ನವದೆಹಲಿ: ನಿಮ್ಮ ಬಜೆಟ್ 7 ಲಕ್ಷ ರೂ.ಗಿಂತ ಕಡಿಮೆಯಿದ್ದರೆ ಮತ್ತು ನಿಮ್ಮ ಕುಟುಂಬ ದೊಡ್ಡದಾಗಿದ್ದರೆ ಉತ್ತಮ ಸೌಲಭ್ಯ ಹೊಂದಿರುವ ಕಾರು ಅವಶ್ಯಕ. ನಿಮಗೆ ಪ್ರವೇಶ ಮಟ್ಟದ ಹ್ಯಾಚ್‌ಬ್ಯಾಕ್ ಅಥವಾ ಪ್ರವೇಶ ಮಟ್ಟದ ಸೆಡಾನ್ ಸಾಕಾಗುವುದಿಲ್ಲ. ಏಕೆಂದರೆ ಈ ಕಾರುಗಳಲ್ಲಿ 4 ರಿಂದ 5 ಜನರು ಮಾತ್ರ ಕುಳಿತುಕೊಳ್ಳಬಹುದಾಗಿದೆ. ದೊಡ್ಡ ಕುಟುಂಬದಲ್ಲಿ ಹೆಚ್ಚು ಸದಸ್ಯರಿರುವಾಗ ಉತ್ತಮ ಕಾರು ಬೇಕಾಗುತ್ತದೆ. ಹೀಗಾಗಿ MPV (ಮಲ್ಟಿ ಪರ್ಪಸ್ ವೆಹಿಕಲ್) ಮಾತ್ರ ನಿಮ್ಮ ಅಗತ್ಯಗಳನ್ನು ಪೂರೈಸುತ್ತದೆ.
ಇದರಲ್ಲಿ 7 ಜನರು ಸುಲಭವಾಗಿ ಕುಳಿತುಕೊಳ್ಳಬಹುದು. ಸಾಮಾನ್ಯವಾಗಿ ದೊಡ್ಡ SUV ಮತ್ತು MPV ಬೆಲೆ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿರುತ್ತದೆ. ಆದರೆ ಮಾರುಕಟ್ಟೆಯಲ್ಲಿ 7 ಲಕ್ಷ ರೂ.ಗಿಂತ ಕಡಿಮೆ ಇರುವ ಕಾರೊಂದಿದ್ದು, ಇದು ನಿಮ್ಮ ಕುಟುಂಬಕ್ಕೆ ಉತ್ತಮ ಆಯ್ಕೆಯಾಗಿದೆ. ವಾಸ್ತವವಾಗಿ ಇದು ಅತ್ಯುತ್ತಮ SUVಗಳೊಂದಿಗೆ ಸ್ಪರ್ಧಿಸುವ ಭಾರತದಲ್ಲಿ ಅತ್ಯಂತ ಕೈಗೆಟುಕುವ MPVಗಳಲ್ಲಿ ಒಂದಾಗಿದೆ.
ಇದನ್ನೂ ಓದಿ: ಹಳೆ ಪಿಂಚಣಿ ಯೋಜನೆ ಬಗ್ಗೆ ಬಿಗ್ ನ್ಯೂಸ್! ಕೇಂದ್ರ ಸರ್ಕಾರ ನೀಡಿದ ಮಹತ್ವದ ಮಾಹಿತಿ !
ಈ MPV ಯಾವುದು?
ನಾವು ಮಾತನಾಡುತ್ತಿರುವ MPV ರೆನಾಲ್ಟ್ ಟ್ರೈಬರ್ ಆಗಿದೆ. ಇದು ಇತ್ತೀಚೆಗಷ್ಟೇ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿತ್ತು. ಕೆಲವೇ ಸಮಯದಲ್ಲಿ ಸಾಕಷ್ಟು ಜನಪ್ರಿಯವಾಯಿತು. ಇದರ ಬೆಲೆ ಮತ್ತು ಅದರಲ್ಲಿರುವ ವೈಶಿಷ್ಟ್ಯಗಳಿಂದ ಇದು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಹೆಚ್ಚು ಇಷ್ಟವಾಗುತ್ತಿದೆ. ಈ MPVಯಲ್ಲಿ ನೀವು ತುಂಬಾ ಇಷ್ಟಪಡುವ ಹಲವಾರು ವೈಶಿಷ್ಟ್ಯಗಳಿದ್ದು, ಇವುಗಳ ಬಗ್ಗೆ ನಾವು ಇಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ.
ಈ ಕಾರಿನ ಎಂಜಿನ್ ಮತ್ತು ಪವರ್ ಬಗ್ಗೆ ಹೇಳುವುದಾದರೆ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿರುವ ಪೆಟ್ರೋಲ್ ಎಂಜಿನ್ ಅನ್ನು ಈ ಎಂಪಿವಿಯಲ್ಲಿ ನೀಡಲಾಗಿದೆ. ಈ ಎಂಜಿನ್ 6250 rpmನಲ್ಲಿ 72 PS ಶಕ್ತಿಯನ್ನು ಉತ್ಪಾದಿಸುತ್ತದೆ ಮತ್ತು 3500 rpmನಲ್ಲಿ 96 ನ್ಯೂಟನ್ ಮೀಟರ್‌ಗಳ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಪಿವಿಯಲ್ಲಿ ನೀವು 165 ಬೈ 80 ಟೈರ್‌ಗಳನ್ನು ನೋಡಬಹುದು. ಈ ಟೈರ್‌ಗಳು ತುಂಬಾ ಬಲಿಷ್ಠವಾಗಿವೆ. MPVಯ ಎಂಜಿನ್ ಮೂಲಕ ನೀವು ಉತ್ತಮ ಮೈಲೇಜ್ ಪಡೆಯುತ್ತೀರಿ.
ಇದನ್ನೂ ಓದಿ: ಸುಕನ್ಯಾ ಸಮೃದ್ಧಿಯಲ್ಲಿ ಹಣ ಹೂಡುವವರಿಗೆ ಬಂಪರ್! ಹೆಣ್ಣು ಮಕ್ಕಳಿಗೆ ಸಿಗುವುದು ಪೂರ್ಣ 65 ಲಕ್ಷ ರೂಪಾಯಿ
ವೈಶಿಷ್ಟ್ಯಗಳು ಮತ್ತು ವಿಶೇಷಣಗಳು
ಈ MPV ಸುರಕ್ಷತೆಗಾಗಿ ವಿಶ್ವದ ಅತ್ಯುತ್ತಮ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ವಯಸ್ಕರ ಸುರಕ್ಷತೆಯಲ್ಲಿ 4 ಸ್ಟಾರ್‌ಗಳು ಮತ್ತು ಮಕ್ಕಳ ಸುರಕ್ಷತೆಯಲ್ಲಿ 3 ಸ್ಟಾರ್‌ಗಳ ಜಾಗತಿಕ NCAP ರೇಟಿಂಗ್ ಪಡೆದುಕೊಂಡಿದೆ. MPV ಒಳಗೆ ನೀವು ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳು ಮತ್ತು 21cm ಟಚ್‌ಸ್ಕ್ರೀನ್ ಡಿಸ್ಪ್ಲೇ, LED ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಸ್ಮಾರ್ಟ್ ಪ್ರವೇಶ ಕಾರ್ಡ್ ಪಡೆಯುತ್ತೀರಿ.
MPV ಬೆಲೆ ಎಷ್ಟು..?
ಗ್ರಾಹಕರು ಈ MPVಯನ್ನು 6.33 ಲಕ್ಷ ರೂ.ಗಳಿಗೆ ಖರೀದಿಸಬಹುದು (ಎಕ್ಸ್ ಶೋ ರೂಂ, ದೆಹಲಿ ದರ).
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.