SBI Alert: ಮಾರ್ಚ್ 31ರ ಮೊದಲು ಈ ಕೆಲಸ ಮಾಡದಿದ್ದರೆ ಬ್ಯಾಂಕಿಂಗ್ ಸೇವೆಗೆ ತೊಂದರೆಯಾಗಬಹುದು!

SBI Alert: ಮಾರ್ಚ್ 31 ರೊಳಗೆ ಗ್ರಾಹಕರು ಪ್ಯಾನ್-ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡದಿದ್ದರೆ, ಅವರ ಬ್ಯಾಂಕಿಂಗ್ ಸೇವೆಗೆ ಅಡ್ಡಿಯಾಗಬಹುದು ಎಂದು ಎಸ್‌ಬಿಐ ತನ್ನ ಎಲ್ಲಾ ಖಾತೆದಾರರನ್ನು ಎಚ್ಚರಿಸಿದೆ.   

Written by - Yashaswini V | Last Updated : Mar 14, 2022, 03:48 PM IST
  • ಮಾರ್ಚ್ 31 ರೊಳಗೆ ಪ್ಯಾನ್ ಆಧಾರ್ ಲಿಂಕ್ ಮಾಡಲು ಅವಕಾಶ
  • ಆಧಾರ್ ಜೊತೆಗೆ ಪ್ಯಾನ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ
  • ಪ್ಯಾನ್-ಆಧಾರ್ ಲಿಂಕ್ ಮಾಡದಿದ್ದರೆ ಬ್ಯಾಂಕಿಂಗ್ ಸೇವೆಗೆ ಅಡ್ಡಿ
SBI Alert: ಮಾರ್ಚ್ 31ರ ಮೊದಲು ಈ ಕೆಲಸ ಮಾಡದಿದ್ದರೆ ಬ್ಯಾಂಕಿಂಗ್ ಸೇವೆಗೆ ತೊಂದರೆಯಾಗಬಹುದು! title=
SBI Alert

SBI Alert: ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) , 31 ಮಾರ್ಚ್ 2022 ರ ಮೊದಲು ಪ್ಯಾನ್-ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಲು ತನ್ನ  ಬ್ಯಾಂಕ್  ಖಾತೆದಾರರಿಗೆ ಸೂಚನೆ ನೀಡಿದೆ. ನಿಗದಿತ ದಿನಾಂಕದೊಳಗೆ ಗ್ರಾಹಕರು ಈ ಕೆಲಸ ಮಾಡದಿದ್ದರೆ ಅವರ ಬ್ಯಾಂಕಿಂಗ್ ಸೇವೆಯನ್ನು ನಿಲ್ಲಿಸಬಹುದು ಎಂದು ಎಸ್‌ಬಿಐ ಟ್ವೀಟ್ ಮಾಡುವ ಮೂಲಕ ಗ್ರಾಹಕರನ್ನು ಎಚ್ಚರಿಸಿದೆ.

ಮಾರ್ಚ್ 31ರವರೆಗೆ ಅವಕಾಶ:
ಆಧಾರ್ ಜೊತೆ ಪ್ಯಾನ್ ಲಿಂಕ್ (Aadhaar PAN Link) ಮಾಡುವುದು ಕಡ್ಡಾಯ ಎಂದು ಬ್ಯಾಂಕ್ ಹೇಳಿದೆ. ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡದಿದ್ದರೆ, ಪ್ಯಾನ್ ನಿಷ್ಕ್ರಿಯವಾಗುತ್ತದೆ ಮತ್ತು ನಿರ್ದಿಷ್ಟ ವಹಿವಾಟುಗಳನ್ನು ನಡೆಸಲು ನಿಷ್ಕ್ರಿಯ ಪ್ಯಾನ್ ಅನ್ನು ಬಳಸಲಾಗುವುದಿಲ್ಲ. ಹಾಗಾಗಿ ಬ್ಯಾಂಕಿಂಗ್ ವ್ಯವಹಾರದಲ್ಲಿ ಯಾವುದೇ ರೀತಿಯ ಅನಾನುಕೂಲತೆಯನ್ನು ತಪ್ಪಿಸಲು ಮತ್ತು ತಡೆರಹಿತ ಬ್ಯಾಂಕಿಂಗ್ ಸೇವೆಯನ್ನು (Banking Service) ಆನಂದಿಸಲು ಗ್ರಾಹಕರು ತಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ನಾವು ಸಲಹೆ ನೀಡುತ್ತೇವೆ ಎಂದು ಎಸ್‌ಬಿಐ ಬ್ಯಾಂಕ್ ತಿಳಿಸಿದೆ.

ಗಮನಾರ್ಹವಾಗಿ, ಕರೋನವೈರಸ್ ಸಾಂಕ್ರಾಮಿಕದ ದೃಷ್ಟಿಯಿಂದ, ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ (Aadhaar PAN Link) ಮಾಡುವ ಗಡುವನ್ನು 30 ಸೆಪ್ಟೆಂಬರ್ 2021 ರಿಂದ 31 ಮಾರ್ಚ್ 2022 ರವರೆಗೆ ವಿಸ್ತರಿಸಲಾಗಿದೆ. 

ಇದನ್ನೂ ಓದಿ- Bank Holiday March 2022: ಬ್ಯಾಂಕ್ ಗ್ರಾಹಕರಿಗೊಂದು ಮಹತ್ವದ ಮಾಹಿತಿ

ಪ್ಯಾನ್-ಆಧಾರ್ ಕಾರ್ಡ್ ಅನ್ನು ಹೇಗೆ ಲಿಂಕ್ ಮಾಡುವುದು?
ಮೊದಲ ಮಾರ್ಗ:

1- ಮೊದಲು ನೀವು ಆದಾಯ ತೆರಿಗೆಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ https://www.incometaxindiaefiling.gov.in/home
2- ಇಲ್ಲಿ ಎಡಭಾಗದಲ್ಲಿ ನೀವು ಲಿಂಕ್ ಆಧಾರ್ ಆಯ್ಕೆಯನ್ನು ನೋಡುತ್ತೀರಿ, ಅದರ ಮೇಲೆ ಕ್ಲಿಕ್ ಮಾಡಿ 
3- ಹೊಸ ಪುಟ ತೆರೆಯುತ್ತದೆ, ಅಲ್ಲಿ ನೀವು ಪ್ಯಾನ್, ಆಧಾರ್ ನಲ್ಲಿ ನಮೂದಿಸಿರುವಂತೆ ನಿಮ್ಮ ಹೆಸರನ್ನು ಭರ್ತಿ ಮಾಡಬೇಕು
4- ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಕೇವಲ ಜನ್ಮ ವರ್ಷವನ್ನು ಮಾತ್ರ ನಮೂದಿಸಲಾಗಿದ್ದರೆ, 'I have only year of birth in aadhaar card' ಎಂಬ ಬಾಕ್ಸ್ ಅನ್ನು ಟಿಕ್ ಮಾಡಿ 
5- ಕ್ಯಾಪ್ಚಾ ಕೋಡ್ ನಮೂದಿಸಿ ಅಥವಾ OTP ಮೂಲಕ ಲಾಗ್ ಇನ್ ಆಗಲು ಒಟಿಪಿಗಾಗಿ ಎಂಬ ಆಯ್ಕೆಯ ಮೇಲೆ ಟಿಕ್ ಮಾಡಿ
6- ನಂತರ ಲಿಂಕ್ ಆಧಾರ್‌ನ ಬಟನ್ ಮೇಲೆ ಕ್ಲಿಕ್ ಮಾಡಿ. ಈ ರೀತಿಯಾಗಿ PAN ಮತ್ತು ಆಧಾರ್ ಲಿಂಕ್ ಪೂರ್ಣಗೊಳ್ಳುತ್ತದೆ.

ಇದನ್ನೂ ಓದಿ- ಈ ವಾಹನಗಳ ನೋಂದಣಿ ಈಗ 8 ಪಟ್ಟು ಹೆಚ್ಚು ದುಬಾರಿ.! ಹೊಸ ನಿಯಮದಿಂದ ಆಗಲಿದೆ ಭಾರೀ ನಷ್ಟ

ಆಧಾರ್-ಪ್ಯಾನ್ ಲಿಂಕ್ ಮಾಡಲು ಎರಡನೇ ಮಾರ್ಗ:
- ನೀವು SMS ಮೂಲಕ ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡಬಹುದು 
- ಮೊಬೈಲ್‌ನ ಸಂದೇಶ ಬಾಕ್ಸ್‌ನಲ್ಲಿ, UIDPAN<12-ಅಂಕಿಯ ಆಧಾರ್><10-ಅಂಕಿಯ PANಸಂಖ್ಯೆಯನ್ನು> ಟೈಪ್ ಮಾಡಿ.
- ಈ ಸಂದೇಶವನ್ನು 567678 ಅಥವಾ 56161 ಗೆ ಕಳುಹಿಸುವ ಮೂಲಕವೂ ಆಧಾರ್-ಪ್ಯಾನ್ ಅನ್ನು ಲಿಂಕ್ ಮಾಡಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News