Nitin Gadkari: ಕಾರ್, ಬೈಕ್ ಹಾಗೂ ಆಟೋ ಮಾಲೀಕರಿಗೆ ಎಚ್ಚರಿಕೆ ನೀಡಿದ ಗಡ್ಕರಿ ಹೇಳಿದ್ದೇನು?

Parking Rules: ತಪ್ಪಾದ ಜಾಗದಲ್ಲಿ ವಾಹನ ಪಾರ್ಕಿಂಗಗೆ 1000 ರೂ. ದಂಡ ವಿಧಿಸುವ ಕಾನೂನನ್ನು ಸರ್ಕಾರ ಜಾರಿಗೆ ಜಾರಿಗೆ ತರಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತೀನ್ ಗಡ್ಕರಿ ಘೋಷಣೆ ಮಾಡಿದ್ದಾರೆ. ಈ ಕಾನೂನಿನಲ್ಲಿ ತಪ್ಪಾದ ಜಾಗದಲ್ಲಿ ಪಾರ್ಕ್ ಆದ ವಾಹನದ ಫೋಟೋ ಕ್ಲಿಕ್ಕಿಸಿ ಕಳುಹಿಸುವವರಿಗೆ 500 ರೂ.ಬಹುಮಾನ ನೀಡುವ ವ್ಯವಸ್ಥೆಯೂ ಇರಲಿದೆ ಎಂದು ಗಡ್ಕರಿ ತಿಳಿಸಿದ್ದಾರೆ.   

Written by - Nitin Tabib | Last Updated : Jul 20, 2022, 12:28 PM IST
  • ತನ್ನ ನಿರ್ಭಿಡ ಕಾರ್ಯಶೈಲಿಗೆ ಹೆಸರುವಾಸಿಯಾಗಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತೀನ್ ಗಡ್ಕರಿ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
  • ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿರುವ ಗಡ್ಕರಿ ಮಹತ್ವದ ಘೋಷಣೆಯೊಂದನ್ನು ಮೊಳಗಿಸಿದ್ದು,
  • ಇದು ಕಾರು, ಬೈಕ್ ಹಾಗೂ ಇತರೆ ವಾಹನ ಚಾಲಕರನ್ನು ಇದೀಗ ಬೆಚ್ಚಿಬೀಳಿಸಿದೆ.
Nitin Gadkari: ಕಾರ್, ಬೈಕ್ ಹಾಗೂ ಆಟೋ ಮಾಲೀಕರಿಗೆ ಎಚ್ಚರಿಕೆ ನೀಡಿದ ಗಡ್ಕರಿ ಹೇಳಿದ್ದೇನು? title=
Govt Rules on Wrongly Parked Vehicle

Govt Rules on Wrongly Parked Vehicle: ತನ್ನ ನಿರ್ಭಿಡ ಕಾರ್ಯಶೈಲಿಗೆ ಹೆಸರುವಾಸಿಯಾಗಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತೀನ್ ಗಡ್ಕರಿ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿರುವ ಗಡ್ಕರಿ ಮಹತ್ವದ ಘೋಷಣೆಯೊಂದನ್ನು ಮೊಳಗಿಸಿದ್ದು, ಇದು ಕಾರು, ಬೈಕ್ ಹಾಗೂ ಇತರೆ ವಾಹನ ಚಾಲಕರನ್ನು ಇದೀಗ ಬೆಚ್ಚಿಬೀಳಿಸಿದೆ. ಹೌದು, ಯಾವುದೇ ಓರ್ವ ವ್ಯಕ್ತಿ ರಸ್ತೆಗಳಲ್ಲಿ ತಪ್ಪಾಗಿ ಪಾರ್ಕ್ ಮಾಡಲಾಗಿರುವ ವಾಹನಗಳ ಫೋಟೋ ಕ್ಲಿಕ್ಕಿಸಿ ಕಳುಹಿಸಿದರೆ ಅವನಿಗೆ 500 ರೂ.ಬಹುಮಾನ ನೀಡಲಾಗುವುದು ಮತ್ತು ಈ ಕುರಿತಾದ ಕಾನೂನನ್ನು ಸರ್ಕಾರ ಶೀಘ್ರದಲ್ಲಿಯೇ ಜಾರಿಗೆ ತರಲಿದೆ ಎಂದು ಹೇಳಿದ್ದಾರೆ. 

ಆದರೆ, ಗಡ್ಕರಿ ಅವರ ಈ ಹೇಳಿಕೆಯಲ್ಲಿ ಒಂದು ಟ್ವಿಸ್ಟ್ ಕೂಡ ಅಡಗಿದೆ. ಅದೆನೆಂದರೆ, ಇಲ್ಲಿ ತಪ್ಪಾಗಿ ವಾಹನವನ್ನು ಪಾರ್ಕ್ ಮಾಡಿದ ವಾಹನ ಮಾಲೀಕರಿಗೆ ರೂ.1000 ದಂಡ ವಿಧಿಸಲಾಗುವುದು ಎಂದು ಗಡ್ಕರಿ ಹೇಳಿದ್ದಾರೆ. ಗಡ್ಕರಿ ಅವರ ಈ ಮಾತು ಕೇಳಿ ಇದೀಗ ವಾಹನ ಚಾಲಕರು ಹಾಗೂ ಮಾಲೀಕರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಕೆಲವರಿಗೆ ಸರ್ಕಾರದ ಈ ನಿಯಮ ಗಳಿಕೆಯ ಒಂದು ಮಾರ್ಗವಾದರೆ, ವಾಹನ ನಿಲುಗಡೆ ಮಾಡುವವರಿಗೆ ಮಾತ್ರ 1000 ರೂ.ದಂಡ ಬೀಳಲಿದೆ. ಕೇಂದ್ರ ಸರ್ಕಾರ ಒಂದೊಮ್ಮೆ ಇಂತಹ ಕಾನೂನು ಜಾರಿಗೆ ತಂದರೆ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಹಾಗೂ ಅಪಘಾತಗಳಿಗೆ ಕಡಿವಾಣ ಬೀಳಲಿದೆ.

ಇದನ್ನೂ ಓದಿ-Shocking! ಗುರುಗ್ರಾಮದ DSP ಹತ್ಯೆ ಮಾದರಿಯಲ್ಲೇ ಲೇಡಿ ಪಿಎಸ್‌ಐ ಕೊಲೆ..!

ಸರ್ಕಾರದ ವತಿಯಿಂದ ರೂ.500 ಬಹುಮಾನ
ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು, ಅಕ್ರಮ ಪಾರ್ಕಿಂಗ್ ಪ್ರವೃತ್ತಿಯನ್ನು ತಡೆಗಟ್ಟಲು ಇಂತಹ ಕಾನೂನನ್ನು ಪರಿಗಣಿಸಲಾಗುತ್ತಿದೆ ಎಂದಿದ್ದಾರೆ. 'ರಸ್ತೆಯಲ್ಲಿ ವಾಹನ ನಿಲ್ಲಿಸಿದರೆ 1000 ರೂ.ದಂಡವನ್ನು ವಿಧಿಸುವ ಕಾನೂನನ್ನು ತರಲಿದ್ದೇನೆ ಮತ್ತು ಇದರ ಜೊತೆಗೆ ತಪ್ಪಾಗಿ ನಿಲ್ಲಿಸಿದ ವಾಹನದ ಫೋಟೋ ಕಳುಹಿಸುವವರಿಗೆ ರೂ.500 ಬಹುಮಾನ' ನೀಡುವೆ ಎಂದು ಗಡ್ಕರಿ ಹೇಳಿದ್ದಾರೆ. 

ಇದನ್ನೂ ಓದಿ-Viral Video: ಕಟುಕನಿಗೆ ಮಾರುತ್ತಿದ್ದಂತೆ ಅಳುತ್ತಾ ಮಾಲೀಕನನ್ನು ತಬ್ಬಿಕೊಂಡ ಮೇಕೆ

ವಾಹನಗಳನ್ನು ನಿಲ್ಲಿಸಲು ರಸ್ತೆ ನಿರ್ಮಿಸಲಾಗಿದೆಯೇ?: ಗಡ್ಕರಿ
ಜನರು ಸಾಮಾನ್ಯವಾಗಿ ಮನೆ ಕಟ್ಟಿಕೊಳ್ಳುತ್ತಾರೆ. ಆದರೆ, ವಿಪರ್ಯಾಸ ಎಂದರೆ ತಮ್ಮ ಸ್ವಂತ ವಾಹನಕ್ಕೆ ಪಾರ್ಕಿಂಗ್ ಜಾಗ ಮೀಸಲಿಡುವುದಿಲ್ಲ ಮತ್ತು ಬದಲಾಗಿ ಅವುಗಳನ್ನು ರಸ್ತೆಗಳಲ್ಲಿಯೇ ನಿಲ್ಲಿಸುತ್ತಾರೆ ಎಂದು ಗಡ್ಕರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, 'ನಾಗ್ಪುರ್ ನಲ್ಲಿ ನನ್ನ ಮನೆಯಲ್ಲಿ ಕೆಲಸ ಮಾಡುವವರನ್ನು ಹೊರತುಪಡಿಸಿ ನಮ್ಮ ನಾಲ್ಕು ಸದಸ್ಯರ ಕುಟುಂಬದಲ್ಲಿ ಒಟ್ಟು ಆರು ವಾಹನಗಳಿವೆ.ಹಾಗೆ ನೋಡಲು ಹೋದರೆ ದೆಹಲಿಯ ಜನರು ತುಂಬಾ ಅದೃಷ್ಟವಂತರಾಗಿದ್ದಾರೆ. ಅವರ ವಾಹನ ನಿಲುಗಡೆಗೆ ನಾವು ರಸ್ತೆಯಲ್ಲಿಯೇ ಜಾಗ ಕಲ್ಪಿಸಿದ್ದೇವೆ' ಎಂದಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News