ಮುಂದಿನ ತಿಂಗಳಿನಿಂದ Money Transfer ನಿಯಮದಲ್ಲಾಗಲಿದೆ ಬದಲಾವಣೆ... ನೀವೂ ತಿಳಿದುಕೊಳ್ಳಿ

ಈ ವರ್ಷ ಬಹಳಷ್ಟು ಸಂಗತಿಗಳು ಬದಲಾಗಲಿವೆ. ಬ್ಯಾಂಕಿಂಗ್ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಆದರು ಈ ಬದಲಾವಣೆಗಳು ಸಕಾರಾತ್ಮಕವಾಗಿದೆ, ಇದರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ರಿಯಲ್ ಟೈಮ್ ಗ್ರಾಸ್ ಸೆಟ್ಲ್ಮೆಂಟ್ (RTGS) 24x7x365 ಲಭ್ಯವಾಗುವಂತೆ ಮಾಡಲು ನಿರ್ಧರಿಸಿದೆ.

Last Updated : Nov 21, 2020, 11:09 AM IST
  • RTGSಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ತಂಡ RBI.
  • ಬರುವ ಡಿಸೆಂಬರ್ ನಿಂದ ಈ ಸೇವೆ 24X7 ಚಾಲ್ತಿಯಲ್ಲಿರಲಿದೆ.
  • ಕಳೆದ ವರ್ಷ ಕೇಂದ್ರೀಯ ಬ್ಯಾಂಕ್ NEFT ನಿಯಮ ಬದಲಾಯಿಸಿ 24X7 ಮಾಡಿತ್ತು.
ಮುಂದಿನ ತಿಂಗಳಿನಿಂದ Money Transfer ನಿಯಮದಲ್ಲಾಗಲಿದೆ ಬದಲಾವಣೆ... ನೀವೂ ತಿಳಿದುಕೊಳ್ಳಿ title=

ನವದೆಹಲಿ: ಈ ವರ್ಷ ಬಹಳಷ್ಟು ಸಂಗತಿಗಳು ಬದಲಾಗಲಿವೆ. ಬ್ಯಾಂಕಿಂಗ್ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಆದರು ಈ ಬದಲಾವಣೆಗಳು ಸಕಾರಾತ್ಮಕವಾಗಿದೆ, ಇದರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ರಿಯಲ್ ಟೈಮ್ ಗ್ರಾಸ್ ಸೆಟ್ಲ್ಮೆಂಟ್ (RTGS) 24x7x365 ಲಭ್ಯವಾಗುವಂತೆ ಮಾಡಲು ನಿರ್ಧರಿಸಿದೆ. ಹೀಗಾಗಿ ನೀವು ಇನ್ಮುಂದೆ 24 ಗಂಟೆಗಳ ಕಾಲ RTGS ಹಣ ವರ್ಗಾವಣೆ ಮಾಡಬಹುದಾಗಿದೆ.

ಇದನ್ನು ಓದಿ- ನಿಮ್ಮ ಖಾತೆಯಲ್ಲಿ 5 ಲಕ್ಷ ರೂಪಾಯಿಗಿಂತ ಹೆಚ್ಚಿನ ಹಣವನ್ನು ಏಕೆ ಇಡಬಾರದು?

ಪ್ರಸ್ತುತ ಇರುವ ಸಿಸ್ಟಂ ಯಾವುದು
ಪ್ರಸ್ತುತ ಆರ್‌ಟಿಜಿಎಸ್ ವ್ಯವಸ್ಥೆಯು ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರಗಳನ್ನು ಹೊರತುಪಡಿಸಿ ವಾರದ ಎಲ್ಲಾ ಕೆಲಸದ ದಿನಗಳಲ್ಲಿ ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ಲಭ್ಯವಿದೆ. ಆದರೆ ಇದೀಗೆ 24 ×7  ಈ ಸೌಲಭ್ಯ ಪಡೆಯಬಹುದಾಗಿದೆ. ನೆಫ್ಟ್ ಸೇವೆಯು ಕಳೆದ ವರ್ಷದಿಂದ 24 ಗಂಟೆಗಳ ಕಾಲ ಆರಂಭಗೊಂಡಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ರಾಷ್ಟ್ರೀಯ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್‌ಫರ್ (NEFT) ವ್ಯವಸ್ಥೆಯನ್ನು 24x7 ಮೋಡ್‌ನಲ್ಲಿ ಜಾರಿಗೆ ತರಲಾಗಿದೆ.

ಇದನ್ನು ಓದಿ- ಈ ಬ್ಯಾಂಕಿನಿಂದ ತಿಂಗಳಿಗೆ ₹ 25,000 ಮಾತ್ರ ವಿತ್ ಡ್ರಾ ಮಾಡಲು ಆರ್‌ಬಿಐ ಆದೇಶ

RBI ಹೇಳಿದ್ದೇನು?
ಭಾರತೀಯ ಹಣಕಾಸು ಮಾರುಕಟ್ಟೆಗಳ ಜಾಗತಿಕ ಏಕೀಕರಣದ ಗುರಿ, ಭಾರತದ ಅಂತರರಾಷ್ಟ್ರೀಯ ಹಣಕಾಸು ಕೇಂದ್ರಗಳನ್ನು ಅಭಿವೃದ್ಧಿಪಡಿಸುವ ಪ್ರಯತ್ನಗಳು ಮತ್ತು ದೇಶೀಯ ಕಾರ್ಪೊರೇಟ್ ಮತ್ತು ಸಂಸ್ಥೆಗಳಿಗೆ ದೊಡ್ಡ ಪ್ರಮಾಣದ ಹಣ ಪಾವತಿ ಫ್ಲೆಕ್ಸಿಬಿಲಿಟಿ ಒದಗಿಸಲು ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿಕೊಂಡಿದೆ.

ಇದನ್ನು ಓದಿ- ಅತ್ಯಂತ ಕೆಳಮಟ್ಟಕ್ಕೆ ಕುಸಿದ Home Loan ಬಡ್ಡಿದರಗಳು, ಕನಸಿನ ಮನೆ ಖರೀದಿಗೆ ಇದು ಸೂಕ್ತ ಸಮಯವೇ?

ತುಂಬಾ ಸಹಾಯಕಾರಿಯಾಗಿದೆ RTGS ಸೇವೆ 
RTGS ಅಂದರೆ ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್ ಮೂಲಕ ಹಣ ವರ್ಗಾವಣೆಯನ್ನು ತ್ವರಿತವಾಗಿ ಮಾಡಬಹುದು. ಇದನ್ನು ದೊಡ್ಡ ವ್ಯವಹಾರಗಳಲ್ಲಿ ಬಳಸಲಾಗುತ್ತದೆ. ಆರ್‌ಟಿಜಿಎಸ್ ಮೂಲಕ 2 ಲಕ್ಷ ರೂ.ಗಿಂತ ಕಡಿಮೆ ಮೊತ್ತವನ್ನು ವರ್ಗಾಯಿಸಲಾಗುವುದಿಲ್ಲ. ಇದನ್ನು ಆನ್‌ಲೈನ್ ಮತ್ತು ಬ್ಯಾಂಕ್ ಶಾಖೆಗಳ ಮೂಲಕ ಬಳಸಬಹುದು. ಯಾವುದೇ ಹಣ ವರ್ಗಾವಣೆಗೆ ಶುಲ್ಕ ವಿಧಿಸಲಾಗುವುದಿಲ್ಲ. ಆದರೆ ಬ್ಯಾಂಕ್ ಶಾಖೆಯಲ್ಲಿ, ಆರ್‌ಟಿಜಿಎಸ್‌ನಿಂದ ಹಣವನ್ನು ವರ್ಗಾಯಿಸಲು ಶುಲ್ಕವಿರುತ್ತದೆ.

Trending News