Thyrocare founder Velumani Success Story : ಪ್ರಾಮಾಣಿಕವಾಗಿ ಪ್ರಯತ್ನಿಸಿದರೆ ಖಂಡಿತಾ ಯಶಸ್ಸು ಸಿಗುತ್ತದೆ.ಅದಕ್ಕೆ ಸಾಕ್ಷಿ ಈ ವ್ಯಕ್ತಿ.ಒಂದು ಕಾಲದಲ್ಲಿ ಅವರ ಇಡೀ ಕುಟುಂಬದ ಖರ್ಚು 50 ರೂಪಾಯಿಗಳಿಗೆ ಮೀಸಲಿತ್ತು. ಒಳ್ಳೆಯ ಬಟ್ಟೆ, ಚಪ್ಪಲಿಗಳನ್ನು ಖರೀದಿಸುವ ಹಣ ಇವರ ಬಳಿ ಇರುತ್ತಿರಲಿಲ್ಲ.ಆದರೆ ಇಂದು ಇವರು 3300 ಕೋಟಿ ರೂ.ಕಂಪನಿಯ ಮಾಲೀಕ. ನಾವಿಲ್ಲಿ ಮಾತನಾಡುತ್ತಿರುವುದು ಥೈರೋಕೇರ್ ಟೆಕ್ನಾಲಜೀಸ್ ಲಿಮಿಟೆಡ್‌ನ ಸಂಸ್ಥಾಪಕ,ಅಧ್ಯಕ್ಷ ಮತ್ತು ಎಂಡಿ ಎ ವೇಲುಮಣಿ ಬಗ್ಗೆ.ಇತ್ತೀಚೆಗೆ,ಅವರ ಒಂದು ಪಾಡ್‌ಕಾಸ್ಟ್ ವೈರಲ್ ಆಗಿತ್ತು.ಅದರಲ್ಲಿ ಅವರು ತಮ್ಮ ಹೋರಾಟದ ದಿನಗಳ ಬಗ್ಗೆ ಪತ್ನಿಯ ಅಗಲಿಕೆಯ ಬಗ್ಗೆ ನೆನೆದು ಭಾವುಕರಾಗಿದ್ದರು.
ವೇಲುಮಣಿ ತಮಿಳುನಾಡಿನ ಕೊಯಮತ್ತೂರಿನ ಬಡ ಕುಟುಂಬದಲ್ಲಿ ಜನಿಸಿದವರು.ತಂದೆಯ ಅನಾರೋಗ್ಯದಿಂದ ಸಂಪೂರ್ಣ ಹೊರೆ ತಾಯಿಯ ಹೆಗಲ ಮೇಲೆ ಬಿದ್ದಿತು.ಮೂವರು ಒಡಹುಟ್ಟಿದವರಲ್ಲಿ ವೇಲುಮಣಿಯವರು ಹಿರಿಯರು. ಎಷ್ಟೇ ಕಷ್ಟ ಬಂದರೂ ಅವರ ತಾಯಿ ಮಕ್ಕಳ ವಿದ್ಯಾಭ್ಯಾಸವನ್ನು ಮಾತ್ರ ನಿಲ್ಲಿಸಲಿಲ್ಲ.50 ರೂ.ನಲ್ಲಿ ಇಡೀ ಕುಟುಂಬ ನಿರ್ವಹಣೆ ನಡೆಯಬೇಕಿತ್ತು. ವೇಲುಮಣಿ ತನ್ನ ತಾಯಿಯ ಜೀವನ ಹೋರಾಟವನ್ನು ಪ್ರತಿ ನಿತ್ಯ ನೋಡುತ್ತಿದ್ದರು.ತನ್ನ ಅಧ್ಯಯನದ ಜೊತೆಗೆ,ಅವರು ಕೆಮಿಸ್ಟ್ ಅಂಗಡಿಯಲ್ಲಿ ಕೆಲಸ ಮಾಡುವುದಕ್ಕೆ ಆರಂಭಿಸಿದರು. ಅಲ್ಲಿ 150 ರೂ.ಗಳನ್ನು ಸಂಬಳವಾಗಿ ಪಡೆಯುತ್ತಿದ್ದರು.ಇದರಲ್ಲಿ ತನ್ನ ಬಳಿ 50 ರೂಪಾಯಿ ಇಟ್ಟುಕೊಂಡು ಉಳಿದ ಹಣವನ್ನೆಲ್ಲ ಅಮ್ಮನಿಗೆ ನೀಡುತ್ತಿದ್ದರು.
ಇದನ್ನೂ ಓದಿ : ವೈಷ್ಣೋದೇವಿ ಭಕ್ತರಿಗೆ ಭಾರತೀಯ ರೈಲ್ವೆ ಉಡುಗೊರೆ: ಜೂನ್‌ವರೆಗಷ್ಟೇ ಈ ಪ್ರಯೋಜನ
14 ವರ್ಷಗಳ ಸೇವೆಯ ನಂತರ ಪ್ರಾರಂಭಿಸಿದ ವ್ಯವಹಾರ :
ಅವರು ಕೆಮಿಸ್ಟ್ ಅಂಗಡಿಯಲ್ಲಿ ಕೆಲಸ ಮಾಡುತ್ತಾ ತಮ್ಮ ವ್ಯಾಸಾಂಗ ಮುಂದುವರೆಸಿದರು. ಪಿಎಚ್‌ಡಿ ಮುಗಿಸಿದ ನಂತರ ಭಾಭಾ ಅಟಾಮಿಕ್ ರಿಸರ್ಚ್ ಸೆಂಟರ್‌ನಲ್ಲಿ ಲ್ಯಾಬ್ ಅಸಿಸ್ಟೆಂಟ್ ಆಗಿ ಕೆಲಸ ಸಿಕ್ಕಿತು.ನಂತರ ಸುಮತಿ ವೇಲುಮಣಿ ಅವರನ್ನು ವಿವಾಹವಾದರು. ಸುಮತಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದರು.ವೇಲುಮಣಿ ಅವರು 14 ವರ್ಷಗಳ ಕಾಲ ಕೆಲಸ ಮಾಡಿದ ನಂತರ ಕೆಲಸ ಬಿಟ್ಟರು.ಹೆಂಡತಿಗೆ ಸರ್ಕಾರಿ ನೌಕರಿ ಇದ್ದುದರಿಂದ ಹೆಂಡತಿಗೆ ತಿಳಿಸದೆ ಕೆಲಸ ಬಿಟ್ಟಿದ್ದರು ವೇಲುಮಣಿ. ತಾವು ಮಾಡಿದ್ದ ಅಲ್ಪ ಸ್ವಲ್ಪ ಉಳಿತಾಯ ಮತ್ತು ಪಿಎಫ್ ಹಣದೊಂದಿಗೆ 1995 ರಲ್ಲಿ ಥೈರೋಕೇರ್ ಅನ್ನು ಪ್ರಾರಂಭಿಸಿದರು.ಮುಂಬೈನಲ್ಲಿ ತಮ್ಮ ಮೊದಲ ಪ್ರಯೋಗಾಲಯವನ್ನು ತೆರೆದರು.ಆರಂಭದಲ್ಲಿ ಒಂದೋ ಎರಡೋ ಪರೀಕ್ಷೆಗಳು ಬಂದರೂ ಪ್ರಯತ್ನ ನಿಲ್ಲಿಸಲಿಲ್ಲ. ರಾತ್ರಿಯಿಡೀ ಲ್ಯಾಬ್‌ನಲ್ಲಿಯೇ ಇರಬೇಕಾದ ಸಂದರ್ಭಗಳು ಹಲವು ಬಾರಿ ಮಲಗುತ್ತಿದ್ದರು.ಪ್ರಯತ್ನಗಳು ಫಲ ನೀಡಲಾರಂಭಿಸಿದವು.
ತಪ್ಪಿತ್ತು ಪತ್ನಿಯ ಸಾಥ್ :
ಕಂಪನಿಯನ್ನು ವಿಸ್ತರಿಸುವ ಸಲುವಾಗಿ ಆರಂಭದಲ್ಲಿ ಅವರು ಸಂಬಳವನ್ನೂ ತೆಗೆದುಕೊಳ್ಳಲಿಲ್ಲ.ದುಡಿದ ಹಣವನ್ನೆಲ್ಲ ಕಂಪನಿಯಲ್ಲೇ ಹೂಡುತ್ತಿದ್ದರು.ಯಾವುದೇ ಷರತ್ತುಗಳಿಲ್ಲದೆ ಅವರ ಪಾಣಿ ಕೂಡಾ ಸಂಪೂರ್ಣ ಸಾಥ್ ನೀಡಿದ್ದರು.ತಮ್ಮ ವ್ಯಾಪಾರದ ಯಶಸ್ಸಿಗೆ ಪತ್ನಿಯೇ ಕಾರಣ ಎಂದೂ ವೇಲುಮಣಿ ಹೇಳುತ್ತಾರೆ.ಅವರ ಹೋರಾಟದಲ್ಲಿ ಅವರ ಪತ್ನಿಯಾ ಪಾತ್ರ ಬಹಳ ದೊಡ್ಡದು. ಆದರೆ 2016 ರಲ್ಲಿ,ಅವರ ಕಂಪನಿಯ ಐಪಿಒಗೆ 50 ದಿನಗಳ ಮೊದಲು,ಅವರ ಪತ್ನಿಗೆ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಇರುವ ವಿಚ್ರಾ ಗೊತ್ತಾಗುತ್ತದೆ. ಆದರೂ ತಮ್ಮ ಜೀವನದ ಕೊನೆಯ ದಿನದವರೆಗೂ ಪತ್ನಿ ವೆಳುಮಣಿ ಅವರನ್ನು ಬೆಂಬಲಿಸುತ್ತಾರೆ. ಆದರೆ,ದುರಾದೃಷ್ಟ ಯಾವಾಗ ವೇಲುಮಣಿ ಕಂಪನಿ ಯಶಸ್ಸು ಕಾಣುವುದಕ್ಕೆ ಆರಂಭಿಸುತ್ತದೆಯೋ ಆಗ ಅವರ ಪತ್ನಿ ಬಾರದ ಲೋಕಕ್ಕೆ ಮರಳುತ್ತಾರೆ.ಇಂದು ವೇಲುಮಣಿ ಕಂಪನಿಯ ಮಾರುಕಟ್ಟೆ ಮೌಲ್ಯ 3300 ಕೋಟಿ ರೂ.
ಇದನ್ನೂ ಓದಿ : Apple iPhone 15: ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತಿದೆ ಐಫೋನ್ 15, ಇಂದೇ ಖರೀದಿಸಿ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.