Career Updates: ಹೊಸ ಐಟಿಐ ಸಂಸ್ಥೆ ಪ್ರಾರಂಭಿಸಲು ಪೋರ್ಟಲ್ ಮೂಲಕ ಅರ್ಜಿ ಆಹ್ವಾನ

  2024 ನೇ ಸಾಲಿನಲ್ಲಿ ಹೊಸ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಪ್ರಾರಂಭಿಸಲು ಹಾಗೂ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಹೆಚ್ಚುವರಿ ವೃತ್ತಿ ಘಟಕಗಳನ್ನು ಪ್ರಾರಂಭಿಸಲು ಎನ್.ಸಿ.ವಿ.ಟಿ ಸಂಯೋಜನೆ ಪಡೆಯಲು ಮತ್ತು ಸ್ಥಳಾಂತರಗೊಂಡ ಸಂಸ್ಥೆಗಳು ಮರು ಸಂಯೋಜನೆ ಪಡೆಯುವ ಸಂಬಂಧ ಸಂಯೋಜನಾ ಪ್ರಕ್ರಿಯೆಗಳನ್ನು ಕೈಗೊಳ್ಳಲು ಡಿ.ಜಿ.ಟಿ ನವದೆಹಲಿರವರ NIMI portal (www.nimionlineadmission.in) ನಲ್ಲಿ ಅರ್ಜಿ ಸಲ್ಲಿಸಲು ತಿಳಿಸಿದೆ.

Written by - Manjunath N | Last Updated : Mar 23, 2024, 04:00 PM IST
  • ಹೊಸದಾಗಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಪ್ರಾರಂಭಿಸಲು ಕನಿಷ್ಠ ನಾಲ್ಕು ವೃತ್ತಿಗಳಿಗೆ ಎನ್.ಸಿ.ವಿ.ಟಿ ಸಂಯೋಜನೆ ಪಡೆಯಬೇಕಾಗಿರುತ್ತದೆ
  • ಡಿಜಿಟಿ ನಿಯಮಾನುಸಾರ ಕಟ್ಟಡ,ವಿದ್ಯುತ್, ಯಂತ್ರೋಪಕರಣ, ಸಿಬ್ಬಂದಿ ಮತ್ತು ಇತರೆ ಮೂಲಭೂತ ಸೌಕರ್ಯಗಳನ್ನು ಹೊಂದಿರಬೇಕಾಗಿರುತ್ತದೆ
  • ಪ್ರಸ್ತುತ ಎನ್.ಸಿ.ವಿ.ಟಿ ಸಂಯೋಜನೆ ಹೊಂದಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳು ಹೆಚ್ಚುವರಿ ವೃತ್ತ/ಘಟಕಗಳನ್ನು ಪ್ರಾರಂಭಿಸಲು ಕನಿಷ್ಠ 4 ಗ್ರೆಡಿಂಗ್ ಹೊಂದಿರಬೇಕು
 Career Updates: ಹೊಸ ಐಟಿಐ ಸಂಸ್ಥೆ ಪ್ರಾರಂಭಿಸಲು ಪೋರ್ಟಲ್ ಮೂಲಕ ಅರ್ಜಿ ಆಹ್ವಾನ title=

ಬೆಂಗಳೂರು:  2024 ನೇ ಸಾಲಿನಲ್ಲಿ ಹೊಸ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಪ್ರಾರಂಭಿಸಲು ಹಾಗೂ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಹೆಚ್ಚುವರಿ ವೃತ್ತಿ ಘಟಕಗಳನ್ನು ಪ್ರಾರಂಭಿಸಲು ಎನ್.ಸಿ.ವಿ.ಟಿ ಸಂಯೋಜನೆ ಪಡೆಯಲು ಮತ್ತು ಸ್ಥಳಾಂತರಗೊಂಡ ಸಂಸ್ಥೆಗಳು ಮರು ಸಂಯೋಜನೆ ಪಡೆಯುವ ಸಂಬಂಧ ಸಂಯೋಜನಾ ಪ್ರಕ್ರಿಯೆಗಳನ್ನು ಕೈಗೊಳ್ಳಲು ಡಿ.ಜಿ.ಟಿ ನವದೆಹಲಿರವರ NIMI portal (www.nimionlineadmission.in) ನಲ್ಲಿ ಅರ್ಜಿ ಸಲ್ಲಿಸಲು ತಿಳಿಸಿದೆ.

ಇದನ್ನೂ ಓದಿ: ಈ ಬಾರಿ IPL ಟ್ರೋಫಿ ಗೆಲ್ಲೋದು ಇದೇ ತಂಡ, ಡೌಟೇ ಬೇಡ: ಸೀಸನ್ ಆರಂಭಕ್ಕೂ ಮುನ್ನ ಭವಿಷ್ಯ ನುಡಿದ ಸ್ಟಾರ್ ಬೌಲರ್

ಅರ್ಜಿ ಸಲ್ಲಿಸಬೇಕಾದಲ್ಲಿ ಸಂಸ್ಥೆಯವರು ಡಿ.ಜಿ.ಟಿ ನಿಯಮಾನುಸಾರ ಮೂಲಭೂತ ಸೌಕರ್ಯಗಳನ್ನು ಹೊಂದಿರಬೇಕಾರುತ್ತದೆ ಹಾಗೂ ಸಂಯೋಜನೆಗಾಗಿ ನಿಮಿ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಕಡ್ಡಾಯವಾಗಿ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕಾಗಿರುತ್ತದೆ.

ಹೊಸದಾಗಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಪ್ರಾರಂಭಿಸಲು ಕನಿಷ್ಠ ನಾಲ್ಕು ವೃತ್ತಿಗಳಿಗೆ ಎನ್.ಸಿ.ವಿ.ಟಿ ಸಂಯೋಜನೆ ಪಡೆಯಬೇಕಾಗಿರಯತ್ತದೆ ಹಾಗೂ ಡಿಜಿಟಿ ನಿಯಮಾನುಸಾರ ಕಟ್ಟಡ,ವಿದ್ಯುತ್, ಯಂತ್ರೋಪಕರಣ, ಸಿಬ್ಬಂದಿ ಮತ್ತು ಇತರೆ ಮೂಲಭೂತ ಸೌಕರ್ಯಗಳನ್ನು ಹೊಂದಿರಬೇಕಾಗಿರುತ್ತದೆ ಮತ್ತು ಪ್ರಸ್ತುತ ಎನ್.ಸಿ.ವಿ.ಟಿ ಸಂಯೋಜನೆ ಹೊಂದಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳು ಹೆಚ್ಚುವರಿ ವೃತ್ತ/ಘಟಕಗಳನ್ನು ಪ್ರಾರಂಭಿಸಲು ಕನಿಷ್ಠ 4 ಗ್ರೆಡಿಂಗ್ ಹೊಂದಿರಬೇಕು.

ಇದನ್ನೂ ಓದಿ: Mohammed Shami: ಕ್ರಿಕೆಟಿಗ 'ಶಮಿ ಮರ್ಡರ್ ಪ್ಲಾನ್..'! ಬಿಜೆಪಿ ಸರ್ಕಾರ ಮತ್ತು ಯುಪಿ ಪೊಲೀಸರ ಸಹಾಯ

ಪ್ರಸ್ತುತ ಎನ್.ಸಿ.ವಿ.ಟಿ ಸಂಯೋಜನೆ ಹೊಂದಿ ಕಾರ್ಯನಿರ್ವಹಿಸುತ್ತಿರುವ ಸ್ಥಳದಿಂದ ಸಂಸ್ಥೆಯು ಬೇರೊಂದು ಸ್ಥಳಕ್ಕೆ ಸ್ಥಳಾಂತರಗೊಂಡಿದ್ದಲ್ಲಿ ಡಿ.ಜಿ.ಟಿ ನಿಯಮಾನುಸಾರ ಸಂಯೋಜನೆ ರದ್ದಾಗುತ್ತದೆ. ಈಗಾಗಲೇ ಸಂಯೋಜನೆ ಪಡೆದ ಸ್ಥಳದಿಂದ ಬೇರೊಂದು ಸ್ಥಳಕ್ಕೆ ಸ್ಥಳಾಂತರಗೊಳಿಸಿ, ನ್ಯಾಯಾಲಯಗಳಲ್ಲಿ ಪ್ರಕರಣ ಹೂಡಿರುವ ಸಂಸ್ಥೆಗಳು ಸ್ಥಳಾಂತರಗೊಂಡಿರುವ ಸ್ಥಳದಲ್ಲಿ ಮರು ಸಂಯೋಜನೆ ಪಡೆಯಲು ಕಡ್ಡಾಯವಾಗಿ ನಿರಾಕ್ಷೇಪಣಾ ಪತ್ರ ಪಡೆದು ಆನ್‌ಲೈನ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಸೂಚಿಸಿದೆ. ಸ್ಥಳಾಂತರಗೊಂಡಿರುವ ಸಂಸ್ಥೆಯವರು ನಿಯಮಾನುಸಾರ ಸಂಯೋಜನೆ ಪಡೆದ ನಂತರ 2024 ನೇ ಸಾಲಿನಲ್ಲಿ ಪ್ರವೇಶಾತಿಗಳಿಗೆ ಅನುಮತಿಸಲಾಗುವುದು ಇಲ್ಲವಾದಲ್ಲಿ ಪ್ರವೇಶಾತಿಗಳಿಗೆ ಅವಕಾಶಗಳಿರುವುದಿಲ್ಲ ಹಾಗೂ ಎನ್.ಸಿ.ವಿ.ಟಿ ಸಂಯೋಜನೆಯನ್ನು ರದ್ದುಪಡಿಸಲು ಕ್ರಮವಹಿಸಲಾಗುವುದು.

ಸಂಯೋಜನೆ ಹೊಂದಲು ಡಿ.ಜಿ.ಟಿ ನಿಯಮಾನುಸಾರ ಅರ್ಹತೆ ಹೊಂದಿರುವ ಸಂಸ್ಥೆಗಳು ನಿರಾಕ್ಷೇಪಣಾ ಪತ್ರ ಪಡೆಯಲು ಮಾರ್ಚ್ 30 ರೊಳಗಾಗಿ ಆಯುಕ್ತಾಲಕ್ಕೆ ಅರ್ಜಿ ಸಲ್ಲಿಸಬೇಕು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News