Bicycle Gift To Students: ಆ ಊರಿಗೆ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲ , ಪ್ರೌಢ ಶಾಲೆಯೂ ಇಲ್ಲ , ಅಲ್ಲಿರುವ ವಿದ್ಯಾರ್ಥಿಗಳು ನಿತ್ಯ ಶಾಲೆಗೆ ನಡೆದುಕೊಂಡೇ ಹೋಗಿ ವಿದ್ಯಾಭ್ಯಾಸ ಮಾಡ ಬೇಕಾಗಿತ್ತು. ಆದ್ರೇ ಇದೀಗ ಆ ಬಡ ಮಕ್ಕಳಿಗೆ ಸೈಕಲ್ ನೀಡಿ ಕೂಲಿ ಕಾರ್ಮಿಕನೊಬ್ಬ ದೇವರಂತೆ ಬಂದು ಸಹಾಯ ಮಾಡಿದ್ದಾನೆ ಅರೆ ಎಲ್ಲಿ ಅಂತೀರಾ ಹಾಗಾದ್ರೆ ಈ ಸ್ಟೋರಿ ಒಮ್ಮೆ ಓದಿ.
ಒಂದೆಡೆ ಸೈಕಲ್ ಹಿಡಿದು ಖುಷಿ ಪಡುತ್ತಿರುವ ವಿದ್ಯಾರ್ಥಿಗಳು ಇನ್ನೊಂದು ಕಡೆ ಮಕ್ಕಳ ಖುಷಿ ನೋಡಿ ಆನಂದಿಸುತ್ತಿರುವ ಕಾರ್ಮಿಕ ಈ ಎಲ್ಲಾ ದೃಶ್ಯ ಕಂಡು ಬಂದಿದ್ದು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮಲ್ಕಂದಿನ್ನಿ ಗ್ರಾಮದಲ್ಲಿ.
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮಲ್ಕಂದಿನ್ನಿ ಗ್ರಾಮದಲ್ಲಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಬೇಕಾದ್ರೆ ಸುಮಾರು 5 ಕಿಮೀ ದೂರ ನಡೆದೇ ಹೋಗಬೇಕು. ಯಾಕೆಂದ್ರೆ ಈ ಊರಿಗೆ ಶಾಲಾ ಸಮಯಕ್ಕೆ ಬಸ್ ವ್ಯವಸ್ಥೆ ಇಲ್ಲ. ಹಾಗಾಗಿ, ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಶಾಲೆಗೆ ಹೋಗಲು ತೊಂದರೆ ಆಗುತ್ತಿತ್ತು. ಆ ಮಕ್ಕಳ ಕಷ್ಟ ನೋಡದೆ ಅದೇ ಊರಿನ ಯುವ ಕೂಲಿ ಕಾರ್ಮಿಕ ಆಂಜನೇಯ ಸುಮಾರು 60000/- ಖರ್ಚು ಮಾಡಿ ಹನ್ನೊಂದು ಸೈಕಲ್ ಕೊಡಿಸಿದ್ದಾರೆ. ಗ್ರಾಮೀಣ ಭಾಗದ ಮಕ್ಕಳು ಓದೋದಿಕ್ಕೆ ಬಾಳ ಕಷ್ಟ ಪಡ್ತಾರೆ. ಅಂತ ಮಕ್ಕಳಿಗೆ ನನ್ನಿಂದ ಒಂದು ಚಿಕ್ಕ ಸಹಾಯ ಮಾಡಿದ್ದೇನೆ. ಇದರಿಂದ ವಿದ್ಯಾರ್ಥಿಗಳು ಖುಷಿಯಾಗಿ ಶಾಲೆಗೆ ಹೊಗಲು ಅನುಕೂಲ ಆಗುತ್ತದೆ ಎಂದು ಕೂಲಿ ಕಾರ್ಮಿಕ ಆಂಜನೇಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ- 10ನೇ ತರಗತಿ ಪಾಸ್ ಆದ ಬಳಿಕ ನೌಕಾಪಡೆಯಲ್ಲಿ ಉದ್ಯೋಗ ಪಡೆಯುವ ಸಂಪೂರ್ಣ ಪ್ರಕ್ರಿಯೆ
ವಿದ್ಯಾರ್ಥಿಗಳಿಗೆ ಸೈಕಲ್ ನೀಡಿದ ಆಂಜನೇಯ ವೃತ್ತಿಯಲ್ಲಿ ಗಾರೆ ಕೆಲ್ಸ ಮಾಡ್ತಿದ್ದಾರೆ. ತನಗೆ ಓದೋದಿಕ್ಕೆ ಆಗಿಲ್ಲ ಆದ್ರೆ ಈ ಮಕ್ಕಳಿಗಾದ್ರು ಓದಲು ಅನುಕೂಲ ಆಗ್ಲಿ ಅಂತ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದೇನೆ ಎಂದು ಆಂಜನೇಯ ತಿಳಿಸಿದ್ದಾರೆ.
ಸರಕಾರ ಹಿಂದೆ ಎಲ್ಲಾ ಮಕ್ಕಳಿಗೆ ಸೈಕಲ್ ವಿತರಿಸುತ್ತಿತ್ತು. ಆದರೀಗ ಆ ಯೋಜನೆಯನ್ನು ನಿಲ್ಲಿಸಲಾಗಿದೆ, ದೇವದುರ್ಗದ ಬಹುತೇಕ ಹಳ್ಳಿಗಳಿಗೆ ಬಸ್ ವ್ಯವಸ್ಥೆಯೇ ಇಲ್ಲ ಎಂದು ಅಲ್ಲಿರುವ ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಳ್ತಾರೆ. ಅದೇನೆ ಆಗ್ಲೀ ಸರಕಾರ ಮಹಿಳೆಯರಿಗೆ ಬಸ್ ಪ್ರಯಾಣ ಫ್ರೀ ಫ್ರೀ ಕೊಡುವುದರ ಜೊತೆಗೆ, ಕಟ್ಟ ಕಡೆಯ ಹಳ್ಳಿಗಳಿಗೆ ಬಸ್ ವ್ಯವಸ್ಥೆ ನೀಡಬೇಕು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ- ಹೆಚ್ಚು ಸಂಭಾವನೆ ಲಭ್ಯವಿರುವ ವಿಶ್ವದ ಟಾಪ್ 8 ಉದ್ಯೋಗಗಳಿವು
ತಮ್ಮ ಸ್ವಂತ ದುಡಿಮೆಯಿಂದ ಸುಮಾರು 60000/- ಖರ್ಚು ಮಾಡಿ ಹತ್ತು ಸೈಕಲ್ ಕೊಡಿಸಿದ ಆಂಜನೇಯ ಅವರ ಈ ಕೆಲಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಾಗೇಯೆ ಫ್ರೀ ಯೋಜನೆ ಕೊಡ್ತಿರೋ ಸರಕಾರಗಳು ಗ್ರಾಮೀಣ ಭಾಗಕ್ಕೆ ಸರಿಯಾದ ಸಾರಿಗೆ ವ್ಯವಸ್ಥೆ ಕಲ್ಪಿಸಿ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.