September 2021: ನೀವೂ ಕಾರು ಖರೀದಿಸಲು ಯೋಜಿಸುತ್ತಿದ್ದರೆ, ಸೆಪ್ಟೆಂಬರ್‌ನಲ್ಲಿ ಈ 3 ದಿನಗಳು 'ಅದೃಷ್ಟದ ದಿನ' ಅಂತೆ!

ನಾವು ಸಾಮಾನ್ಯವಾಗಿ ಏನನ್ನಾದರೂ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಮೊದಲಿಗೆ ಬಜೆಟ್ ಲೆಕ್ಕಾಚಾರ ಮಾಡುತ್ತೇವೆ. ನಂತರ ಕೊಡುಗೆಗಳ ಬಗ್ಗೆ ಯೋಚಿಸುತ್ತೇವೆ. ಬಳಿಕ ಖರೀದಿಗೆ ಮುನ್ನ ಶುಭ ದಿನ ಯಾವುದೆಂದು ನೋಡುತ್ತೇವೆ.  

Written by - Yashaswini V | Last Updated : Sep 2, 2021, 07:13 AM IST
  • ಸೆಪ್ಟೆಂಬರ್‌ನಲ್ಲಿ ಮೂರು ಶುಭ ದಿನಗಳು
  • ಕಾರು ಅಥವಾ ಬೈಕ್ ಖರೀದಿಸಲು ಅದೃಷ್ಟದ ದಿನ
  • ವಾಹನಗ ಖರೀದಿಗೆ ಶುಭ ಸಮಯ ಮತ್ತು ಮುಹೂರ್ತ
September 2021: ನೀವೂ ಕಾರು ಖರೀದಿಸಲು ಯೋಜಿಸುತ್ತಿದ್ದರೆ, ಸೆಪ್ಟೆಂಬರ್‌ನಲ್ಲಿ ಈ 3 ದಿನಗಳು 'ಅದೃಷ್ಟದ ದಿನ' ಅಂತೆ! title=
Three auspicious days in the month of september

ನವದೆಹಲಿ: ಭಾರತದ ಯಾವುದೇ ಮನೆಯಲ್ಲಿ ವಾಹನ ಖರೀದಿಯು ಅನೇಕ ಅಂಶಗಳನ್ನು ಅವಲಂಬಿಸಿರುತ್ತದೆ. ಕೊಡುಗೆ, ಬೆಲೆ, ಬ್ರಾಂಡ್‌ನಿಂದ ವಾಹನವನ್ನು ಖರೀದಿಸುವ ಸಮಯದವರೆಗೆ ಎಲ್ಲ ಅಂಶಗಳಿಗೂ ಅದರದೇ ಆದ ಮಹತ್ವವಿದೆ. ವಾಹನವನ್ನು ಖರೀದಿಸುವಾಗ ಅನೇಕ ಜನರು ಈ ವಿಷಯವನ್ನು ಪರಿಗಣಿಸುತ್ತಾರೆ ಮತ್ತು ಶುಭ ದಿನ, ಸಮಯದಲ್ಲಿ ವಾಹನ ಖರೀದಿಸುವುದು ಒಳ್ಳೆಯದು ಎಂಬ ನಂಬಿಕೆಯನ್ನೂ ಹೊಂದಿರುತ್ತಾರೆ.  ಇಂತಹ ಪರಿಸ್ಥಿತಿಯಲ್ಲಿ, ನೀವು ಕೂಡ ಸೆಪ್ಟೆಂಬರ್ ತಿಂಗಳಲ್ಲಿ ಕಾರು ಅಥವಾ ಮೋಟಾರ್ ಸೈಕಲ್ ಖರೀದಿಸಲು ಬಯಸಿದರೆ, ನೀವು ಈ ಶುಭ ದಿನಗಳು, ಸಮಯಗಳು ಮತ್ತು ಮುಹೂರ್ತವನ್ನು ನೋಡಬಹುದು.

ದೃಕ್ಪಂಚಾಂಗ್ ಪ್ರಕಾರ, ಸೆಪ್ಟೆಂಬರ್ (September) ತಿಂಗಳಲ್ಲಿ ವಾಹನ ಖರೀದಿಗೆ 3 ದಿನಗಳು 'ಅದೃಷ್ಟದ ದಿನ' ಎಂದು ಹೇಳಲಾಗುತ್ತಿದೆ.  ಸೆಪ್ಟೆಂಬರ್ ತಿಂಗಳಲ್ಲಿ ಯಾವಾಗ ವಾಹನವನ್ನು ಖರೀದಿಸಲು ಶುಭ ದಿನ ಎಂದು ತಿಳಿಯಿರಿ.

ಇದನ್ನೂ ಓದಿ- Hero Electric: ಹೀರೋ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಖರೀದಿಸುವುದು ಈಗ ತುಂಬಾ ಸುಲಭ

ವಾಹನವನ್ನು ಯಾವಾಗ ಖರೀದಿಸಬೇಕು?
* ದಿನಾಂಕ:  ಸೆಪ್ಟೆಂಬರ್ 2, 2021 (ಗುರುವಾರ) (ಏಕಾದಶಿ)
- ಶುಭ ಮುಹೂರ್ತ (Shubha Muhurta):  ಮಧ್ಯಾಹ್ನ 02:57 ರಿಂದ ಸೆಪ್ಟೆಂಬರ್ 03 ರ ಬೆಳಿಗ್ಗೆ 06:00 ಗಂಟೆಗೆ

- ನಕ್ಷತ್ರ: ಪುನರ್ವಸು

* ಸೆಪ್ಟೆಂಬರ್ 9, 2021 (ಗುರುವಾರ) 
- ಶುಭ ಮುಹೂರ್ತ: ಬೆಳಿಗ್ಗೆ 06:03 ರಿಂದ 12:18 ಮಧ್ಯರಾತ್ರಿ (ಸೆಪ್ಟೆಂಬರ್ 10)

- ನಕ್ಷತ್ರ: ಹಸ್ತ, ಚಿತ್ರ

ಇದನ್ನೂ ಓದಿ- New Royal Enfield Classic 350: ಪವರ್ಫುಲ್ ಲುಕ್ ನಲ್ಲಿ ಬಿಡುಗಡೆಯಾದ ಕ್ಲಾಸಿಕ್ ಬೈಕ್, ಅಡ್ವಾನ್ಸ್ಡ್ ವೈಶಿಷ್ಟ್ಯ ಹಾಗೂ ಬೆಲೆ ತಿಳಿಯಲು ವರದಿ ಓದಿ

* ಸೆಪ್ಟೆಂಬರ್ 12, 2021 (ಭಾನುವಾರ)

- ಶುಭ ಮುಹೂರ್ತ: ಬೆಳಿಗ್ಗೆ 09:50 ರಿಂದ ಸಂಜೆ 05:20 ರವರೆಗೆ

- ನಕ್ಷತ್ರ: ಅನುರಾಧ

(ಹಕ್ಕುತ್ಯಾಗ: ಈ ಲೇಖನದ ಉದ್ದೇಶ ಯಾವುದೇ ರೀತಿಯ ಮೂಢನಂಬಿಕೆಯನ್ನು ಹರಡುವುದಲ್ಲ. ಇದು ಜನಪ್ರಿಯ ಭಾವನೆಗಳು ಮತ್ತು ಮಂಗಳಕರ ದಿನಾಂಕಗಳಿಗಾಗಿ ಚಾಲ್ತಿಯಲ್ಲಿರುವ ಅಭ್ಯಾಸಗಳನ್ನು ಆಚರಿಸುವ ಆಧಾರದ ಮೇಲೆ ಮಾಹಿತಿಯನ್ನು ಒದಗಿಸುವುದು ಮಾತ್ರ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News