Suspected terrorist Arif Arrest: ಆಲ್ ಖೈದಾ ಜೊತೆ ನಂಟು ಆರೋಪ: ಬೆಂಗಳೂರಿನಲ್ಲಿ ಶಂಕಿತ ಉಗ್ರನ ಬಂಧನ

Suspected terrorist Arif Arrested in Bengaluru: ಖಾಸಗಿ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಪ್ರಸ್ತುತ ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದ. ಕಳೆದ ಎರಡು ವರ್ಷಗಳಿಂದ ಆಲ್ ಖೈದಾ ಉಗ್ರ ಸಂಘಟನೆಯೊಂದಿಗೆ ಸಂಪರ್ಕದಲ್ಲಿದ್ದ ಆರೀಫ್, ಆಲ್ ಖೈದಾಗೆ ಸಂಬಂಧಿಸಿದ ಟೆಲಿಗ್ರಾಂ ಮತ್ತಿತರ ಗ್ರೂಪ್ ಗಳಲ್ಲಿ ಸಕ್ರಿಯನಾಗಿದ್ದ. ಈತನಿಗೆ ಪತ್ನಿ ಜೊತೆ ಇಬ್ಬರು ಮಕ್ಕಳಿದ್ದು, ಈತ ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದರ ಬಗ್ಗೆ ಮಾಹಿತಿ ಇರಲಿಲ್ಲ ಎನ್ನಲಾಗಿದೆ.

Written by - VISHWANATH HARIHARA | Edited by - Bhavishya Shetty | Last Updated : Feb 11, 2023, 12:06 PM IST
    • ಆಲ್ ಖೈದಾ ಸಂಘಟನೆಯೊಂದಿಗೆ ಸಂಪರ್ಕದಲ್ಲಿದ್ದ ವ್ಯಕ್ತಿಯ ಬಂಧನ
    • ಆಂತರಿಕ ಭದ್ರತಾ ವಿಭಾಗ ಹಾಗೂ ಕೇಂದ್ರ ತನಿಖಾ ಸಂಸ್ಥೆಗಳ ಜಂಟಿ ಕಾರ್ಯಾಚರಣೆ
    • ಥಣಿಸಂದ್ರದ ಮಂಜುನಾಥ ನಗರದಲ್ಲಿ ವಾಸವಿದ್ದ ಆರೀಫ್ ಎಂಬ ಶಂಕಿತ ವ್ಯಕ್ತಿ
Suspected terrorist Arif Arrest: ಆಲ್ ಖೈದಾ ಜೊತೆ ನಂಟು ಆರೋಪ: ಬೆಂಗಳೂರಿನಲ್ಲಿ ಶಂಕಿತ ಉಗ್ರನ ಬಂಧನ  title=
Suspected Terrorist Arif

Suspected terrorist Arif Arrest: ಬೆಂಗಳೂರು: ಆಂತರಿಕ ಭದ್ರತಾ ವಿಭಾಗ (ಐ.ಎಸ್.ಡಿ) ಹಾಗೂ ಕೇಂದ್ರ ತನಿಖಾ ಸಂಸ್ಥೆಗಳ ಜಂಟಿ ಕಾರ್ಯಾಚರಣೆಯಲ್ಲಿ ಆಲ್ ಖೈದಾ ಸಂಘಟನೆಯೊಂದಿಗೆ ಸಂಪರ್ಕದಲ್ಲಿದ್ದ ವ್ಯಕ್ತಿಯನ್ನ ಬಂಧಿಸಲಾಗಿದೆ. ಬೆಳಗಿನ ಜಾವ ನಡೆದ ಮಿಂಚಿನ ಕಾರ್ಯಾಚರಣೆಯಲ್ಲಿ ನಗರದ ಥಣಿಸಂದ್ರದ ಮಂಜುನಾಥ ನಗರದಲ್ಲಿ ವಾಸವಿದ್ದ ಆರೀಫ್ ಎಂಬ ಶಂಕಿತನನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: Viral News: ಗಂಡನ ಈ ಕೃತ್ಯದಿಂದ ಬೇಸತ್ತ 42 ವರ್ಷದ ಅತ್ತೆ 27ರ ಅಳಿಯನ ಜೊತೆ ಎಸ್ಕೇಪ್!

ಖಾಸಗಿ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಪ್ರಸ್ತುತ ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದ. ಕಳೆದ ಎರಡು ವರ್ಷಗಳಿಂದ ಆಲ್ ಖೈದಾ ಉಗ್ರ ಸಂಘಟನೆಯೊಂದಿಗೆ ಸಂಪರ್ಕದಲ್ಲಿದ್ದ ಆರೀಫ್, ಆಲ್ ಖೈದಾಗೆ ಸಂಬಂಧಿಸಿದ ಟೆಲಿಗ್ರಾಂ ಮತ್ತಿತರ ಗ್ರೂಪ್ ಗಳಲ್ಲಿ ಸಕ್ರಿಯನಾಗಿದ್ದ. ಈತನಿಗೆ ಪತ್ನಿ ಜೊತೆ ಇಬ್ಬರು ಮಕ್ಕಳಿದ್ದು, ಈತ ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದರ ಬಗ್ಗೆ ಮಾಹಿತಿ ಇರಲಿಲ್ಲ ಎನ್ನಲಾಗಿದೆ.

ಆರೋಪಿಯ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದ ಕೇಂದ್ರ ತನಿಖಾ ಸಂಸ್ಥೆಗಳು ರಾಜ್ಯ ಆಂತರಿಕ ಭದ್ರತಾ ವಿಭಾಗದ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿತ್ತು ಎನ್ನಲಾಗಿದೆ‌. ಸದ್ಯ ಕಾರ್ಯಾಚರಣೆ ನಡೆಸಿ ಮುಂಬರುವ ಮಾರ್ಚ್ ತಿಂಗಳಲ್ಲಿ ಇರಾಕ್ ಮೂಲಕ ಸಿರಿಯಾಗೆ ತೆರಳಲು ಸಿದ್ಧತೆ ನಡೆಸಿದ್ದ ಶಂಕಿತನನ್ನು ಬಂಧಿಸಲಾಗಿದೆ.

ಸದ್ಯ ತನಿಖೆ ಮುಂದುವರೆಸಿರುವ ಅಧಿಕಾರಿಗಳು ಟೆಕ್ನಿಕಲ್ ಎವಿಡೆನ್ಸ್ ಗಳನ್ನು ಕಲೆಕ್ಟ್ ಮಾಡುತ್ತಿದ್ದಾರೆ. ಶಂಕಿತ ಆರೀಫ್ ನ  ಮೊಬೈಲ್, ಲ್ಯಾಪ್ ಟಾಪ್, ಪೆನ್ ಡ್ರೈವ್, ಹಾರ್ಡ್ ಡಿಸ್ಕ್, ಟೆಕ್ನಿಕಲ್ ಪೇಪರ್ ದಾಖಲೆಗಳನ್ನು ಸಹ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ:Success Story: ಅಪ್ಪನ ಕೆನ್ನೆಗೆ ಬಾರಿಸಿದ ಪೊಲೀಸ್: ಸೇಡು ತೀರಿಸಿಕೊಳ್ಳಲು ಮಗ ತೆಗೆದುಕೊಂಡ ನಿರ್ಧಾರ ಊಹಿಸಲು ಅಸಾಧ್ಯ!

ಇನ್ನು ಆರೀಫ್‌ನ ಬ್ಯಾಂಕ್ ಅಕೌಂಟ್ ಡೇಟಾದ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಅಕೌಂಡ್ ಫ್ರೀಜ್ ಮಾಡುವ ಸಾಧ್ಯತೆ ಇದೆ. ಶಂಕಿತ ಉಗ್ರನ ಖಾತೆಗೆ ಹೊರ ದೇಶದಿಂದ ಹಣ ವರ್ಗಾವಣೆಯಗಿದೀಯಾ, ಈತ ಯಾರಿಗಾದರು ಹಣ ವರ್ಗಾವಣೆ ಮಾಡಿದ್ದಾನಾ ಎಂಬ ಬಗ್ಗೆಯೂ ಪರಿಶೀಲನೆ ನಡೆಸಲಾಗಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News