Ration Card: ರೇಷನ್ ಕಾರ್ಡ್ ಹೊಂದಿರುವವರಿಗೆ ಕಹಿ ಸುದ್ದಿ: ಇನ್ಮುಂದೆ ಆ ಎಲ್ಲಾ ಕಾರ್ಡ್ ಗಳು ರದ್ದು!

Ration Card Cancelation: ಆದಾಯ ತೆರಿಗೆ ಪಾವತಿದಾರರು ಅಥವಾ 10 ಎಕರೆಗಿಂತ ಹೆಚ್ಚು ಜಮೀನು ಹೊಂದಿರುವವರ ಹೆಸರನ್ನು ಪಡಿತರ ಚೀಟಿಯಿಂದ ತೆಗೆದುಹಾಕಲಾಗುತ್ತದೆ. ಅಂತಹವರಿಗೆ ಇನ್ನು ಮುಂದೆ ಉಚಿತ ಪಡಿತರ ಸಿಗುವುದಿಲ್ಲ. ಉಚಿತ ಪಡಿತರದೊಂದಿಗೆ ವ್ಯಾಪಾರ ಮಾಡುವವರನ್ನು ಸಹ ಸರ್ಕಾರ ಗುರುತಿಸಿದೆ.

Written by - Bhavishya Shetty | Last Updated : Nov 21, 2022, 03:05 PM IST
    • ದೇಶಾದ್ಯಂತ ಲಕ್ಷಾಂತರ ಜನರ ಪಡಿತರ ಚೀಟಿಗಳು ರದ್ದಾಗಲಿವೆ
    • 10 ಲಕ್ಷ ಜನರು ಉಚಿತ ಪಡಿತರ ಯೋಜನೆಯನ್ನು ವಂಚನೆಯಿಂದ ಪಡೆಯುತ್ತಿದ್ದಾರೆ
    • ಪಡಿತರ ಚೀಟಿಗಳನ್ನು ರದ್ದುಗೊಳಿಸುವುದಾಗಿ ಸರ್ಕಾರ ಘೋಷಣೆ
Ration Card: ರೇಷನ್ ಕಾರ್ಡ್ ಹೊಂದಿರುವವರಿಗೆ ಕಹಿ ಸುದ್ದಿ: ಇನ್ಮುಂದೆ ಆ ಎಲ್ಲಾ ಕಾರ್ಡ್ ಗಳು ರದ್ದು!  title=
Ration Card

Ration Card Cancelation: ಪಡಿತರ ಚೀಟಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಶೀಘ್ರದಲ್ಲೇ ಮಹತ್ವದ ನಿರ್ಧಾರವನ್ನು ಜಾರಿಗೆ ತರಲಿದೆ. ದೇಶಾದ್ಯಂತ ಲಕ್ಷಾಂತರ ಜನರ ಪಡಿತರ ಚೀಟಿಗಳು ರದ್ದಾಗಲಿವೆ. ಸರ್ಕಾರದ ಪ್ರಕಾರ ಸುಮಾರು 10 ಲಕ್ಷ ಜನರು ಉಚಿತ ಪಡಿತರ ಯೋಜನೆಯನ್ನು ವಂಚನೆಯಿಂದ ಪಡೆಯುತ್ತಿದ್ದಾರೆ. ಇಲಾಖೆಯು ಅವರ ಪಟ್ಟಿಯನ್ನು ಸಹ ಸಿದ್ಧಪಡಿಸಿದೆ ಮತ್ತು ಈ ಪಡಿತರ ಚೀಟಿಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದೆ.

ಇದನ್ನೂ ಓದಿ: Shraddha Murder Case: ಶ್ರದ್ಧಾ ಹತ್ಯೆಗೆ ವಾಟರ್ ಬಿಲ್ ನಂಟು! ಅಗೆದಷ್ಟು ಬಯಲಾಗುತ್ತಿದೆ ‘ಪೀಸ್ ವಾಲಾ’ನ ದುಷ್ಕೃತ್ಯ

ಆದಾಯ ತೆರಿಗೆ ಪಾವತಿದಾರರು ಅಥವಾ 10 ಎಕರೆಗಿಂತ ಹೆಚ್ಚು ಜಮೀನು ಹೊಂದಿರುವವರ ಹೆಸರನ್ನು ಪಡಿತರ ಚೀಟಿಯಿಂದ ತೆಗೆದುಹಾಕಲಾಗುತ್ತದೆ. ಅಂತಹವರಿಗೆ ಇನ್ನು ಮುಂದೆ ಉಚಿತ ಪಡಿತರ ಸಿಗುವುದಿಲ್ಲ. ಉಚಿತ ಪಡಿತರದೊಂದಿಗೆ ವ್ಯಾಪಾರ ಮಾಡುವವರನ್ನು ಸಹ ಸರ್ಕಾರ ಗುರುತಿಸಿದೆ. ಅದೇ ರೀತಿ ನಾಲ್ಕು ತಿಂಗಳಿಂದ ಪಡಿತರ ತೆಗೆದುಕೊಳ್ಳದವರ ಕಾರ್ಡ್ ಕೂಡ ರದ್ದಾಗಲು ಸಿದ್ಧವಾಗುತ್ತಿದೆ. ಸಂಪೂರ್ಣ ಪಟ್ಟಿಯನ್ನು ಸಿದ್ಧಪಡಿಸಿ ಪಡಿತರ ವಿತರಕರಿಗೆ ಕಳುಹಿಸಲಾಗುವುದು ಎಂದು ಘೋಷಿಸಿದೆ.

ಸರ್ಕಾರದ ನಿಯಮಾನುಸಾರ ಅನರ್ಹರ ಸಂಪೂರ್ಣ ಪಟ್ಟಿಯನ್ನು ವಿತರಕರಿಗೆ ಕಳುಹಿಸುವುದಾಗಿ ಸರ್ಕಾರ ತಿಳಿಸಿದೆ. ಈ ಪಟ್ಟಿಯನ್ನು ಆಧರಿಸಿ ಹೆಸರು ತೆಗೆದವರಿಗೆ ಡೀಲರ್‌ಗಳು ಪಡಿತರ ವಿತರಿಸುವುದಿಲ್ಲ. ವಿತರಕರು ಅನರ್ಹರ ಹೆಸರನ್ನು ಗುರುತಿಸಿ ಅವರ ವರದಿಗಳನ್ನು ಜಿಲ್ಲಾ ಕೇಂದ್ರಕ್ಕೆ ಕಳುಹಿಸುತ್ತಾರೆ. ಅದರ ನಂತರ ಈ ವ್ಯಕ್ತಿಗಳ ಕಾರ್ಡ್‌ಗಳನ್ನು ರದ್ದುಗೊಳಿಸಲಾಗುತ್ತದೆ.

ಇದನ್ನೂ ಓದಿ: Realme Smartphone: ಕೇವಲ 549 ರೂ.ಗೆ ಖರೀದಿಸಿ 13 ಸಾವಿರ ಮೌಲ್ಯದ ಸ್ಮಾರ್ಟ್‌ಫೋನ್!

ವಿಶೇಷವಾಗಿ ದೇಶದ 80 ಕೋಟಿಗೂ ಹೆಚ್ಚು ಜನರು ಸರ್ಕಾರದ ಈ ಯೋಜನೆಯಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಆದರೆ ಕೆಲವರು ಈ ಯೋಜನೆಯಡಿ ನಕಲಿ ಪಡಿತರವನ್ನು ಪಡೆಯುತ್ತಿದ್ದಾರೆ. ಅಂತಹವರ ವಿರುದ್ಧ ಕೇಂದ್ರ ಸರ್ಕಾರ ಈಗ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಅವರ ಕಾರ್ಡ್‌ಗಳನ್ನು ರದ್ದುಗೊಳಿಸುವುದಲ್ಲದೆ, ಇದುವರೆಗೆ ಪಡೆದಿರುವ ಪಡಿತರವನ್ನು ಮರುಪಡೆಯಲು ನಿರ್ಧರಿಸಿದೆ. ಅದರಲ್ಲೂ ಉತ್ತರ ಪ್ರದೇಶದಲ್ಲಿ ನಕಲಿ ಪಡಿತರ ಪಡೆಯುತ್ತಿರುವವರ ಸಂಖ್ಯೆಯೇ ಅಧಿಕವಾಗಿದೆಯಂತೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News