ಶಿಕ್ಷಕರ ಎಡವಟ್ಟಿಗೆ ಬಾರದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಪ್ರವೇಶ ಪತ್ರ: ಪೋಷಕರ ಪ್ರತಿಭಟನೆ

SSLC Exam: ಶಿಕ್ಷಕರ ಆಜಾಗರೂಕತೆಯಿಂದಾಗಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವಿದ್ಯಾರ್ಥಿಯ ವರ್ಷದ ಭವಿಷ್ಯವೇ ಹಾಳಾದಂತಾಗಿದೆ. ಇದೀಗ ಶಿಕ್ಷಕರ ನಿರ್ಲಕ್ಷ್ಯವನ್ನು ಖಂಡಿಸಿ ವಿದ್ಯಾರ್ಥಿಯ ಪೋಷಕರು ಹಾವೇರಿ ಡಿಸಿ ಕಚೇರಿ ಎದುರು ವಿದ್ಯಾರ್ಥಿಯೊಂದಿಗೆ ಪ್ರತಿಭಟನೆ ನಡೆಸುತ್ತಿದ್ದಾರೆ. 

Written by - Yashaswini V | Last Updated : Mar 25, 2024, 11:09 AM IST
  • ಶಿಕ್ಷಕರ ಎಡವಟ್ಟಿಗೆ ಬಾರದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಪ್ರವೇಶ ಪತ್ರ
  • ಹಾವೇರಿ ಜಿಲ್ಲೆ ರಾಣೆಬೇನ್ನೂರ ತಾ. ಹರನಗಿರಿ ಗ್ರಾಮದ ಸರಕಾರಿ ಪ್ರೌಢ ಶಾಲೆ ವಿದ್ಯಾರ್ಥಿ
  • ಅಭಿಷೇಕ ಜರಮಲ್ಲ ಎಂಬ ವಿಧ್ಯಾರ್ಥಿ ಸಿಗದ ಎಸ್‌ಎಸ್‌ಎಲ್‌ಸಿ ಪ್ರವೇಶ ಪತ್ರ
ಶಿಕ್ಷಕರ ಎಡವಟ್ಟಿಗೆ ಬಾರದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಪ್ರವೇಶ ಪತ್ರ: ಪೋಷಕರ ಪ್ರತಿಭಟನೆ  title=

SSLC Student Admit Card: ಶಿಕ್ಷಕರ ಎಡವಟ್ಟಿನಿಂದಾಗಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗೆ ಪ್ರವೇಶ ಪತ್ರ ಕೈತಪ್ಪಿರುವ ಘಟನೆ ಹಾವೇರಿ ಜಿಲ್ಲೆ ರಾಣೆಬೇನ್ನೂರ ತಾ. ಹರನಗಿರಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆದಿದೆ. ಅಭಿಷೇಕ ಜರಮಲ್ಲ ಎಂಬ ವಿದ್ಯಾರ್ಥಿಯೇ ಆ ನತದೃಷ್ಟ ಬಾಲಕ ಎಂದು ವರದಿಯಾಗಿದೆ. 

ಶಿಕ್ಷಕರ ಆಜಾಗರೂಕತೆಯಿಂದಾಗಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವಿದ್ಯಾರ್ಥಿಯ ವರ್ಷದ ಭವಿಷ್ಯವೇ ಹಾಳಾದಂತಾಗಿದೆ. ಇದೀಗ ಶಿಕ್ಷಕರ ನಿರ್ಲಕ್ಷ್ಯವನ್ನು ಖಂಡಿಸಿ ವಿದ್ಯಾರ್ಥಿಯ ಪೋಷಕರು ಹಾವೇರಿ ಡಿಸಿ ಕಚೇರಿ ಎದುರು ವಿದ್ಯಾರ್ಥಿಯೊಂದಿಗೆ ಪ್ರತಿಭಟನೆ ನಡೆಸುತ್ತಿದ್ದಾರೆ. 

ಇದನ್ನೂ ಓದಿ- ಬೆಂಗಳೂರಿನಲ್ಲಿ ಉದ್ಯೋಗಾವಕಾಶ!; ತಿಂಗಳಿಗೆ 25 ಲಕ್ಷ ಸಂಬಳ ನೀಡುವ ಈ ಕೆಲಸಕ್ಕೆ ಇಂದೇ ಅರ್ಜಿ ಸಲ್ಲಿಸಿ

ವಾಸ್ತವವಾಗಿ, ಅಲರ್ಜಿಯಿಂದಾಗಿ ಮೊಡವೆ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕ ಅಭಿಷೇಕ್, ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಇದರಿಂದಾಗಿ ಶಾಲೆಗೆ ಬಾರದೇ ಚಿಕಿತ್ಸೆಗೆಂದು ಆಸ್ಪತ್ರೆ ಸೇರಿದ್ದ ವಿದ್ಯಾರ್ಥಿಗೆ  ಶಿಕ್ಷಕರು ಹಾಜರಾತಿ ಕೊರತೆಯ ಕಾರಣವನ್ನು ನೀಡಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪ್ರವೇಶ ಪತ್ರ ಕೈ ತಪ್ಪಿದೆ. 

ಇನ್ನೂ ಶಿಕ್ಷಕರ ಎಡವಟ್ಟಿನಿಂದ ತಮ್ಮ ಮಗನ ವರ್ಷದ ಭವಿಷ್ಯ ಹಾಳಾಗಿದೆ ಎಂದು ಮಗನ ಭವಿಷ್ಯ ನೆನೆದು ಕಣ್ಣೀರು ಹಾಕೀರುವ ಪಾಲಕರು, ಈ ಹಿನ್ನಲೆ ಮುಖ್ಯ ಶಿಕ್ಷಕರ ವಿರುದ್ಧ ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ವಿದ್ಯಾರ್ಥಿ ಮತ್ತು ಪಾಲಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಡಿಸಿ ಕಚೇರಿ ಮುಂದೆ ಅಣುಕು ಪರೀಕ್ಷೆ ಬರೆದು ವಿದ್ಯಾರ್ಥಿ ಅಭಿಷೇಕ್ ಹಾಗೂ ಪಾಲಕರು ಪ್ರತಿಭಟನೆ ನಡೆಸಿದ್ದು, ವಿದ್ಯಾರ್ಥಿಯ ಮೆಡಿಕಲ್ ದಾಖಲಾತಿ ನೀಡಿ ಹಾಜರಾತಿ ನೀಡ್ಬೇಕಿತ್ತು ಎಂದು ಆಕ್ರೋಶ ಹೊರಹಾಕಿದ್ದಾರೆ. 

ಇದನ್ನೂ ಓದಿ- Career Updates: ಹೊಸ ಐಟಿಐ ಸಂಸ್ಥೆ ಪ್ರಾರಂಭಿಸಲು ಪೋರ್ಟಲ್ ಮೂಲಕ ಅರ್ಜಿ ಆಹ್ವಾನ

ಈ ಸಂಬಂಧ ಡಿ‌ಡಿ‌ಪಿ‌ಐ ಸುರೇಶ್ ಹುಗ್ಗಿ ಮತ್ತು ಎಡಿಸಿ ವೀರಮಲ್ಲಪ್ಪ ಪೂಜಾರ್ ಮೂಲಕ ಡಿಸಿಗೆ ಮನವಿ ನೀಡಿ ತಮ್ಮ ಮಗನಿಗೆ ಭವಿಷ್ಯದ ಪ್ರಮುಖ ಘಟ್ಟವಾಗಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವಂತೆ ಅನುವು ಮಾಡಿಕೊಡುವಂತೆ ಮನವಿ ಸಲ್ಲಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News