Indian Railways: ರೈಲ್ವೆಯ ಮಹತ್ವದ ನಿರ್ಧಾರ! ಈಗ ರೈಲಿನಲ್ಲಿ ಮಹಿಳೆಯರಿಗೆ ಸಿಗಲಿದೆ ಕನ್ಫರ್ಮ್ ಸೀಟ್

Indian Railway News: ದೂರದ ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳಲ್ಲಿ ಸ್ಲೀಪರ್ ಕ್ಲಾಸ್‌ನಲ್ಲಿ ಆರು ಬರ್ತ್‌ಗಳ ಮೀಸಲಾತಿ ಕೋಟಾ ಮತ್ತು ಗರೀಬ್ ರಥ, ರಾಜಧಾನಿ, ಡುರೊಂಟೊ ಸೇರಿದಂತೆ ಸಂಪೂರ್ಣ ಹವಾನಿಯಂತ್ರಿತ ಎಕ್ಸ್‌ಪ್ರೆಸ್ ರೈಲುಗಳ ಮೂರನೇ ಎಸಿ ಕೋಚ್‌ಗಳಲ್ಲಿ (3ಎಸಿ ಕ್ಲಾಸ್) ಮಹಿಳಾ ಪ್ರಯಾಣಿಕರಿಗೆ ಆರು ಬರ್ತ್‌ಗಳ ಮೀಸಲಾತಿ ಕೋಟಾವನ್ನು ನಿಗದಿಪಡಿಸಲಾಗಿದೆ. 

Written by - Yashaswini V | Last Updated : Jan 5, 2022, 12:31 PM IST
  • ಮಹಿಳೆಯರಿಗಾಗಿ ರೈಲ್ವೆ ಒಂದು ದೊಡ್ಡ ಉಪಕ್ರಮವನ್ನು ಕೈಗೊಂಡಿದೆ
  • ಭಾರತೀಯ ರೈಲ್ವೇ ಮಹಿಳೆಯರಿಗೆ ಸೀಟುಗಳನ್ನು ಮೀಸಲಿಡಲಿದೆ
  • ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ವಿಶೇಷ ವ್ಯವಸ್ಥೆ
Indian Railways: ರೈಲ್ವೆಯ ಮಹತ್ವದ ನಿರ್ಧಾರ! ಈಗ ರೈಲಿನಲ್ಲಿ ಮಹಿಳೆಯರಿಗೆ ಸಿಗಲಿದೆ ಕನ್ಫರ್ಮ್ ಸೀಟ್ title=
Special Berths for Female Passengers in Trains

Indian Railway News: ರೈಲ್ವೇ ಮಹಿಳೆಯರಿಗಾಗಿ ದೊಡ್ಡ ಘೋಷಣೆ ಮಾಡಿದೆ. ಈಗ ಮಹಿಳೆಯರು ರೈಲಿನಲ್ಲಿ ಸೀಟಿಗಾಗಿ ಚಿಂತಿಸಬೇಕಾಗಿಲ್ಲ. ಬಸ್ ಮತ್ತು ಮೆಟ್ರೋ ರೈಲುಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಸೀಟುಗಳನ್ನು ಹೇಗೆ ಮೀಸಲಿಡಲಾಗಿದೆಯೋ ಅದೇ ರೀತಿ ಈಗ ಭಾರತೀಯ ರೈಲ್ವೇ (Indian Railway) ಕೂಡ ಮಹಿಳೆಯರಿಗೆ ಸೀಟುಗಳನ್ನು ಮೀಸಲಿಡಲಿದೆ. ಈಗ ಭಾರತೀಯ ರೈಲ್ವೇಯು ದೂರದ ರೈಲುಗಳಲ್ಲಿಯೂ ಮಹಿಳಾ ಪ್ರಯಾಣಿಕರಿಗೆ ವಿಶೇಷ ಬರ್ತ್‌ಗಳನ್ನು (Special Berths for Female Passengers in Trains) ಮೀಸಲಿಡಲಿದೆ. ದೂರದ ರೈಲುಗಳಲ್ಲಿ ಮಹಿಳೆಯರ ಆರಾಮದಾಯಕ ಪ್ರಯಾಣಕ್ಕಾಗಿ ಭಾರತೀಯ ರೈಲ್ವೇ ರಿಸರ್ವ್ ಬರ್ತ್ ಸೇರಿದಂತೆ ಹಲವು ಸೌಲಭ್ಯಗಳನ್ನು ಆರಂಭಿಸಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಹೇಳಿದ್ದಾರೆ.

ಮಹಿಳೆಯರಿಗೆ ಬೆರ್ತ್‌ಗಳನ್ನು ಮೀಸಲಿಡಲಾಗಿದೆ :
ದೂರದ ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳಲ್ಲಿ  (Mail and Express Trains) ಸ್ಲೀಪರ್ ಕ್ಲಾಸ್‌ನಲ್ಲಿ ಆರು ಬರ್ತ್‌ಗಳನ್ನು ಕಾಯ್ದಿರಿಸಲಾಗುವುದು ಎಂದು ಕೇಂದ್ರ ಸಚಿವರು ಹೇಳಿದರು. ಇದಲ್ಲದೆ ಗರೀಬ್ ರಥ (Garib Rath), ರಾಜಧಾನಿ (Rajdhani), ಡುರೊಂಟೊ ಸೇರಿದಂತೆ ಸಂಪೂರ್ಣ ಹವಾನಿಯಂತ್ರಿತ ಎಕ್ಸ್‌ಪ್ರೆಸ್ ರೈಲುಗಳ ಮೂರನೇ ಎಸಿ ಕೋಚ್‌ನಲ್ಲಿ (3ಎಸಿ ವರ್ಗ) ಆರು ಬರ್ತ್‌ಗಳನ್ನು ಮಹಿಳಾ ಪ್ರಯಾಣಿಕರಿಗೆ  (Female Passengers) ಕಾಯ್ದಿರಿಸಲಾಗಿದೆ ಎಂದವರು ಮಾಹಿತಿ ನೀಡಿದರು.

ಇದನ್ನೂ ಓದಿ- Earn Online: ಸ್ಮಾರ್ಟ್‌ಫೋನ್‌ನಲ್ಲಿ ಈ ಸಣ್ಣ ಕೆಲಸ ಮಾಡಿ, ನಿಮಿಷಗಳಲ್ಲಿ 500 ರೂಪಾಯಿ ಗಳಿಸುವ ಅವಕಾಶ!

ಸ್ಲೀಪರ್ ಕೋಚ್‌ನಲ್ಲಿಯೂ ಮೀಸಲಾತಿ ಸೌಲಭ್ಯ:
ಪ್ರತಿ ಸ್ಲೀಪರ್ ಕೋಚ್‌ನಲ್ಲಿ (Sleeper Class) ಆರರಿಂದ ಏಳು ಲೋವರ್ ಬರ್ತ್‌ಗಳು (Lower Berths), ಹವಾನಿಯಂತ್ರಿತ 3 ಟೈರ್ (3 ಎಸಿ) ಕೋಚ್‌ಗಳಲ್ಲಿ ನಾಲ್ಕರಿಂದ ಐದು ಲೋವರ್ ಬರ್ತ್‌ಗಳು ಮತ್ತು ಹಿರಿಯ ನಾಗರಿಕರಿಗೆ (Senior Citizens) ಹವಾನಿಯಂತ್ರಿತ 2 ಟೈರ್ (2 ಎಸಿ) ಕೋಚ್‌ಗಳಲ್ಲಿ ಮೂರರಿಂದ ನಾಲ್ಕು ಲೋವರ್ ಬರ್ತ್‌ಗಳನ್ನು, 45 ವರ್ಷ ಮತ್ತು ಮೇಲ್ಪಟ್ಟ ಮಹಿಳಾ ಪ್ರಯಾಣಿಕರಿಗೆ ಮತ್ತು ಗರ್ಭಿಣಿಯರಿಗೆ (Pregnant Women) ಕಾಯ್ದಿರಿಸಲಾಗಿದೆ. ರೈಲಿನಲ್ಲಿರುವ ಆ ವರ್ಗದ ಕೋಚ್‌ಗಳ ಸಂಖ್ಯೆಯ ಆಧಾರದ ಮೇಲೆ ಕಾಯ್ದಿರಿಸುವಿಕೆಯನ್ನು ಮಾಡಲಾಗುತ್ತದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ವಿಶೇಷ ವ್ಯವಸ್ಥೆ :
ಇದಲ್ಲದೆ, ರೈಲುಗಳಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ  (Women Passengers Safety) ವಿಶೇಷ ವ್ಯವಸ್ಥೆ ಮಾಡಲಾಗಿದೆ. 'ಪೊಲೀಸ್' ಮತ್ತು 'ಸಾರ್ವಜನಿಕ ಆದೇಶ' ಭಾರತದ ಸಂವಿಧಾನದ ಏಳನೇ ಶೆಡ್ಯೂಲ್ ಅಡಿಯಲ್ಲಿ ರಾಜ್ಯದ ವಿಷಯಗಳಾಗಿವೆ. ಆದಾಗ್ಯೂ, ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಜಿಆರ್‌ಪಿ ಮತ್ತು ಜಿಲ್ಲಾ ಪೊಲೀಸರು ಪ್ರಯಾಣಿಕರಿಗೆ ಉತ್ತಮ ಭದ್ರತೆಯನ್ನು ಒದಗಿಸುತ್ತಾರೆ ಎಂದು ರೈಲ್ವೆ ಸಚಿವರು ತಿಳಿಸಿದರು.

ಇದನ್ನೂ ಓದಿ- Good News: ಬ್ಯಾಂಕ್ ಗ್ರಾಹಕರಿಗೊಂದು ಸಂತಸದ ಸುದ್ದಿ

ಇದರೊಂದಿಗೆ ರೈಲು ಮತ್ತು ನಿಲ್ದಾಣಗಳಲ್ಲಿ ಮಹಿಳಾ ಪ್ರಯಾಣಿಕರು ಹಾಗೂ ಇತರ ಪ್ರಯಾಣಿಕರ ಸುರಕ್ಷತೆಗಾಗಿ ಜಿಆರ್‌ಪಿ ನೆರವಿನೊಂದಿಗೆ ರೈಲ್ವೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ರೈಲ್ವೇ ಸಂರಕ್ಷಣಾ ಪಡೆ ಕಳೆದ ವರ್ಷ 'ಮೇರಿ ಸಹೇಲಿ' (Meri Saheli) ಎಂಬ ಪ್ಯಾನ್-ಇಂಡಿಯಾ ಉಪಕ್ರಮವನ್ನು ಪ್ರಾರಂಭಿಸಿದ್ದು, ತಮ್ಮ ಪ್ರಯಾಣದ ಉದ್ದಕ್ಕೂ ರೈಲಿನಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರಿಗೆ ಭದ್ರತೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News