ಶಾಕಿಂಗ್! ಹೊಸ ವರ್ಷದಿಂದ ಪ್ರತಿ ವಾರ LPG gas cylinders ಬೆಲೆ ಪರಿಷ್ಕರಣೆ ಸಾಧ್ಯತೆ!

ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ನಿಗದಿಪಡಿಸುವ ವ್ಯವಸ್ಥೆಯು ಮುಂದಿನ ವರ್ಷದಿಂದ ಬದಲಾಗಬಹುದು. ಪೆಟ್ರೋಲಿಯಂ ಕಂಪನಿಗಳು ಮಾಸಿಕ ಬದಲು ವಾರಕ್ಕೊಮ್ಮೆ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ನಿಗದಿಪಡಿಸಬಹುದು.

Written by - Yashaswini V | Last Updated : Dec 23, 2020, 08:26 AM IST
  • ಹೊಸ ವರ್ಷದಿಂದ ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಪ್ರತಿ ವಾರ ನಿಗದಿಪಡಿಸಬಹುದು
  • ಪ್ರಸ್ತುತ ಈ ಬೆಲೆಗಳನ್ನು ಮಾಸಿಕ ಆಧಾರದ ಮೇಲೆ ನಿಗದಿಪಡಿಸಲಾಗುತ್ತಿದೆ
  • ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಮಾಸಿಕ ಆಧಾರದ ಮೇಲೆ ನಿಗದಿಪಡಿಸುವುದರಿಂದ, ಕಂಪನಿಗಳು ಇಡೀ ತಿಂಗಳ ನಷ್ಟವನ್ನು ಭರಿಸಬೇಕಾಗುತ್ತದೆ
ಶಾಕಿಂಗ್! ಹೊಸ ವರ್ಷದಿಂದ ಪ್ರತಿ ವಾರ LPG gas cylinders ಬೆಲೆ ಪರಿಷ್ಕರಣೆ ಸಾಧ್ಯತೆ! title=
LPG cylinders price (File Image)

ನವದೆಹಲಿ: ಹೊಸ ವರ್ಷದಿಂದ ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಪ್ರತಿ ವಾರ ನಿಗದಿಪಡಿಸಬಹುದು. ಪ್ರಸ್ತುತ ಈ ಬೆಲೆಗಳನ್ನು ಮಾಸಿಕ ಆಧಾರದ ಮೇಲೆ ನಿಗದಿಪಡಿಸಲಾಗುತ್ತಿದೆ. ಆದರೆ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳಲ್ಲಿನ ದೈನಂದಿನ ಏರಿಳಿತಗಳನ್ನು ಗಮನದಲ್ಲಿಟ್ಟುಕೊಂಡು ಪೆಟ್ರೋಲಿಯಂ ಕಂಪನಿಗಳು ಈಗ ವಾರಕ್ಕೊಮ್ಮೆ ಬೆಲೆಗಳನ್ನು ಬದಲಾಯಿಸಲು ಯೋಜಿಸುತ್ತಿವೆ.

ಪ್ರಸ್ತುತ, ಬೆಲೆಗಳನ್ನು ಮಾಸಿಕ ಆಧಾರದ ಮೇಲೆ ನಿಗದಿಪಡಿಸಲಾಗುತ್ತಿದೆ:
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತಿದಿನ ಪರಿಷ್ಕರಿಸಲಾಗುತ್ತದೆ. ಇದರಿಂದಾಗಿ ತೈಲದ ಬೆಲೆಯಲ್ಲಿ ಬದಲಾವಣೆ ಕಂಡುಬರುತ್ತದೆ. ಪೆಟ್ರೋಲಿಯಂ ಕಂಪನಿಗಳು ಇದನ್ನು ಪ್ರತಿದಿನ ಸುಲಭವಾಗಿ ಹೊಂದಿಸಿಕೊಳ್ಳುತ್ತವೆ. ಆದರೆ ಎಲ್‌ಪಿಜಿ ಸಿಲಿಂಡರ್‌ನ (LPG Cylinder) ಬೆಲೆಯನ್ನು ಮಾಸಿಕ ಆಧಾರದ ಮೇಲೆ ನಿಗದಿಪಡಿಸುವುದರಿಂದ, ಕಂಪನಿಗಳು ಇಡೀ ತಿಂಗಳ ನಷ್ಟವನ್ನು ಭರಿಸಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಪೆಟ್ರೋಲಿಯಂ ಕಂಪನಿಗಳು ಬಹಳ ದಿನಗಳಿಂದ ಬೆಲೆಗಳನ್ನು ಪರಿಷ್ಕರಿಸುವ ವಿಧಾನಗಳನ್ನು ಬದಲಾಯಿಸುವ ಬಗ್ಗೆ ಚಿಂತಿಸುತ್ತಿವೆ.

ಪೆಟ್ರೋಲಿಯಂ ಕಂಪನಿಗಳು ಡಿಸೆಂಬರ್‌ನಲ್ಲಿ ಎರಡು ಬಾರಿ ಬೆಲೆಗಳನ್ನು ಹೆಚ್ಚಿಸಿವೆ:
ತಜ್ಞರ ಪ್ರಕಾರ ಪೆಟ್ರೋಲಿಯಂ ಕಂಪನಿಗಳು ಸಹ ಬೆಲೆ ಹೆಚ್ಚಿಸುವ ಹೊಸ ನೀತಿಯನ್ನು ಜಾರಿಗೆ ತರಲು ಪ್ರಾರಂಭಿಸಿವೆ. ಆದರೆ ಈ ಬಗ್ಗೆ ಇನ್ನೂ ಯಾವುದೇ ಘೋಷಣೆ ಮಾಡಿಲ್ಲ. ಇದರ ಅಡಿಯಲ್ಲಿ ಡಿಸೆಂಬರ್‌ನಲ್ಲಿ ಎಲ್‌ಪಿಜಿ ಸಿಲಿಂಡರ್‌ನ (Cylinder) ಬೆಲೆಗಳನ್ನು ಇದುವರೆಗೆ ಎರಡು ಬಾರಿ ಹೆಚ್ಚಿಸಲಾಗಿದೆ. ಆದರೆ ಪ್ರಕಟಣೆಯ ಕೊರತೆಯಿಂದಾಗಿ ಜನರು ಅದನ್ನು ತಿಳಿದುಕೊಳ್ಳಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ: LPG cylinder ಅನ್ನು ಕೇವಲ 194 ರೂ.ಗಳಿಗೆ ಖರೀದಿಸಲು ಇಲ್ಲಿದೆ ಅವಕಾಶ

ಪ್ರಸ್ತುತ ಇಂಡೇನ್‌ನ ಗ್ಯಾಸ್ ಸಿಲಿಂಡರ್ (GAS Cylinder) ಅನ್ನು 694 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. ಐಒಸಿಯ ಅಧಿಕೃತ ಮಾಹಿತಿಯ ಪ್ರಕಾರ ಡಿಸೆಂಬರ್ 2 ರಂದು ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 50 ರೂಪಾಯಿ ಹೆಚ್ಚಿಸಲಾಗಿದೆ. ಈ ಹೆಚ್ಚಳದ ನಂತರ ದೆಹಲಿಯಲ್ಲಿ ಎಲ್‌ಪಿಜಿಯ ಬೆಲೆ 644 ರೂ. ಇದರ ನಂತರ ಡಿಸೆಂಬರ್ 15 ರಂದು ಮತ್ತೆ 50 ರೂಪಾಯಿಗಳನ್ನು ಹೆಚ್ಚಿಸಲಾಯಿತು. ಅದರ ನಂತರ ಈಗ ದೆಹಲಿಯ ಇಂಡೇನ್‌ನ ಗ್ಯಾಸ್ ಸಿಲಿಂಡರ್ ಬೆಲೆ 694 ರೂ. ಅದೇ ಸಮಯದಲ್ಲಿ ಪೆಟ್ರೋಲಿಯಂ ಕಂಪನಿಗಳು ಡಿಸೆಂಬರ್ 1 ರಂದು ವಾಣಿಜ್ಯ ಅನಿಲ ಸಿಲಿಂಡರ್ಗಳ ಬೆಲೆಯನ್ನು 55 ರೂ.ಗೆ ಹೆಚ್ಚಿಸಿವೆ.

ಇದನ್ನೂ ಓದಿ: LPG ಸಿಲಿಂಡರ್ ಅನ್ನು ಈ ರೀತಿ ಖರೀದಿಸಿದರೆ ಏಜೆನ್ಸಿಯೇ ಹಣ ನೀಡುತ್ತೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News