ಹೆಚ್.ಎ.ಎಲ್ ದಲ್ಲಿ 15 ರಿಂದ 24 ತಿಂಗಳುಗಳ ಪೂರ್ಣಾವಧಿ ಶಿಶಿಕ್ಷು ತರಬೇತಿಗೆ ಅರ್ಜಿ ಆಹ್ವಾನ

ಹಿಂದುಸ್ಥಾನ ಏರೋನಾಟಿಕ್ಸ್ ಲಿಮಿಟೆಡ್, ಬೆಂಗಳೂರಿನಲ್ಲಿ ವಿವಿಧ ಶ್ರೇಣಿಗಳಿಂದ ಸಿ.ಎನ್.ಸಿ ಪ್ರೋಗ್ರಾಮರ್ ಮತ್ತು ಆಪರೇಟರ್, ಮೆಷಿನಿಸ್ಟ್, ಇಲೆಕ್ಷೀಷಿಯನ್, ವೆಲ್ಲರ್ ಕ್ರೀಡೆಗಳ 15 ರಿಂದ 24 ತಿಂಗಳುಗಳ ಪೂರ್ಣಾವಧಿ ಶಿಶಿಕ್ಷು ತರಬೇತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

Written by - Zee Kannada News Desk | Last Updated : Aug 22, 2022, 01:33 AM IST
  • ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ. ಉತ್ತೀರ್ಣರಾಗಿರಬೇಕು.
  • ಸಾಮಾನ್ಯ ವರ್ಗ, ಓಬಿಸಿ, ಶೇ. 60 ಮತ್ತು ಎಸ್ ಸಿ ಹಾಗೂ ಎಸ್.ಟಿ ಶೇ. 50 ಅಂಕಗಳೊAದಿಗೆ ಉತ್ತೀರ್ಣರಾಗಿರಬೇಕು.
ಹೆಚ್.ಎ.ಎಲ್ ದಲ್ಲಿ 15 ರಿಂದ 24 ತಿಂಗಳುಗಳ ಪೂರ್ಣಾವಧಿ ಶಿಶಿಕ್ಷು ತರಬೇತಿಗೆ ಅರ್ಜಿ ಆಹ್ವಾನ title=
file photo

ಹುಬ್ಬಳ್ಳಿ : ಹಿಂದುಸ್ಥಾನ ಏರೋನಾಟಿಕ್ಸ್ ಲಿಮಿಟೆಡ್, ಬೆಂಗಳೂರಿನಲ್ಲಿ ವಿವಿಧ ಶ್ರೇಣಿಗಳಿಂದ ಸಿ.ಎನ್.ಸಿ ಪ್ರೋಗ್ರಾಮರ್ ಮತ್ತು ಆಪರೇಟರ್, ಮೆಷಿನಿಸ್ಟ್, ಇಲೆಕ್ಷೀಷಿಯನ್, ವೆಲ್ಲರ್ ಕ್ರೀಡೆಗಳ 15 ರಿಂದ 24 ತಿಂಗಳುಗಳ ಪೂರ್ಣಾವಧಿ ಶಿಶಿಕ್ಷು ತರಬೇತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ. ಉತ್ತೀರ್ಣರಾಗಿರಬೇಕು. ಸಾಮಾನ್ಯ ವರ್ಗ, ಓಬಿಸಿ, ಶೇ. 60 ಮತ್ತು ಎಸ್ ಸಿ ಹಾಗೂ ಎಸ್.ಟಿ ಶೇ. 50 ಅಂಕಗಳೊAದಿಗೆ ಉತ್ತೀರ್ಣರಾಗಿರಬೇಕು. ಬಿ.ಪಿ.ಎಲ್, ಅಂತ್ಯೋದಯ ಕಾರ್ಡ ಹೊಂದಿರಬೇಕು. 01-10- 2022ಕ್ಕೆ ವಯಸ್ಸು 15-18 ವರ್ಷಗಳೊಳಗಿರಬೇಕು.

ಇದನ್ನೂ ಓದಿ: ಬೆಳಗಾವಿಯಲ್ಲಿ ಫ್ಯಾಷನ್ ಶೋ; ರಂಗುರಂಗಿನ ಲೋಕ ಅನಾವರಣ!

ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ವಿದ್ಯಾರ್ಹತೆಯ ಎಲ್ಲ ಪ್ರಮಾಣಪತ್ರಗಳ ಜೆರಾಕ್ಸ್ ಪ್ರತಿ, ಜಾತಿ, ವರ್ಗ, ಪ್ರಮಾಣ ಪತ್ರ, ಆಧಾರ ಪ್ರಮಾಣ ಪತ್ರ, ಉದ್ಯೋಗ ವಿನಿಮಯ ಕೇಂದ್ರದ ನೋಂದಣಿ ಗುರುತಿನ ಪತ್ರ ಹಾಗೂ ಒಂದು ಪಾಸಪೋರ್ಟ ಅಳತೆಯ ಭಾವಚಿತ್ರದೊಂದಿಗೆ ಸೆ.9 ರೊಳಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಹುಬ್ಬಳ್ಳಿಗೆ ಖುದ್ದಾಗಿ ಅರ್ಜಿಯನ್ನು ಸಲ್ಲಿಸಬಹುದು.

ನಿಗದಿತ ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಹುಬ್ಬಳ್ಳಿ ಕಚೇರಿಯ ದೂರವಾಣಿ ಸಂಖ್ಯೆ 0836-222288 ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಹಾಯಕ ನಿರ್ದೇಶಕರಾದ ಗಿರೀಶ ಕೆ.ಎನ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News