ಬೆಂಗಳೂರು: ಡಿಜಿಟಲ್ ಯುಗದಲ್ಲಿ ಸೈಬರ್ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇತ್ತೀಚಿನ ವರದಿಯೊಂದು ಬ್ಯಾಂಕ್ ಗ್ರಾಹಕರ ನಿದ್ದೆಗೆಡಿಸಿದೆ. ವರದಿಯ ಪ್ರಕಾರ, ಡಾರ್ಕ್ ವೆಬ್ನಲ್ಲಿ 6 ಲಕ್ಷ ಎಚ್ಡಿಎಫ್ಸಿ ಗ್ರಾಹಕರ ಡೇಟಾ ಸೋರಿಕೆಯಾಗಿದೆ ಎಂದು ಹೇಳಲಾಗಿದೆ. 'ಜನಪ್ರಿಯ ಸೈಬರ್ ಕ್ರಿಮಿನಲ್ ಫೋರಂ'ನಲ್ಲಿ ಹ್ಯಾಕರ್ಗಳು 6 ಲಕ್ಷ ಜನರ ವೈಯಕ್ತಿಕ ಮಾಹಿತಿಯನ್ನು ಪೋಸ್ಟ್ ಮಾಡಿದ್ದಾರೆ ಎಂಬ ಆರೋಪಗಳು ಕೂಡ ಮುನ್ನೆಲೆಗೆ ಬಂದಿವೆ.
ಹ್ಯಾಕರ್ಗಳು ಬ್ಯಾಂಕ್ ಗ್ರಾಹಕರ ಹೆಸರುಗಳು, ಇಮೇಲ್ ವಿಳಾಸಗಳು, ವಿಳಾಸಗಳು ಮತ್ತು ಸೂಕ್ಷ್ಮ ಹಣಕಾಸು ಡೇಟಾಗಳನ್ನು ಹ್ಯಾಕ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದು ಗ್ರಾಹಕರ ಆತಂಕಕ್ಕೆ ಕಾರಣವಾಗಿದೆ. ಇದರ ಸತ್ಯಾಸತ್ಯತೆ ಬಗ್ಗೆ ಇಲ್ಲಿದೆ ಮಾಹಿತಿ.
ಇದನ್ನೂ ಓದಿ- ಈ ಬ್ಯಾಂಕ್ಗಳಿಂದ ಮಹಿಳೆಯರಿಗೆ ಕಡಿಮೆ ಬಡ್ಡಿದರದಲ್ಲಿ ಸಿಗುತ್ತೆ ಹೋಮ್ ಲೋನ್
ಟ್ವಿಟರ್ನಲ್ಲಿ ಡೇಟಾ ಸೋರಿಕೆಯ ಸುದ್ದಿ ಬಗ್ಗೆ ಪ್ರತಿಕ್ರಿಯಿಸಿರುವ ಎಚ್ಡಿಎಫ್ಸಿ ಬ್ಯಾಂಕ್ ಈ ವರದಿಯನ್ನು ನಿರಾಕರಿಸಿದೆ. ಈ ಕುರಿತಂತೆ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಟ್ವೀಟ್ ಮಾಡಿರುವ ಎಚ್ಡಿಎಫ್ಸಿ ಬ್ಯಾಂಕ್, "ಹಾಯ್, ಎಚ್ಡಿಎಫ್ಸಿ ಬ್ಯಾಂಕ್ನಲ್ಲಿ ಯಾವುದೇ ಡೇಟಾ ಸೋರಿಕೆಯಾಗಿಲ್ಲ ಮತ್ತು ನಮ್ಮ ಸಿಸ್ಟಮ್ಗಳನ್ನು ಯಾವುದೇ ಅನಧಿಕೃತ ರೀತಿಯಲ್ಲಿ ಉಲ್ಲಂಘಿಸಿಲ್ಲ ಅಥವಾ ಪ್ರವೇಶಿಸಿಲ್ಲ ಎಂದು ನಾವು ಹೇಳಲು ಬಯಸುತ್ತೇವೆ. ನಾವು ನಮ್ಮ ವ್ಯವಸ್ಥೆಯನ್ನು ನಂಬುತ್ತೇವೆ. ನಮ್ಮ ಗ್ರಾಹಕರ ಡೇಟಾ ಸುರಕ್ಷತೆಯು ಅತ್ಯಂತ ಗಂಭೀರವಾದ ವಿಷಯವಾಗಿದೆ ಮತ್ತು ಡೇಟಾ ಸುರಕ್ಷತೆ ಮತ್ತು ಸುರಕ್ಷತೆಯ ಉನ್ನತ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ನಾವು ಬ್ಯಾಂಕ್ ವ್ಯವಸ್ಥೆಗಳು ಮತ್ತು ನಮ್ಮ ಪರಿಸರ ವ್ಯವಸ್ಥೆಯನ್ನು ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತೇವೆ" ಎಂದು ಭರವಸೆ ನೀಡಿದೆ.
ಇನ್ನೂ ವಂಚನೆಗಳಿಂದ ಜಾಗರೂಕರಾಗಿರುವಂತೆ ಸಲಹೆ ನೀಡಿರುವ ಎಚ್ಡಿಎಫ್ಸಿ ಬ್ಯಾಂಕ್ನ ಸೇವಾ ವ್ಯವಸ್ಥಾಪಕರು, 'ನೆನಪಿಡಿ, ಬ್ಯಾಂಕ್ ಎಂದಿಗೂ ಪ್ಯಾನ್ ವಿವರಗಳು, OTP, UPI VPA / MPIN, ಗ್ರಾಹಕ ID ಮತ್ತು ಪಾಸ್ವರ್ಡ್, ಕಾರ್ಡ್ ಸಂಖ್ಯೆ, ATM ಪಿನ್ ಮತ್ತು CVV ಅನ್ನು ಕೇಳುವುದಿಲ್ಲ. ದಯವಿಟ್ಟು ನಿಮ್ಮ ಗೌಪ್ಯ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ' ಎಂದು ಬರೆದಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.