Budget 2023: ಈ ಮೂರು ಮಹತ್ವದ ಘೋಷಣೆಗಳ ಬಳಿಕ ಸರ್ಕಾರಿ ನೌಕರರ ವೇತನದಲ್ಲಿ ಭಾರಿ ಹೆಚ್ಚಳ!

7th Pay Commission: ನೌಕರರು ಡಿಎ ಹೆಚ್ಚಳಕ್ಕೆ ಆಗ್ರಹಿಸುತ್ತಿದ್ದಾರೆ. ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ಸರ್ಕಾರವು ಪ್ರತಿ ವರ್ಷ ಎರಡು ಬಾರಿ ಹೆಚ್ಚಿಸುತ್ತದೆ. ಈ ಹೆಚ್ಚಳವನ್ನು ಪ್ರತಿ ವರ್ಷ ಜನವರಿ ಮತ್ತು ಜುಲೈ ತಿಂಗಳಲ್ಲಿ ಮಾಡಲಾಗುತ್ತದೆ. ಇದೇ ವೇಳೆ ಕೇಂದ್ರ ನೌಕರರು ಈ ವರ್ಷ ಡಿಎ ಹೆಚ್ಚಳದ ಘೋಷಣೆ ಬಜೆಟ್ ನಲ್ಲಿ ಮೊಳಗಬೇಕು ಎಂಬುದನ್ನು ನಿರೀಕ್ಷಿಸುತ್ತಿದ್ದಾರೆ, ಇದರಿಂದ ಅವರ ವೇತನದಲ್ಲಿ ಭಾರಿ ಏರಿಕೆಯಾಗಲಿದೆ.  

Written by - Nitin Tabib | Last Updated : Jan 28, 2023, 03:57 PM IST
  • ಕೊರೊನಾದಿಂದಾಗಿ ಕೇಂದ್ರ ನೌಕರರ ಡಿಎ ಪಾವತಿಯನ್ನು ಸರ್ಕಾರ ಸ್ಥಗಿತಗೊಳಿಸಿದೆ.
  • ಕೊರೊನಾ ಅವಧಿಯಲ್ಲಿ ಕೇಂದ್ರ ಸರ್ಕಾರ ನೌಕರರ 18 ತಿಂಗಳ ಡಿಎಗೆ ಬ್ರೇಕ್ ಹಾಕಿತ್ತು.
  • ಈ ಹಿನ್ನೆಲೆಯಲ್ಲಿ ಇದೀಗ ಪೋಸ್ಟ್ ಕೊವಿಡ್ ನಲ್ಲಿ ಸರ್ಕಾರ 18 ತಿಂಗಳ ಡಿಎ ಪಾವತಿಸಬೇಕಾಗಿದೆ.
Budget 2023: ಈ ಮೂರು ಮಹತ್ವದ ಘೋಷಣೆಗಳ ಬಳಿಕ ಸರ್ಕಾರಿ ನೌಕರರ ವೇತನದಲ್ಲಿ ಭಾರಿ ಹೆಚ್ಚಳ! title=
ಬಜೆಟ್ 2023

7th Pay Commission Update: ವರ್ಷ 2023ನೇ ಸಾಲಿನ ಆಯವ್ಯಯ ಮಂಡನೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ.  ಈ ಬಾರಿಯ ಬಜೆಟ್‌ನಲ್ಲಿ ಸರ್ಕಾರದಿಂದ ಹಲವು ಘೋಷಣೆಗಳು ಹೊರಬೀಳುವ ಸಾಧ್ಯತೆ ಇದೆ. ಇದೇ ವೇಳೆ, ಈ ಬಜೆಟ್‌ನಲ್ಲಿ ಸರ್ಕಾರ ಅನೇಕ ಪರಿಹಾರ ಘೋಷಣೆಗಳನ್ನು ಸಹ ಮಾಡಬಹುದೆಂಬ ಭರವಸೆಯಲ್ಲಿ ಜನರಿದ್ದಾರೆ. ಇದರ ಜೊತೆಗೆ ಜನರು 7 ನೇ ವೇತನ ಆಯೋಗದ ಬಗ್ಗೆ ಹೆಚ್ಚಿನ ನಿರೀಕ್ಷೆಯನ್ನು ಹೊಂದಿದ್ದಾರೆ. ಡಿಎ ಹೆಚ್ಚಳ, ಫಿಟ್‌ಮೆಂಟ್ ಫ್ಯಾಕ್ಟರ್ ಸುಧಾರಣೆ ಹಾಗೂ ಬಾಕಿ ಇರುವ ಡಿಎ ಪಾವತಿಯನ್ನು ಬಜೆಟ್‌ನಲ್ಲಿ ಪ್ರಕಟಿಸಬೇಕು ಎಂಬುದು ಸರ್ಕಾರಿ ನೌಕರರ ಆಗ್ರಹವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮತ್ತು ಈ ಘೋಷಣೆಗಳನ್ನು ಸರ್ಕಾರ ಬಜೆಟ್ ನಲ್ಲಿ ಮೊಳಗಿಸಿದರೆ ಸರ್ಕಾರಿ ನೌಕರರ ವೇತನದಲ್ಲಿ ಭಾರಿ ಹೆಚ್ಚಳ ಸಂಭವಿಸಲಿದೆ.

ಡಿಎ ಹೆಚ್ಚಳ
ನೌಕರರು ಡಿಎ ಹೆಚ್ಚಳಕ್ಕೆ ಆಗ್ರಹಿಸುತ್ತಿದ್ದಾರೆ. ಕೇಂದ್ರ ನೌಕರರ ಡಿಎಯನ್ನು ಸರ್ಕಾರವು ಪ್ರತಿ ವರ್ಷ ಎರಡು ಬಾರಿ ಹೆಚ್ಚಿಸುತ್ತದೆ. ಈ ಹೆಚ್ಚಳವನ್ನು ಪ್ರತಿ ವರ್ಷ ಜನವರಿ ಮತ್ತು ಜುಲೈ ತಿಂಗಳಲ್ಲಿ ಮಾಡಲಾಗುತ್ತದೆ. ಇದೇ ವೇಳೆ ಕೇಂದ್ರ ನೌಕರರು ಈ ವರ್ಷ ಡಿಎ ಹೆಚ್ಚಳವನ್ನು ಬಜೆಟ್‌ನ ಜೊತೆಗೆ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ, ಇದರಿಂದ ಅವರ ವೇತನದಲ್ಲಿ ಭಾರಿ ಪ್ರಮಾಣದ ಹೆಚ್ಚಳ ಉಂಟಾಗುವ ಸಾಧ್ಯತೆ ಇದೆ.

ಇದನ್ನೂ ಓದಿ-Budget 2023: ಪಿಎಂ ಆವಾಸ್ ಯೋಜನೆಯ ಫಲಾನುಭವಿಗಳಿಗೆ ಸಿಗುತ್ತಾ ಈ ಸಂತಸದ ಸುದ್ದಿ!

ಫಿಟ್ಮೆಂಟ್ ಫ್ಯಾಕ್ಟರ್

ಫಿಟ್‌ಮೆಂಟ್ ಫ್ಯಾಕ್ಟರ್ ಹೆಚ್ಚಿಸಬೇಕು ಎಂಬುದು ಸರ್ಕಾರಿ ನೌಕರರ ಬಹುದಿನಗಳ ಆಗ್ರಹವಾಗಿದೆ. ಒಂದು ವೇಳೆ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ಫಿಟ್ಮೆಂಟ್ ಫ್ಯಾಕ್ಟರ್ ಹೆಚ್ಚಿಸಿದ್ದೆ ಆದಲ್ಲಿ,  ನೌಕರರ ಕನಿಷ್ಠ ವೇತನವು ಹೆಚ್ಚಾಗಲಿದೆ.

ಇದನ್ನೂ ಓದಿ-Gratuity-Pension Rule: ನಿಯಮಗಳಲ್ಲಿ ಮಹತ್ವದ ಬದಲಾವಣೆ ಮಾಡಿದೆ ಸರ್ಕಾರ!

ಬಾಕಿ ಇರುವ ಡಿಎ ಪಾವತಿ
ಕೊರೊನಾದಿಂದಾಗಿ ಕೇಂದ್ರ ನೌಕರರ ಡಿಎ ಪಾವತಿಯನ್ನು ಸರ್ಕಾರ ಸ್ಥಗಿತಗೊಳಿಸಿದೆ. ಕೊರೊನಾ ಅವಧಿಯಲ್ಲಿ ಕೇಂದ್ರ ಸರ್ಕಾರ ನೌಕರರ 18 ತಿಂಗಳ ಡಿಎಗೆ ಬ್ರೇಕ್ ಹಾಕಿತ್ತು.  ಈ ಹಿನ್ನೆಲೆಯಲ್ಲಿ ಇದೀಗ ಪೋಸ್ಟ್ ಕೊವಿಡ್ ನಲ್ಲಿ ಸರ್ಕಾರ 18 ತಿಂಗಳ ಡಿಎ ಪಾವತಿಸಬೇಕಾಗಿದೆ. ಈ ಬಾರಿಯ ಬಜೆಟ್ ನಲ್ಲಿ ಈ ಕುರಿತು ಸರ್ಕಾರ ಘೋಷಿಸಬೇಕು ಎಂಬುದು ನೌಕರರ ಬೇಡಿಕೆಯಾಗಿದೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News