Post Office ಯೋಜನೆಯಲ್ಲಿ ಸಿಗಲಿದೆ ಭಾರೀ ಲಾಭ , ಇಷ್ಟು ವರ್ಷಗಳಲ್ಲಿ ಡಬಲ್ ಆಗುತ್ತದೆ ಹೂಡಿರುವ ಮೊತ್ತ

Post Office Small Saving Scheme : ಎಲ್ಲೇ ಹೂಡಿಕೆ ಮಾಡಿದರೂ ಅದರಿಂದ ಅಧಿಕ ಲಾಭವಾಗಬೇಕು ಎನ್ನುವ ದೃಷ್ಟಿಯಿಂದಲೇ ಹೂಡಿಕೆ ಮಾಡುತ್ತೇವೆ.  ಮಾಡುವ ಹೂಡಿಕೆ ಶೀಘ್ರ ದ್ವಿಗುಣವಾಗಬೇಕು ಎನ್ನುವ ಉದ್ದೇಶದಿಂದಲೇ ಹೂಡಿಕೆ ಮಾಡುತ್ತೇವೆ. 

Written by - Ranjitha R K | Last Updated : Jul 22, 2021, 04:43 PM IST
  • 'ವಿಕಾಸ್ ಪತ್ರ' ಯೋಜನೆಯಲ್ಲಿ ರೈತರು ಅನಿಯಮಿತ ಹೂಡಿಕೆ ಮಾಡಬಹುದು
  • ಕೆವಿಪಿಯಲ್ಲಿ 10 ವರ್ಷಗಳಲ್ಲಿ ಹಣ ದ್ವಿಗುಣಗೊಳ್ಳುತ್ತದೆ
  • 50,000 ರೂ.ಗಿಂತ ಹೆಚ್ಚಿನ ಹೂಡಿಕೆಗೆ ಪ್ಯಾನ್ ಕಾರ್ಡ್ ಕಡ್ಡಾಯ
Post Office ಯೋಜನೆಯಲ್ಲಿ ಸಿಗಲಿದೆ ಭಾರೀ ಲಾಭ , ಇಷ್ಟು ವರ್ಷಗಳಲ್ಲಿ ಡಬಲ್ ಆಗುತ್ತದೆ ಹೂಡಿರುವ ಮೊತ್ತ  title=
ಕೆವಿಪಿಯಲ್ಲಿ 10 ವರ್ಷಗಳಲ್ಲಿ ಹಣ ದ್ವಿಗುಣಗೊಳ್ಳುತ್ತದೆ (file photo)

ನವದೆಹಲಿ : Post Office Small Saving Scheme : ಎಲ್ಲೇ ಹೂಡಿಕೆ ಮಾಡಿದರೂ ಅದರಿಂದ ಅಧಿಕ ಲಾಭವಾಗಬೇಕು ಎನ್ನುವ ದೃಷ್ಟಿಯಿಂದಲೇ ಹೂಡಿಕೆ ಮಾಡುತ್ತೇವೆ.  ಮಾಡುವ ಹೂಡಿಕೆ ಶೀಘ್ರ ದ್ವಿಗುಣವಾಗಬೇಕು ಎನ್ನುವ ಉದ್ದೇಶದಿಂದಲೇ ಹೂಡಿಕೆ ಮಾಡುತ್ತೇವೆ. ಹೂಡಿಕೆ ಮಾಡುವ ವೇಳೆ ಲಾಭದ ಜೊತೆಯಲ್ಲಿ ಸುರಕ್ಷತೆ ಕೂಡಾ ಮುಖ್ಯವಾಗಿರುತ್ತದೆ.  ರಿಸ್ಕ್ ತೆಗೆದುಕೊಳ್ಳಲು ತಯಾರಿದ್ದು, ದೊಡ್ಡ ಆದಾಯವನ್ನು ಪಡೆಯಲು ಬಯಸುವುದಾದರೆ,  ಇಕ್ವಿಟಿ ಮ್ಯೂಚುಯಲ್ ಫಂಡ್ (Mutual fund) ಉತ್ತಮ ಆಯ್ಕೆಯಾಗಿದೆ. ಆದರೆ, ಯಾವುದೇ ಅಪಾಯವಿಲ್ಲದೆ,  ಹೂಡಿಕೆ ಮಾಡಲು ಬಯಸುವುದಾದರೆ, ಪೋಸ್ಟ್ ಆಫೀಸ್ ಉಳಿತಾಯ ಯೋಜನೆ (Post office saving scheme) ಉತ್ತಮ ಆಯ್ಕೆಯಾಗಿದೆ. ಇಲ್ಲಿ ದೀರ್ಘಾವಧಿಯ ಹೂಡಿಕೆ ಮಾಡಬೇಕೆಂದರೆ, ಅಂಚೆ ಕಚೇರಿಯ ಕಿಸಾನ್ ವಿಕಾಸ್ ಪತ್ರ ಯೋಜನೆ ಉತ್ತಮವಾಗಿದೆ. 

ಕಿಸಾನ್ ವಿಕಾಸ್ ಪತ್ರ ಯೋಜನೆ ಎಂದರೇನು ?
ಕಿಸಾನ್ ವಿಕಾಸ್ ಪತ್ರ ಯೋಜನೆ  (Kisan Vikas Patra Scheme) ಭಾರತ ಸರ್ಕಾರದ ಒನ್ ಟೈಮ್ ಇನ್ವೆಸ್ಟ್ಮೆಂಟ್ ಯೋಜನೆಯಾಗಿದ್ದು, ಇದರ ಅಡಿಯಲ್ಲಿ ಹೂಡುವ ಹಣ ನಿಗದಿತ ಅವಧಿಯಲ್ಲಿ ದ್ವಿಗುಣಗೊಳ್ಳುತ್ತದೆ. ಕಿಸಾನ್ ವಿಕಾಸ್ ಪತ್ರ ದೇಶದ ಎಲ್ಲಾ ಅಂಚೆ ಕಚೇರಿಗಳು ಮತ್ತು ದೊಡ್ಡ ದೊಡ್ಡ ಬ್ಯಾಂಕುಗಳಲ್ಲಿ (bank) ಲಭ್ಯವಿರುತ್ತದೆ. ಇದರ ಮೆಚ್ಯುರಿಟಿ ಅವಧಿ 124 ತಿಂಗಳುಗಳು. ಇದರಲ್ಲಿ ಕನಿಷ್ಠ 1000 ರೂಪಾಯಿಗಳನ್ನು ಹೂಡಿಕೆ ಮಾಡಬಹುದು. ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯಿಲ್ಲ. ಕಿಸಾನ್ ವಿಕಾಸ್ ಪತ್ರ (KVP) ಯಲ್ಲಿ ಸರ್ಟಿಫಿಕೇಟ್ ರೂಪದಲ್ಲಿ ಹೂಡಿಕೆ ಮಾಡಲಾಗುತ್ತದೆ. ರೂ .1000, ರೂ .5000, ರೂ .10,000 ಮತ್ತು ರೂ .50,000 ವರೆಗಿನ ಸರ್ಟಿಫಿಕೇಟ್ ಗಳನ್ನೂ ಖರೀದಿಸಬಹುದು. 

ಇದನ್ನೂ ಓದಿGold-Silver Rate : ಚಿನ್ನವು 8750 ರೂ. ಇಳಿಕೆ : ಒಂದು ವಾರದಲ್ಲಿ ಬೆಳ್ಳಿ 2600 ರೂ. ಏರಿಕೆ

ಅಗತ್ಯವಾದ ದಾಖಲೆಗಳು :
ಈ ಯೋಜನೆಯಲ್ಲಿ ಯಾವುದೇ ಹೂಡಿಕೆ ಮಿತಿಯಿಲ್ಲ.  ಆದರೆ  50,000 ರೂ.ಗಿಂತ ಹೆಚ್ಚಿನ ಹೂಡಿಕೆಗೆ ಪ್ಯಾನ್ ಕಾರ್ಡ್ (PAN Card) ಒದಗಿಸುವುದು ಕಡ್ಡಾಯವಾಗಿದೆ. ಇದರೊಂದಿಗೆ ಆಧಾರ್ (Aadhaar) ಅನ್ನು ಗುರುತಿನ ಚೀಟಿಯಾಗಿ ನೀಡಬೇಕಾಗಿರುತ್ತದೆ. ಇದರಲ್ಲಿ ನೀವು 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಹೂಡಿಕೆ ಮಾಡಿದರೆ, ಐಟಿಆರ್, ಸ್ಯಾಲರಿ ಸ್ಲಿಪ್ ಮತ್ತು ಬ್ಯಾಂಕ್ ಸ್ಟೇಟ್‌ಮೆಂಟ್‌ನಂತಹ ಆದಾಯ ಪುರಾವೆಗಳನ್ನು ಸಲ್ಲಿಸಬೇಕಾಗುತ್ತದೆ.

ಸರ್ಟಿಫಿಕೇಟ್ ಹೇಗೆ ಖರೀದಿಸುವುದು ? 
1. ಸಿಂಗಲ್ ಹೋಲ್ಡರ್ ಟೈಪ್ ಸರ್ಟಿಫಿಕೇಟ್ : ಇದನ್ನು ಸ್ವಯಂ ಅಥವಾ ಅಪ್ರಾಪ್ತ ವಯಸ್ಸಿನವರಿಗೆ ಖರೀದಿಸಲಾಗುತ್ತದೆ
2. ಜಾಯಿಂಟ್ A  ಅಕೌಂಟ್  ಸರ್ಟಿಫಿಕೇಟ್ : ಇದನ್ನು ಇಬ್ಬರು ವಯಸ್ಕರಿಗೆ ಜಂಟಿಯಾಗಿ ನೀಡಲಾಗುತ್ತದೆ. ಲಾಭವನ್ನು ಖಾತೆಯಲ್ಲಿಹೆಸರಿರುವ ಇಬ್ಬರಿಗೂ ನೀಡಲಾಗುತ್ತದೆ. 
3. ಜಾಯಿಂಟ್ B ಅಕೌಂಟ್  ಸರ್ಟಿಫಿಕೇಟ್ : ಇದನ್ನು ಇಬ್ಬರು ವಯಸ್ಕರಿಗೆ ಜಂಟಿಯಾಗಿ ನೀಡಲಾಗುತ್ತದೆ. ಇಬ್ಬರಲ್ಲಿ ಒಬ್ಬರಿಗೆ ಅಥವಾ ಜೀವಂತವಾಗಿರುವವರಿಗೆ ಇದರ ಲಾಭವನ್ನು ಪಾವತಿಸಲಾಗುತ್ತದೆ. 

ಇದನ್ನೂ ಓದಿ : Bajaj Chetak E-scooter Booking: ಬಜಾಜ್ ಇ-ಸ್ಕೂಟರ್ ಬುಕಿಂಗ್ ಇಂದಿನಿಂದ ಆರಂಭ, ಕರ್ನಾಟಕದ ಯಾವ ನಗರದಲ್ಲಿ ಬುಕಿಂಗ್ ಲಭ್ಯ?

ಕಿಸಾನ್ ವಿಕಾಸ್ ಪತ್ರದ ವೈಶಿಷ್ಟ್ಯಗಳು :
1. ಈ ಯೋಜನೆ ಖಾತರಿಯ ಆದಾಯವನ್ನು ನೀಡುತ್ತದೆ. ಮಾರುಕಟ್ಟೆಯ ರಿಸ್ಕ್ ಫ್ಯಾಕ್ಟರ್ ದರ ಮೇಲೆ ಪರಿಣಾಮ ಬೀರುವುದಿಲ್ಲ. 
2. ಇದರಲ್ಲಿ, ಅವಧಿ ಮುಗಿದ ನಂತರ, ಪೂರ್ಣ ಮೊತ್ತ ಖಾತೆದಾರರ ಕೈ ಸೇರುತ್ತದೆ. 
3. ಈ ಯೋಜನೆಯಲ್ಲಿ, ಆದಾಯ ತೆರಿಗೆಯ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ (Income tax) ವಿನಾಯಿತಿ ಇರುವುದಿಲ್ಲ .
4. ಇದರಲ್ಲಿ ಪಡೆಯುವ ಆದಾಯದ ಮೇಲೆ ತೆರಿಗೆವಿಧಿಸಲಾಗುತ್ತದೆ. ಮೆಚ್ಯುರಿಟಿ ನಂತರ ಸಿಗುವ ಮೊತ್ತದ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ. 
5.ಮುಕ್ತಾಯದ ನಂತರ ಇದರ ಮೊತ್ತವನ್ನು ಹಿಂಪಡೆಯಬಹುದು, ಆದರೆ ಅದರ ಲಾಕ್-ಇನ್ ಅವಧಿ 30 ತಿಂಗಳುಗಳು. ಇದಕ್ಕೂ ಮೊದಲು, ಖಾತೆದಾರನು ಸತ್ತರೆ ನ್ಯಾಯಾಲಯದ ಆದೇಶವಿಲ್ಲದ ಹೊರತು ನೀವು ಯೋಜನೆಯಿಂದ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ.
6. ಕಿಸಾನ್ ವಿಕಾಸ್ ಪತ್ರವನ್ನು ಆಧಾರವಾಗಿ ಇಟ್ಟುಕೊಂಡು, ಸಾಲವನ್ನು ಸಹ ತೆಗೆದುಕೊಳ್ಳಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News