲ್ಲವೆಂದು ಹೇಳಲಾಗಿದೆ.

Written by - Puttaraj K Alur | Last Updated : Jan 7, 2023, 07:39 PM IST
  • ಪೆಟ್ರೋಲ್‌ ಮಾರಾಟದಿಂದ ತೈಲ ಕಂಪನಿಗೆ ಲೀಟರ್‌ಗೆ 10 ರೂ. ಲಾಭವಾಗುತ್ತಿದೆ
  • ಪ್ರತಿ ಲೀಟರ್ ಡೀಸೆಲ್‍ನಿಂದ 6.5 ರೂ. ನಷ್ಟ ಅನುಭವಿಸುತ್ತಿರುವ ತೈಲ ಕಂಪನಿಗಳು
  • ಡೀಸೆಲ್‌ ಮೇಲಿನ ನಷ್ಟ ಭರಿಸಿಕೊಳ್ಳಲು ತೈಲ ದರ ಪರಿಷ್ಕರಣೆ ಮಾಡದ ತೈಲ ಕಂಪನಿಗಳು
Petrol Price: ಪೆಟ್ರೋಲ್ ಮಾರಾಟದಿಂದ ತೈಲ ಕಂಪನಿಗೆ ಲೀಟರ್‌ಗೆ 10 ರೂ. ಲಾಭ! title=
ಪೆಟ್ರೋಲ್ ಮಾರಾಟದಿಂದ 10 ರೂ. ಲಾಭ

ನವದೆಹಲಿ: ಪೆಟ್ರೋಲ್‌ ಮಾರಾಟದಿಂದ ತೈಲ ಕಂಪನಿಗೆ ಲೀಟರ್‌ಗೆ 10 ರೂ. ಲಾಭವಾಗುತ್ತಿದೆ. ಅದೇ ರೀತಿ ಡೀಸೆಲ್ ಅನ್ನು ಲೀಟರ್‍ಗೆ 6.5 ರೂ.ನಷ್ಟು ನಷ್ಟದಲ್ಲಿ ಮಾರಾಟ ಮಾಡುತ್ತಿವೆ ಎಂದು ವರದಿಯಾಗಿದೆ.

ತೈಲ ಕಂಪನಿಗಳು 10 ರೂ. ಲಾಭದಲ್ಲಿ ಪೆಟ್ರೋಲ್‍ ಮಾರಾಟ ಮಾಡಿದ್ರೂ ಚಿಲ್ಲರೆ ಬೆಲೆ ಕಡಿಮೆ ಮಾಡಲು ಸಾಧ‍್ಯವಾಗಿಲ್ಲ. ಏಕೆಂದರೆ ಲೀಟರ್ ಡೀಸೆಲ್ ಮೇಲಿನ 6.5 ರೂ. ಮತ್ತು ಹಿಂದಿನ ನಷ್ಟವನ್ನು ಮರುಪಾವತಿಸುವುದರಿಂದ ಬೆಲೆ ಇಳಿಕೆ ಸಾಧ್ಯವಾಗಿಲ್ಲವೆಂದು ವರದಿಯೊಂದು ತಿಳಿಸಿದೆ.     

ಇದನ್ನೂ ಓದಿ: Jan Dhan Yojana: ವಾವ್..! ಜನ್-ಧನ್ ಖಾತೆಯಲ್ಲಿ 0 ಬ್ಯಾಲೆನ್ಸ್ ಇದ್ದರೂ ಸಿಗುತ್ತೆ 10,000, ಹೇಗೆ? ಇಲ್ಲಿ ತಿಳಿದುಕೊಳ್ಳಿ

ಸರ್ಕಾರಿ ಸ್ವಾಮ್ಯದ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌, ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿ ಮತ್ತು ಹಿಂದುಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿ. ಕಂಪೆನಿಗಳು ಕಳೆದ 15 ತಿಂಗಳಿಂದ ತಮ್ಮ ವೆಚ್ಚಕ್ಕೆ ಅನುಗುಣವಾಗಿ ಪೆಟ್ರೋಲ್‌ ಮತ್ತು ಡೀಸೆಲ್‌ ದರವನ್ನು ಪರಿಷ್ಕರಿಸಿಲ್ಲ.

ದರಗಳು ಹೆಚ್ಚಿರುವಾಗ ಉಂಟಾದ ನಷ್ಟವನ್ನು ಮರುಪಾವತಿಸಲು ತೈಲ ಕಂಪನಿಗಳು ಕಡಿಮೆ ತೈಲ ಬೆಲೆಗಳ ಸಮಯವನ್ನು ಹೊಂದಿವೆ. 2022ರ ಜೂನ್‌ 24ಕ್ಕೆ ಅಂತ್ಯಗೊಂಡ ವಾರದಲ್ಲಿ ಪೆಟ್ರೋಲ್‌ ಮಾರಾಟದಿಂದ ಲೀಟರ್‌ಗೆ 17.4 ರೂ. ಹಾಗೂ ಡೀಸೆಲ್‌ ಮಾರಾಟದಿಂದ ಲೀಟರ್‍ಗೆ 27.7 ರೂ. ನಷ್ಟ ಆಗುತ್ತಿತ್ತು. ಅಕ್ಟೋಬರ್‌-ಡಿಸೆಂಬರ್‌ ಅವಧಿಯಲ್ಲಿ ಕಂಪೆನಿಗಳಿಗೆ ಪೆಟ್ರೋಲ್‌ ಮಾರಾಟದಿಂದ ಲೀಟರ್‍ಗೆ 10 ರೂ.ಗಳಷ್ಟು ಲಾಭ ಉಂಟಾಗುತ್ತಿದೆ. ಆದರೆ ಡೀಸೆಲ್‌ ಮಾರಾಟದಿಂದ 6.5 ರೂ.ನಷ್ಟು ನಷ್ಟವಾಗುತ್ತಿದೆ ಎಂದು ಐಸಿಐಸಿಐ ಸೆಕ್ಯೂರಿಟಿಸ್‌ ತನ್ನ ವರದಿಯಲ್ಲಿ ತಿಳಿಸಿದೆ.  

ಇದನ್ನೂ ಓದಿ: RBI New Rules : ಬ್ಯಾಂಕ್ ಗ್ರಾಹಕರ ಗಮನಕ್ಕೆ : ಬ್ಯಾಂಕ್ ಖಾತೆಗೆ ಆರ್‌ಬಿಐನಿಂದ ಹೊಸ ನಿಯಮ!

ಪೆಟ್ರೋಲ್‌ ಮಾರಾಟದಿಂದ ಲಾಭ ಆಗುತ್ತಿದ್ದರೂ ಡೀಸೆಲ್‌ನಿಂದಾಗುತ್ತಿರುವ ನಷ್ಟ ಭರಿಸಿಕೊಳ್ಳುವ ಉದ್ದೇಶದಿಂದ ಈ 3 ಕಂಪೆನಿಗಳು ತೈಲ ಮಾರಾಟ ದರದಲ್ಲಿ ಪರಿಷ್ಕರಣೆ ಮಾಡಿಲ್ಲವೆಂದು ಹೇಳಲಾಗಿದೆ. ತೈಲ ಕಂಪನಿಗಳು 2022ರ ಏಪ್ರಿಲ್ 6ರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಬದಲಾಯಿಸಿಲ್ಲ, ಆದರೆ ಇನ್‌ಪುಟ್ ಕಚ್ಚಾ ತೈಲ ಬೆಲೆಗಳು ಪ್ರತಿ ಬ್ಯಾರೆಲ್‌ಗೆ $102.97 ರಿಂದ  ಜೂನ್‌ನಲ್ಲಿ $116.01ಕ್ಕೆ ಮತ್ತು ಈ ತಿಂಗಳು $78.09 ಕ್ಕೆ ಕುಸಿದಿದ್ದರೂ ಸಹ ತೈಲ ದರದಲ್ಲಿ ಇಳಿಕೆ ಮಾಡಿಲ್ಲ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News