TVS New Bike Launch: ಸೈಲೆಂಟ್ ಆಗಿ ಮಾರುಕಟ್ಟೆಗೆ ಎರಡು ಬೈಕ್ ಬಿಡುಗಡೆ ಮಾಡಿದ ಟಿವಿಎಸ್

TVS New Bike Launch: ಟಿವಿಎಸ್ ಮೋಟಾರ್ ಕಂಪನಿಯು ಇಂದು ತನ್ನ ಅಪ್ಡೇಟೆಡ್ ಅಪಾಚೆ 160 ಮತ್ತು ಅಪಾಚೆ 180 ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಎರಡೂ ಬೈಕುಗಳನ್ನು ಐದು ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ - ಪರ್ಲ್ ವೈಟ್ (ಹೊಸ), ಟಿ ಗ್ರೇ, ಗ್ಲೋಸ್ ಬ್ಲ್ಯಾಕ್ (ಹೊಸ), ರೇಸಿಂಗ್ ರೆಡ್ ಮತ್ತು ಮ್ಯಾಟ್ ಬ್ಲೂ.  

Written by - Nitin Tabib | Last Updated : Sep 8, 2022, 05:30 PM IST
  • ಟಿವಿಎಸ್ ಮೋಟಾರ್ ಕಂಪನಿಯು ಇಂದು ತನ್ನ ಅಪ್ಡೇಟೆಡ್ ಆವೃತ್ತಿಗಳಾದ ಅಪಾಚೆ 160 ಮತ್ತು ಅಪಾಚೆ 180 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
  • ಎರಡೂ ಬೈಕುಗಳನ್ನು ಐದು ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ - ಪರ್ಲ್ ವೈಟ್ (ಹೊಸ), ಟಿ ಗ್ರೇ, ಗ್ಲೋಸ್ ಬ್ಲ್ಯಾಕ್ (ಹೊಸ), ರೇಸಿಂಗ್ ರೆಡ್ ಮತ್ತು ಮ್ಯಾಟ್ ಬ್ಲೂ.
TVS New Bike Launch: ಸೈಲೆಂಟ್ ಆಗಿ ಮಾರುಕಟ್ಟೆಗೆ ಎರಡು ಬೈಕ್ ಬಿಡುಗಡೆ ಮಾಡಿದ ಟಿವಿಎಸ್ title=
TVS New Bikes Launch

TVS Apache 160 & Apache 180: ಟಿವಿಎಸ್ ಮೋಟಾರ್ ಕಂಪನಿಯು ಇಂದು ತನ್ನ ಅಪ್ಡೇಟೆಡ್ ಆವೃತ್ತಿಗಳಾದ ಅಪಾಚೆ 160 ಮತ್ತು ಅಪಾಚೆ 180 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಎರಡೂ ಬೈಕುಗಳನ್ನು ಐದು ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ - ಪರ್ಲ್ ವೈಟ್ (ಹೊಸ), ಟಿ ಗ್ರೇ, ಗ್ಲೋಸ್ ಬ್ಲ್ಯಾಕ್ (ಹೊಸ), ರೇಸಿಂಗ್ ರೆಡ್ ಮತ್ತು ಮ್ಯಾಟ್ ಬ್ಲೂ. ಹೊಸ 2022 TVS Apache 160 ಮಾದರಿಯು ಮೂರು ರೂಪಾಂತರಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ- ಸ್ಮಾರ್ಟ್‌ಎಕ್ಸ್‌ನೆಕ್ಟ್‌ನೊಂದಿಗೆ ಡಿಸ್ಕ್, ರೈಡ್ ಮೋಡ್‌ಗಳೊಂದಿಗೆ ಡಿಸ್ಕ್ ಮತ್ತು ರೈಡ್ ಮೋಡ್‌ಗಳೊಂದಿಗೆ ಡ್ರಮ್ ಬ್ರೇಕ್, ಇವುಗಳ ಬೆಲೆ ಕ್ರಮವಾಗಿ ರೂ 1,24,590, ರೂ 1,21,290 ಮತ್ತು ರೂ 1,17,790 ಇರಿಸಲಾಗಿದೆ. ಈ ಬೆಲೆಗಳು ಎಕ್ಸ್ ಶೋರೂಮ್ ಆಗಿದೆ. ಇದೇ ವೇಳೆ, ಹೊಸ 2022 TVS Apache 180 ಮಾದರಿಯು ರೈಡ್ ಮೋಡ್‌ಗಳು ಮತ್ತು SmartXonnect ಒಂದೇ ಡಿಸ್ಕ್ ರೂಪಾಂತರದಲ್ಲಿ ಲಭ್ಯವಿರಲಿದೆ, ಇದರ ಬೆಲೆ 1,30,590 ರೂ. ಇರಿಸಲಾಗಿದೆ

ಎಲ್ಲಾ ರೂಪಾಂತರಗಳ ಬೆಲೆಗಳು ಇಂತಿವೆ
>> 2022 TVS Apache 160 Disc BT ರೂಪಾಂತರ- ರೂ 1,24,590
>> 2022 ಟಿವಿಎಸ್ ಅಪಾಚೆ 160 ಡಿಸ್ಕ್ ರೂಪಾಂತರ- ರೂ 1,21,290
>> 2022 TVS ಅಪಾಚೆ 160 ಡ್ರಮ್ ರೂಪಾಂತರ- ರೂ 1,17,790
>> 2022 TVS Apache 180 Disc BT ರೂಪಾಂತರ- ರೂ 1,30,590

ಇದನ್ನೂ ಓದಿ-Car Offers: ಮಾರುತಿ ಸುಜುಕಿ ಕಂಪನಿಯ ಈ ಅಗ್ಗದ ಕಾರುಗಳ ಮೇಲೆ ಸಿಗ್ತಿದೆ ಬಂಪರ್ ಡಿಸ್ಕೌಂಟ್, ಯಾವ ಕಾರಿನ ಮೇಲೆ ಎಷ್ಟು?

ಎರಡೂ ಮೋಟಾರ್‌ಸೈಕಲ್‌ಗಳು ಮೊದಲಿಗಿಂತ ತೂಕದಲ್ಲಿ ಹಗುರ ಬೈಕ್ ಗಳಾಗಿವೆ. ಹೊಸ ಅಪಾಚೆ RTR 160 ತೂಕವು 2 ಕೆಜಿಯಷ್ಟು ಕಡಿಮೆಯಾಗಿದೆ ಮತ್ತು ಅಪ್ಡೇಟೆಡ್ Apache RTR 180 ತೂಕವು 1 ಕೆಜಿಯಷ್ಟು ಕಡಿಮೆಯಾಗಿದೆ. ಹೊಸ 2022 ಟಿವಿಎಸ್ ಅಪಾಚೆ 160 ಮತ್ತು ಅಪಾಚೆ 180 ಟರ್ನ್-ಬೈ-ಟರ್ನ್ ನ್ಯಾವಿಗೇಷನ್‌ಗಾಗಿ ಬ್ಲೂಟೂತ್ ಸಂಪರ್ಕದೊಂದಿಗೆ ಟಿವಿಎಸ್‌ನ ಸ್ಮಾರ್ಟ್‌ಎಕ್ಸನೆಕ್ಟ್ ಸಿಸ್ಟಮ್ ಅನ್ನು ಹೊಂದಿವೆ ಎಂದು ಕಂಪನಿ ಹೇಳಿದೆ. ಬೈಕ್ ರೈನ್, ಅರ್ಬನ್ ಮತ್ತು ಸ್ಪೋರ್ಟ್ ಎಂಬ ಮೂರು ರೈಡಿಂಗ್ ಮೋಡ್‌ಗಳೊಂದಿಗೆ ಇವು ಬರಲಿವೆ.

ಇದನ್ನೂ ಓದಿ-EPFO Big Update: ನೌಕರರ ನಿವೃತ್ತಿ ವಯಸ್ಸಿನ ಕುರಿತು ಬಿಗ್ ಅಪ್ಡೇಟ್ ಪ್ರಕಟ! EPFO ಹೇಳಿದ್ದೇನು?

ವಿನ್ಯಾಸ ಬದಲಾವಣೆಗಳಿಗೆ ಸಂಬಂಧಿಸಿದಂತೆ, ಹೊಸ ಟಿವಿಎಸ್ ಅಪಾಚೆ 160 ಮತ್ತು ಅಪಾಚೆ 180 ಹೊಸ ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಹೊಸ ಸಿಗ್ನೇಚರ್ 3D ಅಂಶಗಳೊಂದಿಗೆ ಟೈಲ್‌ಲ್ಯಾಂಪ್‌ಗಳನ್ನು ಹೊಂದಿವೆ. ಎರಡೂ ಮಾದರಿಗಳು ಸೆಗ್ಮೆಂಟ್-ಮೊದಲ ಧ್ವನಿ ಸಹಾಯ ವ್ಯವಸ್ಥೆಯನ್ನು ಹೊಂದಿದೆ. ಆಲ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಬ್ಲೂಟೂತ್ ಸಂಪರ್ಕ ಮತ್ತು SmartXonect ತಂತ್ರಜ್ಞಾನದೊಂದಿಗೆ ಇವು ಲಭ್ಯವಿರಲಿವೆ. ಇವು ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಗೇರ್ ಪೊಸಿಷನ್ ಇಂಡಿಕೇಟರ್, ಗೇರ್ ಶಿಫ್ಟ್ ಅಸಿಸ್ಟ್, ರೇಸ್ ಟೆಲಿಮೆಟ್ರಿ, ಲ್ಯಾಪ್ ಟೈಮರ್ ಮೋಡ್, ಕ್ಲಸ್ಟರ್ ಸ್ಪೀಡ್ ಕಂಟ್ರೋಲ್ ಮತ್ತು ಕ್ರ್ಯಾಶ್ ಅಲರ್ಟ್ ಸಿಸ್ಟಮ್ ಅನ್ನು ಹೊಂದಿವೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News