ನವದೆಹಲಿ : ಇಂದು ಮತ್ತೆ ಪೆಟ್ರೋಲ್ ಬೆಲೆಯಲ್ಲಿ (Petrol rate) ಏರಿಕೆ ಕಂಡಿದೆ. ದೇಶದ ಹಣಕಾಸು ರಾಜಧಾನಿ ಮುಂಬಯಿಯಲ್ಲಿ (Mumbai) ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 102 ರೂ ತಲುಪಿದೆ. ದೇಶದ 135 ಜಿಲ್ಲೆಗಳಲ್ಲಿ ಪೆಟ್ರೋಲ್ ಬೆಲೆ 100ರ ಗಟಿ ದಾಟಿದೆ.
ಮತ್ತೆ ದುಬಾರಿಯಾದ ಪೆಟ್ರೋಲ್-ಡೀಸೆಲ್ :
ಈ ವರ್ಷ ಪೆಟ್ರೋಲ್ (Petrol) ಮತ್ತು ಡೀಸೆಲ್ (Deisel) ಬೆಲೆ ತೀವ್ರವಾಗಿ ಹೆಚ್ಚಳ ಕಂಡಿದೆ. ಕೇಲವ 4 ಬಾರಿ ಮಾತ್ರ ಪೆಟ್ರೋಲ್ ಡಿಸೇಲ್ ದರ ಇಳಿದಿತ್ತು. ಆದರೆ, ಪೆಟ್ರೋಲ್ ಬೆಲೆ ಇಲ್ಲಿಯವರೆಗೆ ಸುಮಾರು 14% ದಷ್ಟು ಹೆಚ್ಚಳವಾಗಿದೆ. ಕಚ್ಚಾ ತೈಲವು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್‌ಗೆ $ 72 ಕ್ಕಿಂತ ಹೆಚ್ಚು ವಹಿವಾಟು ನಡೆಸುತ್ತಿದೆ. ಇದರಿಂದಾಗಿ ಬೆಲೆಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಇದನ್ನೂ ಓದಿ : ATM New Charges- ಎಟಿಎಂನಿಂದ ಹಣ ವಿತ್ ಡ್ರಾ ಮಾಡುವುದು ಇನ್ನು ದುಬಾರಿ, ನೀವು ಎಷ್ಟು ಪಾವತಿಸಬೇಕಾಗುತ್ತೆ ತಿಳಿಯಿರಿ
ಜೂನ್ ತಿಂಗಳಲ್ಲೇ 6 ಬಾರಿ ಹೆಚ್ಚಳವಾದ ಬೆಲೆ :
ಮುಂಬಯಿಯಲ್ಲಿ (Mumbai) ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 102 ರೂ. ಡೀಸೆಲ್ 94 ರೂ. ಇಲ್ಲಿಯವರೆಗೆ ಈ ತಿಂಗಳು ಅಂದರೆ ಜೂನ್‌ನಲ್ಲಿ ಪೆಟ್ರೋಲ್ ಬೆಲೆ 6 ಬಾರಿ ಹೆಚ್ಚಳ ಕಂಡಿದೆ.
ಪ್ರಮುಖ ನಗರಗಳ ಪೆಟ್ರೋಲ್ ಬೆಲೆ :
ದೆಹಲಿ - 95.85 ರೂ.
ಮುಂಬಯಿ - 102.04 ರೂ
ಕೋಲ್ಕತಾ - 95.80 ರೂ.
ಚೆನ್ನೈ - 97.19 ರೂ.
ಬೆಂಗಳೂರು – 98.75 ರೂ.
ಡೀಸೆಲ್ ದರ :
ದೆಹಲಿ - 86.75 ರೂ
ಮುಂಬಯಿ - 94.15 ರೂ.
ಕೋಲ್ಕತ್ತಾ - 89.60 ರೂ.
ಚೆನ್ನೈ - 91.42 ರೂ.
ಇದನ್ನೂ ಓದಿ : PF Interest : ನೀವು ಕೆಲಸ ಬಿಟ್ಟ ಮೇಲೆ 'PF ಖಾತೆ'ಗೆ ಎಷ್ಟು ದಿನಗಳವರೆಗೆ ಬಡ್ಡಿ ಬರುತ್ತೆ ಗೊತ್ತಾ?
ನಿಮ್ಮ ನಗರದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಎಷ್ಟಿದೆ ಹೀಗೆ ತಿಳಿಯಿರಿ :
ಎಸ್‌ಎಂಎಸ್ (SMS) ಮೂಲಕ ನಿಮ್ಮ ನಗರದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ತಿಳಿದುಕೊಳ್ಳಬಹುದು. ನಿಮ್ಮ ಮೊಬೈಲ್ ನಲ್ಲಿ RSP ಎಂದು ಟೈಪ್ ಮಾಡಿ ನಿಮ್ಮ ನಗರದ ಪಿನ್ ಕೋಡ್ ಹಾಕಿ 9224992249 ನಂಬರಿಗೆ ಕಳುಹಿಸಿ. ನಿಮ್ಮ ನಗರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಎಷ್ಟಿದೆ ಎಂದು ತಕ್ಷಣ ತಿಳಿಯುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.