PM Kisan: ದೇಶದ 12 ಕೋಟಿ ರೈತ ಬಾಂಧವರಿಗೆ ಹೊಸ ವರ್ಷದ ಉಡುಗೊರೆ, ಪ್ರಧಾನಿ ಮೋದಿ ಮಹತ್ವದ ಘೋಷಣೆ

PM Kisan Scheme Big Update: ದೇಶದ ಕೋಟ್ಯಂತರ ರೈತರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಹೊಸ ವರ್ಷದಲ್ಲಿ 12 ಕೋಟಿ ರೈತರಿಗೆ ಪ್ರಧಾನಿ ಮೋದಿ ದೊಡ್ಡ ಉಡುಗೊರೆ ನೀಡಲಿದ್ದಾರೆ. ಏತನ್ಮಧ್ಯೆ, 13ನೇ ಕಂತಿನ ಹಣ ಬಿಡುಗಡೆಯ ದಿನಾಂಕ ಘೋಷಣೆ ಮಾಡಿದ ಪ್ರಧಾನಿ ಮೋದಿ, ಜನವರಿ ತಿಂಗಳಿನಲ್ಲಿಯೇ 13 ನೇ ಕಂತಿನ 2000 ರೂ.ಗಳನ್ನು ಕೋಟ್ಯಾಂತರ ರೈತರ ಖಾತೆಗಳಿಗೆ ವರ್ಗಾಯಿಸಲಾಗುವುದು ಎಂದು ಹೇಳಿದ್ದಾರೆ.  

Written by - Nitin Tabib | Last Updated : Dec 29, 2022, 03:01 PM IST
  • ಇಲ್ಲಿಯವರೆಗೆ 8.42 ಕೋಟಿಗೂ ಹೆಚ್ಚು ರೈತರು 12 ಕಂತುಗಳ ಲಾಭವನ್ನು ಪಡೆದಿದ್ದಾರೆ.
  • ಪ್ರಸ್ತುತ, ದೇಶದಾದ್ಯಂತ 12 ಕೋಟಿಗೂ ಹೆಚ್ಚು ರೈತರು ಸರ್ಕಾರದ
  • ಈ ಯೋಜನೆಯ ಪ್ರಯೋಜನವನ್ನು ಪಡೆಯುತ್ತಿದ್ದಾರೆ.
PM Kisan: ದೇಶದ 12 ಕೋಟಿ ರೈತ ಬಾಂಧವರಿಗೆ ಹೊಸ ವರ್ಷದ ಉಡುಗೊರೆ, ಪ್ರಧಾನಿ ಮೋದಿ ಮಹತ್ವದ ಘೋಷಣೆ title=
PM Kisan Yojana

PM Kisan 13th Instalment Latest News: ದೇಶದ ಕೋಟ್ಯಂತರ ರೈತರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಹೊಸ ವರ್ಷದಲ್ಲಿ  12 ಕೋಟಿ ರೈತರಿಗೆ ಪ್ರಧಾನಿ ಮೋದಿ ದೊಡ್ಡ ಉಡುಗೊರೆ ನೀಡಲಿದ್ದಾರೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 13 ನೇ ಕಂತಿಗಾಗಿ ಜನರು ಕುತೂಹಲದಿಂದ ಕಾಯುತ್ತಿದ್ದಾರೆ. ಏತನ್ಮಧ್ಯೆ, ಈ ಕುರಿತಾದ ದಿನಾಂಕ ಘೋಷಣೆ ಮಾಡಿದ ಪ್ರಧಾನಿ ಮೋದಿ ಅವರು, ಜನವರಿ ತಿಂಗಳಲ್ಲಿಯೇ 13 ನೇ ಕಂತಿನ 2000 ರೂ.ಗಳನ್ನು ಕೋಟ್ಯಂತರ ಜನರ ಖಾತೆಗಳಿಗೆ ವರ್ಗಾಯಿಸಲಾಗುವುದು ಎಂದು ಹೇಳಿದ್ದಾರೆ.

ದಿನಾಂಕ ಘೋಷಿಸಿದ ಪ್ರಧಾನಿ ಮೋದಿ
ಈ ಹಣವನ್ನು ಜನವರಿ 26 ರವರೆಗೆ ರೈತರ ಖಾತೆಗೆ ಈ ಹಣ ವರ್ಗಾವಣೆಯಾಗುವ ನಿರೀಕ್ಷೆ ಇದೆ ಎಂದ ಪ್ರಧಾನಿ ಮೋದಿ, ಪ್ರಸ್ತುತ ದಿನಾಂಕವನ್ನು ನಿಗದಿಪಡಿಸಲಾಗಿಲ್ಲ, ಆದರೆ ಜನವರಿ ತಿಂಗಳಲ್ಲಿ ರೈತರಿಗೆ ಈ ಹಣದ ಲಾಭ ದೊರೆಯುವ ನಿರೀಕ್ಷೆಯಿದೆ ಎಂದಿದ್ದಾರೆ. ಇದುವರೆಗೆ ಈ ಯೋಜನೆಯ ಸುಮಾರು 12 ಕಂತುಗಳು ರೈತರ ಖಾತೆಗೆ ವರ್ಗಾವಣೆಯಾಗಿವೆ ಎಂಬುದು ಇಲ್ಲಿ ಉಲ್ಲೇಖನೀಯ.

12 ಕೋಟಿಗೂ ಹೆಚ್ಚು ರೈತರು ಇದರ ಲಾಭ ಪಡೆಯುತ್ತಿದ್ದಾರೆ
ಇಲ್ಲಿಯವರೆಗೆ 8.42 ಕೋಟಿಗೂ ಹೆಚ್ಚು ರೈತರು 12 ಕಂತುಗಳ ಲಾಭವನ್ನು ಪಡೆದಿದ್ದಾರೆ. ಪ್ರಸ್ತುತ, ದೇಶದಾದ್ಯಂತ 12 ಕೋಟಿಗೂ ಹೆಚ್ಚು ರೈತರು ಸರ್ಕಾರದ ಈ ಯೋಜನೆಯ ಪ್ರಯೋಜನವನ್ನು ಪಡೆಯುತ್ತಿದ್ದಾರೆ.

ಇದನ್ನೂ ಓದಿ-Wheat Price: ಹೆಚ್ಚುತ್ತಿರುವ ಹಣದುಬ್ಬರದ ನಡುವೆ ಅಗ್ಗವಾಗಲಿದೆ ಗೋಧಿ, ಸರ್ಕಾರದ ಮಹತ್ವದ ನಿರ್ಧಾರ ಇಲ್ಲಿದೆ

ಕಳೆದ ವರ್ಷ ಜನವರಿ 1 ರಂದು ಹಣ ವರ್ಗಾವಣೆ ಮಾಡಲಾಗಿತ್ತು
ನೀವು ಹಿಂದಿನ ಮಾದರಿಯನ್ನು ನೋಡಿದರೆ, ಜನವರಿ 1, 2022 ರಂದು, ಪ್ರಧಾನಿ ಮೋದಿಯವರು ಮಧ್ಯಾಹ್ನ 12:30 ಕ್ಕೆ ರೈತರ ಖಾತೆಗೆ ಹಣವನ್ನು ವರ್ಗಾಯಿಸಿದ್ದರು. ಕಳೆದ ವರ್ಷ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಹಣ ವರ್ಗಾವಣೆ ಮಾಡಿದ್ದರು. ಇದರ ಅಡಿಯಲ್ಲಿ ಸುಮಾರು 10 ಕೋಟಿ ರೈತರಿಗೆ 20,000 ಕೋಟಿ ರೂ. ಲಾಭವನ್ನು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ-Online Money Transfer: ಹಣ ಕಳುಹಿಸಲು ನೀವು ಬಳಸುವ ಆಪ್ ಗಳ ಈ ಸತ್ಯಾಸತ್ಯತೆ ನಿಮಗೂ ಗೊತ್ತಿರಲಿ

ರೈತರ ಆದಾಯ ಹೆಚ್ಚಳ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಸರ್ಕಾರವು ರೈತರಿಗೆ ವಾರ್ಷಿಕ 6000 ರೂಪಾಯಿಗಳ ಆರ್ಥಿಕ ನೆರವು ನೀಡುತ್ತದೆ. ರೈತರ ಆದಾಯ ಹೆಚ್ಚಿಸಲು ಸರ್ಕಾರ ಈ ಯೋಜನೆ ಆರಂಭಿಸಿದೆ. ಈ ಮೂಲಕ ಕೋಟ್ಯಂತರ ರೈತರಿಗೆ ಸರಕಾರದಿಂದ ಧನ ಸಹಾಯ ಸಿಗುತ್ತಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News