SBI Alert! ಒಂದು ವೇಳೆ ನೀವೂ ಕೂಡ SBI ನಲ್ಲಿ ಬ್ಯಾಂಕ್ ಖಾತೆಯನ್ನು ಹೊಂದಿದ್ದರೆ ಮತ್ತು ನಿಮಗೂ ಕೂಡ ಒಂದು ವೇಳೆ ಬ್ಯಾಂಕಿನಿಂದ ನಿಮ್ಮ YONO ಖಾತೆಯನ್ನು ಮುಚ್ಚಲಾಗಿದೆ ಎಂಬ ಸಂದೇಶ ಬರುತ್ತಿದ್ದರೆ ತಕ್ಷಣವೇ ಎಚ್ಚೆತ್ತುಕೊಳ್ಳಿ. ಈ ಸಂದೇಶವು ಸಂಪೂರ್ಣವಾಗಿ ನಕಲಿಯಾಗಿದೆ ಮತ್ತು ಅದು ನಿಮ್ಮನ್ನು ದಾರಿ ತಪ್ಪಿಸುವ ಉದ್ದೇಶದಿಂದ ಕಳುಹಿಸಲಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಯಾವುದೇ ಗ್ರಾಹಕರಿಗೆ ಅಂತಹ ಸಂದೇಶವನ್ನು ಕಳುಹಿಸಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ನಿಮಗೂ ಇಂತಹ ಸಂದೇಶ ಬಂದಿದ್ದರೆ, ತಕ್ಷಣವೇ ಎಚ್ಚರಗೊಳ್ಳಿ. PIB Fact Check ತಂಡ ಈ ಮಾಹಿತಿಯನ್ನು ಟ್ವೀಟ್ ಮಾಡುವ ಮೂಲಕ ನೀಡಿದೆ.
ಗ್ರಾಹಕರಿಗೆ ಅಲರ್ಟ್ ಜಾರಿಗೊಳಿಸಿದ PIB Fact Check ತಂಡ
PIB Factcheck ತಂಡ ತನ್ನ ಟ್ವಿಟರ್ ಹ್ಯಾಂಡಲ್ ನಲ್ಲಿ ಟ್ವೀಟ್ ಮಾಡಿ ನಕಲಿ ಸಂದೇಶದ ಕುರಿತು ಅಲರ್ಟ್ ಜಾರಿಗೊಳಿಸಿದೆ. ಈ ಸಂದೇಶಕ್ಕೆ ಮತ್ತು ಎಸ್ ಬಿ ಐ ಗೆ ಯಾವುದೇ ಸಂಬಂಧವಿಲ್ಲ. ಈ ಸಂದೇಶದಲ್ಲಿ ನಿಮ್ಮ YONO ಖಾತೆಯನ್ನು ಮುಚ್ಚಲಾಗಿದೆ ಎಂದು ಹೇಳಲಾಗುತ್ತಿದೆ. ತಂಡ ತನ್ನ ಟ್ವಿಟರ್ ಹ್ಯಾಂಡಲ್ನಲ್ಲಿ ಸಂದೇಶದ ಸ್ಕ್ರೀನ್ಶಾಟ್ ಅನ್ನು ಹಂಚಿಕೊಂಡಿದೆ. ಸಂದೇಶದಲ್ಲಿ, YONO Account ನಿರ್ಬಂಧಿಸಲಾಗಿದೆ ಎಂದು ಹೇಳಲಾಗಿದೆ. ಸಂದೇಶದಲ್ಲಿ, ನಿಮ್ಮ PAN Card ಅನ್ನು ಅಪ್ಡೇಟ್ ಮಾಡಲು ಮತ್ತು Net Bankingಗೆ ಲಾಗಿನ್ ಮಾಡಲು ನಿಮ್ಮನ್ನು ಕೋರಲಾಗುತ್ತಿದೆ. ಅಷ್ಟೇ ಅಲ್ಲ ಸಂದೇಶದಲ್ಲಿ ಲಿಂಕ್ ಅನ್ನು ಸಹ ಹಂಚಿಕೊಳ್ಳಲಾಗಿದೆ, ಅದರ ಮೇಲೆ ಬಳಕೆದಾರರು ಕ್ಲಿಕ್ ಮಾಡಲು ಬಳಕೆದಾರರಿಗೆ ಹೇಳಲಾಗುತ್ತಿದೆ.
ಈ ಲಿಂಕ್ ಸಂಪೂರ್ಣವಾಗಿ ನಕಲಿಯಾಗಿದೆ. ಆದ್ದರಿಂದ ಅದರ ಮೇಲೆ ಕ್ಲಿಕ್ ಮಾಡಬೇಡಿ ಮತ್ತು ನಿಮ್ಮ ಯಾವುದೇ ಬ್ಯಾಂಕಿಂಗ್ ಅಥವಾ ಇತರ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳಬೇಡಿ. ಇದು ಸೈಬರ್ ವಂಚನೆಯ ಪರವಾಗಿ ನಿಮ್ಮನ್ನು ವಂಚನೆಗೆ ಈಡು ಮಾಡುವ ಒಂದು ವಿಧಾನವಾಗಿದೆ. ಹೀಗಾಗಿ ಆ ಸಂದೇಶ ಆಮೀಷಕ್ಕೆ ಒಳಗಾಗಬೇಡಿ. ನಿಮ್ಮ YONO ಖಾತೆಯನ್ನು ಪ್ರಾರಂಭಿಸಲು ನಿಮಗೆ ಯಾವುದೇ ರೀತಿಯ ಶುಲ್ಕವನ್ನು ಕೇಳಿದರೆ. ಯಾವುದೇ ಶುಲ್ಕವನ್ನು ಪಾವತಿಸಬೇಡಿ.
A #Fake message impersonating @TheOfficialSBI claims that the recipient's YONO account has been blocked#PIBFactCheck
▶️Never respond to emails/SMS asking to share your banking details
▶️If you have received any similar message, report immediately on report.phishing@sbi.co.in pic.twitter.com/SbijbjrjrO
— PIB Fact Check (@PIBFactCheck) October 12, 2021
ಇದನ್ನೂ ಓದಿ-ITR filing FY 2020-21: ಎಸ್ಬಿಐ ಯೋನೋ ಆ್ಯಪ್ ಬಳಸಿ ಉಚಿತವಾಗಿ ತೆರಿಗೆ ರಿಟರ್ನ್ ಸಲ್ಲಿಸಿ, ಹೇಗೆಂದು ತಿಳಿಯಿರಿ
Banking Details ಎಂದಿಗೂ ಹಂಚಿಕೊಳ್ಳಬೇಡಿ
''ನಿಮ್ಮ ಬ್ಯಾಂಕಿಂಗ್ ಗೆ ಸಂಬಂಧಿಸಿದ ವಿವರಗಳನ್ನು ಹಂಚಿಕೊಳ್ಳಲು ಕೇಳುವ ಇಮೇಲ್ ಅಥವಾ ಎಸ್ಎಂಎಸ್ಗೆ ಎಂದಿಗೂ ಪ್ರತಿಕ್ರಿಯಿಸಬೇಡಿ. ಜೊತೆಗೆ ಈ ರೀತಿಯ ಸಂದೇಶಗಳು ಪದೇ ಪದೇ ನಿಮಗೆ ಬರುತಿದ್ದರೆ, ತಕ್ಷಣವೇ ಅದರ ಮಾಹಿತಿಯನ್ನು report.phishing@sbi.co.in ಗೆ ಕಳುಹಿಸಿ ಎಂದು PIB Fact Check ಹೇಳಿದೆ.
ಇದನ್ನೂ ಓದಿ-SBI Alert! SBI ಗ್ರಾಹಕರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ
ಇತ್ತೀಚಿನ ದಿನಗಳಲ್ಲಿ ಸೈಬರ್ ಫ್ರಾಡ್ ಪ್ರಕರಣಗಳು ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಾಗಿವೆ. ಸೈಬರ್ ಹ್ಯಾಕ್ ಹಾಗೂ ವಂಚನೆಗಳ ಮೂಲಕ ಜನರನ್ನು ವಂಚಿಸಲಾಗುತ್ತಿದೆ. ಈ ರೀತಿಯ ಅಪರಾಧ ಪ್ರಕರಣಗಳು ವೇಗವಾಗಿ ಹೆಚ್ಚಾಗುತ್ತಿವೆ. ಕೊರೊನಾ ಕಾಲದಲ್ಲಿ ಹೆಚ್ಚಿನ ಜನರು ತಮ್ಮ ಬ್ಯಾಂಕಿಂಗ್ ಗೆ ಸಂಬಂಧಿಸಿದ ಕೆಲಸಗಳನ್ನು ಆನ್ಲೈನ್ ನಲ್ಲಿಯೇ ಪೂರ್ಣಗೊಳಿಸುತಿದ್ದಾರೆ. ಈ ಪರಿಸ್ಥಿತಿಯ ಲಾಭವನ್ನು ಪಡೆಯಲು ಅಪರಾಧಿಗಳು ವಿವಿಧ ರೀತಿಯ ಹುನ್ನಾರದಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ-SBI New Rule: ಯಾವುದೇ ವಹಿವಾಟಿಗೂ ಮೊದಲು ಬ್ಯಾಂಕಿನ ಈ ನಿಯಮ ನಿಮಗೂ ತಿಳಿದಿರಲಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ