TA Hike: ಕೇವಲ ಡಿಎ, ಹೆಚ್ಆರ್ಎ ಅಷ್ಟೇ ಅಲ್ಲ ಸರ್ಕಾರಿ ನೌಕರರ ಈ ಭತ್ಯೆ ಕೂಡ ಹೆಚ್ಚಾಗಲಿದೆ, ವೇತನದಲ್ಲಿ ಟ್ರಿಪಲ್ ಬೆನಿಫಿಟ್!

7th Pay Commission: 2024 ರ ವರ್ಷವು ಸರ್ಕಾರಿ ನೌಕರರ ಪಾಲಿಗೆ ಬಂಬಾಟ್ ಆಗಿರಲಿದೆ.  ಏಕೆಂದರೆ, ವರ್ಷದ ಮೊದಲಾರ್ಧದಲ್ಲಿ ಅನೇಕ ಮಹತ್ವದ ಬದಲಾವಣೆಗಳು ಅವರಿಗಾಗಿ ಕಾದಿವೆ. ಲೋಕಸಭೆ ಚುನಾವಣೆಗಳು ಇರುವ ಕಾರಣ ಸರ್ಕಾರದ ಸಂಪೂರ್ಣ ಗಮನವೂ ಕೂಡ ನೌಕರರ ಮೇಲಿರಲಿದೆ. (Business News In Kannada).  

Written by - Nitin Tabib | Last Updated : Jan 21, 2024, 05:41 PM IST
  • ತುಟ್ಟಿ ಭತ್ಯೆಯಲ್ಲಿನ ಈ ಹೆಚ್ಚಳ ಸರ್ಕಾರಿ ನೌಕರರ ಪ್ರಯಾಣ ಭತ್ಯೆಯ ಮೇಲೂ ಕೂಡ ನೇರ ಪ್ರಭಾವವನ್ನು ಬೀರಲಿದೆ.
  • ಡಿಎ ಹೆಚ್ಚಳದೊಂದಿಗೆ ಪ್ರಯಾಣ ಭತ್ಯೆ (ಟಿಎ) ಕೂಡ ಹೆಚ್ಚಾಗುವ ಸಾಧ್ಯತೆ ಇದೆ.
  • ಇಂತಹ ಪರಿಸ್ಥಿತಿಯಲ್ಲಿ, ಪ್ರಯಾಣ ಭತ್ಯೆಯನ್ನು ಪೇ ಬ್ಯಾಂಡ್‌ನೊಂದಿಗೆ ಸಂಯೋಜಿಸುವ ಮೂಲಕ, ತುಟ್ಟಿಭತ್ಯೆ ಏರಿಕೆ ಮತ್ತಷ್ಟು ಹೆಚ್ಚಾಗಬಹುದು.
TA Hike: ಕೇವಲ ಡಿಎ, ಹೆಚ್ಆರ್ಎ ಅಷ್ಟೇ ಅಲ್ಲ ಸರ್ಕಾರಿ ನೌಕರರ ಈ ಭತ್ಯೆ ಕೂಡ ಹೆಚ್ಚಾಗಲಿದೆ, ವೇತನದಲ್ಲಿ ಟ್ರಿಪಲ್ ಬೆನಿಫಿಟ್! title=

ನವದೆಹಲಿ: ಮುಂಬರುವ ಮೂರು ತಿಂಗಳು ಕೇಂದ್ರ ಸರ್ಕಾರಿ ನೌಕರರ ಪಾಲಿಗೆ ಹಲವು ಸಂತಸದ ಸುದ್ದಿಗಳನ್ನು ಹೊತ್ತು ತರಲಿವೆ . ಏಕೆಂದರೆ ಈ ಅವಧಿಯಲ್ಲಿ ಕೇಂದ್ರ ನೌಕರರು  ಒಂದಲ್ಲ, ಎರಡಲ್ಲ ಒಟ್ಟು ಮೂರು ಉಡುಗೊರೆಗಳನ್ನು ಪಡೆಯಲಿದ್ದಾರೆ. ಇದರಿಂದಾಗಿ ಸರ್ಕಾರಿ ನೌಕರರ ವೇತನದಲ್ಲಿ ಟ್ರಿಪಲ್ ಲಾಭ ಸಿಗಲಿದೆ ಎಂದರೆ ತಪ್ಪಾಗಲಾರದು. 2024 ರ ವರ್ಷವು ಉದ್ಯೋಗಿಗಳ ಪಾಲಿಗೆ ತುಂಬಾ ಮಹತ್ವದ್ದಾಗಿದೆ. ಏಕೆಂದರೆ, ವರ್ಷದ ಮೊದಲಾರ್ಧದಲ್ಲಿ ಅನೇಕ ದೊಡ್ಡ ಬದಲಾವಣೆಗಳು ಅವರಿಗಾಗಿ ಕಾದಿವೆ. ಲೋಕಸಭೆ ಚುನಾವಣೆಗಳಿರುವ ಕಾರಣ ಸರ್ಕಾರದ ಸಂಪೂರ್ಣ ಗಮನವೂ ಕೂಡ ನೌಕರರ ಮೇಲಿರಲಿದೆ. ನವೆಂಬರ್ ವರೆಗಿನ ಎಐಸಿಪಿಐ ಸೂಚ್ಯಂಕ ಅಂಕಿ ಅಂಶಗಳು ಬಹಿರಂಗಗೊಂಡಿದ್ದು, ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ. 50ಕ್ಕೆ ತಲುಪುವುದು ಬಹುತೇಕ ಖಚಿತವಾಗಿದೆ. ಹೌದು, ಡಿಸೆಂಬರ್ ಅಂಕಿ-ಅಂಶಗಳು ಒಂದೊಮ್ಮೆ ಬಹಿರಂಗಗೊಂಡರೆ, ಅದರ ಔಪಚಾರಿಕ ಘೋಷಣೆ ಒಂದೇ ಬಾಕಿ ಉಳಿಯುತ್ತದೆ. ಅದು ಘೋಷಣೆಯಾದರೆ, ನೌಕರರಿಗೆ ಮತ್ತೆರಡು ಸಿಹಿ ಸುದ್ದಿಗಳು ಸಿಗಲಿವೆ. (Business News In Kannada)

ತುಟ್ಟಿಭತ್ಯೆ ಹೆಚ್ಚಳ
ಮೊದಲನೆಯದಾಗಿ, ಕೇಂದ್ರ ನೌಕರರು ತುಟ್ಟಿ ಭತ್ಯೆ ಹೆಚ್ಚಳದ ಉಡುಗೊರೆಯನ್ನು ಪಡೆಯಲಿದ್ದಾರೆ. ಇದಕ್ಕಾಗಿ ನೌಕರರು ಮಾರ್ಚ್ ವರೆಗೆ ನಿರೀಕ್ಷಿಸಬೇಕು. ಜುಲೈನಿಂದ ಡಿಸೆಂಬರ್ 2023 ರವರೆಗಿನ ಎಐಸಿಪಿಐ ಸೂಚ್ಯಂಕ ಅಂಕಿಅಂಶಗಳು, ಕೇಂದ್ರ ಸರ್ಕಾರಿ ನೌಕರರು ಇನ್ಮುಂದೆ ಕನಿಷ್ಠ ಶೇ.50 ರಷ್ಟು ತುಟ್ಟಿಭತ್ಯೆಯನ್ನು ಪಡೆಯುತ್ತಾರೆ ಎಂಬುದನ್ನು ಖಚಿತಪಡಿಸಿವೆ. ನವೆಂಬರ್ ಎಐಸಿಪಿಐ ಸೂಚ್ಯಂಕ ಅಂಕಿ ಅಂಶಗಳು ಕೂಡ ಪ್ರಕಟಗೊಂಡಿದ್ದು. ಡಿಸೆಂಬರ್ ಅಂಕಿಅಂಶಗಳು ಮಾತ್ರ ಬಾಕಿ ಉಳಿದಿವೆ. ನವೆಂಬರ್ ವರೆಗಿನ ಅಂಕಿ ಅಂಶಗಳ ಪ್ರಕಾರ ತುಟ್ಟಿ ಭತ್ಯೆ ಶೇ.4ರಷ್ಟು ಹೆಚ್ಚಳಗುವುದು ಬಹುತೇಕ ನಿಚ್ಚಳವಾಗಿದೆ. ಏಕೆಂದರೆ ನಾವು ಎಐಸಿಪಿಐ ಡೇಟಾವನ್ನು ನೋಡಿದರೆ ಮತ್ತು ಪ್ರಸ್ತುತ ನೌಕರರು ಪಡೆಯುತ್ತಿರುವ ಶೇ. 46 ರಷ್ಟು ತುಟ್ಟಿಭತ್ಯೆ ಪರಿಗಣಿಸಿದರೆ, ತುಟ್ಟಿಭತ್ಯೆಯ ಸ್ಕೋರ್ ಶೇ 49.68 ತಲುಪಿದೆ. ಸೂಚ್ಯಂಕವು ಪ್ರಸ್ತುತ 139.1 ಪಾಯಿಂಟ್‌ಗಳಲ್ಲಿದೆ.

ಪ್ರಯಾಣ ಭತ್ಯೆಯಲ್ಲಿ ಏರಿಕೆ
ತುಟ್ಟಿ ಭತ್ಯೆಯಲ್ಲಿನ ಈ ಹೆಚ್ಚಳ
ಸರ್ಕಾರಿ ನೌಕರರ ಪ್ರಯಾಣ ಭತ್ಯೆಯ ಮೇಲೂ ಕೂಡ ನೇರ ಪ್ರಭಾವವನ್ನು ಬೀರಲಿದೆ.  ಡಿಎ ಹೆಚ್ಚಳದೊಂದಿಗೆ ಪ್ರಯಾಣ ಭತ್ಯೆ (ಟಿಎ) ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ, ಪ್ರಯಾಣ ಭತ್ಯೆಯನ್ನು ಪೇ ಬ್ಯಾಂಡ್‌ನೊಂದಿಗೆ ಸಂಯೋಜಿಸುವ ಮೂಲಕ, ತುಟ್ಟಿಭತ್ಯೆ ಏರಿಕೆ ಮತ್ತಷ್ಟು ಹೆಚ್ಚಾಗಬಹುದು. ಪ್ರಯಾಣ ಭತ್ಯೆಯನ್ನು ವಿವಿಧ ಪೇ ಬ್ಯಾಂಡ್‌ಗಳಿಗೆ ಲಿಂಕ್ ಮಾಡಲಾಗಿದೆ. ಹೆಚ್ಚಿನ ಟಿಪಿಟಿಎ ನಗರಗಳಲ್ಲಿ, ಗ್ರೇಡ್ 1 ರಿಂದ 2 ರವರೆಗೆ ಪ್ರಯಾಣ ಭತ್ಯೆ ರೂ 1800 ಮತ್ತು ರೂ 1900 ಆಗಿದೆ. ಗ್ರೇಡ್ 3 ರಿಂದ 8 ರವರೆಗೆ ರೂ 3600 + ಡಿಎ ಆಗಿದೆ. ಆದರೆ, ಇತರ ಸ್ಥಳಗಳಿಗೆ ಈ ದರವು ರೂ 1800 + ಡಿಎ ಆಗಿದೆ.

ಇದನ್ನೂ ಓದಿ-Union Budget 2024: ಮನೆ ಖರೀದಿಸುವವರಿಗೆ ಮೋದಿ ಸರ್ಕಾರದ ಭಾರಿ ಉಡುಗೊರೆ, ಶೀಘ್ರದಲ್ಲೇ ಸಿಗಲಿದೆ ಈ ವಿನಾಯ್ತಿ ಲಾಭ!

ಮನೆ ಬಾಡಿಗೆ ಭತ್ಯೆ
ತುಟ್ಟಿ ಭತ್ಯೆ ಶೇ. 50ಕ್ಕೆ ತಲುಪುವುದು ನಿಯಮಗಳ ಮನೆ ಬಾಡಿಗೆ ಭತ್ಯೆಯನ್ನು ಕೂಡ ಹೆಚ್ಚಿಸಲಿದೆ. ಮುಂದಿನ ವರ್ಷ ಇದರ ಪರಿಷ್ಕರಣೆಯೂ ಆಗಬೇಕಿದೆ. ಎಚ್‌ಆರ್‌ಎಯಲ್ಲಿ ಮುಂದಿನ ಪರಿಷ್ಕರಣೆ ದರ 3 ಪ್ರತಿಶತ ಇರಲಿದೆ ಎಂಬುದು ಈಗಿರುವ ಅಂಕಿ ಅಂಶಗಳಿಂದ ನಿಚ್ಚಳವಾಗಿದೆ. ಪ್ರಸ್ತುತ ನಗರಗಳಿಗೆ ಅನುಗುಣವಾಗಿ ನೌಕರರಿಗೆ ಶೇ.27, 24, 18ರ ದರದಲ್ಲಿ ಎಚ್‌ಆರ್‌ಎ ಸಿಗುತ್ತಿದ್ದು, ತುಟ್ಟಿಭತ್ಯೆ 50 ಪ್ರತಿಶತಕ್ಕೆ ಏರಿಕೆಯಾದರೆ, ಮನೆ ಬಾಡಿಗೆ ಭತ್ಯೆ ಶೇ 3 ರಷ್ಟು ಹೆಚ್ಚಳದೊಂದಿಗೆ 30, 27, 21 ಪ್ರತಿಶತಕ್ಕೆ ಏರಿಕೆಯಾಗಲಿದೆ. ಒಟ್ಟಾರೆಯಾಗಿ ಹೇಳುವುದಾದರೆ, ಮುಂಬರುವ ಕೆಲ ದಿನಗಳಲ್ಲಿ ಸರಿಕಾರಿ ನೌಕರರಿಗೆ ಟ್ರಿಪಲ್ ಧಮಾಕ ಕಾದಿದೆ ಎಂದರೆ ಅತಿಶಯೋಕ್ತಿಯಲ್ಲ .

ಇದನ್ನೂ ಓದಿ-Union Budget 2024: ಈ ಬಾರಿಯ ಬಜೆಟ್ ನಲ್ಲಿ ಮನೆ ಖರೀದಿಸುವವರ ಮೇಲಿನ ತೆರಿಗೆ ಭಾರ ಕಡಿಮೆಯಾಗಲಿದೆಯೇ?

ಕೇಂದ್ರ ನೌಕರರಿಗೆ ಈ 3 ಉಡುಗೊರೆಗಳು ಸಿಗಲಿವೆ
ತುಟ್ಟಿ ಭತ್ಯೆ ಹೆಚ್ಚಳ, ಪ್ರಯಾಣ ಭತ್ಯೆ ಹೆಚ್ಚಳ ಮತ್ತು ಕೇಂದ್ರ ಉದ್ಯೋಗಿಗಳಿಗೆ ಎಚ್‌ಆರ್‌ಎ ಪರಿಷ್ಕರಣೆ, ಈ ಮೂರನ್ನೂ ಮುಂದಿನ ವರ್ಷ ಮಾರ್ಚ್‌ ವೇಳೆಗೆ ನಿರೀಕ್ಷಿಸಲಾಗಿದೆ. ಸಾಮಾನ್ಯವಾಗಿ, ಸರ್ಕಾರವು ಮಾರ್ಚ್‌ನಲ್ಲಿ ಜನವರಿಯಿಂದ ಅನ್ವಯವಾಗುವ ತುಟ್ಟಿಭತ್ಯೆಯನ್ನು ಘೋಷಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಎಷ್ಟು ತುಟ್ಟಿಭತ್ಯೆ ನೀಡಲಾಗುವುದು ಎಂಬುದನ್ನು ಮಾರ್ಚ್ 2024 ರಲ್ಲಿ ಮಾತ್ರ ನಿರ್ಧರಿಸಲಾಗುತ್ತದೆ. ಡಿಎ 50 ಪ್ರತಿಶತ ದಾಟಿದರೆ ಎಚ್‌ಆರ್‌ಎಯಲ್ಲಿ ಶೇಕಡಾ 3 ರಷ್ಟು ಪರಿಷ್ಕರಣೆ ಇರುತ್ತದೆ. ಇದೇ ವೇಳೆ  ಗ್ರೇಡ್ ಪ್ರಕಾರ ಪ್ರಯಾಣ ಭತ್ಯೆಯಲ್ಲಿಯೂ ಶೇ.3 ರಷ್ಟು ಹೆಚ್ಚಳವಾಗಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News