Paytm IPO: ಹೂಡಿಕೆಗಾಗಿ ತೆರೆದುಕೊಂಡ ಅತಿ ದೊಡ್ಡ IPO! ನಿಮ್ಮ ಹೂಡಿಕೆ ಹೇಗಿರಲಿದೆ?

Paytm IPO Open Today - ದೇಶದ ಅತಿ ದೊಡ್ಡ IPO ಎಂದೇ ಬಿಂಬಿತವಾಗಿರುವ Paytm IPO ಇಂದು ಹೂಡಿಕೆಗಾಗಿ ತೆರೆದುಕೊಂಡಿದೆ. 18300 ಕೋಟಿ ರೂ.ಗಾತ್ರದ ಈ IPOನಲ್ಲಿ ನೆವೂ ನವೆಂಬರ್ 8 ರಿಂದ ನವೆಂಬರ್ 10ರವರೆಗೆ ಹೂಡಿಕೆ ಮಾಡಬಹುದು.

Written by - Nitin Tabib | Last Updated : Nov 8, 2021, 12:45 PM IST
  • ಹೂಡಿಕೆಗಾಗಿ ತೆರೆದುಕೊಂಡ ದೇಶದ ಅತಿ ದೊಡ್ಡ IPO.
  • Paytm ನ IPO ಗಾಗಿ ಪ್ರೈಸ್ ಬ್ಯಾಂಡ್ ಅನ್ನು ರೂ 2080-2150 ಗೆ ನಿಗದಿಪಡಿಸಲಾಗಿದೆ.
  • ಅಪರ್ ಪ್ರೈಸ್ ಬ್ಯಾಂಡ್ 2150ರೂ. ಲೆಕ್ಕಾಚಾರದಲ್ಲಿ ನೀವು ಕನಿಷ್ಠ ಅಂದರೆ 12900 ರೂ. ಹೂಡಿಕೆ ಮಾಡಬೇಕು.
Paytm IPO: ಹೂಡಿಕೆಗಾಗಿ ತೆರೆದುಕೊಂಡ ಅತಿ ದೊಡ್ಡ IPO! ನಿಮ್ಮ ಹೂಡಿಕೆ ಹೇಗಿರಲಿದೆ? title=
Paytm IPO Open Today (File Photo)

Paytm IPO Open Today - ಆನ್ಲೈನ್ ಹಣ ಪಾವತಿ ಕಂಪನಿ Paytm ನ IPO ಬಿಡುಗಡೆಯ ನಿರೀಕ್ಷೆಗೆ ಕೊನೆಗೂ ತೆರೆಬಿದ್ದಂತಾಗಿದೆ. ದೇಶದ ಅತಿ ದೊಡ್ಡ IPO ಇಂದಿನಿಂದ ಅಂದರೆ ಅಕ್ಟೋಬರ್ 8 ರಿಂದ ಹೂಡಿಕೆಗೆ ತೆರೆದುಕೊಂಡಿದೆ. ನವೆಂಬರ್ 10ರವರೆಗೆ ಇದರಲ್ಲಿ ಹೂಡಿಕೆ ಮಾಡಬಹುದು. Paytm ನ IPO ಗಾತ್ರ 18300 ಕೋಟಿ ರೂ. ಈ ಹಿಂದೆ ಸರ್ಕಾರಿ ಕಂಪನಿ ಕೋಲ್ ಇಂಡಿಯಾ 15 ಸಾವಿರ ಕೋಟಿ ಐಪಿಒ ಬಿಡುಗಡೆ ಮಾಡಿತ್ತು. Paytm ನ IPO ಗಾಗಿ ಪ್ರೈಸ್  ಬ್ಯಾಂಡ್ ಅನ್ನು ರೂ 2080-2150 ಗೆ ನಿಗದಿಪಡಿಸಲಾಗಿದೆ. ನಮ್ಮ ಅಂಗಸಂಸ್ಥೆ  ವ್ಯವಸ್ಥಾಪಕ ಸಂಪಾದಕ ಅನಿಲ್ ಸಿಂಘ್ವಿ, ರಿಸ್ಕ್ ತೆಗೆದುಕೊಳ್ಳಲು ಬಯಸುವ  ಹೂಡಿಕೆದಾರರು ಮಾತ್ರ  ದೀರ್ಘಾವಧಿಯವರೆಗೆ ಈ ಇಶ್ಯೂನಲ್ಲಿ  ಹೂಡಿಕೆ ಮಾಡಲು ಸಲಹೆ ನೀಡಿದ್ದಾರೆ. ನೀವು ಸಹ ಈ ಇಶ್ಯೂನಲ್ಲಿ ಹಣವನ್ನು ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಹೂಡಿಕೆ ಮಾಡುವ ಮೊದಲು ಅಗತ್ಯವಿರುವ ಎಲ್ಲಾ ವಿವರಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.

ದೀರ್ಘಾವಧಿಗೆ ಮಾತ್ರ ಹಣವನ್ನು ಹೂಡಿಕೆ ಮಾಡಿ
ನಿಮಗೆ ಅಪಾಯವನ್ನು ತೆಗೆದುಕೊಳ್ಳುವ ಸಾಮರ್ಥ್ಯವಿದ್ದರೆ, Paytm ನ IPO ನಲ್ಲಿ ಹಣವನ್ನು ಹೂಡಿಕೆ ಮಾಡಿ, ಆದರೆ ಅದು ದೀರ್ಘಾವಧಿಗೆ ಇರಲಿ ಎಂದು ಅನಿಲ್ ಸಿಂಘ್ವಿ ಹೇಳಿದ್ದಾರೆ. ಲಿಸ್ಟಿಂಗ್ ಗೆನ್ ಮೇಲೆ ಹಣ ಗಳಿಸುವ ಯೋಜನೆ ಇದ್ದರೆ, ಈ  ಇಶ್ಯೂನಿಂದ ದೂರವಿರುವುದು ಉತ್ತಮ. ಕೋಲ್ ಇಂಡಿಯಾದ ನಂತರ ಭಾರತದಲ್ಲಿ ಇದು ಅತಿದೊಡ್ಡ ಐಪಿಒ ಎಂದು ಅವರು ಹೇಳಿದ್ದಾರೆ. ಇದರ ಗಾತ್ರ 18300 ಕೋಟಿಗಳು, ಆದ್ದರಿಂದ ಷೇರು ಹಂಚಿಕೆಯ ಸಾಧ್ಯತೆ ಹೆಚ್ಚು. ಆದರೆ ಅಲ್ಪಾವಧಿ ಹೂಡಿಕೆದಾರರು ಇದರಿಂದ ದೂರವಿರಬೇಕು. ಕಂಪನಿಯೊಂದಿಗೆ ಕೆಲವು ಧನಾತ್ಮಕ ಮತ್ತು ಕೆಲವು ನಕಾರಾತ್ಮಕ ಅಂಶಗಳಿವೆ. ಉದಾಹರಣೆಗೆ, ಆದಾಯದ ದಾಖಲೆ ಉತ್ತಮವಾಗಿದೆ, ಡಿಜಿಟಲ್ ಪಾವತಿಯಲ್ಲಿ ಶೇಕಡಾ 40 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಮಾರುಕಟ್ಟೆ ಕ್ಯಾಪ್ ಪ್ರಬಲವಾಗಿದೆ.

ಋಣಾತ್ಮಕ ಅಂಶಗಳು
ಆದರೆ ಕೆಲವು ನಕಾರಾತ್ಮಕ ಅಂಶಗಳೂ ಇವೆ. ನಷ್ಟದಲ್ಲಿರುವ ಕಂಪನಿಯಾಗಿರುವುದರಿಂದ ಯಾವಾಗ ಲಾಭ ಬರುತ್ತದೋ ಹೇಳಲಾಗದು. ಏಕೆಂದರೆ ಈ ಸೆಕ್ಟರ್ ನಲ್ಲಿ ಪೈಪೋಟಿ ಜಾಸ್ತಿ ಇದೆ. ಜಾಹೀರಾತುಗಳಿಗಾಗಿ ಕಂಪನಿಯ ಖರ್ಚು ಹೆಚ್ಚು. ಗ್ರಾಹಕರಿಂದ ಬರುವ ಆದಾಯದಲ್ಲಿ ಇಳಿಕೆಯಾಗಿದೆ. ಇಶ್ಯೂನಿಂದ ಬರುವ ನಿಧಿಯ ಒಂದು ಭಾಗವನ್ನು ಇನ್ ಆರ್ಗಾನಿಕ್ ಗ್ರೋಥ್ ನಲ್ಲಿ ಹೂಡಿಕೆ ಮಾಡಬೇಕು, ಅಲ್ಲಿ ಹಣವನ್ನು ಹೆಚ್ಚು ಪಾವತಿಸಬೇಕು.

ಕನಿಷ್ಠ ಅಂದರೆ ಎಷ್ಟು ಹೂಡಿಕೆ ಮಾಡಬಹುದು?
ಈ ಇಶ್ಯೂ ನಲ್ಲಿ ಹೂಡಿಕೆ ಮಾಡಲು ಹೂಡಿಕೆದಾರರು ಕನಿಷ್ಠ ಅಂದರೆ 6 ಇಕ್ವಿಟಿ ಶೇರುಗಳನ್ನು ಕರೆಯಬಹುದು. ಅಪರ್ ಪ್ರೈಸ್ ಬ್ಯಾಂಡ್  2150ರೂ. ಲೆಕ್ಕಾಚಾರದಲ್ಲಿ ನೀವು ಕನಿಷ್ಠ ಅಂದರೆ 12900 ರೂ. ಹೂಡಿಕೆ ಮಾಡಬೇಕು. ಇದಲ್ಲದೆ ನೀವು 1ರ ಗುಣಕದಲ್ಲಿ ಹೂಡಿಕೆ ಮಾಡಬಹುದು. 

ಯಾವುದಕ್ಕೆ ಎಷ್ಟು ಕಾಯ್ದಿರಿಸಬೇಕು?
ಇದರಲ್ಲಿ ಶೇ.75ರಷ್ಟು ಭಾಗವನ್ನು ಕ್ವಾಲಿಫೈಡ್ ಇನ್ಸ್ಟಿಟ್ಯೂಷನಲ್ ಬಾಯರ್ಸ್ ಗೆ ಕಾಯ್ದಿರಿಸಲಾಗಿದೆ. ಶೇ.10ರಷ್ಟು ಭಾಗವನ್ನು ಚಿಲ್ಲರೆ ಹೂಡಿಕೆದಾರರಿಗಾಗಿ ಇರಲಿದೆ ಮತ್ತು ಉಳಿದ ಶೇ.15 ರಷ್ಟು ನಾನ್-ಇನ್ಸ್ಟಿಟ್ಯೂಷನಲ್ ಹೂಡಿಕೆಗಾರರಿಗೆ ಮೀಸಲಿರಲಿದೆ.

ಇದನ್ನೂ ಓದಿ-Business Idea: ಸರ್ಕಾರದ ಜೊತೆಗೂಡಿ ಆರಂಭಿಸಿ ಈ ಬಿಸಿನೆಸ್, ಕೈತುಂಬಾ ಸಂಪಾದನೆಯ ಜೊತೆಗೆ, ಹಾನಿಯ ಚಾನ್ಸೇ ಇಲ್ಲ

ಗಾತ್ರ ಹೆಚ್ಚಿಸಿದ ಕಂಪನಿ
Paytm
ತನ್ನ IPO ಗಾತ್ರವನ್ನು 18,300 ಕೋಟಿಗೆ ಹೆಚ್ಚಿಸಿದೆ. ಈ ಹಿಂದೆ ಪೇಟಿಎಂ ಐಪಿಒ ಮೂಲಕ ಒಟ್ಟು 16,600 ಕೋಟಿ ರೂ.ಗಳನ್ನು ಸಂಗ್ರಹಿಸುವ ಯೋಜನೆಯನ್ನು ಹೊಂದಿತ್ತು. ಇದೀಗ ಈ ಗಾತ್ರ 18300 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಇದರಲ್ಲಿ 8300 ಕೋಟಿ ರೂ.ಗಳ ತಾಜಾ ಈಕ್ವಿಟಿ ಷೇರುಗಳನ್ನು ನೀಡಿಕೆಯ ಅಡಿಯಲ್ಲಿ ನೀಡಲಾಗುವುದು.ಇದೆ ವೇಳೆ 10 ಸಾವಿರ ಕೋಟಿಯ ಆಫರ್ ಫಾರ್ ಸೇಲ್ (OFS) ಇರಲಿದೆ. OFS ನ ಅರ್ಧದಷ್ಟು ಭಾಗವು ಆಂಟ್ ಫೈನಾನ್ಶಿಯಲ್ ಮತ್ತು ಉಳಿದವು ಅಲಿಬಾಬಾ, ಎಲಿವೇಶನ್ ಕ್ಯಾಪಿಟಲ್, ಸಾಫ್ಟ್‌ಬ್ಯಾಂಕ್ ಮತ್ತು ಇತರ ಅಸ್ತಿತ್ವದಲ್ಲಿರುವ ಷೇರುದಾರರ ಒಡೆತನದಲ್ಲಿದೆ.

ಇದನ್ನೂ ಓದಿ-Small Business Idea:ಮನೆಯಲ್ಲಿಯೇ ಕುಳಿತು ತಿಂಗಳಿಗೆ ರೂ.90 ಸಾವಿರ ಹಣ ಗಳಿಕೆಗೆ ಅವಕಾಶ ನೀಡುತ್ತಿದೆ, ಮಿಸ್ ಮಾಡ್ಬೇಡಿ

ಬುಕ್ ರನ್ನಿಂಗ್ ಲೀಡ್ ಮ್ಯಾನೇಜರ್ ಗಳು 
ಈ IPOಗಾಗಿ Morgan Stanley India Company Private Ltd, Goldman Sachs (India) Securities Private Ltd, Axis Capital, ICICI Securities, HDFC Bank, JP Morgan India Private Ltd ಹಾಗೂ  Citigroup Global Markets India Private Ltd ಕಂಪನಿಗಳು ಬುಕ್ ರನ್ನಿಂಗ್ ಲೀಡ್ ಮ್ಯಾನೆಜರ್ಸ್ ಗಳಾಗಿವೆ. ಇನ್ನೊಂದೆಡೆ IPOಗಾಗಿ ನೊಂದಾಯಿತ ಲಿಂಕ್ ಇನ್ ಟೈಮ್ ಇಂಡಿಯಾ ಪ್ರೈವೇಟ್ ಇದೆ.

ಇದನ್ನೂ ಓದಿ-Jio Latest Update - ತನ್ನ ಬಳಕೆದಾರರಿಗೆ 5GB ಡೇಟಾ ಉಚಿತ ನೀಡಲು ಮುಂದಾದ Jio! ಕೇವಲ ಈ ಕೆಲಸ ಮಾಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News