Small Business Idea: ಬಂಪರ್ ಲಾಭ ನೀಡುವ ಈ ಸಣ್ಣ ಉದ್ಯಮ ಇಂದೇ ಆರಂಭಿಸಿ, ಲಕ್ಷಾಂತರ ಲಾಭದ ಜೊತೆಗೆ ಸರ್ಕಾರಿ ನೆರವು ಕೂಡ ಸಿಗುತ್ತದೆ

Small Business Idea: ಕೊರೊನಾ ಕಾರಣ ಮತ್ತು ಪ್ಲಾಸ್ಟಿಕ್ ಕಪ್ ಗಳ ಕಾರಣ ಪೇಪರ್ ಕಪ್ ಗಳಿಗೆ ತುಂಬಾ ಬೇಡಿಕೆ ನಿರ್ಮಾಣಗೊಂಡಿದೆ. ಈ ಉದ್ಯಮವನ್ನು ನೀವು ಅತ್ಯಂತ ಕಡಿಮೆ ಹೂಡಿಕೆಯಲ್ಲಿ ಆರಂಭಿಸಬಹುದು ಹಾಗೂ ಇದರಲ್ಲಿ ಆದಾಯ ಕೂಡ ತುಂಬಾ ಜಾಸ್ತಿ ಇದೆ. ಸರ್ಕಾರ ಕೂಡ ಈ ಉದ್ಯಮ ಆರಂಭಕ್ಕೆ ಆರ್ಥಿಕ ಧನ ಸಹಾಯ ಒದಗಿಸುತ್ತದೆ.

Written by - Nitin Tabib | Last Updated : Sep 18, 2021, 09:07 PM IST
  • ಪ್ರಸ್ತುತ ಕೇಂದ್ರ ಸರ್ಕಾರ ಪ್ಲಾಸ್ಟಿಕ್ ಬ್ಯಾನ್ ಮಾಡಿದೆ.
  • ಇಂತಹ ಪರಿಸ್ಥಿತಿಯಲ್ಲಿ ಪೇಪರ್ ಕಪ್ ಒಂದು ಉತ್ತಮ ಆದಾಯ ನೀಡುವ ಉದ್ಯಮವಾಗಿದೆ.
  • ಈ ಬಿಸಿನೆಸ್ ಆರಂಭಿಸಲು ಕೇಂದ್ರ ಸರ್ಕಾರ ಕೂಡ ಧನಸಹಾಯ ಮಾಡುತ್ತದೆ.
Small Business Idea: ಬಂಪರ್ ಲಾಭ ನೀಡುವ ಈ ಸಣ್ಣ ಉದ್ಯಮ ಇಂದೇ ಆರಂಭಿಸಿ, ಲಕ್ಷಾಂತರ ಲಾಭದ ಜೊತೆಗೆ ಸರ್ಕಾರಿ ನೆರವು ಕೂಡ ಸಿಗುತ್ತದೆ title=
Small Business Idea (File Photo)

Small Business Idea: ನವದೆಹಲಿ - ಪ್ರಸ್ತುತ ಕೇಂದ್ರ ಸರ್ಕಾರ (Government Of India) ಪ್ಲಾಸ್ಟಿಕ್ ಅನ್ನು ನಿಷೇಧಿಸಿದೆ ಮತ್ತು ಕೊರೊನಾ ಕಾರಣ ಒಮ್ಮೆ ಬಳಕೆಯಾದ ಗ್ಲಾಸ್ ಅನ್ನು ಜನರು ಮತ್ತೊಮ್ಮೆ ಬಳಕೆ ಮಾಡಲು ಹಿಂಜರಿಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಒಮ್ಮೆ ಬಳಕೆ ಮಾಡಿ ಎಸೆಯುವ ಪೇಪರ್ ಕಪ್‌ಗಳ ವ್ಯಾಪಾರವನ್ನು ಆರಂಭಿಸಬಹುದು. ಈ ದಿನಗಳಲ್ಲಿ ಪೇಪರ್ ಕಪ್‌ಗಳಿಗೆ ಎಲ್ಲೆಡೆ ಭಾರಿ ಬೇಡಿಕೆ ಇದೆ ಮತ್ತು ನೀವು ಈ ವ್ಯಾಪಾರವನ್ನು ಕಡಿಮೆ ವೆಚ್ಚದಲ್ಲಿ ಆರಂಭಿಸಬಹುದು. ಇದರಲ್ಲಿ ಲಾಭವೂ ಅಧಿಕವಾಗಿರುತ್ತದೆ ಮತ್ತು ಅತ್ಯಂತ ಮುಖ್ಯವಾದ ವಿಷಯವೆಂದರೆ ಈ ವ್ಯವಹಾರವನ್ನು (Small Scale Business) ಪ್ರಾರಂಭಿಸಲು, ಸರ್ಕಾರವು ನಿಮಗೆ ಮುದ್ರಾ ಯೋಜನೆಯಡಿ (Mudra Loan) ಸಹಾಯ ಮಾಡುತ್ತಿದೆ. ಈ ವ್ಯವಹಾರದ ಬಗ್ಗೆ ಹೆಚ್ಚಿನ ವಿವರ ತಿಳಿದುಕೊಳ್ಳೋಣ ಬನ್ನಿ.

ಉತ್ತಮ ಲಾಭ ನೀಡುವ ವ್ಯಾಪಾರ
ದೇಶದಲ್ಲಿ ಮಾಲಿನ್ಯದಿಂದಾಗಿ ಪರಿಸ್ಥಿತಿ ನಿರಂತರವಾಗಿ ಹದಗೆಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಈ ವ್ಯಾಪಾರವು ನಿಮಗೆ ಉತ್ತಮ ಆಯ್ಕೆಯಾಗಿದೆ. ನೀವು ಕೂಡ ಈ ವ್ಯವಹಾರವನ್ನು ಪ್ರಾರಂಭಿಸಲು ಬಯಸುತ್ತಿದ್ದರೆ, ನೀವು ವರ್ಷಕ್ಕೆ 300 ದಿನಗಳ ಕಾಲ ಕೆಲಸ ಮಾಡಿದರೆ, ಇಷ್ಟು ದಿನಗಳಲ್ಲಿ ನೀವು 2.20 ಕೋಟಿ ಯೂನಿಟ್ ಪೇಪರ್ ಕಪ್‌ಗಳನ್ನು ತಯಾರಿಸಬಹುದು ಮತ್ತು ಅವುಗಳನ್ನು ಮಾರುಕಟ್ಟೆಯಲ್ಲಿ ಪ್ರತಿ ಕಪ್ ಅಥವಾ ಗ್ಲಾಸ್‌ಗೆ ಸುಮಾರು 30 ಪೈಸೆಗಳಿಗೆ ಮಾರಾಟ ಮಾಡಬಹುದು. ಈ ರೀತಿಯಾಗಿ ಅದು ನಿಮಗೆ ಬಂಪರ್ ಲಾಭವನ್ನು ನೀಡುತ್ತದೆ.

ಎಷ್ಟು ವೆಚ್ಚ ತಗುಲುತ್ತದೆ
ಈ ಉದ್ಯಮದ ವೆಚ್ಚದ ಕುರಿತು ಮಾತನಾಡುವುದಾದರೆ. ಇದರ ಮಟೀರಿಯಲ್ ಮೇಲೆ ಸುಮಾರು 3.75ಲಕ್ಷ ರೂ. ವೆಚ್ಚವಾಗುತ್ತದೆ. ಇದರ ಯುಟಿಲಿಟಿಗಾಗಿ 6000 ರೂ. ವೆಚ್ಚವಾಗುತ್ತದೆ. ಇದಲ್ಲದೆ ಇತರೆ ವೆಚ್ಚಗಳ ರೂ.20,500 ಬರುತ್ತವೆ.

ಈಗ ಈ ಉದ್ಯಮ ಆರಂಭಿಸಲು ಬೇಕಾಗುವ ಸ್ಥಳಾವಕಾಶದ ಕುರಿತು ಹೇಳುವುದಾದರೆ. ಇದಕ್ಕಾಗಿ 500 ಚದರ ವರ್ಗ ಜಾಗ ಬೇಕಾಗುತ್ತದೆ. ಮಶಿನರಿ, ಉಪಕರಣಗಳು ಹಾಗೂ ಫರ್ನಿಚರ್, ಡೈ, ಇಲೆಕ್ಟ್ರಿಫಿಕೆಶನ್, ಇನ್ಸ್ಟಾಲೆಶನ್ ಹಾಗೋ ಪ್ರಿ ಆಪರೇಟಿವ್ ಗಾಗಿ ಸುಮಾರು 10.70 ಲಕ್ಷ ರೂ. ವೆಚ್ಚ ಬರುತ್ತದೆ. ಒಂದು ವೇಳೆ ನೀವು ನಿಮ್ಮ ಉದ್ಯಮದಲ್ಲಿ ಪರಿಣಿತಿ ಹೊಂದಿದ ಹಾಗೂ ಪರಿಣಿತಿ ಹೊಂದಿರದ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿದರೆ, ಇದಕ್ಕಾಗಿ ನೀವು ತಿಂಗಳಿಗೆ ರೂ.35, 000 ಖರ್ಚು ಮಾಡಬೇಕು. ಇದಕ್ಕಾಗಿ ನಿಮಗೆ ಮಶೀನ್ ಅವಶ್ಯಕತೆ ಬೀಳಲಿದ್ದು, ಈ ಮಶೀನ್ ಸಾಮಾನ್ಯವಾಗಿ ದೆಹಲಿ, ಹೈದ್ರಾಬಾದ್, ಆಗ್ರಾ ಸೇರಿದಂತೆ ಅಹ್ಮದಾಬಾದ್ ನಂತಹ ನಗರಗಳಲ್ಲಿಸಿಗುತ್ತದೆ. ಇಂಜಿನೀಯರಿಂಗ್ ವರ್ಕ್ ಮಾಡುವ ಕಂಪನಿಗಳು ಈ ರೀತಿಯ ಮಶೀನ್ ತಯಾರಿಸುತ್ತವೆ.

ಇದನ್ನೂ ಓದಿ-GOOD NEWS! IT ಕಂಪನಿಗಳಲ್ಲಿ ಬಂಪರ್ ಉದ್ಯೋಗಾವಕಾಶ - ಒಳ್ಳೆಯ ವೇತನ ಮತ್ತು ಬೋನಸ್!

ಕೇಂದ್ರ ಸರ್ಕಾರ ಕೂಡ ಧನ ಸಹಾಯ ಮಾಡುತ್ತದೆ
ಈ ವ್ಯವಹಾರಕ್ಕೆ ಸಂಬಂಧಿಸಿದ ಮಹತ್ವತ್ವದ ವಿಷಯ ತಿಳಿದುಕೊಳ್ಳೋಣ ಬನ್ನಿ. ಇದಕ್ಕಾಗಿ, ಕೇಂದ್ರ ಸರ್ಕಾರದಿಂದ ಯೋಜನಾ ವರದಿಯನ್ನು ಸಹ ತಯಾರಿಸಲಾಗಿದೆ, ಇದರಲ್ಲಿ ವ್ಯವಹಾರವನ್ನು ಪ್ರಾರಂಭಿಸುವ ವೆಚ್ಚದಿಂದ ಲಾಭದವರೆಗೆ ಸಂಪೂರ್ಣ ಲೆಕ್ಕಾಚಾರವನ್ನು ನೀಡಲಾಗಿದೆ. ನಿಮಗೂ ಈ ವ್ಯವಹಾರದಲ್ಲಿ ಆಸಕ್ತಿಯಿದ್ದರೆ ನೀವು ಇಂದೇ ನಿಮ್ಮ ಯೋಜನೆಯನ್ನು ರೂಪಿಸಬಹುದು.

ಇದನ್ನೂ ಓದಿ-PAN Aadhaar Link:ಮತ್ತೆ ವಿಸ್ತರಣೆಯಾದ ಆಧಾರ್-ಪ್ಯಾನ್ ಜೋಡಣೆಯ Deadline

ಗಮನಿಸಬೇಕಾದ ಸಂಗತಿಯೆಂದರೆ ಕೇಂದ್ರ ಸರ್ಕಾರದ ಮುದ್ರಾ ಯೋಜನೆಯ ಅಡಿ ಇದ್ದಕ್ಕೆ ಧನಸಹಾಯ ಸಿಗುತ್ತದೆ. ಮುದ್ರಾ ಸಾಲದ ಅಡಿಯಲ್ಲಿ, ಸರ್ಕಾರವು ಬಡ್ಡಿಯ ಮೇಲೆ ಸಬ್ಸಿಡಿ ನೀಡುತ್ತದೆ. ಈ ಯೋಜನೆಯಡಿ, ನೀವು ಒಟ್ಟು ಯೋಜನೆಯ ವೆಚ್ಚದ ಶೇ.25 ರಷ್ಟನ್ನು  ಸ್ವಂತ ಹೂಡಿಕೆ ಮಾಡಬೇಕಾಗುತ್ತದೆ. ಮುದ್ರಾ ಯೋಜನೆಯಡಿ ಸರ್ಕಾರವು ಶೇಕಡಾ 75 ರಷ್ಟು ಸಾಲವನ್ನು ನೀಡುತ್ತದೆ.

ಇದನ್ನೂ ಓದಿ-LPG ಸಿಲಿಂಡರ್‌ ಬುಕಿಂಗ್ ಮೇಲೆ ಬಂಪರ್ ಆಫರ್ : ಸಿಗಲಿದೆ 2500 ರೂ.ಗಳಿಗಿಂತ ಹೆಚ್ಚು ಕ್ಯಾಶ್ ಬ್ಯಾಕ್! ಹೇಗೆ ಇಲ್ಲಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News