ನವದೆಹಲಿ: ಇಂದು ಮನೆಕೆಲಸದಿಂದ ಹಿಡಿದು ಕಚೇರಿ ಕೆಲಸಕ್ಕೂ ಕೂಡ ವಾಟ್ಸ್ ಆಪ್ (WhatsApp) ನ ಬಳಕೆಯಾಗುತ್ತಿದೆ. ಅಷ್ಟೇ ಅಲ್ಲ ಜೀವನ ಕೂಡ ಮತ್ತಷ್ಟು ಕಾಂಪ್ಲಿಕೇಟೆಡ್ ಆಗಿದೆ. ಹಲವು ಬಾರಿ ನೀವು ಸ್ವತಃ ಆನ್ಲೈನ್ ನಲ್ಲಿರಲು ಬಯಸುವುದಿಲ್ಲ ಆದರೆ. ಇತರರ ಆಕ್ಟಿವ್ ಸ್ಟೇಟಸ್ ಪರಿಕ್ಷೀಸಲು ಬಯಸುತ್ತೀರಿ. ಇಂತಹುದರಲ್ಲಿ ಟ್ರಿಕ್ ವೊಂದನ್ನು ಬಳಸಿ ನೀವು ನಿಮ್ಮ ವಾಟ್ಸ್ ಆಪ್ ಖಾತೆಯಲ್ಲಿ ಯಾರ್ಯಾರು ಆಕ್ಟಿವ್ ಆಗಿದ್ದಾರೆ ಎಂಬುದನ್ನು ಹೇಗೆ ತಿಳಿದುಕೊಳ್ಳಬೇಕು ಎಂಬುದನ್ನು ಹೇಳಿಕೊಡಲಿದ್ದೇವೆ.
ಇದನ್ನು ಓದಿ- ಮೊಬೈಲ್‌ನಲ್ಲಿ 'WhatsApp has stopped'ಎಂದು ಕಂಡರೆ ಚಿಟಿಕೆಯಲ್ಲಿ ಸರಿಪಡಿಸಿ
ಆದರೆ WhatsApp ತನ್ನ ಬಳಕೆದಾರರಿಗೆ ಈ ರೀತಿಯ ಯಾವುದೇ ಸೌಲಭ್ಯ ನೇರವಾಗಿ ನೀಡುವುದಿಲ್ಲ. ಥರ್ಡ್ ಪಾರ್ಟಿ ಆಪ್ ಸಹಾಯದಿಂದ ನೀವು ನಿಮ್ಮ ವಾಟ್ಸ್ ಆಪ್ ಖಾತೆಯನ್ನು ತೆರೆಯದೆಯೇ ಯಾರ್ಯಾರು ಆಕ್ಟಿವ್ ಆಗಿದ್ದಾರೆ ಎಂಬುದನ್ನು ಸುಲಭವಾಗಿ ತಿಳಿಯಬಹುದಾಗಿದೆ.
GBWhatsApp ತುಂಬಾ ಸಹಾಯಕ
ವಾಟ್ಸಾಪ್ ತೆರೆಯದೆ ಇತರರು ಆನ್‌ಲೈನ್‌ನಲ್ಲಿ ಇದ್ದಾರೆನೆ ಎಂಬುದನ್ನು ಒಂದು ವೇಳೆ ನೀವು ತಿಳಿಯಲು ಬಯಸುತ್ತೀರಿ ಎಂದಾದಲ್ಲಿ, ಇದಕ್ಕಾಗಿ ನೀವು GBWhatsApp ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. ಇದಕ್ಕಾಗಿ ನೀವು ಆಪ್ ಸ್ಟೋರ್‌ಗೆ ಭೇಟಿ ನೀಡಿ ಮತ್ತು GBWhatsApp ಗಾಗಿ ಹುಡುಕಾಟ ನಡೆಸಿ. ನಂತರ ಅದನ್ನು ಡೌನ್‌ಲೋಡ್ ಮಾಡಿ. ಇದು ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿರುವ ಅಪ್ಲಿಕೇಶನ್ ಆಗಿದೆ.
ಇದನ್ನು ಓದಿ- Whatsapp ಬಳಕೆದಾರರಿಗೆ ಶೀಘ್ರದಲ್ಲೇ ಸಿಗಲಿದೆ ಈ ಹೊಸ ಧಮಾಕಾ ಫೀಚರ್
ಇದನ್ನು ಹೇಗೆ ಸಕ್ರೀಯಗೊಳಿಸಬೇಕು?
- ಮೊದಲು ನೀವು GBWhatsAppನ ಸೆಟ್ಟಿಂಗ್ಸ್ ವಿಭಾಗಕ್ಕೆ ಭೇಟಿ ನೀಡಬೇಕು.
- ಇದಾದ ಬಳಿಕ ನೀವು ಚ್ಯಾಟ್ ಸ್ಕ್ರೀನ್ ಆಪ್ಶನ್ ಆಯ್ಕೆ ಮಾಡಬೇಕು.
- ಇದೀಗ ಈ ಸೆಕ್ಷನ್ ನಲ್ಲಿ ನೀವು Contact Online Toast ಮೇಲೆ ಟ್ಯಾಪ್ ಮಾಡಿ.
- ಬಳಿಕ Show Contact Online Toast ಅನ್ನು ಆಯ್ಕೆ ಮಾಡಿ, ಯಾವ ವ್ಯಕ್ತಿಯ ಆಕ್ಟಿವ್ ಸ್ಟೇಟಸ್ ನೀವು ನೋಡಲು ಬಯಸುವಿರೋ ಅವರನ್ನು ಆಯ್ಕೆ ಮಾಡಿ.
ಇದನ್ನು ಓದಿ- WhatsApp ಬಳಕೆದಾರರಿಗೊಂದು ಸಂತಸದ ಸುದ್ದಿ
ಒಮ್ಮೆ ಈ ಎಲ್ಲ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಬಳಿಕ ಆಪ್ ಅನ್ನು ಬಂದ್ ಮಾಡಿ. ನೀವು ಆಯ್ಕೆ ಮಾಡಿರುವ ಕಾಂಟಾಕ್ಟ್ WhatsApp ನಲ್ಲಿ ಸಕ್ರೀಯರಾದ ಪ್ರತಿ ವೇಳೆ ನಿಮಗೆ ಅಲರ್ಟ್ ನೋಟಿಫಿಕೇಶನ್ ಬರಲಿದೆ.