Nelamangala: ₹40 ಸಾವಿರ ಅಸಲು, ಬಡ್ಡಿ ಕೊಟ್ಟಿಲ್ಲವೆಂದು ಸಾಲಗಾರನ ಪುತ್ರಿ ಮೇಲೆ ಅತ್ಯಾಚಾರ!

Crime News: ಸಂತ್ರಸ್ತ ಬಾಲಕಿಯ ತಂದೆ ಆರೋಪಿ ಬಳಿ 70 ಸಾವಿರ ರೂ. ಹಣ ಪಡೆದಿದ್ದರು. ಈ ಹಿಂದೆ 30 ಸಾವಿರ ರೂ. ಸಾಲವನ್ನು ತೀರಿಸಿದ್ದರು. ಇನ್ನುಳಿದ 40 ಸಾವಿರ ರೂ. ಜೊತೆಗೆ ಬಡ್ಡಿ ಹಣ ನೀಡದಿದ್ದಕ್ಕೆ ರವಿಕುಮಾರ್ ಪೀಡಿಸುತ್ತಿದ್ದ ಎನ್ನಲಾಗಿದೆ. 

Written by - Puttaraj K Alur | Last Updated : Oct 20, 2024, 10:45 PM IST
  • ₹40 ಸಾವಿರ ಅಸಲು, ಬಡ್ಡಿ ಕೊಟ್ಟಿಲ್ಲವೆಂದು ಸಾಲಗಾರನ ಪುತ್ರಿ ಮೇಲೆ ಅತ್ಯಾಚಾರ!
  • ಬೆಂಗಳೂರಿನ ಉತ್ತರ ತಾಲೂಕಿನ ಮಾದನಾಯಕಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಘಟನೆ
  • 17 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪಿ ಬಂಧಿಸಿದ ಪೊಲೀಸರು
Nelamangala: ₹40 ಸಾವಿರ ಅಸಲು, ಬಡ್ಡಿ ಕೊಟ್ಟಿಲ್ಲವೆಂದು ಸಾಲಗಾರನ ಪುತ್ರಿ ಮೇಲೆ ಅತ್ಯಾಚಾರ! title=
ಸಾಲಗಾರನ ಪುತ್ರಿ ಮೇಲೆ ಅತ್ಯಾಚಾರ!

Nelamangala Crime News: ₹40 ಸಾವಿರ ಅಸಲು ಮತ್ತು ಬಡ್ಡಿ ಕೊಟ್ಟಿಲ್ಲವೆಂದು ಸಾಲಗಾರನ ಪುತ್ರಿ ಮೇಲೆ ಅತ್ಯಾಚಾರ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ. ಹೌದು, ಹಾಡಹಗಲೇ 17 ವರ್ಷದ ಬಾಲಕಿ ಮೇಲೆ ದುಷ್ಕರ್ಮಿಯೊಬ್ಬ ಅತ್ಯಾಚಾರ ನಡೆಸಿರುವ ಘಟನೆ ಬೆಂಗಳೂರಿನ ಉತ್ತರ ತಾಲೂಕಿನ ಮಾದನಾಯಕಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 

ಬಾಲಕಿ ನೀಡಿದ ದೂರಿನ ಮೇರೆಗೆ ಆರೋಪಿ ರವಿಕುಮಾರ್ (39) ಎಂಬಾತನನ್ನು ಬಂಧಿಸಲಾಗಿದೆ. ಈ ಬಗ್ಗೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದೆ.

ಇದನ್ನೂ ಓದಿ: ಬಿಜೆಯ 2 ಅಭ್ಯರ್ಥಿಗಳ ಘೋಷಣೆ, 1 ಜೆಡಿಎಸ್‌ಗೆ ಬೇಕು ಎಂದಿದ್ದಾರೆ : ಬಿಎಸ್‌ವೈ

ಸಂತ್ರಸ್ತ ಬಾಲಕಿಯ ತಂದೆ ಆರೋಪಿ ಬಳಿ 70 ಸಾವಿರ ರೂ. ಹಣ ಪಡೆದಿದ್ದರು. ಈ ಹಿಂದೆ 30 ಸಾವಿರ ರೂ. ಸಾಲವನ್ನು ತೀರಿಸಿದ್ದರು. ಇನ್ನುಳಿದ 40 ಸಾವಿರ ರೂ. ಜೊತೆಗೆ ಬಡ್ಡಿ ಹಣ ನೀಡದಿದ್ದಕ್ಕೆ ರವಿಕುಮಾರ್ ಪೀಡಿಸುತ್ತಿದ್ದ ಎನ್ನಲಾಗಿದೆ. 

ಈ ಹಿಂದೆ ಬಲವಂತವಾಗಿ ಬಾಲಕಿಗೆ ರವಿಕುಮಾರ್ ಕಿಸ್​ ಕೊಟ್ಟಿದ್ದ. ಕಿಸ್​ ಕೊಟ್ಟಿರುವುದನ್ನು ಫೋಟೋ ತೆಗೆದಿಟ್ಟುಕೊಂಡು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡುವುದಾಗಿ ಬೆದರಿಕೆ ಹಾಕಿದ್ದ. ಆದರೆ ಭಾನುವಾರ(ಅಕ್ಟೋಬರ್‌ ೨೦) ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಸದ್ಯ ಆರೋಪಿ ರವಿಕುಮಾರ್‌ನನ್ನು ಬಂಧಿಸಿರುವ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಜೈಲಿಗಟ್ಟಿದ್ದಾರೆ.

ಇದನ್ನೂ ಓದಿ: ಮಂತ್ರಿ ಮಾಲ್ ಶಾಪಿಂಗ್ ಫೆಸ್ಟಿವಲ್ ಗೆ ನಟಿ ಶ್ರಿಯಾ ಶರಣ್ ಚಾಲನೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News