ಹೆಂಡತಿ ಬಿಟ್ಟು ಲವರ್ ಜೊತೆ ಓಡಿಹೋಗಿದ್ದ ನಾಗೇಶ್‌ ಶವವಾಗಿ ಪತ್ತೆ..!

ಕೈ ಹಿಡಿದ ಹೆಂಡತಿಗೆ ಮೋಸ ಮಾಡಿ ಪ್ರಿಯತಮೆ ಜೊತೆ ಓಡಿಹೋಗಿದ್ದವನು ಶವವಾಗಿ ಪತ್ತೆಯಗಿದ್ದಾನೆ. ನಾಗೇಶ್ ಮೃತಪಟ್ಟವನು.‌ ಮೃತ ನಾಗೇಶ್ 6 ವರ್ಷದ ಹಿಂದೆ ಮಧುಶ್ರಿ ಎಂಬಾಕೆಯನ್ನ ಮದುವೆಯಾಗಿದ್ದ. ಕೊಮ್ಮಘಟ್ಟದ ವೀರಭದ್ರ ನಗರದಲ್ಲಿ ವಾಸವಾಗಿದ್ದ ನಾಗೇಶ್ ಗೆ ಸಹನಾ ಎಂಬಾಕೆಯ ಪರಿಚಯವಾಗಿತ್ತು.

Written by - VISHWANATH HARIHARA | Edited by - Krishna N K | Last Updated : Feb 19, 2023, 09:34 PM IST
  • ಕೈ ಹಿಡಿದ ಹೆಂಡತಿಗೆ ಮೋಸ ಮಾಡಿ ಪ್ರಿಯತಮೆ ಜೊತೆ ಓಡಿಹೋಗಿದ್ದ ಯುವಕ.
  • ನಾಗೇಶ ಹೆಂಡತಿಗೆ ಗೊತ್ತಾಗದ ಹಾಗೇ ಸಹನಾಳ ಜೊತೆ ಸಂಬಂಧ ಮುಂದುವರೆಸಿದ್ದ.
  • ವಿಚಾರ ತಿಳಿದ ಹೆಂಡತಿ ಮಧುಶ್ರಿ ಮನೆಯಲ್ಲಿ ಜಗಳ ಕೂಡ ಮಾಡಿ ರಂಪಾಟ ಮಾಡಿದ್ದಳು.
ಹೆಂಡತಿ ಬಿಟ್ಟು ಲವರ್ ಜೊತೆ ಓಡಿಹೋಗಿದ್ದ ನಾಗೇಶ್‌ ಶವವಾಗಿ ಪತ್ತೆ..! title=

ಬೆಂಗಳೂರು : ಕೈ ಹಿಡಿದ ಹೆಂಡತಿಗೆ ಮೋಸ ಮಾಡಿ ಪ್ರಿಯತಮೆ ಜೊತೆ ಓಡಿಹೋಗಿದ್ದವನು ಶವವಾಗಿ ಪತ್ತೆಯಗಿದ್ದಾನೆ. ನಾಗೇಶ್ ಮೃತಪಟ್ಟವನು.‌ ಮೃತ ನಾಗೇಶ್ 6 ವರ್ಷದ ಹಿಂದೆ ಮಧುಶ್ರಿ ಎಂಬಾಕೆಯನ್ನ ಮದುವೆಯಾಗಿದ್ದ. ಕೊಮ್ಮಘಟ್ಟದ ವೀರಭದ್ರ ನಗರದಲ್ಲಿ ವಾಸವಾಗಿದ್ದ ನಾಗೇಶ್ ಗೆ ಸಹನಾ ಎಂಬಾಕೆಯ ಪರಿಚಯವಾಗಿತ್ತು.

ಪರಿಚಯ ಪ್ರೀತಿಗೆ ತಿರುಗಿ ಇಬ್ಬರು ಮದುವೆ ಮಟ್ಟಕ್ಕೆ ಹೋಗಿದ್ದರು. ಇದೇ ಕಾರಣಕ್ಕೆ ನಾಗೇಶ ಹೆಂಡತಿಗೆ ಗೊತ್ತಾಗದ ಹಾಗೇ ಸಹನಾಳ ಜೊತೆ ಸಂಬಂಧ ಮುಂದುವರೆಸಿದ್ದ. ವಿಚಾರ ತಿಳಿದ ಹೆಂಡತಿ ಮಧುಶ್ರಿ ಮನೆಯಲ್ಲಿ ಜಗಳ ಕೂಡ ಮಾಡಿ ರಂಪಾಟ ಮಾಡಿದ್ದಳು. ಹೀಗಾಗಿ ಪ್ರಿಯತಮೆ ಜೊತೆ ಕಳೆದ 10ರಂದು ಮನೆ ಬಿಟ್ಟು ನಾಗೇಶ ಪರಾರಿಯಾಗಿದ್ದ.

ಇದನ್ನೂ ಓದಿ: ಐಎಎಸ್‌ Vs ಐಪಿಎಸ್‌ ವಾರ್‌ : 8 ವರ್ಷಗಳ ನಂತರ ಡಿಕೆ ರವಿ ಸಾವಿನ ಸುದ್ದಿ ಕೆದಕಿದ್ಯಾಕೆ..!

ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ ನಾಗೇಶನ ಶವ ಸದ್ಯ  ಜ್ಞಾನಭಾರತಿ ಠಾಣಾ ವ್ಯಾಪ್ತಿಯಲ್ಲಿ  ಪತ್ತೆಯಾಗಿದೆ. ನೇಣು ಬಿಗಿದ ಸ್ಥಿತಿಯಲ್ಲಿ  ನಾಗೇಶನ ಶವ ಪತ್ತೆಯಾಗಿದ್ದು, ನಾಗೇಶ್ ತಂದೆ ಇದು  ಕೊಲೆ  ಎಂದು ಅನುಮಾನಸಿದ್ದಾರೆ. ಸದ್ಯ ನಾಗೇಶನ ಪ್ರೇಯಸಿ ಸಹನಾ ವಿರುದ್ದ ಜ್ಞಾನಭಾರತಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News