Small Business Idea:ಮನೆಯಲ್ಲಿಯೇ ಕುಳಿತು ತಿಂಗಳಿಗೆ ರೂ.90 ಸಾವಿರ ಹಣ ಗಳಿಕೆಗೆ ಅವಕಾಶ ನೀಡುತ್ತಿದೆ, ಮಿಸ್ ಮಾಡ್ಬೇಡಿ

SBI ATM Franchise: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ನಿಮಗಾಗಿ ಉತ್ತಮ ಅವಕಾಶವನ್ನು ತಂದಿದೆ. ಈ ವ್ಯವಹಾರದ ಮೂಲಕ, ನೀವು ಪ್ರತಿ ತಿಂಗಳು 90 ಸಾವಿರ ರೂಪಾಯಿಗಳವರೆಗೆ ಲಾಭ ಗಳಿಸಬಹುದು.

Written by - Nitin Tabib | Last Updated : Nov 7, 2021, 06:03 PM IST
  • ನೀವೂ ಸಹ ಮನೆಯಲ್ಲಿ ಕುಳಿತು ಹಣ ಸಂಪಾದಿಸಲು ಬಯಸುತ್ತೀರಾ?
  • ನಿಮ್ಮ ಕೆಲಸವನ್ನು ಬಿಟ್ಟು ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಬಯುತ್ತೀರಾ?
  • ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಮಗಾಗಿ ಉತ್ತಮ ಅವಕಾಶವನ್ನು ತಂದಿದೆ.
Small Business Idea:ಮನೆಯಲ್ಲಿಯೇ ಕುಳಿತು ತಿಂಗಳಿಗೆ ರೂ.90 ಸಾವಿರ ಹಣ ಗಳಿಕೆಗೆ ಅವಕಾಶ ನೀಡುತ್ತಿದೆ, ಮಿಸ್ ಮಾಡ್ಬೇಡಿ title=
SBI ATM Franchise (File Photo)

SBI ATM Franchise: ನೀವೂ ಸಹ ಮನೆಯಲ್ಲಿ ಕುಳಿತು ಹಣ ಸಂಪಾದಿಸಲು ಬಯಸುತ್ತಿದ್ದರೆ ಅಥವಾ ನಿಮ್ಮ ಕೆಲಸವನ್ನು ಬಿಟ್ಟು ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಬಯುತ್ತಿದ್ದರೆ, ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ (State Bank) ಆಫ್ ಇಂಡಿಯಾ ನಿಮಗಾಗಿ ಉತ್ತಮ ಅವಕಾಶವನ್ನು ತಂದಿದೆ. ಈ ವ್ಯವಹಾರದ ಮೂಲಕ, ನೀವು ಪ್ರತಿ ತಿಂಗಳು 90 ಸಾವಿರ ರೂಪಾಯಿಗಳವರೆಗೆ ಲಾಭ ಗಳಿಸಬಹುದು. ನಾವು SBI ATM ಫ್ರ್ಯಾಂಚೈಸ್ ಬಗ್ಗೆ ಮಾತನಾಡುತ್ತಿದ್ದೇವೆ. ನೀವು ATM ಫ್ರಾಂಚೈಸ್ ಅನ್ನು ತೆಗೆದುಕೊಂಡರೆ, ನೀವು ಪ್ರತಿ ತಿಂಗಳು ಸಾಕಷ್ಟು ಹಣ ಗಳಿಕೆ ಮಾಡಬಹುದು. 

ATM Franchiseಗಾಗಿ ಹೇಗೆ ಅರ್ಜಿ ಸಲ್ಲಿಸಬೇಕು?
ಕಂಪನಿಗಳ ಅಧಿಕೃತ ವೆಬ್‌ಸೈಟ್‌ನಿಂದ ಎಸ್‌ಬಿಐ (SBI) ಎಟಿಎಂ ಫ್ರಾಂಚೈಸಿಗಾಗಿ ಆನ್‌ಲೈನ್ ಅರ್ಜಿಯನ್ನು ಸಲ್ಲಿಸಬಹುದು. ಎಟಿಎಂಗಳನ್ನು ಸ್ಥಾಪಿಸುವ ಕಂಪನಿಗಳು ವಿಭಿನ್ನವಾಗಿವೆ. ಈ ಒಪ್ಪಂದಗಳಲ್ಲಿ ಹೆಚ್ಚಿನವು ಇಂಡಿಕ್ಯಾಶ್, ಮುತ್ತೂಟ್ ಎಟಿಎಂ ಮತ್ತು ಇಂಡಿಯಾ ಒನ್ ಎಟಿಎಂಗಳು ಶಾಮೀಲಾಗಿವೆ.

SBI ATM Franchiseಗೆ ಅನ್ವಯಿಸುವ ಷರತ್ತುಗಳು
>> 50-80 ಚದರ ಅಡಿ ಜಾಗ ಇರಬೇಕು.
>> ಇತರ ಎಟಿಎಂಗಳಿಂದ ದೂರ 100 ಮೀಟರ್ ಇರಬೇಕು.
>> ಸ್ಥಳವು ನೆಲ ಮಹಡಿಯಲ್ಲಿ ಮತ್ತು ಉತ್ತಮ ಗೋಚರತೆಯನ್ನು ಹೊಂದಿರಬೇಕು.
>> 24 ಗಂಟೆ ವಿದ್ಯುತ್ ಪೂರೈಕೆಯಾಗಬೇಕು. 1 kW ವಿದ್ಯುತ್ ಸಂಪರ್ಕ ಅಗತ್ಯವಿದೆ.
>> ಎಟಿಎಂ ದಿನಕ್ಕೆ ಸುಮಾರು 300 ವಹಿವಾಟು ನಡೆಸುವ ಸಾಮರ್ಥ್ಯವನ್ನು ಹೊಂದಿರಬೇಕು.
>> ಎಟಿಎಂ ಜಾಗಕ್ಕೆ ಕಾಂಕ್ರೀಟ್ ಛಾವಣಿ ಇರಬೇಕು.
>> ವಿ-ಸ್ಯಾಟ್ ಅನ್ನು ಸ್ಥಾಪಿಸಲು ಸಮಾಜ ಅಥವಾ ಪ್ರಾಧಿಕಾರದಿಂದ ಯಾವುದೇ ಆಕ್ಷೇಪಣೆ ಪ್ರಮಾಣಪತ್ರ (ಎನ್‌ಒಸಿ) ಅಗತ್ಯವಿಲ್ಲ.

ಈ ದಾಖಲೆಗಳು ಬೇಕಾಗುತ್ತವೆ
>>ID ಪುರಾವೆ - ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮತದಾರರ ಕಾರ್ಡ್
>> ವಿಳಾಸ ಪುರಾವೆ - ಪಡಿತರ ಚೀಟಿ, ವಿದ್ಯುತ್ ಬಿಲ್
>> ಬ್ಯಾಂಕ್ ಖಾತೆ ಮತ್ತು ಪಾಸ್‌ಬುಕ್
>> ಫೋಟೋ, ಇ-ಮೇಲ್ ಐಡಿ, ಫೋನ್ ಸಂಖ್ಯೆ
>> GST ಸಂಖ್ಯೆ
>> ಹಣಕಾಸಿನ ದಾಖಲೆಗಳು

ಇಲ್ಲಿ ನೀವು ಡೀಟೇಲ್ಸ್ ಪರಿಶೀಲಿಸಬಹುದು
Tata Indicash - www.indicash.co.in
Muthoot ATM - www.muthootatm.com/suggest-atm.html
India One ATM - india1atm.in/rent-your-space

ಇದನ್ನೂ ಓದಿ- US Report on China: 2049ರವೇಳೆಗೆ ತನ್ನ ಮಿಲಿಟರಿಯನ್ನು ವಿಶ್ವದರ್ಜೆಗೆ ಏರಿಸಲು ಪ್ರಯತ್ನಿಸುತ್ತಿದೆ ಚೀನಾ: ಪೆಂಟಗನ್ ವರದಿ

ಎಷ್ಟು ಹಣ ಹೂಡಿಕೆ ಮಾಡಬೇಕು?
ನೀವು ಇಂಡಿಯಾಕ್ಯಾಶ್ ವೆಬ್‌ಸೈಟ್‌ನಿಂದ ಎಸ್‌ಬಿಐ ಎಟಿಎಂ ಫ್ರ್ಯಾಂಚೈಸ್‌ಗೆ ಅರ್ಜಿ ಸಲ್ಲಿಸಬಹುದು. ಇದು ದೇಶದ ಅತಿ ದೊಡ್ಡ ಮತ್ತು ಹಳೆಯ ಕಂಪನಿಯಾಗಿದೆ. ಎಸ್‌ಬಿಐ ಎಟಿಎಂಗೆ 2 ಲಕ್ಷ ಭದ್ರತಾ ಠೇವಣಿ ಇಡಬೇಕು. ಇದು ಸಂಪೂರ್ಣವಾಗಿ ಮರುಪಾವತಿಸಲ್ಪಡುತ್ತದೆ. ಇದಲ್ಲದೇ 3 ಲಕ್ಷ ದುಡಿಯುವ ಬಂಡವಾಳ ಅಗತ್ಯ. ಒಟ್ಟು ಹೂಡಿಕೆ 5 ಲಕ್ಷ ರೂ. ಹೂಡಿಕೆ ಮಾಡಬೇಕು.

ಇದನ್ನೂ ಓದಿ-T20 World Cup 2021: ಅಫ್ಘಾನಿಸ್ತಾನ್ ಮೇಲಿದೆ ಟೀಂ ಇಂಡಿಯಾದ ವಿಶ್ವಕಪ್ ಭವಿಷ್ಯ..!

ಹೇಗೆ ಗಳಿಕೆ ಮಾಡಬೇಕು?
SBI ATM ಫ್ರಾಂಚೈಸಿಯಲ್ಲಿ, ಪ್ರತಿ ನಗದು ವಹಿವಾಟಿನ ಮೇಲೆ ರೂ.8 ಮತ್ತು ನಗದುರಹಿತ ವಹಿವಾಟಿನ ಮೇಲೆ ರೂ.2 ಆದಾಯ ಬರುತ್ತದೆ. ಹೂಡಿಕೆಯ ಮೇಲಿನ ಲಾಭವು ವಾರ್ಷಿಕ ಆಧಾರದ ಮೇಲೆ 33-50% ರಷ್ಟಿದೆ. ದಿನಕ್ಕೆ 250 ವಹಿವಾಟು ನಡೆದರೆ ಅದರಲ್ಲಿ ಶೇ.65ರಷ್ಟು ನಗದು, ಶೇ.35ರಷ್ಟು ನಗದು ರಹಿತ ವಹಿವಾಟು ನಡೆದರೆ ತಿಂಗಳ ಆದಾಯ 45 ಸಾವಿರ ರೂ. ಇದೇ ವೇಳೆ  ಪ್ರತಿ ದಿನ ನಡೆಯುವ 500 ವಹಿವಾಟುಗಳಿಗೆ ಸುಮಾರು 88-90 ಸಾವಿರ ಕಮಿಷನ್ ಮಾಡಲಾಗುವುದು.

ಇದನ್ನೂ ಓದಿ-ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ‘ವಿಜಯ ಮಂತ್ರ’ ಪಠಿಸಲಿದ್ದಾರೆ ಪ್ರಧಾನಿ ಮೋದಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News