Sukanya Samriddhi Scheme: 5 ಪ್ರಮುಖ ಬದಲಾವಣೆಗಳನ್ನು ತಪ್ಪದೇ ತಿಳಿಯಿರಿ

ಹೆಣ್ಣುಮಕ್ಕಳ ಭವಿಷ್ಯ ಉಜ್ಬಲವಾಗಲೆಂದು ಸುಕನ್ಯಾ ಸಮೃದ್ಧಿ ಯೋಜನೆ ಜಾರಿಗೆ ತರಲಾಗಿತ್ತು. ಸಮಯದ ಅಗತ್ಯತೆ ಮತ್ತು ಕೆಲವು ಪ್ರಾಯೋಗಿಕ ಕಾರಣಗಳನ್ನು ಗಮನದಲ್ಲಿಟ್ಟುಕೊಂಡು ಈಗ ಯೋಜನೆಯ ಕೆಲವು ನಿಯಮಗಳನ್ನು ಬದಲಾವಣೆ ಮಾಡಲಾಗಿದೆ.  

Written by - Yashaswini V | Last Updated : Dec 10, 2020, 02:30 PM IST
  • ಹೊಸ ನಿಯಮಗಳ ಅಡಿಯಲ್ಲಿ ಹಣಕಾಸು ವರ್ಷದ ಕೊನೆಯಲ್ಲಿ ಬಡ್ಡಿಯನ್ನು ಖಾತೆಗೆ ಜಮಾ ಮಾಡಲಾಗುತ್ತದೆ.
  • ಈವರೆಗೆ ಯೋಜನೆಯಲ್ಲಿ ವರ್ಷಕ್ಕೆ ಕನಿಷ್ಠ 250 ರೂಪಾಯಿಗಳನ್ನು ಠೇವಣಿ ಇಡಬೇಕಾಗಿದೆ.
  • ಈ ಕನಿಷ್ಠ ಮೊತ್ತವನ್ನು ಠೇವಣಿ ಮಾಡದಿದ್ದರೆ ಖಾತೆಯನ್ನು ಡೀಫಾಲ್ಟ್ ಖಾತೆ ಎಂದು ಪರಿಗಣಿಸಲಾಗುತ್ತಿತ್ತು.
Sukanya Samriddhi Scheme: 5 ಪ್ರಮುಖ ಬದಲಾವಣೆಗಳನ್ನು ತಪ್ಪದೇ ತಿಳಿಯಿರಿ title=

ನವದೆಹಲಿ: ಸುಕನ್ಯಾ ಸಮೃದ್ಧಿ ಯೋಜನೆ ಭಾರತ ಸರ್ಕಾರ ನಡೆಸುತ್ತಿರುವ ಅತ್ಯಂತ ಜನಪ್ರಿಯ ಯೋಜನೆಯಾಗಿದೆ. ಆದರೀಗ ಸಮಯದ ಅಗತ್ಯತೆ ಮತ್ತು ಕೆಲವು ಪ್ರಾಯೋಗಿಕ ಕಾರಣಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಯೋಜನೆಗೆ ಸಂಬಂಧಿಸಿದಂತೆ ಐದು ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಿದೆ. ನೀವು ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡುತ್ತಿದ್ದರೆ ಅಥವಾ ಅದನ್ನು ತೆಗೆದುಕೊಳ್ಳಲು ಹೊರಟಿದ್ದರೆ ಈ ಬದಲಾದ ನಿಯಮಗಳನ್ನು ಎಚ್ಚರಿಕೆಯಿಂದ ಅರ್ಥಮಾಡಿಕೊಳ್ಳಲೇಬೇಕು.

ಸುಕನ್ಯಾ ಸಮೃದ್ಧಿ ಯೋಜನೆಯಡಿ ಸಣ್ಣ ಪ್ರಮಾಣದ ಹಣವನ್ನು ನಿಯಮಿತವಾಗಿ ಠೇವಣಿ ಇರಿಸಬೇಕು. ಇದರಿಂದ ಹೆಣ್ಣು ಮಗು ವಿದ್ಯಾಭ್ಯಾಸ ಮುಗಿಸುವ ಹಂತದಲ್ಲಿ (ಉನ್ನತ ಶಿಕ್ಷಣಕ್ಕಾಗಿ) ಅಥವಾ ವಿವಾಹವಾಗುವ ಸಂದರ್ಭದಲ್ಲಿ ದೊಡ್ಡ ಮೊತ್ತ ಸಿಗಲಿದೆ‌. ಇದರಿಂದ 'ಹೆಣ್ಣು ಹೊರೆ' ಎಂಬ ಭಾವನೆ ಮರೆಯಾಗಲಿದೆ.‌ ಇಂಥ ಯೋಜನೆಯಲ್ಲಾಗಿರುವ ಐದು ಬದಲಾವಣೆಗಳನ್ನು ತಿಳಿಯಿರಿ..

1. ನಿಗದಿತ ಸಮಯಕ್ಕೂ ಮುನ್ನವೇ ಖಾತೆ ಮುಚ್ಚಬಹುದು:

premature account closure

ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ (Sukanya Samriddhi Yojana) ಮೊದಲಿಗೆ ಎರಡು ಸಂದರ್ಭಗಳಲ್ಲಿ ಮಾತ್ರ ಖಾತೆ ಮುಚ್ಚುವ ಅವಕಾಶ ಇತ್ತು. ಒಂದು ಮಗಳು ಸತ್ತರೆ, ಇನ್ನೊಂದು ಮನೆಯ ವಿಳಾಸ ಬದಲಾದಾಗ‌ ಮಾತ್ರ ಖಾತೆಯನ್ನು ಮುಚ್ಚಬಹುದಾಗಿತ್ತು.

ಆದರೆ ಈಗ ಖಾತೆದಾರರು ಮಾರಣಾಂತಿಕ ಕಾಯಿಲೆಗೆ ತುತ್ತಾದರೆ, ಆಗಲೂ ಪೋಷಕರು ಖಾತೆಯನ್ನು ಮುಚ್ಚುವ ಅವಕಾಶ ಒದಗಿಸಲಾಗಿದೆ.

2. ಇಬ್ಬರು ಹೆಣ್ಣುಮಕ್ಕಳಿಗೆ ಖಾತೆ ತೆರೆಯುವ ನಿಯಮಗಳು: 

opening account for more than 2 girl child

ಪ್ರಸ್ತುತ, ಈ ಯೋಜನೆಯಲ್ಲಿ ಇಬ್ಬರು ಹೆಣ್ಣುಮಕ್ಕಳಿಗೆ ಖಾತೆಯನ್ನು ತೆರೆಯಬಹುದು. ನೀವು ಮೂರನೇ  ಮಗು ಹೊಂದಿದಾಗ ಯೋಜನೆಯ ಪ್ರಯೋಜನ ಸಿಗುತ್ತಿರಲಿಲ್ಲ.

ಆದರೆ ಈಗ ಹೊಸ ನಿಯಮಗಳ ಪ್ರಕಾರ, ಇಬ್ಬರು ಅವಳಿ ಹೆಣ್ಣುಮಕ್ಕಳ ಜನನದ ನಂತರ ಮತ್ತೊಂದು ಹೆಣ್ಣು ಮಗು ಜನಿಸಿದರೆ, ಅವರೆಲ್ಲರಿಗೂ ಖಾತೆಯನ್ನು ತೆರೆಯಬಹುದಾಗಿದೆ. ಹೊಸ ನಿಯಮಗಳ ಪ್ರಕಾರ ಇಬ್ಬರು ಹೆಣ್ಣುಮಕ್ಕಳು ತಮ್ಮ ಖಾತೆಯನ್ನು ತೆರೆಯಬೇಕಾದರೆ, ಜನನ ಪ್ರಮಾಣಪತ್ರದೊಂದಿಗೆ ಅಫಿಡವಿಟ್ ಸಲ್ಲಿಸಬೇಕಾಗುತ್ತದೆ. ಹಳೆಯ ನಿಯಮಗಳ ಪ್ರಕಾರ, ಪಾಲಕರು ವೈದ್ಯಕೀಯ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗಿತ್ತು.

ನಿಮ್ಮ ಮಕ್ಕಳ ಭವಿಷ್ಯವನ್ನು ಉಜ್ವಲವಾಗಿಸುವ Post Officeನ 4 ಪ್ರಮುಖ ಉಳಿತಾಯ ಯೋಜನೆಗಳಿವು

3. ಖಾತೆ ಡೀಫಾಲ್ಟ್ ಹೊರತಾಗಿಯೂ ಬಡ್ಡಿದರ ಬದಲಾಗುವುದಿಲ್ಲ:

Default accounts to earn interest as applicable to the scheme

ಈವರೆಗೆ ಯೋಜನೆಯಲ್ಲಿ ವರ್ಷಕ್ಕೆ ಕನಿಷ್ಠ 250 ರೂಪಾಯಿಗಳನ್ನು ಠೇವಣಿ ಇಡಬೇಕಾಗಿದೆ. ಈ ಕನಿಷ್ಠ ಮೊತ್ತವನ್ನು ಠೇವಣಿ ಮಾಡದಿದ್ದರೆ ಖಾತೆಯನ್ನು ಡೀಫಾಲ್ಟ್ ಖಾತೆ ಎಂದು ಪರಿಗಣಿಸಲಾಗುತ್ತಿತ್ತು.

ಆದರೆ ಈಗ ಹೊಸ ನಿಯಮಗಳ ಪ್ರಕಾರ ಖಾತೆಯನ್ನು ಮತ್ತೆ ಸಕ್ರಿಯಗೊಳಿಸದಿದ್ದರೆ ಮುಕ್ತಾಯದ ಸಮಯದವರೆಗೆ ಡೀಫಾಲ್ಟ್ ಖಾತೆಯಲ್ಲಿನ ಯೋಜನೆಗೆ ಅನ್ವಯವಾಗುವ ದರದಲ್ಲಿ ಬಡ್ಡಿಯನ್ನು ಪಾವತಿಸಲಾಗುತ್ತದೆ. ಖಾತೆದಾರರಿಗೆ ಇದು ಒಳ್ಳೆಯ ಸುದ್ದಿ. ಹಳೆಯ ನಿಯಮಗಳ ಪ್ರಕಾರ ಅಂತಹ ಡೀಫಾಲ್ಟ್ ಖಾತೆಗಳ ಮೇಲಿನ ಬಡ್ಡಿಯನ್ನು ಪೋಸ್ಟ್ ಆಫೀಸ್ ಉಳಿತಾಯ ಖಾತೆಗೆ ಅನ್ವಯವಾಗುವ ದರದಲ್ಲಿ ಪಾವತಿಸಲಾಗುತ್ತಿತ್ತು. ಪೋಸ್ಟ್ ಆಫೀಸ್ (Post Office) ಉಳಿತಾಯ ಖಾತೆಗಳ ಬಡ್ಡಿದರ 4% ಆಗಿದ್ದರೆ, ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿ ದರ 7.6% ಆಗಿದೆ.

ಏನಿದು ಸುಕನ್ಯಾ ಸಮೃದ್ಧಿ ಯೋಜನೆ!

4. ಖಾತೆ ಕಾರ್ಯಾಚರಣೆಯ ನಿಯಮಗಳು :

New rule to Operation of SSY account

ಇಲ್ಲಿಯವರೆಗೆ ಮಗಳಿಗೆ 10 ವರ್ಷವಾದ ಬಳಿಕ ಆಕೆಗೆ ತನ್ನ ಖಾತೆಯನ್ನು ನಿರ್ವಹಿಸಲು ಅವಕಾಶ ನೀಡಲಾಗಿತ್ತು.

ಆದರೆ ಹೊಸ ನಿಯಮಗಳ ಪ್ರಕಾರ 18 ವರ್ಷ ತುಂಬುವವರೆಗೆ ಆಕೆಗೆ ಖಾತೆಯನ್ನು ನಿರ್ವಹಿಸಲು ಅನುಮತಿ ಇರುವುದಿಲ್ಲ. ಖಾತೆದಾರ 18 ವರ್ಷ ತುಂಬುವವರೆಗೆ ಪೋಷಕರು ಖಾತೆಯನ್ನು ನಿರ್ವಹಿಸುತ್ತಾರೆ ಎಂದು ಹೊಸ ನಿಯಮಗಳು ಹೇಳುತ್ತವೆ.

5. ಇತರೆ ಬದಲಾವಣೆಗಳು :

few New changes

ಹೊಸ ನಿಯಮಗಳಲ್ಲಿ ಖಾತೆಯಲ್ಲಿನ ತಪ್ಪು ಬಡ್ಡಿಯನ್ನು ಹಿಂತಿರುಗಿಸುವ ನಿಬಂಧನೆಯನ್ನು ತೆಗೆದುಹಾಕಲಾಗಿದೆ. ಹೊಸ ನಿಯಮಗಳ ಅಡಿಯಲ್ಲಿ ಹಣಕಾಸು ವರ್ಷದ ಕೊನೆಯಲ್ಲಿ ಬಡ್ಡಿಯನ್ನು ಖಾತೆಗೆ ಜಮಾ ಮಾಡಲಾಗುತ್ತದೆ.

Trending News