ಮುಂಬೈ: ZEEL-Sony Merger - ಝೀ ಎಂಟರ್‌ಟೈನ್‌ಮೆಂಟ್ (ZEEL) ಮತ್ತು ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್ ಇಂಡಿಯಾ (SPNI) ಮೆಗಾ ವಿಲೀನದ ನಂತರ, ಮುಂದಿನ ಯೋಜನೆ ಇದೀಗ ಆರಂಭವಾಗಿದೆ. ZEEL-SPIL ವಿಲೀನದ ನಂತರ ರೂಪುಗೊಂಡ ಕಂಪನಿಯಲ್ಲಿ SPIN 11,605.94 ಕೋಟಿ ರೂ. ಹೂಡಿಕೆ ಮಾಡಲಿದೆ. ಪುನೀತ್ ಗೋಯೆಂಕಾ (Punit Goenka) ವಿಲೀನದ ನಂತರ ರಚನೆಯಾದ ಹೊಸ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು (MD) ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಆಗಿ ಮುಂದುವರೆಯಲಿದ್ದಾರೆ.
ವಿಲೀನದ ನಂತರ ನಿರ್ಮಾಣಗೊಂಡ ಕಂಪನಿಯಲ್ಲಿ, ಝೀ ಎಂಟರ್‌ಟೈನ್‌ಮೆಂಟ್ (Zee Entertainment) ಶೇ .47.07 ರಷ್ಟು ಪಾಲನ್ನು ಹೊಂದಿರಲಿದ್ದರೆ, ಸೋನಿ (Sony) ಪಿಕ್ಚರ್ಸ್ ಶೇಕಡಾ 52.93 ರಷ್ಟು ಪಾಲನ್ನು ಹೊಂದಿರಲಿದೆ. ವಿಲೀನ ಕಂಪನಿಯನ್ನು ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲಾಗುವುದು. ಪುನೀತ್ ಗೊಯೆಂಕಾ ವಿಲೀನದ ನಂತರ ರಚನೆಯಾಗುವ ಸಂಸ್ಥೆಯ ಯೋಜನೆ ಕುರಿತು ಮಂಡಳಿಯ ಸದಸ್ಯರೊಂದಿಗೆ ಕಾನ್ಫರೆನ್ಸ್ ಕಾಲ್ ನಡೆಸಿದ್ದಾರೆ.
ಡೀಲ್ ಮೇಲೆ ಯಾವುದೇ ಅಪಾಯ ಇಲ್ಲ
ಕಾನ್ಫರೆನ್ಸ್ ಕರೆಯಲ್ಲಿ ಮಾತನಾಡಿರುವ ಪುನೀತ್ ಗೋಯೆಂಕಾ, ಸೋನಿ ಜೊತೆಗೆ ಹಲವು ತಿಂಗಳುಗಳ ಮಾತುಕತೆಯ ಬಳಿಕ ವಿಲೀನ ಪ್ರಕ್ರಿಯೆಯ ಮೇಲೆ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ, ಇನ್ನೂ ಕಾಂಪಿಟೆಶನ್ ಕಮಿಷನ್ ಈ ಡೀಲ್ ಗೆ ಒಪ್ಪಿಗೆ ಸೂಚಿಸಬೇಕಾಗಿದ್ದು, ಈ ಡೀಲ್ ಮೇಲೆ ಯಾವುದೇ ರೀತಿಯ ಅಪಾಯ ಇಲ್ಲ ಮತ್ತು ವಿಲೀನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನಿರ್ಮಾಣಗೊಳ್ಳುವ ಕಂಪನಿ ಟಾಪ್ ಮಿಡಿಯಾ ಎಂಟರ್ಟೈನ್ಮೆಂಟ್ ಕಂಪನಿಯಾಗಲಿದೆ ಎಂದು ಗೋಯೆಂಕಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಓಪನ್ ಆಫರ್ ಅವಶ್ಯಕತೆ ಬೀಳುವುದಿಲ್ಲ
ಈ ಒಪ್ಪಂದದ ಬಳಿಕ ಓಪನ್ ಆಫರ್ ಅವಶ್ಯಕತೆ ಬೀಳುವುದಿಲ್ಲ ಎಂದು ಪುನೀತ್ ಗೋಯೆಂಕಾ ಹೇಳಿದ್ದಾರೆ. ಡ್ಯೂ ಡಿಲಿಜೆನ್ಸ್ ಬಳಿಕ ಶೇರ್ ಸ್ವಾಪ್ ರೆಶ್ಯೋ ನಿರ್ಧಾರವಾಗಲಿದೆ ಮತ್ತು ಷೇರು ಹೂಡಿಕೆದಾರರ ಉತ್ತಮ ಗಳಿಕೆ ಮುಂದುವರೆಯಲಿದೆ. ಜಾಹೀರಾತು ಹಾಗೂ ಚಂದಾದಾರಿಕೆಯಲ್ಲಿ ಸಿನರ್ಜಿ ತರಲಾಗುವುದು. ಈ ವಿಲೀನ ಪ್ರಕ್ರಿಯೆ ಪೂರ್ಣಗೊಳ್ಳಲು ಸುಮಾರು 6 ರಿಂದ 8 ತಿಂಗಳ ಕಾಲಾವಕಾಶ ಬೇಕಾಗಲಿದೆ ಎಂದು ಗೋಯೆಂಕಾ ಹೇಳಿದ್ದಾರೆ.
ಸ್ಪೋರ್ಟ್ಸ್ ಮೇಲೆ ಫೋಕಸ್ ಹೆಚ್ಚಿಸಲಾಗುವುದು
ಒಪ್ಪಂದವನ್ನು ಅಂತಿಮಗೊಳಿಸಲು 3/4 ರಷ್ಟು ಷೇರುದಾರರ ಅನುಮೋದನೆ ಅಗತ್ಯವಿದೆ. ಬಹುಪಾಲು ಷೇರುದಾರರನ್ನು ಸ್ಪರ್ಧಾತ್ಮಕವಲ್ಲದ ಒಪ್ಪಂದಗಳ ಮೇಲೆ ಅನುಮೋದಿಸಲಾಗುತ್ತದೆ. ವಿಲೀನದ ನಂತರ, ಕ್ರೀಡಾ ಸೆಗ್ಮೆಂಟ್ ಮೇಲೆ ಮೇಲೆ ಗಮನ ಹೆಚ್ಚಾಗಲಿದೆ ಎಂದು ಗೋಯೆಂಕಾ ಹೇಳಿದ್ದಾರೆ.
ಈ ಡೀಲ್ ಏಕೆ ಅಷ್ಟೊಂದು ದೊಡ್ಡದಾಗಿದೆ?
- ಸೋನಿ ಜೊತೆಗಿನ ಈ ಡೀಲ್ ಬಳಿಕ ZEELಗೆ ಗ್ರೋಥ್ ಕ್ಯಾಪಿಟಲ್ ಸಿಗಲಿದೆ. ಪರಸ್ಪರರ ವಿಷಯಕ್ಕೆ ಪ್ರವೇಶ, ಡಿಜಿಟಲ್ ಪ್ಲಾಟ್‌ಫಾರ್ಮ್ ಆಕ್ಸಸ್ ಸಿಗಲಿದೆ. ಸೋನಿಗೆ ಭಾರತದಲ್ಲಿ ಉಪಸ್ಥಿತಿಯನ್ನು ಹೆಚ್ಚಿಸಲು ಅವಕಾಶ ಸಿಗಲಿದೆ. ಸೋನಿ 1.30 ಬಿಲಿಯನ್ ವಿವರ್ಷಿಪ್ ಸಿಗಲಿದೆ.
ZEEL ನೆಟ್ವರ್ಕ್ ಎಷ್ಟು ದೊಡ್ಡದು
190 ದೇಶಗಳನ್ನು ತಲುಪಿದೆ, 10 ಭಾಷೆಗಳು, 100+ ಚಾನೆಲ್‌ಗಳಿವೆ, 19 % ಮಾರುಕಟ್ಟೆ ಪಾಲುದಾರಿಕೆ ಹೊಂದಿದೆ. 2.6 ಲಕ್ಷ ಗಂಟೆಗೂ ಹೆಚ್ಚು ಕಂಟೆಂಟ್ ಹೊಂದಿದೆ. 4800 ಕ್ಕೂ ಹೆಚ್ಚು ಚಲನಚಿತ್ರ ಶೀರ್ಷಿಕೆಗಳು, ಡಿಜಿಟಲ್ ಸ್ಪೇಸ್ ನಲ್ಲಿ ZEE5 ಮೂಲಕ ದೊಡ್ಡ ಹಿಡಿತ, ದೇಶದಲ್ಲಿ TV ಮೂಲಕ ವೀಕ್ಷಿಸಲಾಗುವ ಶೇ.25ರಷ್ಟು ಚಲನಚಿತ್ರಗಳು ZEE ನೆಟ್ವರ್ಕ್ ನಲ್ಲಿ ವಿಕ್ಷೀಸಲಾಗುತ್ತದೆ.
ಸೋನಿ ನೆಟ್ವರ್ಕ್ ಮಾಹಿತಿ
ಭಾರತದಲ್ಲಿ ಸೋನಿ ಬಳಿ 31 ಚಾನೆಲ್ ಗಳಿವೆ. ಕಂಪನಿ ಸುಮಾರು 167 ದೇಶಗಳಲ್ಲಿ ಅಸ್ತಿತ್ವ ಹೊಂದಿದೆ. ದೇಶದಲ್ಲಿ ಸೋನಿ 700 ಮಿಲಿಯನ್ ವೀಕ್ಷಕರನ್ನು ಹೊಂದಿದೆ. ಸೋನಿಯಾ ವಿವರ್ಷಿಪ್ ಮಾರುಕಟ್ಟೆಯ ಪಾಲುದಾರಿಕೆ ಶೇ.9ರಷ್ಟಿದೆ.
(Disclaimer: ಝೀ ಎಂಟರ್ಟೈನ್ಮೆಂಟ್ ನಮ್ಮ Sister Concern/Group Company ಅಲ್ಲ. ಎರಡು ಹೆಸರುಗಳಲ್ಲಿ ಸಾಮ್ಯತೆ ಕಾಣಿಸಬಹುದು. ಆದರೆ, ನಮ್ಮ ಮಾಲೀಕತ್ವ ಹಾಗೂ ವ್ಯವಸ್ಥಾಪನೆ ಬೇರೆ ಗ್ರೂಪ್ ಅಂದರೆ ಝೀ ಮೀಡಿಯಾ ಕೈಯಲ್ಲಿದೆ)