T20 World Cup 2024: ಭಾರತ ಚಾಂಪಿಯನ್‌ಶಿಪ್‌ ಗೆಲ್ಲುತ್ತಿದ್ದಂತೆ ಭಾವುಕರಾದ ಧೋನಿ..? ಇದು ನನಗೆ ಬಹು ದೊಡ್ಡ ಉಡುಗೊರೆ ಎಂದ ಮಿಸ್ಟರ್‌ ಕೂಲ್

MS Dhoni: ಟಿ20 ವಿಶ್ವಕಪ್ 2024ರಲ್ಲಿ ಭಾರತ ವಿಶ್ವ ಚಾಂಪಿಯನ್ ಆಗಿದೆ. 13 ವರ್ಷಗಳ ಕಾಯುವಿಕೆಗೆ ತಕ್ಕ ಪ್ರತಿಪಲ ಸಿಕ್ಕಿದೆ. ಬಾರ್ಬಡೋಸ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್‌ನಲ್ಲಿ ಭಾರತ ಏಳು ರನ್‌ಗಳ ರೋಚಕ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು.  

Written by - Zee Kannada News Desk | Last Updated : Jun 30, 2024, 08:14 AM IST
  • ಟಿ20 ವಿಶ್ವಕಪ್ 2024ರಲ್ಲಿ ಭಾರತ ವಿಶ್ವ ಚಾಂಪಿಯನ್ ಆಗಿದೆ. 13 ವರ್ಷಗಳ ಕಾಯುವಿಕೆಗೆ ತಕ್ಕ ಪ್ರತಿಪಲ ಸಿಕ್ಕಿದೆ.
  • ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗ ನಷ್ಟಕ್ಕೆ 176 ರನ್ ಗಳಿಸಿತು.
  • 2007ರ ನಂತರ ಭಾರತ ಮತ್ತೊಮ್ಮೆ ಟಿ20 ವಿಶ್ವಕಪ್ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಯಿತು.
T20 World Cup 2024: ಭಾರತ ಚಾಂಪಿಯನ್‌ಶಿಪ್‌ ಗೆಲ್ಲುತ್ತಿದ್ದಂತೆ ಭಾವುಕರಾದ ಧೋನಿ..? ಇದು ನನಗೆ ಬಹು ದೊಡ್ಡ ಉಡುಗೊರೆ ಎಂದ ಮಿಸ್ಟರ್‌ ಕೂಲ್ title=

MS Dhoni: ಟಿ20 ವಿಶ್ವಕಪ್ 2024ರಲ್ಲಿ ಭಾರತ ವಿಶ್ವ ಚಾಂಪಿಯನ್ ಆಗಿದೆ. 13 ವರ್ಷಗಳ ಕಾಯುವಿಕೆಗೆ ತಕ್ಕ ಪ್ರತಿಪಲ ಸಿಕ್ಕಿದೆ. ಬಾರ್ಬಡೋಸ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್‌ನಲ್ಲಿ ಭಾರತ ಏಳು ರನ್‌ಗಳ ರೋಚಕ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು.

ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗ ನಷ್ಟಕ್ಕೆ 176 ರನ್ ಗಳಿಸಿತು. 177 ರನ್‌ಗಳ ಟಾರ್ಗೆಟ್‌ ಬೆನ್ನತ್ತಿದ ಎದುರಾಳಿ ತಂಡ  20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 169 ರನ್ ಗಳಿಸಿ ಭಾರತದ ಮುಂದೆ ಮಂಡಿಯೂರಿತು. 

ಬುಮ್ರಾ, ಹಾರ್ದಿಕ್ ಮತ್ತು ಅರ್ಷದೀಪ್ ಅದ್ಭುತ ಬೌಲಿಂಗ್ ಮಾಡಿದ್ದು ಭಾರತ ತಂಡ ಪಂದ್ಯ ಗೆಲ್ಲವಲ್ಲಿ ಈ ಮೂವರು ಬೌಲರ್‌ಗಳು ಮುಖ್ಯ ಪಾತ್ರ ವಹಿಸಿದ್ದರು. ಎದುರಾಳಿಯನ್ನು ಸೋಲಿಸಿ ಟೀಂ ಇಂಡಿಯಾ ಗೆಲುವಿನ ನಗೆ ಬೀರಿತು. 2007ರ ನಂತರ ಭಾರತ ಮತ್ತೊಮ್ಮೆ ಟಿ20 ವಿಶ್ವಕಪ್ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಯಿತು. ಈ ಹಿನ್ನೆಲೆಯಲ್ಲಿ ದೇಶಕ್ಕೆ ಮೊದಲ ಟಿ20 ಕಪ್ ನೀಡಿದ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ರೋಚಕ ಹೋರಾಟದಲ್ಲಿ ಶಾಂತವಾಗಿದ್ದ ಟೀಂ ಇಂಡಿಯಾವನ್ನು ಧೋನಿ ಶ್ಲಾಘಿಸಿದ್ದಾರೆ.

ಇದನ್ನೂ ಓದಿ: T20 World Cup 2024: ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ರೋಹಿತ್‌ ಶರ್ಮಾ ವಿದಾಯ..!

ಪಂದ್ಯ ನೊಡುತ್ತಿದ್ದಂತೆ ನನ್ನ ಹೃದಯ ಬಡಿತ ಹೆಚ್ಚಾಯಿತು, ಶಾಂತವಾಗಿದ್ದು ಏನು ಮಾಡಲು ಬಯಸುತ್ತೀರೋ ಅದನ್ನು ಆತ್ಮವಿಶ್ವಾಸದಿಂದ ಮಾಡಿ. ವಿಶ್ವಕಪ್ ಆಯೋಜಿಸಿದ್ದಕ್ಕಾಗಿ ಎಲ್ಲಾ ಭಾರತೀಯರ ಪರವಾಗಿ ಧನ್ಯವಾದಗಳು. ಅಭಿನಂದನೆಗಳು. ಹೇ.. ನನಗೆ ಬೆಲೆಕಟ್ಟಲಾಗದ ಹುಟ್ಟುಹಬ್ಬದ ಉಡುಗೊರೆ ನೀಡಿದ್ದಕ್ಕೆ ಧನ್ಯವಾದಗಳು'' ಎಂದು ಧೋನಿ ಹೇಳಿದ್ದಾರೆ. ಜುಲೈ 7 ಧೋನಿ ಹುಟ್ಟುಹಬ್ಬ. ತಮ್ಮ ಸ್ಪೆಷಲ್ ದಿನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವ ಕಾರಣ ಹುಟ್ಟುಹಬ್ಬದ ಉಡುಗೊರೆ ನೀಡಿದ ಟೀಂ ಇಂಡಿಯಾಗೆ ಧೋನಿ ಧನ್ಯವಾದ ಹೇಳಿದ್ದಾರೆ.

 
 
 
 

 
 
 
 
 
 
 
 
 
 
 

A post shared by M S Dhoni (@mahi7781)

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News