Budget 2023: ಸರ್ಕಾರಿ ನೌಕರರಿಗೆ ಒಂದು ಸಿಹಿ ಮತ್ತು ಕಹಿ ಸುದ್ದಿ!

7th Pay Commission: ಬರುವ ಫೆಬ್ರವರಿ 1 ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ನೀತಾರಾಮನ್ ವರ್ಷ 2023-24ರ ಸಾಲಿನ ಬಜೆಟ್ ಮಂಡಿಸುತ್ತಿರುವ ವೇಳೆ ಸರ್ಕಾರಿ ನೌಕರರ ಪಾಲಿಗೆ ಎರಡು ಘೋಷಣೆಗಳು ಹೊರಬೀಳುವ ಸಾಧ್ಯತೆ ಇದೆ. ಇದರಲ್ಲಿನ ಮೊದಲ ಘೋಷಣೆ ನೌಕರರಿಗೆ ಸ್ವಲ್ಪ ನೆಮ್ಮದಿಯನ್ನು ನೀಡಿದರೆ, ಎರಡನೆ ಘೋಷಣೆ ನೌಕರರ ಹೊರೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ.  

Written by - Nitin Tabib | Last Updated : Jan 22, 2023, 06:13 PM IST
  • ಬಜೆಟ್ ನಂತರ, ಮಾರ್ಚ್ ತಿಂಗಳಲ್ಲಿ,
  • 7 ನೇ ವೇತನ ಆಯೋಗದ ಅಡಿಯಲ್ಲಿ ಕೇಂದ್ರ ನೌಕರರಿಗೆ ತುಟ್ಟಿ ಭತ್ಯೆಗೆ ಅನುಮೋದನೆ ಸಿಗಬೇಕಿದೆ.
  • ವಾಸ್ತವವಾಗಿ, ಜನವರಿ 2023 ರ ತುಟ್ಟಿಭತ್ಯೆಯನ್ನು ಪರಿಷ್ಕರಿಸಬೇಕು ಮತ್ತು ಈ ಪರಿಷ್ಕರಣೆ ಜನವರಿಯಿಂದಲೇ ಅನ್ವಯಿಸಲಿದೆ.
Budget 2023: ಸರ್ಕಾರಿ ನೌಕರರಿಗೆ ಒಂದು ಸಿಹಿ ಮತ್ತು ಕಹಿ ಸುದ್ದಿ! title=
7ನೇ ವೇತನ ಆಯೋಗ ನವೀಕರಣ

7th CPC Latest News: ವರ್ಷ 2023 ಕೇಂದ್ರ ಸರ್ಕಾರಿ ನೌಕರರಿಗೆ ತುಂಬಾ ಮಹತ್ವದ್ದಾಗಿದೆ. ಒಂದೆಡೆ, ಅವರ ವರ್ಷದ ಆರಂಭಕ್ಕೆ ಹೆಚ್ಚಾದ ತುಟ್ಟಿಭತ್ಯೆಯೊಂದಿಗೆ ವರ್ಷ ಆರಂಭಗೊಂಡಿದ್ದಾರೆ. ಇನ್ನೊಂದೆಡೆ, ಮುಂಬರುವ ಬಜೆಟ್‌ನಲ್ಲಿ ಅವರಿಗಾಗಿ ಎರಡು ಘೋಷಣೆಗಳು ಇರುವ ಸಾಧ್ಯತೆ ಇದೆ. ಜನವರಿ 31 ರಂದು, ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಅಂಕಿ (ಎಐಸಿಪಿಐ ಸೂಚ್ಯಂಕ) ಸಿಗಲಿದೆ. ಇದರಿಂದ ಅವರ ಡಿಎ ಎಷ್ಟು ಹೆಚ್ಚಾಗಿದೆ ಎಂಬುದು ಗೊತ್ತಾಗಲಿದೆ. ಇದೇ ವೇಳೆ, ಫೆಬ್ರವರಿ 1 ರಂದು, ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸುತ್ತಿರುವಾಗ, ಸರ್ಕಾರಿ ನೌಕರರಿಗಾಗಿಯೇ ಎರಡು ಘೋಷಣೆಗಳನ್ನು ಮಾಡುವ ಸಾಧ್ಯತೆ ಇದೆ. ಮೊದಲ ಘೋಷಣೆ ನೌಕರರಿಗೆ ಕೊಂಚ ನೆಮ್ಮದಿಯನ್ನು ನೀಡಿದರೆ, ಎರಡನೇ ಪ್ರಕಟಣೆಯು ಅವರ ಜೇಬಿನ ಮೇಲಿನ ಹೊರೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ. ಈ ಎರಡೂ ಘೋಷಣೆಗಳನ್ನು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಇರಲಿವೆ.

ವೇತನ ಪರಿಷ್ಕರಣೆ ಘೋಷಣೆಯಾಗಬಹುದು
ಕೇಂದ್ರ ನೌಕರರ ವೇತನ ಪರಿಷ್ಕರಣೆ ಮುಂದಿನ ವೇತನ ಆಯೋಗದಲ್ಲಿ ಫಿಟ್‌ಮೆಂಟ್ ಅಂಶದ ಮೂಲಕ ನಡೆಯಲಿದೆ ಎಂದು ಬಹಳ ದಿನಗಳಿಂದ ಚರ್ಚಿಸಲಾಗುತ್ತಿದೆ. ಆದರೆ, ಸರಕಾರ ಇದನ್ನು ಒಪ್ಪುತ್ತಿಲ್ಲ. ಏಕೆಂದರೆ ಮುಂದಿನ ವೇತನ ಆಯೋಗದ ಅವಶ್ಯಕತೆ ಇಲ್ಲ ಎಂಬುದು ಸರ್ಕಾರದ ಅಭಿಪಾಯವಾಗಿದೆ. ಸರ್ಕಾರಿ ನೌಕರರ ವೇತನವನ್ನು 10 ವರ್ಷಗಳಿಗೊಮ್ಮೆ ಹೆಚ್ಚಿಸುವ ಬದಲು ಪ್ರತಿ ವರ್ಷ ಹೆಚ್ಚಿಸಬೇಕು ಎಂಬುದು ಇನ್ನೊಂದು ವಾದ. ಇದರಿಂದ ಕೆಳಹಂತದ ನೌಕರರಿಗೂ ಉನ್ನತ ಹುದ್ದೆಯಲ್ಲಿ ಕುಳಿತ ಅಧಿಕಾರಿಗಳಷ್ಟೇ ವೇತನ ಸಿಗುತ್ತದೆ. ಇನ್ನೊಂದೆಡೆ 8ನೇ ವೇತನ ಆಯೋಗ ರಚನೆಗೆ ಕೇವಲ 1 ವರ್ಷ ಮಾತ್ರ ಬಾಕಿ ಉಳಿದಿದೆ. ಮೂಲಗಳನ್ನು ನಂಬುವುದಾದರೆ, ಸರ್ಕಾರವು ಇದಕ್ಕೂ ಮೊದಲು ನೌಕರರ ವೇತನ ಪರಿಷ್ಕರಣೆಗೆ ಹೊಸ ಸೂತ್ರವನ್ನು ಪರಿಚಯಿಸಬಹುದು. ಇದನ್ನು ಬಜೆಟ್‌ನಲ್ಲಿ ಸೇರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ, ಇದಕ್ಕಾಗಿ ಪ್ರತ್ಯೇಕ ಹಂಚಿಕೆ ಇರಲಿದೆ. ಇದರಲ್ಲಿ ಹೊಸ ಸೂತ್ರದ ಮಾರ್ಗಸೂಚಿಯನ್ನು ಸರ್ಕಾರ ಹೇಳಬಹುದು ಎನ್ನಲಾಗಿದೆ.

ಹೊಸ ಸೂತ್ರ ಏನಾಗಲಿದೆ?
ಇದುವರರೆಗೆ ಕೇಂದ್ರ ನೌಕರರಿಗೆ ಪ್ರತಿ 10 ವರ್ಷಗಳಿಗೊಮ್ಮೆ ವೇತನ ಆಯೋಗವನ್ನು ರಚಿಸಲಾಗುತ್ತಿತ್ತು. 2014 ರಲ್ಲಿ, 7 ನೇ ವೇತನ ಆಯೋಗವನ್ನು ರಚಿಸಲಾಗಿತ್ತು. 7ನೇ ವೇತನ ಆಯೋಗದಲ್ಲಿ ಫಿಟ್‌ಮೆಂಟ್ ಅಂಶದ ಆಧಾರದ ಮೇಲೆ ಮೂಲ ವೇತನವನ್ನು ಹೆಚ್ಚಿಸಿ ನೌಕರರ ವೇತನವನ್ನು ಹೆಚ್ಚಿಸಲಾಗಿದೆ. ಆದರೆ, ಉನ್ನತ ಮಟ್ಟದ ನೌಕರರಿಗೆ ಮಾತ್ರ ಇದರಿಂದ ಲಾಭವಾಗಿದೆ ಎಂಬುದು ವಾದ. ಕೆಳಹಂತದ ನೌಕರರ ವೇತನದಲ್ಲಿ ಇಷ್ಟು ಹೆಚ್ಚಳವಾಗಿಲ್ಲ. ಹೀಗಾಗಿ ಮಾಜಿ ಹಣಕಾಸು ಸಚಿವ ದಿವಂಗತ ಅರುಣ್ ಜೇಟ್ಲಿ ಅವರು ನೀಡಿದ ಸೂತ್ರದ ಮೇಲೆ ಮಾತ್ರ ಸರ್ಕಾರ ಗಮನಹರಿಸಬಹುದು ಎನ್ನಲಾಗುತ್ತಿದೆ. 2016ರಲ್ಲಿ 7ನೇ ವೇತನ ಆಯೋಗಕ್ಕೆ  ಅನುಮೋದನೆ ನೀಡುವಾಗ, ಪ್ರತಿ ವರ್ಷ ನೌಕರರ ವೇತನವನ್ನು ಹೆಚ್ಚಿಸಬೇಕಾದ ಸಮಯ ಬಂದಿದೆ ಎಂದು ಜೇಟ್ಲಿ ಹೇಳಿದ್ದರು . ಇದರಿಂದ ಸಣ್ಣ ಮಟ್ಟದ ನೌಕರರಿಗೆ ಅನುಕೂಲವಾಗಲಿದೆ ಮತ್ತು ಸರ್ಕಾರ ಹೊಸ ವೇತನ ಆಯೋಗ ರಚನೆಯತ್ತ ಕೆಲಸ ಮಾಡಬಾರದು ಎಂದಿದ್ದರು. ಪ್ರತಿ ವರ್ಷ ನೌಕರರ ಕಾರ್ಯಕ್ಷಮತೆಯ ಆಧಾರದ ಮೇಲೆ ವೇತನವನ್ನು ಹೆಚ್ಚಿಸಬೇಕು ಎಂಬ ಜೇಟ್ಲಿ ಸೂತ್ರವನ್ನು ಸರ್ಕಾರ ಒಪ್ಪಿಕೊಲ್ಲಲಿದೆಯಾ ಎಂಬುದನ್ನು ಸಮಯ ನಿರ್ಧರಿಸಲಿದೆ.

ಇದನ್ನೂ ಓದಿ-RX100 ಲುಕ್ ಇರುವ ಅಗ್ಗದ 150ಸಿಸಿ ಬೈಕ್ ಬಿಡುಗಡೆ ಮಾಡಿದ ಯಮಾಹಾ!

ಬಜೆಟ್‌ನಲ್ಲಿ ಉದ್ಯೋಗಿಗಳಿಗೆ ಎರಡನೇ ಮಹತ್ವದ ಘೋಷಣೆ
ಬಜೆಟ್ 2023 ರಲ್ಲಿ, ಕೇಂದ್ರ ಸರ್ಕಾರಿ ನೌಕರರಿಗೆ ಅವರ ಮನೆ ನಿರ್ಮಾಣ ಭತ್ಯೆ (HBA) ಬಗ್ಗೆ ಮತ್ತೊಂದು ದೊಡ್ಡ ಘೋಷಣೆಯಾಗಬಹುದು. ಪ್ರಸ್ತುತ, ಕೇಂದ್ರ ಸರ್ಕಾರಿ ನೌಕರರು ಈ ಭತ್ಯೆಯನ್ನು ಮನೆ ನಿರ್ಮಿಸಲು ಅಥವಾ ದುರಸ್ತಿ ಮಾಡಲು ಸರ್ಕಾರದಿಂದ ಮುಂಗಡವಾಗಿ ತೆಗೆದುಕೊಳ್ಳಬಹುದು. ಇದಕ್ಕೆ ಬದಲಾಗಿ ಸರ್ಕಾರವು ಅವರಿಂದ ಬಡ್ಡಿಯನ್ನು ವಿಧಿಸುತ್ತದೆ. ಪ್ರಸ್ತುತ, ಮನೆ ನಿರ್ಮಾಣ ಭತ್ಯೆಯ ಬಡ್ಡಿ ದರವು 7.1% ಆಗಿದೆ. ಇದನ್ನು ಬಜೆಟ್‌ನಲ್ಲಿ ಸರ್ಕಾರ ಹೆಚ್ಚಿಸುವ ಸಾಧ್ಯತೆ ಇದೆ. ಮನೆ ನಿರ್ಮಿಸಲು ಉದ್ಯೋಗಿ ಈ ಮುಂಗಡ ಮೊತ್ತವನ್ನು 25 ಲಕ್ಷ ರೂ.ವರೆಗೆ ತೆಗೆದುಕೊಳ್ಳಬಹುದು. ಮೂಲಗಳನ್ನು ನಂಬುವುದಾದರೆ, HBA ಯ ಬಡ್ಡಿ ದರವನ್ನು 7.5% ಗೆ ಪರಿಷ್ಕರಣೆಯಾಗುವ ಸಾಧ್ಯತೆ ಇದೆ. ಇನ್ನೊಂದೆಡೆ ಈ 25 ಲಕ್ಷದ ಮಿತಿಯನ್ನು ಸರ್ಕಾರ 30 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ-ಮಾರುತಿ ಕಂಪನಿಯ 7 ಆಸನ ಹೊಂದಿರುವ ಈ ಕಾರು ಬಿಡುಗಡೆಗೆ ಜನ ತುದಿಗಾಲಲ್ಲಿ ಕಾಯುತ್ತಿದ್ದಾರೆ, ಕಾರಣ ಗೊತ್ತಾ?

ತುಟ್ಟಿಭತ್ಯೆ ಮಂಜೂರು ಮಾಡಲಾಗುವುದು
ಬಜೆಟ್ ನಂತರ, ಮಾರ್ಚ್ ತಿಂಗಳಲ್ಲಿ, 7 ನೇ ವೇತನ ಆಯೋಗದ ಅಡಿಯಲ್ಲಿ ಕೇಂದ್ರ ನೌಕರರಿಗೆ ತುಟ್ಟಿ ಭತ್ಯೆ ಅನುಮೋದಿಸಲಾಗುವುದು. ವಾಸ್ತವವಾಗಿ, ಜನವರಿ 2023 ರ ತುಟ್ಟಿಭತ್ಯೆಯನ್ನು ಪರಿಷ್ಕರಿಸಬೇಕು. ಈ ಪರಿಷ್ಕರಣೆ ಜನವರಿಯಿಂದಲೇ ಅನ್ವಯಿಸಲಿದೆ. ಆದರೆ, ಮಾರ್ಚ್ ತಿಂಗಳಲ್ಲಿ ಸಚಿವ ಸಂಪುಟದಲ್ಲಿ ಇದಕ್ಕೆ ಅನುಮೋದನೆ ಪಡೆಯಲಾಗುತ್ತಿದೆ. ಬಜೆಟ್ ಅಧಿವೇಶನದಲ್ಲಿ ಮಾತ್ರ ವಿಶೇಷ ಸಂಪುಟ ಸಭೆಯಲ್ಲಿ ಸರ್ಕಾರ ಇದನ್ನು ಅನುಮೋದಿಸಬಹುದು. ಇದುವರೆಗಿನ ಅಂಕಿಅಂಶಗಳ ಆಧಾರದ ಮೇಲೆ, ಡಿಎ ಹೆಚ್ಚಳದಲ್ಲಿ 3 ಪ್ರತಿಶತದಷ್ಟು ಪರಿಷ್ಕರಣೆಯಾಗುವ ನಿರೆಕ್ಷೆ ಇದೆ ಮತ್ತು  ಇದರ ಚಿತ್ರಣ ಬರುವ ಜನವರಿ 31ಕ್ಕೆ ಸ್ಪಷ್ಟವಾಗಲಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News