ರಂಗಾಯಣದಿಂದ ನಾಟಕ ಕಲಿಕಾ ಶಿಬಿರ; ಆಸಕ್ತರಿಂದ ಅರ್ಜಿ ಆಹ್ವಾನ; ಜನವರಿ 6ರಂದು ಸಂದರ್ಶನ

ಧಾರವಾಡ ರಂಗಾಯಣವು ತನ್ನ ರಂಗ ಚಟುವಟಿಕೆಯನ್ನು ವಿಸ್ತರಿಸುವ ಉದ್ದೇಶದಿಂದ ನುರಿತ ರಂಗ ನಿರ್ದೇಶಕರಿಂದ ರಂಗ ಕಲಾವಿದರಿಗಾಗಿ ನಾಟಕ ಸಿದ್ಧತಾ ಶಿಬಿರವನ್ನು ಧಾರವಾಡ ರಂಗಾಯಣದಲ್ಲಿ ಹಮ್ಮಿಕೊಳ್ಳಲಾಗಿದೆ.

Written by - Manjunath N | Last Updated : Dec 22, 2023, 05:21 PM IST
  • ಶಿಬಿರಾರ್ಥಿಗಳ ಆಯ್ಕೆಗಾಗಿ ಸಂದರ್ಶನವು ಜನವರಿ 6, 2024ರಂದು ಇರುತ್ತದೆ
  • ಸಂದರ್ಶನಕ್ಕೆ ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗಬೇಕು
ರಂಗಾಯಣದಿಂದ ನಾಟಕ ಕಲಿಕಾ ಶಿಬಿರ; ಆಸಕ್ತರಿಂದ ಅರ್ಜಿ ಆಹ್ವಾನ; ಜನವರಿ 6ರಂದು ಸಂದರ್ಶನ title=
file photo

ಧಾರವಾಡ: ಧಾರವಾಡ ರಂಗಾಯಣವು ತನ್ನ ರಂಗ ಚಟುವಟಿಕೆಯನ್ನು ವಿಸ್ತರಿಸುವ ಉದ್ದೇಶದಿಂದ ನುರಿತ ರಂಗ ನಿರ್ದೇಶಕರಿಂದ ರಂಗ ಕಲಾವಿದರಿಗಾಗಿ ನಾಟಕ ಸಿದ್ಧತಾ ಶಿಬಿರವನ್ನು ಧಾರವಾಡ ರಂಗಾಯಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಶಿಬಿರದಲ್ಲಿ ಒಂದು ಹೊಸ ನಾಟಕವನ್ನು ಶಿಬಿರಾರ್ಥಿಗಳಿಂದ ಸಿದ್ಧಪಡಿಸಲಾಗುವುದು. ಸಿದ್ಧಗೊಂಡ ನಾಟಕದ ಪ್ರದರ್ಶನವನ್ನು ಕೇಂದ್ರ ಸ್ಥಾನದಲ್ಲಿ ಹಾಗೂ ವಿವಿಧ ಜಿಲ್ಲೆಗಳಲ್ಲಿ 05 ಪ್ರದರ್ಶನಗಳನ್ನು ಏರ್ಪಡಿಸಲಾಗುವುದು ಎಂದು ರಂಗಾಯಣ ಆಡಳಿತಾಧಿಕಾರಿ ಶಶಿಕಲಾ ಹುಡೆದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: C Voter Survey: ಖರ್ಗೆ, ರಾಹುಲ್, ನಿತೀಶ್, ಕೇಜ್ರಿವಾಲ್... I.N.D.I.A. ಮೈತ್ರಿಕೂಟದಲ್ಲಿ ಪ್ರಧಾನಿ ಅಭ್ಯರ್ಥಿ ಯಾರಾಗಬೇಕು?

ಈ ಕುರಿತು ಪ್ರಕಟಣೆ ನೀಡಿರುವ ಅವರು, ಶಿಬಿರವು ಜನವರಿ 11, 2024 ರಿಂದ 20 ದಿನಗಳವರೆಗೆ ಬೆಳಿಗ್ಗೆಯಿಂದ ಸಂಜೆಯವರೆಗೆ ಪೂರ್ಣಾವಧಿಯಾಗಿ ನಡೆಯುತ್ತದೆ. ಆಯ್ಕೆಯಾದ ಶಿಬಿರಾರ್ಥಿಗಳಿಗೆ ರೂ.10,000/-ಗಳ ಗೌರವ ಸಂಭಾವನೆ ಹಾಗೂ ಮಧ್ಯಾಹ್ನದ ಊಟ, ಒದಗಿಸಲಾಗುವುದು. 20 ರಿಂದ 40 ವರ್ಷದೊಳಗಿನ ವಯೋಮಾನದ ಕಲಾವಿದರು, ಕಲಾವಿದೆಯರು ಶಿಬಿರಾರ್ಥಿಗಳಾಗಬಹುದು. 15 ಜನ ಅಭ್ಯರ್ಥಿಗಳಿಗೆ ಮಾತ್ರ ಪ್ರವೇಶವಿದ್ದು, ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ಅನುಭವ, ಆಸಕ್ತಿ ಬದ್ಧತೆಯ ಆಧಾರದ ಮೇಲೆ ಸಂದರ್ಶನದ ಮೂಲಕ ಶಿಬಿರಾರ್ಥಿಗಳ ಅಂತಿಮ ಆಯ್ಕೆಯನ್ನು ಮಾಡಲಾಗುವುದು ಹಾಗೂ ಶಿಬಿರಾರ್ಥಿಗಳು ಕಡ್ಡಾಯವಾಗಿ 05 ಪ್ರದರ್ಶನಗಳಿಗೆ ಒಪ್ಪಿಗೆಯನ್ನು ಸೂಚಿಸಬೇಕು.

ಇದನ್ನೂ ಓದಿ: Daily GK Quiz: ಭಾರತದ ಕೋಗಿಲೆ ಎಂದು ಯಾರನ್ನು ಕರೆಯುತ್ತಾರೆ? 

ಶಿಬಿರದಲ್ಲಿ ಪಾಲ್ಗೋಳ್ಳುವ ಅಭ್ಯರ್ಥಿಗಳು ತಮ್ಮ ಇತ್ತಿಚಿನ ಭಾವಚಿತ್ರದೊಂದಿಗೆ ಹೆಸರು, ವಿಳಾಸ, ದೂರವಾಣಿ, ವಿದ್ಯಾರ್ಹತೆ, ರಂಗಭೂಮಿ ಅನುಭವ ವಿವರ, ಶಿಬಿರಾರ್ಥಿಯಾಗಿ ತರಬೇತಿ ಪಡೆಯುವ ಉದ್ದೇಶ ಇತ್ಯಾದಿ ವಿವರ ಹಾಗೂ ವಯಸ್ಸಿನ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಬೇಕು. ಶಿಬಿರಾರ್ಥಿಗಳು ಕಡ್ಡಾಯವಾಗಿ ಶಿಬಿರದ ಚಟುವಟಿಕೆಗಳಲ್ಲಿ ಭಾಗವಹಿಸಲು ಸಿದ್ಧರಿರಬೇಕು. 20 ದಿನ ನಿರಂತರವಾಗಿ ನಡೆಯುವ ಈ ಶಿಬಿರದ ಮಧ್ಯದಲ್ಲಿ ಯಾವುದೇ ರಜೆ ಇರುವುದಿಲ್ಲ. ಹಾಗೂ ಶಿಬಿರದ ಮಧ್ಯದಲ್ಲಿ ಬಿಟ್ಟರೇ ಗೌರವ ಸಂಭಾವನೆಗೆ ಅರ್ಹರಿರುವುದಿಲ್ಲ.

ರಂಗಾಯಣದ ನಿಬಂಧನೆ ಹಾಗೂ ಷರತ್ತುಗಳಿಗೊಳಪಟ್ಟು, ಆಸಕ್ತರು ಸ್ವವಿವರದೊಂದಿಗೆ ಜನವರಿ 05 2024ರ ಒಳಗಾಗಿ ಆಡಳಿತಾಧಿಕಾರಿಗಳು, ರಂಗಾಯಣ ಪಂ.ಬಸವರಾಜ ಬಯಲು ರಂಗಮಂದಿರ, ಕಾಲೇಜು ರಸ್ತೆ, ಧಾರವಾಡ-580001 ಈ ವಿಳಾಸಕ್ಕೆ ಖುದ್ದಾಗಿ ಅಥವಾ ಅಂಚೆ ಮೂಲಕ ಅಥವಾ ಇ-ಮೇಲ್ dharwadrangayana@gmail.com ಮೂಲಕ ಕಳುಹಿಸಬಹುದು.

ಶಿಬಿರಾರ್ಥಿಗಳ ಆಯ್ಕೆಗಾಗಿ ಸಂದರ್ಶನವು ಜನವರಿ 6, 2024ರಂದು ಇರುತ್ತದೆ. ಸಂದರ್ಶನಕ್ಕೆ ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ರಂಗಾಯಣ ಕಚೇರಿ ಹಾಗೂ ದೂ.ಸಂ. 8296226696, 9986573449ಗೆ ಸಂಪರ್ಕಿಸಬಹುದೆಂದು ರಂಗಾಯಣದ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

 

Trending News