ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಮದುವೆಯ ಸೀಸನ್ ನಡೆಯುತ್ತಿದೆ. ಕೊರೊನಾದಿಂದಾಗಿ ಕಳೆದ 2 ವರ್ಷಗಳಿಂದ ಯಾವುದೇ ರೀತಿಯ ಆಡಂಬರಗಳಿಲ್ಲದೆ ಮದುವೆ ಸಮಾರಂಭ ಮುಗಿದೇ ಹೋಗುತ್ತಿತ್ತು. ಆದರೆ ಇದೀಗ ಕೊರೊನಾ ನಿರ್ಬಂಧಗಳನ್ನು ತೆಮಾಡುವೆ ಸಮಾರಮಭಾಗಳಲ್ಲಿನ ವಿಭವ ಮತ್ತೆ ಮರುಕಳಿಸಿದೆ.
ಈ ಮಧ್ಯೆ, ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯ ನಿಚ್ಲಾಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ವಿವಾಹವೊಂದು ಮುರಿದು ಬಿದ್ದಿದೆ. ಮದುವೆ ದಿನ ವರಮಹಾಶಯ ಮಾಡಿರುವ ಒಂದು ತಪ್ಪಿನಿಂದ ಈ ವಿವಾಹ ಮುರಿದು ಬಿದ್ದಿದೆ. ದಿಬ್ಬಣದ ವೇಳೆ ವರ ಮಾಡಿದ ಆವಾಂತರವೇ ಇಷ್ಟಕ್ಕೆಲ್ಲಾ ಕಾರಣ. ಹೌದು ದಿಬ್ಬಣದ ಮೂಲಕ ಹೊರಟ ವರ ಮದುವೆ ಮನೆ ತಲುಪುವ ಬದಲು ಸೀದಾ ಆಸ್ಪತ್ರೆ ಸೇರುವಂತಾಗಿದೆ.
ಇದನ್ನೂ ಓದಿ : Video : ಹುಬ್ಬಳ್ಳಿಯಲ್ಲಿ ಭಾರೀ ಮಳೆ ಗಾಳಿಗೆ ಸ್ಕೂಟಿ ಸಮೇತ ಹಾರಿ ಕೆಳಗುರುಳಿದ ವಿದ್ಯಾರ್ಥಿನಿಯರು
ದಿಬ್ಬಣ ನಿಲ್ಲಿಸಿ ಶರಾಬು ಕುಡಿಯಲು ಆರಂಭಿಸಿದ ವರ :
ಎಲ್ಲಾ ಮದುವೆಯಂತೆ ಇಲ್ಲೂ ಸಂಭ್ರಮ ಎದ್ದು ಕಾಣುತ್ತಿತ್ತು. ಮದುವೆ ದಿಬ್ಬಣದಲ್ಲಿ ಹಾಡು ಕುಣಿತ ಎಲ್ಮಾರ್ಗ ಮಧ್ಯೆಯೇ ತನ್ನ ಸ್ನೇಹಿತರೊಂದಿಗೆ ಮದ್ಯ ಸೇವಿಸಲು ಆರಂಭಿಸಿದ್ದಾನೆ. ಹೀಗೆ ಮದ್ಯ ಸೇವಿಸುತ್ತಿದ್ದ ವರನ ಆರೋಗ್ಯ ಬಿಗಡಾಯಿಸಿದೆ. ಕೂಡಲೇ ವರನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ವರ ಆಸ್ಪತ್ರೆ ಸೇರಿದ ಸುದ್ದಿ ಕೇಳುತ್ತಿದ್ದಂತೆಯೇ ವಧುವಿನ ಮನೆಯವರಿಗೆ ಆಕಾಶವೇ ಕಳಚಿ ಬಿದ್ದ ಅನುಭವವಾಗಿದೆ. ತಕ್ಷಣ ವಧುವಿನ ಮನೆಯವರು ಕೂಡಾ ಆಸ್ಪತ್ರೆಗೆ ಧಾವಿಸಿದ್ದಾರೆ.
ಇನ್ನೇನು ಆಸ್ಪತ್ರೆಯಲ್ಲಿ ವರನ ಆರೋಗ್ಯ ವಿಚಾರಣೆ ವೇಳೆ, ಮದ್ಯ ಸೇವನೆಯೇ ವರನ ಆರೋಗ್ಯ ಹದಗೆಡಲು ಕಾರಣ ಎಂಬ ಸತ್ಯ ತಿಳಿದಿದೆ. ಮದ್ಯ ಸೇವನೆಯೇ ಇಷ್ಟಕ್ಕೆಲ್ಲಾ ಕಾರಣ ಎಂದು ತಿಳಿದ ಮೇಲೆ ವಧು ಮದುವೆಗೆ ನಿರಾಕರಿಸಿದ್ದಾಳೆ. ವಧುವಿನ ನಿರ್ಧಾರವನ್ನು ಆಕೆಯ ಮನೆಯವರು ಕೂಡಾ ಬೆಂಬಲಿಸಿದ್ದಾರೆ. ನಂತರ ಪೋಲಿಸರಿಗೆ ವಿಷಯ ತಿಳಿಸಲಾಯಿತು. ಪೊಲೀಸರ ಮಧ್ಯಸ್ಥಿಕೆಯಲ್ಲಿ ಎರಡು ಕಡೆಯವರು ಕುಳಿತು ಪರಸ್ಪರ ಮಾತುಕತೆ ನಡೆಸಿದ್ದಾರೆ. ಈ ಸಂಬಂಧವನ್ನು ಮುರಿಯುವುದು ಒಳ್ಳೆಯದು ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಎರಡು ಕಡೆಯವರ ಒಪ್ಪಿಗೆಯ ಮೇರೆಗೆ ನಡೆಯಬೇಕಿದ್ದ ಮಾಡುವೆ ಅರ್ಧಕ್ಕೆ ನಿಂತಿದೆ.
ಇದನ್ನೂ ಓದಿ : Viral Video: ರಸ್ತೆಮಧ್ಯೆ ಕೆಟ್ಟು ನಿಂತ ಪೊಲೀಸ್ ವ್ಯಾನ್.. ಸಾರ್ವಜನಿಕರಿಂದ ತಳ್ಳು-ಐಸಾ ತಳ್ಳು-ಐಸಾ!!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.