/kannada/photo-gallery/shikanji-buttermilk-is-helpful-in-dissolving-stubborn-obesity-around-the-waist-249358 ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ! ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ! 249358

ಕಬಾಬ್ ಮಾರೋನಿಗೆ RSS ಪ್ರಚಾರಕನ ವೇಷ: ಬಿಜೆಪಿ ಟಿಕೆಟ್ ಕೊಡಿಸೋದಾಗಿ ವಂಚಿಸಿದ ಚೈತ್ರಾ ಕುಂದಾಪುರ ಅಂಡ್ ಟೀಂ ಬಂಧನ

ಚೈತ್ರಾ ಕುಂದಾಪುರ ಈಕೆಯ ಹೆಸರನ್ನು ಅನೇಕ ಬಾರಿ ನೀವು ಕೇಳಿರುತ್ತೀರಾ.. ಹಿಂದೂಪರ ಕಾರ್ಯಕರ್ತೆ ಎಂದು ಗುರುತಿಸಿಕೊಂಡು ಅನೇಕ ವೇದಿಕೆಗಳಲ್ಲಿ ಭಾಷಣ ಮಾಡುತ್ತಿದ್ದ ಈಕೆ ಈಗ ಸಿಸಿಬಿ ಪೊಲೀಸರ ಅತಿಥಿಯಾಗಿದ್ದಾಳೆ.

Written by - VISHWANATH HARIHARA | Last Updated : Sep 13, 2023, 09:43 AM IST
  • ಗೋವಿಂದ ಪೂಜಾರಿಯನ್ನು ನಂಬಿಸಲು ಚೈತ್ರಾ ಅಂಡ್ ಗ್ಯಾಂಗ್ ಮಾಡಿದ್ದ ಪ್ಲಾನ್ ಒಂದೆರಡಲ್ಲ.
  • ಯಾರನ್ನೋ ಒಬ್ಬನನ್ನ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸದಸ್ಯ ಎಂದು ತೋರಿಸಿದ್ದರು
  • ಚಿಕ್ಕಮಗಳೂರಿನಲ್ಲಿ ಸಾಮಾನ್ಯ ವ್ಯಕ್ತಿಗೆ ಆರ್ ಎಸ್ ಎಸ್ ಪ್ರಚಾರಕನ ಮೇಕಪ್ ಮಾಡಿಸಲಾಗಿತ್ತು
ಕಬಾಬ್ ಮಾರೋನಿಗೆ RSS ಪ್ರಚಾರಕನ ವೇಷ: ಬಿಜೆಪಿ ಟಿಕೆಟ್ ಕೊಡಿಸೋದಾಗಿ ವಂಚಿಸಿದ ಚೈತ್ರಾ ಕುಂದಾಪುರ ಅಂಡ್ ಟೀಂ ಬಂಧನ title=

ಬೆಂಗಳೂರು: ಚೈತ್ರಾ ಕುಂದಾಪುರ ಈಕೆಯ ಹೆಸರನ್ನು ಅನೇಕ ಬಾರಿ ನೀವು ಕೇಳಿರುತ್ತೀರಾ.. ಹಿಂದೂಪರ ಕಾರ್ಯಕರ್ತೆ ಎಂದು ಗುರುತಿಸಿಕೊಂಡು ಅನೇಕ ವೇದಿಕೆಗಳಲ್ಲಿ ಭಾಷಣ ಮಾಡುತ್ತಿದ್ದ ಈಕೆ ಈಗ ಸಿಸಿಬಿ ಪೊಲೀಸರ ಅತಿಥಿಯಾಗಿದ್ದಾಳೆ.

ಮಾಡೋದು ಅನಾಚಾರ ಮನೆ ಮುಂದೆ ವೃಂದಾವನ ಎಂಬತಿದೆ ಈಕೆಯ ಕೃತ್ಯ. ಹಿಂದೂ ಕಾರ್ಯಕರ್ತೆ ಎಂಬ ಮುಖವಾಡ ಧರಿಸಿ ಆರ್ ಎಸ್ ಎಸ್ ಮತ್ತು ಬಿಜೆಪಿಗೆ ದೋಖಾ ಮಾಡಿರುವ ಈಕೆ ಕಳೆದ ವಿಧಾನಸಭಾ ಚುನಾವಣೆಯನ್ನೇ ಬಂಡವಾಳ‌ ಮಾಡಿಕೊಂಡು ಉದ್ಯಮಿಗೆ ಐದು ಕೋಟಿ ಉಂಡೇನಾಮ ಹಾಕಿದ್ದಾಳೆ. ಈ ಬಗ್ಗೆ ಉದ್ಯಮಿ ಗೋವಿಂದ ಬಾಬು ಪೂಜಾರಿ, ಬಂಡೇಪಾಳ್ಯ ಪೊಲೀಸ್ ಠಾಣೆ ದೂರು ನೀಡಿದ್ದು,ಸ್ವಯಂ ಘೋಷಿತ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅಂಡ್ ಟೀಂ ವಿರುದ್ಧ ಎಫ್ಐಆರ್ ದಾಖಲಾಗಿದೆ. ಚೆಫ್ ಲಾಕ್ ಸಂಸ್ಥೆ ಮುಖ್ಯಸ್ಥನಾಗಿರುವ ಗೋವಿಂದ ಬಾಬು ಪೂಜಾರಿ ಬೈಂದೂರು ವಿಧಾನಸಭೆ ಬಿಜೆಪಿ ಟಿಕೆಟ್ ಬಗ್ಗೆ ಸ್ನೇಹಿತರ ಬಳಿ ಚರ್ಚೆ ನಡೆಸುತ್ತಿದ್ದರು. ಆಗ ಎಂಟ್ರಿ ಕೊಟ್ಟ ಈ ಚೈತ್ರಾ ಕುಂದಾಪುರ, ಟಿಕೆಟ್ ಕೊಡಿಸುವುದಾಗಿ ನಂಬಿಸಿದ್ದಾಳೆ.

ಇದನ್ನೂ ಓದಿ: ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಸೌಲಭ್ಯಕ್ಕಾಗಿ ಅರ್ಜಿ ಅಹ್ವಾನ

ಗೋವಿಂದ ಪೂಜಾರಿಯನ್ನು ನಂಬಿಸಲು ಚೈತ್ರಾ ಅಂಡ್ ಗ್ಯಾಂಗ್ ಮಾಡಿದ್ದ ಪ್ಲಾನ್ ಒಂದೆರಡಲ್ಲ.‌ ಯಾರನ್ನೋ ಒಬ್ಬನನ್ನ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸದಸ್ಯ ಎಂದು ತೋರಿಸಿದ್ದರು.‌ ಚಿಕ್ಕಮಗಳೂರಿನಲ್ಲಿ ಸಾಮಾನ್ಯ ವ್ಯಕ್ತಿಗೆ ಆರ್ ಎಸ್ ಎಸ್ ಪ್ರಚಾರಕನ ಮೇಕಪ್ ಮಾಡಿಸಲಾಗಿತ್ತು. ಚಿಕ್ಕಮಗಳೂರು ಆರ್ ಎಸ್ಎಸ್ ಮುಖ್ಯಸ್ಥ ವಿಶ್ವನಾಥ್ ಜೀ ಹೆಸರಲ್ಲಿ ನಕಲಿ ವ್ಯಕ್ತಿ ರೆಡಿ‌ ಮಾಡಲಾಗಿತ್ತು. ನಾಯ್ಕ್ ಹೆಸರಿನ ಬಿಜೆಪಿ ಪ್ರಚಾರ ಸಮಿತಿ ಸದಸ್ಯ ಎಂದು ಕಬಾಬ್ ಮಾರುವವನಿಗೆ ವೇಷ ಹಾಕಿಸಿದ್ದರು.‌ಆರ್ ಎಸ್ ಎಸ್ ಪ್ರಚಾರಕ ಅಂತಾ ಧನರಾಜ್ ಎಂಬುವವನನ್ನು ನೇಮಿಸಿದ್ರು. ಅಷ್ಟೇ ಅಲ್ಲದೇ ಅಭಿನವ ಹಾಲಶ್ರೀ ಸ್ವಾಮೀಜಿ ಎಂಬುವವರಿಗೆ 1.5 ಕೋಟಿ ಹಣ ಕೊಡಿಸಿದ್ದರು.‌

ಇದನ್ನೂ ಓದಿ : 60 ಲಕ್ಷ‌ ಮಹಿಳೆಯರಿಗೆ ಗೃಹಲಕ್ಷ್ಮೀ ಹಣ : ಸಚಿವೆ ಲಕ್ಷ್ಮೀ ಹಬ್ಬಾಳ್ಕರ್ ಮಾಹಿತಿ

ಸ್ವಾಮೀಜಿ ಹೇಳಿದರೆ ಟಿಕೆಟ್ ಪಕ್ಕಾ ಎಂದು ನಂಬಿಸಿ ವಿಜಯನಗರದಲ್ಲಿ ಹಣ ಕೊಡುವಂತೆ ಮಾಡಿದ್ದರು. ಹೀಗೆ ಸ್ವಾಮೀಜಿ, ಪ್ರಚಾರಕ ಸದಸ್ಯ ಎಂದು ಬರೋಬ್ಬರಿ ಐದು ಕೋಟಿ ನುಂಗಿದ್ದ ಚೈತ್ರಾಗೆ ಗಗನ್ ಕಡೂರು, ಪ್ರಸಾದ್, ಅಭಿನವ್ ,ಅಭಿನವ ಹಾಲಶ್ರಿ ಸ್ವಾಮಿ, ರಮೇಶ್, ನಾಯ್ಕ್ ಸಾಥ್ ನೀಡಿದ್ದರು. ಟಿಕೆಟ್ ಕೊಡಿಸದೇ ಚೈತ್ರಾ ದಿನ ದೂಡಿ ಕೊನೆಗೆ ನಕಲಿ ಆರ್ ಎಸ್ ಎಸ್ ಪ್ರಚಾರಕ ವಿಶ್ವನಾಥ್ ಜೀ ಮೃತಪಟ್ಟಿದ್ದಾರೆಂದು ಕಥೆ ಕಟ್ಟಿದ್ರು. ಇತ್ತ ಟಿಕೆಟ್ ಇಲ್ಲ, ಹಣವೂ ಇಲ್ಲವೆಂದಾಗ ಸ್ವತಃ ತಾನೇ ತನಿಖೆ ನಡೆಸಿದ್ದ ಉದ್ಯಮಿ ಗೋವಿಂದ ಬಾಬು ಪೂಜಾರಿ, ಎಲ್ಲಾ ವಿಚಾರಿಸಿದಾಗ ವ್ಯವಸ್ಥಿತವಾಗಿ ಮೋಸ ಮಾಡಿರೋದು ಗೊತ್ತಾಗಿದೆ. ಸದ್ಯ ಕೇಸ್ ಬಂಡೆಪಾಳ್ಯದಿಂಸ ಸಿಸಿಬಿಗೆ ವರ್ಗಾವಣೆಯಾಗಿದ್ದು, ಸಿಸಿಬಿ ತನಿಖೆ ನಡೆಸಿ ಚೈತ್ರಾ ಕುಂದಾಪುರ,ಪ್ರಸಾದ್, ಗಗನ್ ಮತ್ತು ಪ್ರಜ್ವಲ್ ಶೆಟ್ಟಿಯನ್ನ ಅರೆಸ್ಟ್ ಮಾಡಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.