chanakya niti should not marry a girl these qualities: ಚಾಣಕ್ಯನ ಪ್ರಕಾರ, ಮದುವೆ ಪ್ರತಿಯೊಬ್ಬ ವ್ಯಕ್ತಿಯ ಜೀವನದ ಪ್ರಮುಖ ಭಾಗವಾಗಿದೆ. ಇದರಲ್ಲಿ ಹುಡುಗ-ಹುಡುಗಿ ಜೊತೆಗೆ ಎರಡು ಕುಟುಂಬಗಳ ಸಂಬಂಧವೂ ಕೂಡಿಬರುತ್ತದೆ. ಆದ್ದರಿಂದ, ಮದುವೆಗೆ ಮೊದಲು ಹುಡುಗ ಅಥವಾ ಹುಡುಗಿಯನ್ನು ಆಯ್ಕೆಮಾಡುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಮುಖ್ಯ. ಇನ್ನು ಎಷ್ಟೇ ಸುಂದರವಾಗಿದ್ದರೂ ಸಹ ಈ ಕೆಳಗಿನ ಗುಣಗಳಿರುವ ಮಹಿಳೆಯರನ್ನು ಮದುವೆಯಾಗ ಬಾರದು ಎಂದು ಚಾಣಕ್ಯ ತನ್ನ ನೀತಿಶಾಸ್ತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸುಳ್ಳು ಹೇಳುವ ಮಹಿಳೆ: ಆಚಾರ್ಯ ಚಾಣಕ್ಯ ಹೇಳುವಂತೆ ಸುಳ್ಳು ಹೇಳುವುದರಲ್ಲಿ ನಿಪುಣವಾಗಿರುವ ಹುಡುಗಿಯನ್ನು ಯಾವ ಕಾರಣಕ್ಕೂ ಮದುವೆಯಾಗಬಾರದು. ಸುಳ್ಳು ಹೇಳುವ ಹೆಂಗಸರು ಮದುವೆಯಾದ ಮೇಲೂ ಸುಳ್ಳು ಆರೋಪ ಮಾಡಿ ಗಂಡನ ಜೀವನ ಹಾಳು ಮಾಡುತ್ತಾರೆ. ಅಷ್ಟೇ ಅಲ್ಲ, ಇಂತಹ ಮಹಿಳೆಯರು ತಮ್ಮ ಪೋಷಕರಿಂದ ಪುರುಷರನ್ನು ದೂರವಿಡಲು ಸುಳ್ಳು ಪದಗಳನ್ನು ಬಳಸುತ್ತಾರೆ.
ನಡತೆಹೀನ ಮಹಿಳೆ: ಚಾಣಕ್ಯ ತನ್ನ ನೀತಿಶಾಸ್ತ್ರದಲ್ಲಿ ನಡತೆಹೀನ ಮಹಿಳೆಯನ್ನು ಎಂದಿಗೂ ಮದುವೆಯಾಗಬಾರದು ಎಂದು ಹೇಳುತ್ತಾನೆ. ಚಾರಿತ್ರ್ಯ ಹದಗೆಟ್ಟ ಮಹಿಳೆ ಮದುವೆಯ ನಂತರವೂ ಇತರ ಪುರುಷರಲ್ಲಿ ಪ್ರೀತಿಯನ್ನು ಹುಡುಕುತ್ತಾಳೆ. ಅಂತಹ ಮಹಿಳೆ ಏಕಕಾಲದಲ್ಲಿ ಅನೇಕ ಪುರುಷರನ್ನು ವಂಚಿಸುವಲ್ಲಿ ಪರಿಣತಿ ಹೊಂದಿರುತ್ತಾಳೆ.
ಕಟುವಾಗಿ ಮಾತನಾಡುವ ಮಹಿಳೆ: ಚಾಣಕ್ಯನ ಪ್ರಕಾರ, ಯಾವಾಗಲೂ ಕಟುವಾಗಿ ಮಾತನಾಡುವ ಮಹಿಳೆಯನ್ನು ಮದುವೆಯಾಗಬಾರದು. ಏಕೆಂದರೆ ಮದುವೆಯ ನಂತರವೂ ಅಂತಹ ಮಹಿಳೆ ತನ್ನ ಕಹಿ ಮಾತುಗಳಿಂದ ತನ್ನ ಗಂಡನ ಜೊತೆಗೆ ಅವನ ಇಡೀ ಕುಟುಂಬವನ್ನು ತೊಂದರೆಗೊಳಿಸುತ್ತಾಳೆ.
ಕೆಟ್ಟ ಕುಟುಂಬ ಹಿನ್ನೆಲೆ: ಆಚಾರ್ಯ ಚಾಣಕ್ಯ ಹೇಳುವಂತೆ, ಒಬ್ಬ ಪುರುಷನು ವಿವಾಹವಾಗುವ ಮುನ್ನ ಆಕೆಯ ಕುಟುಂಬದ ಹಿನ್ನೆಲೆಯನ್ನು ಪರಿಗಣಿಸದೆ ಮದುವೆಯಾದರೆ ಅವನ ಜೀವನವು ನರಕವಾಗುತ್ತದೆ. ಹೆಣ್ಣಿನ ಕೌಟುಂಬಿಕ ಹಿನ್ನೆಲೆ ಕೆಟ್ಟದಾಗಿದ್ದರೆ ಗಂಡನ ಮನೆ ಒಡೆಯುವ ಕೆಲಸ ಮಾಡುತ್ತಾಳೆ ಎನ್ನುತ್ತಾರೆ ಚಾಣಕ್ಯ.
ಸುಂದರ ಮಹಿಳೆ: ಪ್ರತಿಯೊಬ್ಬರೂ ತಮ್ಮ ಜೀವನ ಸಂಗಾತಿ ಸುಂದರವಾಗಿರಬೇಕು ಎಂದು ಕನಸು ಕಾಣುತ್ತಾರೆ. ಆದರೆ ಆಚಾರ್ಯ ಚಾಣಕ್ಯರ ಪ್ರಕಾರ, ಯಾವುದೇ ಮಹಿಳೆಯ ದೇಹದ ಸೌಂದರ್ಯಕ್ಕೆ ಪ್ರಾಮುಖ್ಯತೆ ನೀಡಬಾರದು. ಮಹಿಳೆ ದೈಹಿಕವಾಗಿ ಸುಂದರವಾಗಿದ್ದರೂ, ಹೃದಯದಲ್ಲಿ ಕೊಳಕು ಇದ್ದರೆ, ಅವಳು ತನ್ನ ಗಂಡನ ಮನೆ ಮತ್ತು ಅವನ ಜೀವನ ಎರಡನ್ನೂ ನಾಶಪಡಿಸುತ್ತಾಳೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.