DRDO ನೇಮಕಾತಿ 2022: 10ನೇ ತರಗತಿ ಪಾಸ್ ಆದವರಿಗೆ ಬಂಪರ್ ಉದ್ಯೋಗಾವಕಾಶ, 7 ನೇ ವೇತನ ಆಯೋಗದ ಪ್ರಕಾರ ಸಂಬಳ

DRDO CEPTAM 10 DRTC recruitment 2022:  ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO), ಸೆಂಟರ್ ಫಾರ್ ಪರ್ಸನಲ್ ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ (CEPTAM) ಶೀಘ್ರದಲ್ಲೇ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹಿ ಆಹ್ವಾನಿಸಲಿದೆ. ಹಿರಿಯ ತಾಂತ್ರಿಕ ಸಹಾಯಕ-ಬಿ (ಎಸ್‌ಟಿಎ-ಬಿ) ಮತ್ತು ಟೆಕ್ನಿಷಿಯನ್-ಎ (ಟೆಕ್-ಎ) ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

Written by - Yashaswini V | Last Updated : Aug 24, 2022, 10:26 AM IST
  • 10ನೇ ತರಗತಿ ಪಾಸ್ ಆದವರಿಗೆ ಬಂಪರ್ ಉದ್ಯೋಗಾವಕಾಶ
  • 7 ನೇ ವೇತನ ಆಯೋಗದ ಪ್ರಕಾರ ಸಂಬಳ
  • ಇಲ್ಲಿದೆ DRDO CEPTAM 10 DRTC ನೇಮಕಾತಿ 2022ರ ವಿವರ
DRDO ನೇಮಕಾತಿ 2022: 10ನೇ ತರಗತಿ ಪಾಸ್ ಆದವರಿಗೆ ಬಂಪರ್ ಉದ್ಯೋಗಾವಕಾಶ, 7 ನೇ ವೇತನ ಆಯೋಗದ ಪ್ರಕಾರ ಸಂಬಳ  title=
DRDO recruitment 2022

DRDO CEPTAM 10 DRTC recruitment 2022:  ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO), ಸೆಂಟರ್ ಫಾರ್ ಪರ್ಸನಲ್ ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ (CEPTAM) ಶೀಘ್ರದಲ್ಲೇ ವಿವಿಧ ಹುದ್ದೆಗಳ ನೇಮಕಾತಿಗಾಗಿ CEPTAM 10 DRTC (ಡಿಫೆನ್ಸ್ ರಿಸರ್ಚ್ ಟೆಕ್ನಿಕಲ್ ಕೇಡರ್) ಅಧಿಸೂಚನೆಯನ್ನು ಹೊರಡಿಸಲಿದೆ. DRDO CEPTAM 10 DRTC ಅಧಿಸೂಚನೆಯನ್ನು ಅಧಿಕೃತ ವೆಬ್‌ಸೈಟ್ ಅಂದರೆ drdo.gov.in ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಡಿಆರ್‌ಡಿಒ ಅಧಿಕೃತ ವೆಬ್‌ಸೈಟ್‌ನಲ್ಲಿ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬೇಕು.

ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ನಂತರ, ಅಭ್ಯರ್ಥಿಗಳ ಆಯ್ಕೆಗಾಗಿ DRDO ಪ್ರವೇಶ ಪರೀಕ್ಷೆಯನ್ನು ನಡೆಸಲಾಗುತ್ತದೆ. ವರದಿಗಳ ಪ್ರಕಾರ, ಹಿರಿಯ ತಾಂತ್ರಿಕ ಸಹಾಯಕ-ಬಿ (ಎಸ್‌ಟಿಎ-ಬಿ) ಮತ್ತು ಟೆಕ್ನಿಷಿಯನ್-ಎ (ಟೆಕ್-ಎ) ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

DRDO CEPTAM 10 DRTC ನೇಮಕಾತಿ 2022 ಗಾಗಿ ಅರ್ಹತಾ ಮಾನದಂಡಗಳು:
ಹಿರಿಯ ತಾಂತ್ರಿಕ ಸಹಾಯಕ - ಅಭ್ಯರ್ಥಿಗಳು ವಿಜ್ಞಾನದಲ್ಲಿ ಪದವಿ ಅಥವಾ ಎಂಜಿನಿಯರಿಂಗ್ ಅಥವಾ ತಂತ್ರಜ್ಞಾನ ಅಥವಾ ಕಂಪ್ಯೂಟರ್ ವಿಜ್ಞಾನದಲ್ಲಿ ಡಿಪ್ಲೊಮಾ ಅಥವಾ ಸಂಬಂಧಿತ ವಿಷಯಗಳಲ್ಲಿ ಪದವಿ ಹೊಂದಿರಬೇಕು.
ತಂತ್ರಜ್ಞ ಎ - ಮಾನ್ಯತೆ ಪಡೆದ ಬೋರ್ಡ್ ಅಥವಾ ಇನ್‌ಸ್ಟಿಟ್ಯೂಟ್‌ನಿಂದ 10 ನೇ ತರಗತಿ ಅಥವಾ ತತ್ಸಮಾನ ತೇರ್ಗಡೆ ಮತ್ತು ಮಾನ್ಯತೆ ಪಡೆದ ಕೈಗಾರಿಕಾ ತರಬೇತಿ ಸಂಸ್ಥೆಯಿಂದ ಐಟಿಐ ಪ್ರಮಾಣಪತ್ರ.

ಇದನ್ನೂ ಓದಿ- PNB Recruitment 2022 : PNB ಬ್ಯಾಂಕ್ ನಲ್ಲಿ 103 ಹುದ್ದೆಗಳಿಗೆ ಅರ್ಜಿ : ಆಗಸ್ಟ್ 30 ಕೊನೆ ದಿನ

DRDO CEPTAM 10 DRTC ನೇಮಕಾತಿ 2022 ವೇತನ:
* ಹಿರಿಯ ತಾಂತ್ರಿಕ ಸಹಾಯಕ ಹುದ್ದೆ ವೇತನ - ಏಳನೇ ವೇತನ ಆಯೋಗ ಮತ್ತು 6ನೇ ವೇತನ ಆಯೋಗದ ಪ್ರಕಾರ ಇತರ ಪ್ರಯೋಜನಗಳೊಂದಿಗೆ ರೂ. 35400 ರಿಂದ ರೂ. 112400 ವರೆಗೆ ವೇತನ ಲಭ್ಯವಾಗಲಿದೆ.
* ತಂತ್ರಜ್ಞ A- 7ನೇ CPC ಪೇ ಮ್ಯಾಟ್ರಿಕ್ಸ್ ಮತ್ತು ಇತರ ಪ್ರಯೋಜನಗಳ ಪ್ರಕಾರ, ಪೇ ಮ್ಯಾಟ್ರಿಕ್ಸ್ ಹಂತ 2 ರಲ್ಲಿ ತಿಂಗಳಿಗೆ 19900 ರಿಂದ 63200 ರೂಪಾಯಿಗಳವರೆಗೆ ವೇತನವನ್ನು ನೀಡಲಾಗುತ್ತದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಮತ್ತು 28ವರ್ಷಕ್ಕಿಂತ ಗರಿಷ್ಠ ವಯೋಮಿತಿ ಮೀರಿರಬಾರದು.

ಇದನ್ನೂ ಓದಿ- ಹೆಚ್.ಎ.ಎಲ್ ದಲ್ಲಿ 15 ರಿಂದ 24 ತಿಂಗಳುಗಳ ಪೂರ್ಣಾವಧಿ ಶಿಶಿಕ್ಷು ತರಬೇತಿಗೆ ಅರ್ಜಿ ಆಹ್ವಾನ

ಆಯ್ಕೆ ವಿಧಾನ:
ಅಭ್ಯರ್ಥಿಗಳ ಅಂತಿಮ ಆಯ್ಕೆಯನ್ನು CEPTAM ನಿಂದ ಪ್ರಯೋಗಾಲಯಗಳು/ಸಂಸ್ಥೆಗಳಲ್ಲಿನ ಆಯಾ ನೇಮಕಾತಿ ಪ್ರಾಧಿಕಾರಗಳಿಗೆ ಶಿಫಾರಸು ಮಾಡಲಾಗುತ್ತದೆ, ಅವರು ಪ್ರಮಾಣಪತ್ರಗಳು/ದಾಖಲೆಗಳ ಪರಿಶೀಲನೆ ಸೇರಿದಂತೆ ಎಲ್ಲಾ ಅಗತ್ಯ ಪೂರ್ವ ನೇಮಕಾತಿ ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ನಂತರ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿಯ ಕೊಡುಗೆಗಳನ್ನು ನೀಡುತ್ತಾರೆ. CEPTAM ಅಭ್ಯರ್ಥಿಗಳಿಗೆ ಅವರ ತಾತ್ಕಾಲಿಕ ಆಯ್ಕೆಯ ಬಗ್ಗೆ ತಿಳಿಸುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News