ಅಯೋಧ್ಯೆ ರಾಮಮಂದಿರ ನಿರ್ಮಾಣ ಸ್ಮರಣಾರ್ಥ ಬೆಳ್ಳಿ ನಾಣ್ಯ ಬಿಡುಗಡೆ : ಖರೀದಿ ಪ್ರಕ್ರಿಯೆ ಹೀಗಿದೆ

Ram Mandir Silver Commemorative Coin:ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 15 ರ ಗುರುವಾರ 3 ನಾಣ್ಯಗಳನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ, 1 ನಾಣ್ಯವು ಅಯೋಧ್ಯೆಯ ರಾಮಲಲ್ಲಾ ಮತ್ತು ರಾಮ ಜನ್ಮಭೂಮಿ ದೇವಾಲಯದ  ಥೀಮ್ ಅನ್ನು ಆಧರಿಸಿದೆ. 

Written by - Ranjitha R K | Last Updated : Feb 16, 2024, 10:40 AM IST
  • ಶುದ್ಧ ಬೆಳ್ಳಿಯಿಂದ ಮಾಡಲ್ಪಟ್ಟಿರುವ ನಾಣ್ಯ
  • 50 ಗ್ರಾಂ ತೂಕವಿದೆ ಈ ನಾಣ್ಯ
  • ಖರೀದಿ ಪ್ರಕ್ರಿಯೆ ಹೀಗಿದೆ
ಅಯೋಧ್ಯೆ ರಾಮಮಂದಿರ ನಿರ್ಮಾಣ ಸ್ಮರಣಾರ್ಥ ಬೆಳ್ಳಿ ನಾಣ್ಯ ಬಿಡುಗಡೆ : ಖರೀದಿ ಪ್ರಕ್ರಿಯೆ ಹೀಗಿದೆ  title=

Ram Mandir Silver Commemorative Coin: ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ರಾಮಮಂದಿರಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಅದಲ್ಲದೆ ರಾಮಮಂದಿರದ ಪ್ರಸಾದ, ಸರಯು ನೀರು ಮುಂತಾದ ವಿಶೇಷ ವಸ್ತುಗಳಿಗೆ  ಬೇಡಿಕೆ ಹೆಚ್ಚಾಗುತ್ತಿದೆ. ಪ್ರಸ್ತುತ ಅಯೋಧ್ಯೆಗೆ ತಲುಪಲು ಮತ್ತು ರಾಮಲಲ್ಲಾನ ದರ್ಶನ ಪಡೆಯಲು ಸಾಧ್ಯವಾಗದವರು ಮನೆಯಲ್ಲಿ ಕುಳಿತುಕೊಂಡು ಆನ್‌ಲೈನ್‌ನಲ್ಲಿ ರಾಮಮಂದಿರದ  ಪ್ರಸಾದವನ್ನು ಆರ್ಡರ್ ಮಾಡುತ್ತಿದ್ದಾರೆ. ಇದೀಗ ರಾಮ ಮಂದಿರದ ಪ್ರಸಾದದ ಜೊತೆಗೆ   ರಾಮಮಂದಿರದ ಬೆಳ್ಳಿ ನಾಣ್ಯಗಳನ್ನು ಕೂಡಾ ಖರೀದಿಸಬಹುದು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 15 ರ ಗುರುವಾರ 3 ನಾಣ್ಯಗಳನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ, 1 ನಾಣ್ಯವು ಅಯೋಧ್ಯೆಯ ರಾಮಲಲ್ಲಾ ಮತ್ತು ರಾಮ ಜನ್ಮಭೂಮಿ ದೇವಾಲಯದ  ಥೀಮ್ ಅನ್ನು ಆಧರಿಸಿದೆ. ಈ ನಾಣ್ಯಗಳನ್ನು ಸರ್ಕಾರದ ಅಧಿಕೃತ ಸೈಟ್‌ನಿಂದಲೂ ಖರೀದಿಸಬಹುದು. 

ಶುದ್ಧ ಬೆಳ್ಳಿಯಿಂದ ಮಾಡಲ್ಪಟ್ಟಿರುವ ನಾಣ್ಯ :  
ರಾಮಲಲ್ಲಾ ಮತ್ತು ರಾಮ ಮಂದಿರ ಥೀಮ್ ಹೊಂದಿರುವ 50 ಗ್ರಾಂ ತೂಕದ ಈ ನಾಣ್ಯವನ್ನು 999 ಶುದ್ಧ ಬೆಳ್ಳಿಯಿಂದ ತಯಾರಿಸಲಾಗಿದೆ. ಈ ನಾಣ್ಯದ ಒಂದು ಬದಿಯಲ್ಲಿ ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಲಾದ ರಾಮಮಂದಿರದ ಚಿತ್ರವಿದೆ. ನಾಣ್ಯದ ಇನ್ನೊಂದು ಬದಿಯಲ್ಲಿ ದೇವಾಲಯದ ಗರ್ಭಗುಡಿಯಲ್ಲಿ  ನೆಲೆಯಾಗಿರುವ ರಾಮ್ ಲಲ್ಲಾ  ಚಿತ್ರವಿದೆ. ರಾಮಮಂದಿರದ ಗರ್ಭಗುಡಿಯಲ್ಲಿ ಸ್ಥಾಪಿಸಲಾದ ರಾಮಲಲ್ಲಾ ವಿಗ್ರಹವು ಭಗವಾನ್ ರಾಮನ 5 ವರ್ಷದ ಮಗುವಿನ ರೂಪವಾಗಿದ್ದು, ಇದನ್ನು ಮೈಸೂರು ಶಿಲ್ಪಿ ಅರುಣ್ ಯೋಗಿರಾಜ್  ನಿರ್ಮಿಸಿದ್ದಾರೆ. 

ಇದನ್ನೂ ಓದಿ : Paytm ಫಾಸ್ಟ್ಯಾಗ್ ಬಳಕೆದಾರರಿಗೆ ಬಿಗ್ ಅಪ್ಡೇಟ್ : ರೋಡ್ ಟೋಲಿಂಗ್ ಅಥಾರಿಟಿ ಜಾರಿ ಮಾಡಿದೆ ಹೊಸ ಮಾರ್ಗ ಸೂಚಿ

ಇದಲ್ಲದೇ 2 ಸ್ಮರಣಾರ್ಥ ನಾಣ್ಯಗಳನ್ನು ಬಿಡುಗಡೆ ಮಾಡಲಾಗಿದೆ. ಇದು ಭಗವಾನ್ ಬುದ್ಧನ ಜ್ಞಾನೋದಯವನ್ನು ಆಧರಿಸಿದ ಎರಡು ಲೋಹಗಳಿಂದ ಮಾಡಿದ ನಾಣ್ಯವಾಗಿದೆ. ಇದರ ಹೊರತಾಗಿ, ಮತ್ತೊಂದು ನಾಣ್ಯವು ಒಂದು ಕೊಂಬಿನ ಘೇಂಡಾಮೃಗವನ್ನು ಹೊಂದಿದೆ. ಸರ್ಕಾರಿ ಸ್ವಾಮ್ಯದ ಸೆಕ್ಯುರಿಟಿ ಪ್ರಿಂಟಿಂಗ್ ಮತ್ತು ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (SPMCIL) ನ 19 ನೇ ಪ್ರತಿಷ್ಠಾನ ಸಮಾರಂಭದಲ್ಲಿ ಹಣಕಾಸು ಸಚಿವರು ಈ ನಾಣ್ಯಗಳನ್ನು ಬಿಡುಗಡೆ ಮಾಡಿದರು. 

ರಾಮಮಂದಿರ ಸ್ಮರಣಾರ್ಥ ನಾಣ್ಯವನ್ನು ಈ ರೀತಿ ಖರೀದಿಸಿ :
ಭಗವಾನ್ ರಾಮಲಲ್ಲಾ ಮತ್ತು ಅಯೋಧ್ಯೆಯಲ್ಲಿ ನಿರ್ಮಿಸಲಾದ ರಾಮ ಮಂದಿರದ  ಸ್ಮರಣಾರ್ಥ ಬಿಡುಗಡೆ ಮಾಡಲಾದ ನಾಣ್ಯವು 50 ಗ್ರಾಂ ತೂಕವಿದೆ. ಇದನ್ನು ಶುದ್ಧ ಬೆಳ್ಳಿಯಿಂದ ಮಾಡಲಾಗಿದೆ. ಇದರ ಬೆಲೆ 5 ಸಾವಿರ ರೂಪಾಯಿಗೂ ಹೆಚ್ಚು. ಈ ನಾಣ್ಯವನ್ನು ಖರೀದಿಸಿ ನಿಮ್ಮ ಮನೆಯ ದೇವರ ಕೋಣೆಯಲ್ಲಿ ಇಡಬಹುದು. ಇದಲ್ಲದೆ, ಈ ನಾಣ್ಯವನ್ನು ನಿಮ್ಮ ಆಪ್ತರಿಗೆ ಉಡುಗೊರೆಯಾಗಿಯೂ ನೀಡಬಹುದು. ಈ ನಾಣ್ಯವನ್ನು ಖರೀದಿಸಬೇಕಾದರೆ ಸರ್ಕಾರದ ಅಧಿಕೃತ ವೆಬ್‌ಸೈಟ್ https://www.indiagovtmint.in/souvenir-coins/ ಗೆ ಹೋಗಬೇಕಾಗುತ್ತದೆ. ಈ ಸೈಟ್‌ನಲ್ಲಿ ತಿಳಿಸಲಾದ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಮೂಲಕ, ನೀವು ರಾಮಲಲ್ಲಾ ಮತ್ತು  ರಾಮ ಮಂದಿರದ ಈ ಬೆಳ್ಳಿ ನಾಣ್ಯವನ್ನು ಖರೀದಿಸಬಹುದು.

ಇದನ್ನೂ ಓದಿ : Arecanut Price Today: ರಾಜ್ಯದಲ್ಲಿ 54 ಸಾವಿರ ರೂ. ಗಡಿ ದಾಟಿದ ಅಡಕೆ ದರ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News