ನವದೆಹಲಿ: ನಿನ್ನೆ ಅಷ್ಟೇ ಪೆಟ್ರೋಲ್ - ಡೀಸೆಲ್ ಬೆಲೆ ಹೆಚ್ಚಿಸಿದ್ದ ತೈಲ ಮಾರುಕಟ್ಟೆ ಕಂಪನಿಗಳು, ಇಂದು ಕೂಡ ಮತ್ತೆ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 15 ಪೈಸೆ, ಡೀಸೆಲ್ ಬೆಲೆ 20 ಪೈಸೆ ಹೆಚ್ಚಿಸಿವೆ.
ಸಾರ್ವಜನಿಕ ವಲಯದ ಪ್ರಮುಖ ತೈಲ ಮಾರುಕಟ್ಟೆ ಕಂಪನಿಯಾದ ಇಂಡಿಯನ್ ಆಯಿಲ್(Indian oil) ಪ್ರಕಾರ, ದೇಶದ ನಾಲ್ಕು ಪ್ರಮುಖ ಮಹಾನಗರಗಳಲ್ಲಿ(ದೆಹಲಿ, ಮುಂಬೈ, ಕಲ್ಕತ್ತಾ, ಚೆನ್ನೈ) ನಿನ್ನೆ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 17 ಪೈಸೆ ಮತ್ತು ಡೀಸೆಲ್ ಬೆಲೆ 22 ಪೈಸೆ ಹೆಚ್ಚಿಸಲಾಗಿತ್ತು. ಪೆಟ್ರೋಲ್ ಬೆಲೆ 22 ಪೈಸೆ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 42 ಪೈಸೆಯಷ್ಟು ಹೆಚ್ಚಳವಾಗಿದೆ.
ಎಲೆಕ್ಟ್ರಿಕ್ ಸ್ಕೂಟರ್ ತಯಾರಿಕೆಗೆ ಮುಂದಾದ OLA
'ಹೊಸ ದರದ ಪ್ರಕಾರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ₹81.23ರಿಂದ ₹81.38 ಹಾಗೂ ಡೀಸೆಲ್ ದರ ಲೀಟರ್‌ಗೆ ₹70.68 ರಿಂದ ₹70.88ಕ್ಕೆ ಏರಿಕೆಯಾಗಿದೆ' ಎಂದು ತೈಲ ಮಾರುಕಟ್ಟೆ ಕಂಪನಿಗಳ ಅಧಿಸೂಚನೆ ತಿಳಿಸಿದೆ.
Lakshmi Vilas Bank ವಿಲೀನದ ಬಗ್ಗೆ RBI ಏನು ಹೇಳಿದೆ?
ಕಳೆದ ವಾರ ಒಪೆಕ್ ಸದಸ್ಯರು ತೈಲ ನಿಕ್ಷೇಪ ಮತ್ತು ಉತ್ಪಾದನೆಯನ್ನು ಹೆಚ್ಚಿಸಲು ಅಮೆರಿಕ ಒಪ್ಪಿಕೊಂಡ ನಂತರ ಈ ಬೆಳವಣಿಗೆ ಕಂಡು ಬಂದಿದೆ.
ತನ್ನ ಗ್ರಾಹಕರಿಗೆ ಎಚ್ಚರಿಕೆ ರವಾನಿಸಿದ SBI, ಈ ದಿನ ವ್ಯವಹಾರಕ್ಕೆ ಅಡಚಣೆ ಎದುರಾಗಲಿದೆ