Post Office ಬ್ಯಾಂಕ್ ಬಡ್ಡಿ ದರ ಇಳಿಕೆ, ಉಳಿದ ಶುಲ್ಕ ಹೆಚ್ಚಳ; ಯಾವಾಗ ಜಾರಿಗೆ ಬರಲಿದೆ

ಆಗಸ್ಟ್ 1 ರಿಂದ, ನೀವು ಡೋರ್‌ಸ್ಟೆಪ್ ಬ್ಯಾಂಕಿಂಗ್‌ಗಾಗಿ ಶುಲ್ಕ (Doorstep Banking Charges) ಪಾವತಿಸಬೇಕಾಗುತ್ತದೆ. ಇದಲ್ಲದೆ, ಈಗಾಗಲೇ  ಬ್ಯಾಂಕ್ ಜುಲೈ 1 ರಿಂದ ಬಡ್ಡಿದರಗಳನ್ನು (IPPB Interest Rate) ಕಡಿತಗೊಳಿಸಿದೆ.

Written by - Yashaswini V | Last Updated : Jul 31, 2021, 10:58 AM IST
  • ಪೋಸ್ಟ್ ಆಫೀಸ್ ಗ್ರಾಹಕರಿಗೆ ಡಬಲ್ ಹೊಡೆತ
  • ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಬಡ್ಡಿದರವನ್ನು ಕಡಿಮೆ ಮಾಡಿದೆ
  • ಆಗಸ್ಟ್ 1 ರಿಂದ, ನೀವು ಡೋರ್ ಸ್ಟೆಪ್ ಬ್ಯಾಂಕಿಂಗ್‌ಗಾಗಿ ಶುಲ್ಕ ಪಾವತಿಸಬೇಕಾಗುತ್ತದೆ
Post Office ಬ್ಯಾಂಕ್ ಬಡ್ಡಿ ದರ ಇಳಿಕೆ, ಉಳಿದ ಶುಲ್ಕ ಹೆಚ್ಚಳ; ಯಾವಾಗ ಜಾರಿಗೆ ಬರಲಿದೆ  title=
India Post Payments Bank

ನವದೆಹಲಿ:  ಅಂಚೆ ಕಚೇರಿಯಲ್ಲಿ ಖಾತೆ ಹೊಂದಿರುವ ಖಾತೆದಾರರಿಗೆ ಪ್ರಮುಖ ಸುದ್ದಿಯಿದೆ. ನಿಮ್ಮ ಖಾತೆಯು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕಿನಲ್ಲಿದ್ದರೆ, ಈ ಸುದ್ದಿಯು ನಿಮ್ಮನ್ನು ಆಘಾತಗೊಳಿಸಬಹುದು. ವಾಸ್ತವವಾಗಿ, ಆಗಸ್ಟ್ 1 ರಿಂದ, ನೀವು ಡೋರ್‌ಸ್ಟೆಪ್ ಬ್ಯಾಂಕಿಂಗ್‌ಗಾಗಿ ಶುಲ್ಕ (Doorstep Banking Charges) ಪಾವತಿಸಬೇಕಾಗುತ್ತದೆ. ಇದಲ್ಲದೆ, ಈಗಾಗಲೇ ಬ್ಯಾಂಕ್ ಜುಲೈ 1 ರಿಂದ ಬಡ್ಡಿದರಗಳನ್ನು (IPPB Interest Rate) ಕಡಿತಗೊಳಿಸಿದೆ. ಅಂದರೆ, ಈಗ ನಿಮ್ಮ ವೆಚ್ಚಗಳ ಹೆಚ್ಚಳದೊಂದಿಗೆ, ನೀವು ಪಡೆಯುವ ಲಾಭವೂ ಕಡಿಮೆಯಾಗಲಿದೆ.

ಬ್ಯಾಂಕ್ ಗ್ರಾಹಕರಿಗೆ ಡಬಲ್ ಹೊಡೆತ:
IPPB ಪ್ರಕಾರ, ಆಗಸ್ಟ್ 1, 2021 ರಿಂದ, ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕಿನ (India Post Payments Bank) ಗ್ರಾಹಕರು ಪ್ರತಿ ಡೋರ್ ಸ್ಟೆಪ್ ಬ್ಯಾಂಕಿಂಗ್ ಸೇವೆಗಾಗಿ 20 ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದರೊಂದಿಗೆ ಬ್ಯಾಂಕ್ ಬಡ್ಡಿದರಗಳನ್ನು ಕೂಡ ಕಡಿತಗೊಳಿಸಿದೆ. ಜುಲೈ 1 ರಿಂದ ಉಳಿತಾಯ ಖಾತೆ ಹೊಂದಿರುವ ಗ್ರಾಹಕರು ಕಡಿಮೆ ಬಡ್ಡಿಯನ್ನು ಪಡೆಯುತ್ತಿದ್ದಾರೆ. ಈ ಮೊದಲು, ಗ್ರಾಹಕರು 1 ಲಕ್ಷದವರೆಗೆ 2.75 ಶೇಕಡಾ ಬಡ್ಡಿಯನ್ನು ಪಡೆಯುತ್ತಿದ್ದರು. ಆದರೆ ಬ್ಯಾಂಕ್ ಅದನ್ನು 25 ಬೇಸಿಸ್ ಪಾಯಿಂಟ್‌ಗಳಿಂದ ಕಡಿತಗೊಳಿಸಿ 2.50 ಪ್ರತಿಶತಕ್ಕೆ ಇಳಿಸಿದೆ.

ಇದನ್ನೂ ಓದಿ- Passport in Post Office: ಈಗ ನಿಮ್ಮ ಹತ್ತಿರದ ಅಂಚೆ ಕಚೇರಿಯಲ್ಲೂ ಪಾಸ್‌ಪೋರ್ಟ್ ಲಭ್ಯ

ಹೆಚ್ಚಿದ ಅನುಕೂಲ: 
ವಾಸ್ತವವಾಗಿ, ಈ ಮೊದಲು ಗ್ರಾಹಕರು ಖಾತೆಗೆ ಸಂಬಂಧಿಸಿದ ಯಾವುದೇ ಕೆಲಸಕ್ಕಾಗಿ ಅಂದರೆ ಬ್ಯಾಲೆನ್ಸ್, ಹಣ ವರ್ಗಾವಣೆ ಮತ್ತು ಯಾವುದೇ ರೀತಿಯ ಹಣಕಾಸು ವಹಿವಾಟುಗಾಗಿ ಅಂಚೆ ಕಚೇರಿಗೆ (Post Office) ಹೋಗಬೇಕಿತ್ತು. ಈಗ ಗ್ರಾಹಕರು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಮೂಲಕ ಬ್ಯಾಂಕಿಂಗ್ ಸೇವೆಗಳನ್ನು ಸುಲಭವಾಗಿ ಪಡೆಯಬಹುದು.

ಆನ್‌ಲೈನ್ ಖಾತೆ ತೆರೆಯುವ ಪ್ರಕ್ರಿಯೆ:
1. ಮೊದಲು ನೀವು IPPB ಆಪ್ ಅನ್ನು ಡೌನ್ಲೋಡ್ ಮಾಡಿ ಮತ್ತು 'ಓಪನ್ ಅಕೌಂಟ್' ಮೇಲೆ ಕ್ಲಿಕ್ ಮಾಡಿ.
2. ಈಗ ಮೊಬೈಲ್ ಸಂಖ್ಯೆ ಮತ್ತು ಪ್ಯಾನ್ ಸಂಖ್ಯೆಯನ್ನು ನಮೂದಿಸಿ.
3. ಇದರ ನಂತರ ಆಧಾರ್ ಸಂಖ್ಯೆಯನ್ನು ನಮೂದಿಸಿ.
4. ಈಗ ನಿಮ್ಮ ಆಧಾರ್‌ನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಗೆ OTP ಬರುತ್ತದೆ.
5. ಇದರ ನಂತರ ನೀವು ಕೆಲವು ವೈಯಕ್ತಿಕ ವಿವರಗಳನ್ನು ನಮೂದಿಸಬೇಕು, ಉದಾಹರಣೆಗೆ ತಾಯಿಯ ಹೆಸರು, ಶೈಕ್ಷಣಿಕ ಅರ್ಹತೆ, ವಿಳಾಸ ಮತ್ತು ನಾಮನಿರ್ದೇಶನ ವಿವರಗಳು ಇತ್ಯಾದಿ.
6. ಅದನ್ನು ಸಲ್ಲಿಸಿದ ನಂತರ, ಖಾತೆಯನ್ನು ತೆರೆಯಲಾಗುತ್ತದೆ ಮತ್ತು ಅದನ್ನು ಅಪ್ಲಿಕೇಶನ್‌ನಿಂದ ಪ್ರವೇಶಿಸಬಹುದು.

ಇದನ್ನೂ ಓದಿ- Post Office : ಪೋಸ್ಟ್ ಆಫೀಸ್ ಉಳಿತಾಯ ಖಾತೆ: ನೀವು ತಿಳಿದುಕೊಳ್ಳಬೇಕಾದ ಬಡ್ಡಿ ದರ, ಆದಾಯ ತೆರಿಗೆ ನಿಯಮ

ಗಮನಿಸಬೇಕಾದ ಸಂಗತಿಯೆಂದರೆ, ಗ್ರಾಹಕರ ಗರಿಷ್ಠ ಮೊತ್ತದ ಮಿತಿಯನ್ನು ಬ್ಯಾಂಕ್ 1 ಲಕ್ಷದಿಂದ 2 ಲಕ್ಷಕ್ಕೆ ಹೆಚ್ಚಿಸಿದೆ. ಇದಲ್ಲದೇ ಕ್ಯೂಆರ್ ಕಾರ್ಡ್ ಸೌಲಭ್ಯವನ್ನು ಬ್ಯಾಂಕಿನ ಗ್ರಾಹಕರಿಗೆ ನೀಡಲಾಗುತ್ತಿದೆ. ಖಾತೆದಾರರ ದೃಢೀಕರಣ ಪ್ರಕ್ರಿಯೆಯನ್ನು ಬಯೋಮೆಟ್ರಿಕ್ ಮೂಲಕ ಪೂರ್ಣಗೊಳಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News