ಕಲರ್‌ ಕಲರ್‌ ಕಾರಿನಲ್ಲಿ ಪತ್ತೆಯಾಯ್ತು ಕೊಳೆತು ನಾರುತ್ತಿದ್ದ ಮೃತದೇಹ!

ಮನೆಯೊಂದರ ಬಳಿ ಕಳೆದ ಎರಡು ವರ್ಷಗಳಿಂದ ಅಂಬಾಸಿಡರ್‌ ಕಾರೊಂದನ್ನು ನಿಲ್ಲಿಸಲಾಗಿತ್ತು. ಕಾರಿನ ಮಾಲೀಕ ಮನೆ ಬೇರೆ ಕಡೆಗೆ ಶಿಫ್ಟ್‌ ಮಾಡುವಾಗ ಈ ಕಾರನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾನೆಂದು ಸ್ಥಳೀಯರು ಹೇಳುತ್ತಾರೆ. ಇನ್ನು ಈ ಕಾರಿನೊಳಗಿಂದ ಕೆಟ್ಟ ವಾಸನೆ ಬರಲು ಆರಂಭಿಸಿದ್ದು, ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

Written by - Bhavishya Shetty | Last Updated : May 14, 2022, 12:45 PM IST
  • ನಿಲ್ಲಿಸಿದ್ದ ಕಾರಿನಲ್ಲಿ ಪತ್ತೆಯಾಯ್ತು ಮೃತದೇಹ
  • ಬೆಂಗಳೂರಿನ ರಾಜಾಜಿನಗರ ಕೈಗಾರಿಕಾ ಪ್ರದೇಶದಲ್ಲಿ ಪತ್ತೆ
  • ಪ್ರಕರಣ ದಾಖಲಿಸಿಕೊಂಡ ಮಾಗಡಿ ರಸ್ತೆ ಪೊಲೀಸರು
ಕಲರ್‌ ಕಲರ್‌ ಕಾರಿನಲ್ಲಿ ಪತ್ತೆಯಾಯ್ತು ಕೊಳೆತು ನಾರುತ್ತಿದ್ದ ಮೃತದೇಹ!  title=
Bengaluru Deadbody

ಬಣ್ಣ ಬಣ್ಣವಾಗಿ ಡಿಸೈನ್‌ ಮಾಡಲಾದ ಕಾರಿನಲ್ಲಿ ಮೃತದೇಹವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನ ರಾಜಾಜಿನಗರ ಕೈಗಾರಿಕಾ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಈ ಕಾರಿನಲ್ಲಿ ಮೃತದೇಹ ಕಂಡುಬಂದಿದೆ. 

ಇದನ್ನು ಓದಿ: ವಿವಾಹ ದಿನ ವರ ಮಾಡಿದ ಈ ಒಂದು ತಪ್ಪಿನಿಂದ ಮುರಿದು ಬಿತ್ತು ಮದುವೆ ..!

ಮನೆಯೊಂದರ ಬಳಿ ಕಳೆದ ಎರಡು ವರ್ಷಗಳಿಂದ ಅಂಬಾಸಿಡರ್‌ ಕಾರೊಂದನ್ನು ನಿಲ್ಲಿಸಲಾಗಿತ್ತು. ಕಾರಿನ ಮಾಲೀಕ ಮನೆ ಬೇರೆ ಕಡೆಗೆ ಶಿಫ್ಟ್‌ ಮಾಡುವಾಗ ಈ ಕಾರನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾನೆಂದು ಸ್ಥಳೀಯರು ಹೇಳುತ್ತಾರೆ. ಇನ್ನು ಈ ಕಾರಿನೊಳಗಿಂದ ಕೆಟ್ಟ ವಾಸನೆ ಬರಲು ಆರಂಭಿಸಿದ್ದು, ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕಾರಿನೊಳಗೆ ಮೃತದೇಹವಿರುವುದು ಕಂಡುಬಂದಿದೆ. ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಮೃತದೇಹದ ಗುರುತು ಇನ್ನು ಸಿಕ್ಕಿಲ್ಲ . ಸದ್ಯ ಶವದ ಪಕ್ಕ ದಾಸರಹಳ್ಳಿ ನಿವಾಸಿ ಬಸಪ್ಪ ಎಂಬವರ ಆಧಾರ್‌ಕಾರ್ಡ್‌ ಮತ್ತು ಮದ್ಯದ ಬಾಟಲ್‌ ಪತ್ತೆಯಾಗಿದೆ. ಇದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಇದನ್ನು ಓದಿ: Weight Loss Food: ಈ ಹಣ್ಣಿನ ಎಲೆಗಳನ್ನು ತಿನ್ನುವುದರಿಂದ ಕಡಿಮೆಯಾಗುತ್ತಂತೆ ತೂಕ

ಮಾಗಡಿ ರಸ್ತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ಪೊಲೀಸ್‌ ಅಧಿಕಾರಿಗಳು, "ವ್ಯಕ್ತಿ ಕೆಲ ದಿನಗಳ ಹಿಂದೆಯೇ ಸಾವನ್ನಪ್ಪಿರಬಹುದು. ಆತನ ಗುರುತು ಪತ್ತೆಗೆ ತನಿಖೆ ಆರಂಭಿಸಲಾಗಿದೆ. ಘಟನೆ ಬಗ್ಗೆ ನಿಖರ ಮಾಹಿತಿ ಪಡೆಯಲು ಸಿಸಿಟಿವಿ ಫೂಟೇಜ್‌ನ್ನು ಪರಿಶೀಲಿಸುತ್ತಿದ್ದೇವೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ" ಎಂದು ತಿಳಿಸಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News