Weekly Horoscope: ಐದು ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತರಲಿದೆ ಈ ವಾರ

Weekly Horoscope July 01st to July 07th: ಜುಲೈ 01ರಿಂದ ಜುಲೈ 07ರವರೆಗೆ ಈ ವಾರದ ಭವಿಷ್ಯ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Jul 1, 2024, 07:19 AM IST
  • ಅಜಾಗರೂಕತೆಯನ್ನು ತಪ್ಪಿಸಬೇಕು.
  • ಸಿಂಹ ರಾಶಿಯವರಿಗೆ ಈ ವಾರ ಮಿಶ್ರ ಫಲಿತಾಂಶಗಳಿಂದ ಕೂಡಿದ ವಾರ.
  • ಧನು ರಾಶಿಯವರು ವಾರದ ಆರಂಭದಲ್ಲಿ ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿಯ ಹೊಸ ಹೊಸ ಅವಕಾಶಗಳನ್ನು ಪಡೆಯಬಹುದು.
Weekly Horoscope: ಐದು ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತರಲಿದೆ ಈ ವಾರ  title=

Varabhavishya in Kannada From July 01st to July 07th: ಜುಲೈ ತಿಂಗಳ ಮೊದಲ ವಾರ ಕೆಲವು ರಾಶಿಯವರಿಗೆ ಅದೃಷ್ಟದ ವಾರ ಎಂದು ಸಾಬೀತುಪಡಿಸಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ವಾರ ದ್ವಾದಶ ರಾಶಿಗಳಲ್ಲಿ ಐದು ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ ಎಂದು ಹೇಳಲಾಗುತ್ತಿದೆ. ಈ ಸಾಪ್ತಾಹಿಕ ಯಾವ ರಾಶಿಯವರಿಗೆ ಹೇಗಿದೆ ಎಂದು ತಿಳಿಯೋಣ... 

ಮೇಷ ರಾಶಿಯವರ ವಾರ ಭವಿಷ್ಯ (Aries Weekly Horoscope):  
ಜುಲೈ ತಿಂಗಳ ಮೊದಲ ವಾರ ಮೇಷ ರಾಶಿಯ ಜನರಿಗೆ ಅದೃಷ್ಟದ ವಾರ ಎಂತಲೇ ಹೇಳಬಹುದು. ಈ ವಾರ ನಿಮ್ಮ ಯೋಜಿತ ಕೆಲಸಗಳು ತ್ವರಿತವಾಗಿ ಪೂರ್ಣಗೊಳ್ಳುತ್ತವೆ. ಕೆಲಸದ ಸ್ಥಳದಲ್ಲಿ ಹೊಸ ಹೊಸ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವುದರಿಂದ ಉನ್ನತ ಹುದ್ದೆಯನ್ನು ಅಲಂಕರಿಸುವಿರಿ. ಹಿತೈಷಿಗಳ ಸಹಾಯದಿಂದ ಹೆಚ್ಚುವರಿ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ. ವಾರದ ಮಧ್ಯದಲ್ಲಿ, ನೀವು ಅನಿರೀಕ್ಷಿತವಾಗಿ ಹಣವನ್ನು ಸಾಲವಾಗಿ ಪಡೆಯಬೇಕಾಗಬಹುದು. ಆದಾಗ್ಯೂ, ವಾರಾಂತ್ಯದ ಹೊತ್ತಿಗೆ ನೀವು ಸಾಲವನ್ನು ಹಿಂದಿರುಗಿಸಬಹುದು. ವಿದೇಶದಲ್ಲಿ ಉನ್ನತ ಶಿಕ್ಷಣ ಅಥವಾ ವೃತ್ತಿ ಅಥವಾ ವ್ಯಾಪಾರಕ್ಕಾಗಿ ಶ್ರಮಿಸುತ್ತಿರುವವರು ಶುಭ ವಾರ್ತೆಯನ್ನು ನಿರೀಕ್ಷಿಸಬಹುದು. 

ವೃಷಭ ರಾಶಿಯವರ ವಾರ ಭವಿಷ್ಯ (Taurus Weekly Horoscope):  
ವೃಷಭ ರಾಶಿಯವರಿಗೆ ಈ ವಾರ ಅತ್ಯಂತ ಮಂಗಳಕರ ವಾರ ಎಂತಲೇ ಹೇಳಬಹುದು. ಈ ವಾರ ನೀವು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅದರಲ್ಲಿ ವಿಜಯ ನಿಮ್ಮದಾಗಲಿದೆ. ಈ ವಾರ ನಿಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ಧನಾತ್ಮಕ ಬದಲಾವಣೆಗಳನ್ನು ಕಾಣುವಿರಿ. ಬ್ಯುಸಿನೆಸ್ ನಲ್ಲಿ ನಿಮ್ಮ್ ವಿರೋಧಿಗಳು ಕೂಡ ನಿಮ್ಮನ್ನು ಹೊಗಳುವ ಸಾಧ್ಯತೆ ಇದೆ. ವಾರದ ಮಧ್ಯದಲ್ಲಿ ಹಠಾತ್ ದೂರ ಪ್ರಯಾಣ ಕೈಗೊಳ್ಳಬೇಕಾಗಬಹುದು.  ಪ್ರಯಾಣವು ಆಹ್ಲಾದಕರವಾಗಿರುತ್ತದೆ ಮತ್ತು ನಿರ್ದಿಷ್ಟ ಕೆಲಸದಲ್ಲಿ ಯಶಸ್ಸನ್ನು ಪಡೆಯುವಿರಿ. ಈ ವಾರ ನಿಮ್ಮ ಯೋಜನೆಯನ್ನು ನನಸಾಗಿಸಲು ನಿಮ್ಮ ಸ್ನೇಹಿತರು ತುಂಬಾ ಸಹಾಯಕವಾಗುತ್ತಾರೆ.

ಮಿಥುನ ರಾಶಿಯವರ ವಾರ ಭವಿಷ್ಯ (Gemini Weekly Horoscope):   
ಮಿಥುನ ರಾಶಿಯವರು ವಾರದ ಆರಂಭದಲ್ಲಿ ಶುಭ ಫಲಗಳನ್ನು ಪಡೆಯುವಿರಿ. ಉದ್ಯೋಗಸ್ಥರಿಗೆ ಉದ್ಯೋಗ ಸ್ಥಳದಲ್ಲಿ ಜವಾಬ್ದಾರಿಗಳು ಹೆಚ್ಚಾಗಲಿವೆ. ಹಣಕಾಸಿನ ದೃಷ್ಟಿಯಿಂದ ಮಂಗಳಕರ ವಾರ. ಹಿಂದಿನ ಹೂಡಿಕೆಗಳಿಂದ ಬಂಪರ್ ಧನ ಲಾಭವನ್ನು ಗಳಿಸುವಿರಿ. ವ್ಯಾಪಾರವನ್ನು ವಿಸ್ತರಿಸುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಶುಭ ವಾರ ಇದಾಗಿದೆ. ನ್ಯಾಯಾಲಯಕ್ಕೆ ಸಂಬಂಧಿಸಿದ ವಿಚಾರದಲ್ಲಿ  ತೀರ್ಪು ನಿಮ್ಮ ಪರವಾಗಿ ಬರಬಹುದು. ವಾರದ ಮಧ್ಯಭಾಗದಲ್ಲಿ ವೃತ್ತಿ-ವ್ಯವಹಾರಕ್ಕೆ ಸಂಬಂಧಿಸಿದಂತೆ ದೂರದ ಪ್ರಯಾಣ ಕೈಗೊಳ್ಳಬೇಕಾಗಬಹುದು. ಪ್ರಯಾಣವು ಆಹ್ಲಾದಕರವಾಗಿರುತ್ತದೆ ಅಷ್ಟೇ ಅಲ್ಲದೆ, ಲಾಭದಾಯಕವಾಗಿರುತ್ತದೆ. 

ಕರ್ಕಾಟಕ ರಾಶಿಯವರ ವಾರ ಭವಿಷ್ಯ (Cancer Weekly Horoscope): 
ಕರ್ಕಾಟಕ ರಾಶಿಯವರು ಈ ವಾರದ ಆರಂಭದಲ್ಲಿ ನಿಮ್ಮ ಕೆಲಸದಲ್ಲಿ ಯಾವುದೇ ರೀತಿಯ ಅಜಾಗರೂಕತೆಯನ್ನು ತಪ್ಪಿಸಬೇಕು. ನಿಮ್ಮ ಸೋಮಾರಿತನವೇ ನಿಮಗೆ ದೊಡ್ಡ ಸಮಸ್ಯೆ ಎಂಬುದನ್ನೂ ನೆನಪಿನಲ್ಲಿಡಿ. ಉದ್ಯೋಗಸ್ಥರು ನಿಮ್ಮ ಗುರಿಗಳನ್ನು ಪೂರ್ಣಗೊಳಿಸಲು ಹೆಚ್ಚಿನ ಶ್ರಮ ಬೇಕಾಗುತ್ತದೆ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿದ್ದರೆ, ಹಣದ ವ್ಯವಹಾರ ಮತ್ತು ಕಾಗದದ ಕೆಲಸ ಮಾಡುವಾಗ ಬಹಳ ಜಾಗರೂಕರಾಗಿರಿ. ವಾರದ ಮಧ್ಯಭಾಗವು ವ್ಯಾಪಾರಸ್ಥರಿಗೆ ಸವಾಲುಗಳನ್ನು ಹೆಚ್ಚಿಸಬಹುದು. ಕುಟುಂಬಸ್ಥರ ನಡುವೆ ಭಿನ್ನಾಭಿಪ್ರಾಯಗಳು ಮೂಡುವ ಸಾಧ್ಯತೆ ಇರುವುದರಿಂದ ನಿಮ್ಮ ಕೋಪವನ್ನು ನಿಯಂತ್ರಿಸಿ. 

ಇದನ್ನೂ ಓದಿ- July Grah Gochar: ಜುಲೈನಲ್ಲಿ ಪ್ರಮುಖ ಗ್ರಹಗಳ ಸಂಚಾರ, ಮೂರು ರಾಶಿಯವರಿಗೆ ಅದೃಷ್ಟ

ಸಿಂಹ ರಾಶಿಯವರ ವಾರ ಭವಿಷ್ಯ (Leo Weekly Horoscope):  
ಸಿಂಹ ರಾಶಿಯವರಿಗೆ ಈ ವಾರ ಮಿಶ್ರ ಫಲಿತಾಂಶಗಳಿಂದ ಕೂಡಿದ ವಾರ. ಯಾವುದೇ ಕೆಲಸಗಳನ್ನು ಮಾಡುವಾಗ ಅವಸರದ ನಿರ್ಧಾರಗಳನ್ನು ತಪ್ಪಿಸಿ. ಇದರಿಂದ ಲಾಭದ ಬದಲಿಗೆ ನಷ್ಟ ಉಂಟಾಗಬಹುದು. ಈ ವಾರ ಆದಾಯಕ್ಕಿಂತ ಖರ್ಚುಗಳು ಹೆಚ್ಚಾಗಬಹುದು. ವಾರದ ದ್ವಿತೀಯಾರ್ಧದಲ್ಲಿ ನಿಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯಬಹುದು. ಪ್ರತಿ ಹಂತದಲ್ಲೂ ಹಿತೈಷಿಗಳು ನಿಮ್ಮನ್ನು ಬೆಂಬಲಿಸುವುದನ್ನು ಕಾಣಬಹುದು. ನಿಮ್ಮ ಪ್ರೀತಿಯ ಸಂಗಾತಿ ಕಷ್ಟದ ಸಮಯದಲ್ಲಿ ವಿಶೇಷವಾಗಿ ಸಹಾಯಕವಾಗುತ್ತಾರೆ.

ಕನ್ಯಾ ರಾಶಿಯವರ ವಾರ ಭವಿಷ್ಯ (Virgo Weekly Horoscope): 
ಕನ್ಯಾ ರಾಶಿಯ ಜನರಿಗೆ ಈ ವಾರದ ಆರಂಭವು ಶುಭಕರವಾಗಿರುತ್ತದೆ. ಯೋಜಿತ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುವುದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತೀರಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಶುಭ ವಾರ್ತೆ ಲಭಿಸಲಿದೆ. ವಿದೇಶಿ ವ್ಯಾಪಾರಸ್ಥರಿಗೆ ಇಷ್ಟು ದಿನ ಎದುರಾಗಿದ್ದ ಅಡೆತಡೆಗಳಿಂದ ಮುಕ್ತಿ ದೊರೆಯಲಿದೆ. ವಾರದ ಮಧ್ಯ ಭಾಗದಲ್ಲಿ ದೂರದ ಪ್ರಯಾಣ ಕೈಗೊಳ್ಳಬೇಕಾಗಬಹುದು, ಪ್ರಯಾಣವು ಆಹ್ಲಾದಕರ ಮತ್ತು ಲಾಭದಾಯಕವೆಂದು ಸಾಬೀತುಪಡಿಸುತ್ತದೆ. ವಾರಾಂತ್ಯದಲ್ಲಿ ಕೆಲವು ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಬಾಧಿಸಬಹುದು. 

ತುಲಾ ರಾಶಿಯವರ ವಾರ ಭವಿಷ್ಯ (Libra Weekly Horoscope): 
ತುಲಾ ರಾಶಿಯವರಿಗೆ ವಾರದ ಆರಂಭವು ತುಂಬಾ ಒತ್ತಡದಿಂದ ಕೂಡಿರುತ್ತದೆ.  ಉದ್ಯೋಗಸ್ಥರಿಗೆ ಹೆಚ್ಚಿನ ಜವಾಬ್ದಾರಿಗಳು ಹೆಗಲೇರಬಹುದು. ಆದಾಗ್ಯೂ, ಕಠಿಣ ಪರಿಶ್ರಮದ ಸಂಪೂರ್ಣ ಫಲಿತಾಂಶವನ್ನು ನೀವು ಪಡೆಯುತ್ತೀರಿ. ಭೂಮಿ ಅಥವಾ ಕಟ್ಟಡಕ್ಕೆ ಸಂಬಂಧಿಸಿದ ವಿವಾದವನ್ನು ಹಿರಿಯರ ಸಹಾಯದಿಂದ ಪರಿಹಾರಿಸಬಹುದು. ವಾರದ ಮಧ್ಯದಲ್ಲಿ, ಇದ್ದಕ್ಕಿದ್ದಂತೆ ಪಿಕ್ನಿಕ್ ಯೋಜಿಸಬಹುದು. ಪ್ರೀತಿ ಮತ್ತು ವೈವಾಹಿಕ ಜೀವನಕ್ಕೆ ಉತ್ತಮವಾದ ವಾರ. ಅವಿವಾಹಿತರ ಜೀವನದಲ್ಲಿ ಅಪೇಕ್ಷಿತ ಸಂಗಾತಿ ಬರಬಹುದು.

ವೃಶ್ಚಿಕ ರಾಶಿಯವರ ವಾರ ಭವಿಷ್ಯ (Scorpio Weekly Horoscope):  
ವೃಶ್ಚಿಕ ರಾಶಿಯ ಜನರು ವಾರದ ಆರಂಭದಲ್ಲಿ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು. ಈ ವಾರ ನೀವು ನಿಮ್ಮ ಕೆಲಸದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ವ್ಯಾಪಾರಸ್ಥರಿಗೆ ಮಧ್ಯಮ ಫಲಪ್ರದವಾದ ವಾರ ಇದಾಗಿದೆ. ಮಾರುಕಟ್ಟೆಯಲ್ಲಿ ನಿಮ್ಮ ಖ್ಯಾತಿಯನ್ನು ಕಾಪಾಡಿಕೊಳ್ಳಲು, ನಿಮ್ಮ ಪ್ರತಿಸ್ಪರ್ಧಿಗಳೊಂದಿಗೆ ನೀವು ಕಠಿಣವಾಗಿ ಸ್ಪರ್ಧಿಸಬೇಕಾಗಬಹುದು. ಸಂತೋಷದ ವೈವಾಹಿಕ ಜೀವನವನ್ನು ನಡೆಸಲು, ಜೀವನ ಸಂಗಾತಿಯ ಭಾವನೆಗಳು ಮತ್ತು ಅಗತ್ಯಗಳನ್ನು ನಿರ್ಲಕ್ಷಿಸುವುದನ್ನು ತಪ್ಪಿಸಬೇಕು. ವಿದ್ಯಾರ್ಥಿಗಳು ಅಧ್ಯಯನದಿಂದ ವಿಚಲಿತರಾಗಬಹುದು. ಆದರೆ ಯುವ ಪೀಳಿಗೆ ತಮ್ಮ ಹೆಚ್ಚಿನ ಸಮಯವನ್ನು ಮೋಜಿನಲ್ಲೇ ಕಳೆಯುತ್ತಾರೆ. 

ಇದನ್ನೂ ಓದಿ- ಕರ್ಕಾಟಕ ರಾಶಿಗೆ ಬುಧ ಪ್ರವೇಶ: ಈ 4 ರಾಶಿಯವರ ಧನ ಸಂಪತ್ತು ವೃದ್ಧಿಯಾಗಲಿದೆ!

ಧನು ರಾಶಿಯವರ ವಾರ ಭವಿಷ್ಯ (Sagittarius Weekly Horoscope):  
ಧನು ರಾಶಿಯವರು ವಾರದ ಆರಂಭದಲ್ಲಿ ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿಯ ಹೊಸ ಹೊಸ ಅವಕಾಶಗಳನ್ನು ಪಡೆಯಬಹುದು. ಆದರೆ, ನೀವು ಲಾಭವನ್ನು ಪಡೆಯಲು ಹೆಚ್ಚಿನ ಶ್ರಮದ ಅಗತ್ಯವಿದೆ. ಉದ್ಯೋಗಸ್ಥರು ಕಛೇರಿಯಲ್ಲಿ ತಮ್ಮ ಕೆಲಸವನ್ನು ಮುಂದೂಡುವುದನ್ನು ಅಥವಾ ಬೇರೆಯವರಿಗೆ ಬಿಟ್ಟುಕೊಡುವುದನ್ನು ತಪ್ಪಿಸಬೇಕು. ಇದರಿಂದಾಗಿ ಭಾರೀ ನಷ್ಟ ಸಾಧ್ಯತೆ ಇದೆ. ವ್ಯಾಪಾರದಲ್ಲಿ ತ್ವರಿತ ಪ್ರಗತಿ ಇರುತ್ತದೆ. ವಾರದ ಮಧ್ಯದಲ್ಲಿ, ನೀವು ನಿಮ್ಮ ಕೆಲಸದ ಜೊತೆಗೆ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು ತಮ್ಮ ಅಧ್ಯಯನದತ್ತ ಹೆಚ್ಚಿನ ಗಮನಹರಿಸಬೇಕು. 

ಮಕರ ರಾಶಿಯವರ ವಾರ ಭವಿಷ್ಯ (Capricorn Weekly Horoscope):  
ಮಕರ ರಾಶಿಯವರಿಗೆ ವಾರದ ಆರಂಭವು ಮಿಶ್ರ ಫಲಗಳಿಂದ ಕೂಡಿರುತ್ತದೆ. ನಿಮ್ಮ ಯೋಜಿತ ಕಾರ್ಯಗಳು ಸಮಯಕ್ಕೆ ಸುಲಭವಾಗಿ ಪೂರ್ಣಗೊಳ್ಳುತ್ತವೆ. ವೈಯಕ್ತಿಕ ಜೀವನದಲ್ಲಿ ಕುಟುಂಬ ಸದಸ್ಯರ ಸಂಪೂರ್ಣ ಸಹಕಾರ ಮತ್ತು ಬೆಂಬಲವನ್ನು ನೀವು ಪಡೆಯುತ್ತೀರಿ. ಹಣಕಾಸಿನ ದೃಷ್ಟಿಕೋನದಿಂದ ಇದು ತುಂಬಾ ಅದೃಷ್ಟದ ಸಮಯ ಎಂತಲೇ ಹೇಳಬಹುದು. ನೀವು ದೀರ್ಘ ಸಮಯದಿಂದ ಯಾವುದಾದರೂ ಯೋಜನೆಯಲ್ಲಿ ಹೂಡಿಕೆ ಮಾಡಲು ಪ್ರಯತ್ನಿಸುತ್ತಿದ್ದರೆ ನಿಮ್ಮ ಸ್ನೇಹಿತರೊಬ್ಬರ ಸಹಾಯದಿಂದ ಈ ಆಸೆ ಈಡೇರುತ್ತದೆ. ವಾರದ ಮಧ್ಯದಲ್ಲಿ ಅಧಿಕ ಖರ್ಚು ನಿಮ್ಮ ಬಜೆಟ್ ಅನ್ನು ಹಾಳುಮಾಡಬಹುದು. 

ಕುಂಭ ರಾಶಿಯವರ ವಾರ ಭವಿಷ್ಯ (Aquarius Weekly Horoscope):  
ಕುಂಭ ರಾಶಿಯವರಿಗೆ ವಾರದ ಆರಂಭವು ಏರಿಳಿತಗಳಿಂದ ಕೂಡಿರುತ್ತದೆ. ಈ ವಾರ ನೀವು ಅನಗತ್ಯ ಒತ್ತಡ ಮತ್ತು ಅನಗತ್ಯ ಪ್ರಯಾಣವನ್ನು ತಪ್ಪಿಸಬೇಕು. ನಿಮ್ಮ ಕೆಲಸವನ್ನು ಹಾಳು ಮಾಡಲು ಪ್ರಯತ್ನಿಸುತ್ತಿರುವ ಹಿತ ಶತ್ರುಗಳ ಬಗ್ಗೆ ವಿಶೇಷ ಎಚ್ಚರಿಕೆ ಬೇಕಾಗುತ್ತದೆ. ಇತರರ ವ್ಯವಹಾರಗಳಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ಮಾಡುವುದನ್ನು ತಪ್ಪಿಸಿ. ವಾರದ ಮಧ್ಯದಲ್ಲಿ, ಕಾಲೋಚಿತ ಅನಾರೋಗ್ಯ ಹೊರಹೊಮ್ಮುವಿಕೆಯಿಂದಾಗಿ ನೀವು ದೈಹಿಕ ನೋವನ್ನು ಅನುಭವಿಸಬೇಕಾಗಬಹುದು. ವೃತ್ತಿ-ವ್ಯವಹಾರಕ್ಕೆ ಸಂಬಂಧಿಸಿದ ಅಕಾಲಿಕ ಪ್ರಯಾಣದ ಆಯಾಸವನ್ನುಂಟು ಮಾಡಬಹುದು. ವಾಹನ ಚಾಲನೆ ಮಾಡುವಾಗ ಎಚ್ಚರಿಕೆಯಿಂದ ಇರಿ. 

ಮೀನ ರಾಶಿಯವರ ವಾರ ಭವಿಷ್ಯ (Pisces Weekly Horoscope): 
ಮೀನ ರಾಶಿಯವರಿಗೆ ವಾರದ ಆರಂಭವು ಶುಭಕರವಾಗಿರುತ್ತದೆ. ಈ ವಾರ ನೀವು ಕೆಲಸದ ಕ್ಷೇತ್ರದಲ್ಲಿ ಲಾಭವನ್ನು ಪಡೆಯುತ್ತೀರಿ. ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ ನಿಮ್ಮ ಆಸೆ ಈಡೇರಬಹುದು. ನೀವು ಕೆಲಸವನ್ನು ಬದಲಾಯಿಸಲು ಅಥವಾ ವರ್ಗಾವಣೆಗಾಗಿ ಪ್ರಯತ್ನಿಸುತ್ತಿದ್ದರೆ ಯಶಸ್ಸು ನಿಮ್ಮದಾಗಲಿದೆ. ವ್ಯಾಪಾರದ ದೃಷ್ಟಿಕೋನದಿಂದ ಇದು ನಿಮಗೆ ತುಂಬಾ ಅದೃಷ್ಟದ ಸಮಯ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ನವವಿವಾಹಿತರಿಗೆ ಸಂತಾನ ಯೋಗವಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News