ಪತ್ನಿ ಕಪ್ಪು ಎಂದು ಅವಮಾನಿಸಿ ವರದಕ್ಷಿಣೆ ಕಿರುಕುಳ; ನವವಿವಾಹಿತೆ ನೇಣಿಗೆ ಶರಣು!

Dowry Harassment: ಕಳೆದ 7 ತಿಂಗಳ ಹಿಂದಷ್ಟೇ ಬಿಂದುಶ್ರೀಯನ್ನು ಆವಲಹಳ್ಳಿ ಬಳಿಯ ಹಿರಂಡಹಳ್ಳಿಯ ರಾಘವೇಂದ್ರ ಎಂಬುವವರಿಗೆ ಮದುವೆ ಮಾಡಿಕೊಡಲಾಗಿತ್ತು. ಕೇವಲ ಎರಡೇ ತಿಂಗಳಿಗೆ ಕಾರು ಹಾಗೂ 20 ಲಕ್ಷ ರೂ. ಹಣ ತರುವಂತೆ ಬಿಂದುಶ್ರೀಗೆ ಪೀಡಿಸಲಾಗಿತ್ತು ಎಂದು ಆರೋಪಿಸಲಾಗಿದೆ. 

Written by - Puttaraj K Alur | Last Updated : Sep 16, 2024, 04:37 PM IST
  • ಪತ್ನಿ ಕಪ್ಪು ಎಂದು ಅವಮಾನಿಸಿ ವರದಕ್ಷಿಣೆ ಕಿರುಕುಳ
  • ಪತಿ ಅವಮಾನಿಸಿದ್ದಕ್ಕೆ ನೊಂದು ಪತ್ನಿ ಆತ್ಮಹತ್ಯೆ
  • ನೇಣು ಹಾಕಿಕೊಂಡು ನವವಿವಾಹಿತೆ ಆತ್ಮಹತ್ಯೆಗೆ ಶರಣು
ಪತ್ನಿ ಕಪ್ಪು ಎಂದು ಅವಮಾನಿಸಿ ವರದಕ್ಷಿಣೆ ಕಿರುಕುಳ; ನವವಿವಾಹಿತೆ ನೇಣಿಗೆ ಶರಣು! title=
ನವವಿವಾಹಿತೆ ಆತ್ಮಹತ್ಯೆಗೆ ಶರಣು!

Dowry Harassment: ಕಪ್ಪು ಎಂದು ಅವಮಾನಿಸಿ ವರದಕ್ಷಿಣೆ ಕಿರುಕುಳ ನೀಡಿದ್ದಕ್ಕೆ ನವವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ. ಗಾಂಧಿನಗರ ನಿವಾಸಿ ಬಿಂದುಶ್ರೀ (22) ಆತ್ಮಹತ್ಯೆಗೆ ಶರಣಾದವರು. ಗಂಡನ ಮನೆಯವರ ವರದಕ್ಷಿಣೆ ಕಿರುಕುಳ ತಾಳಲಾರದೇ ಚಿಂತಾಮಣಿಯ ತವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 

ಕಳೆದ 7 ತಿಂಗಳ ಹಿಂದಷ್ಟೇ ಅಂದರೆ 2024ರ ಫೆಬ್ರವರಿ 21ರಂದು ಬಿಂದುಶ್ರೀಯನ್ನು ಆವಲಹಳ್ಳಿ ಬಳಿಯ ಹಿರಂಡಹಳ್ಳಿಯ ರಾಘವೇಂದ್ರ ಎಂಬುವವರಿಗೆ ಕೈವಾರ ಸಮೀಪ ಮದುವೆ ಮಾಡಿಕೊಡಲಾಗಿತ್ತು. ಕೇವಲ ಎರಡೇ ತಿಂಗಳಿಗೆ ಕಾರು ಹಾಗೂ 20 ಲಕ್ಷ ರೂ. ಹಣ ತರುವಂತೆ ಬಿಂದುಶ್ರೀಗೆ ಪೀಡಿಸಲಾಗಿತ್ತು ಎಂದು ಆರೋಪಿಸಲಾಗಿದೆ. ಇದೇ ವಿಚಾರವನ್ನು ಬಿಂದುಶ್ರೀ ತನ್ನ ಪೋಷಕರಿಗೆ ತಿಳಿಸಿದ್ದಳು. ಆದರೆ ಬಿಂದುಶ್ರೀ ಪೋಷಕರು ಅಷ್ಟೊಂದು ಹಣ ನಮ್ಮ‌ ಬಳಿ‌ ಇಲ್ಲ, ಸಾಧ್ಯವಾದಷ್ಟು ಕೊಡುವುದಾಗಿ ತಿಳಿಸಿದ್ದರು.

ಇದನ್ನೂ ಓದಿ: ಜಾತಿ ನಿಂದನೆ ಕೇಸಲ್ಲಿ ಶಾಸಕ ಮುನಿರತ್ನ ಬಂಧನ ಪ್ರಕರಣ

ಇನ್ನೂ ಚಿಂತಾಮಣಿ ಕಾಲೇಜಿನಲ್ಲಿ ಪದವಿ ವ್ಯಾಸಾಂಗ ಮಾಡುತ್ತಿದ್ದ ಬಿಂದುಶ್ರೀ‌ ಕಿರುಕುಳಕ್ಕೆ ಹೆದರಿ ತವರುಮನಗೆ ಬಂದಿದ್ದಳು. ಆಕೆಯನ್ನು ವಾಪಸ್ ಗಂಡನ ಮನೆಗೆ ಬಿಡಲೆಂದು ಹೋದ ವೇಳೆ, ʼನಮ್ಮ ಮನೆಗೆ ಬರಬೇಡವೆಂದು ಗಂಡನ ಮನೆಯವರು ವಾಪಸ್ ಕಳುಹಿಸಿದ್ದಾರೆ. ಇದೇ ವಿಚಾರವನ್ನು ಬಿಂದುಶ್ರೀ ತವರು ಮನೆಗೆ ಮುಟ್ಟಿಸಿದ್ದಾಳೆ. ತದ ನಂತರ ಪೋಷಕರು ಆಕೆಯನ್ನು ವಾಪಸ್ ತಮ್ಮ ಮನೆಗೆ ಕರೆತಂದು ಸೆಪ್ಟೆಂಬರ್ 12ರಂದು ಅವಲಹಳ್ಳಿಯಲ್ಲಿ ದೂರು ದಾಖಲಿಸಿದ್ದರು.

ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದಂತೆಯೇ ರಾಘವೇಂದ್ರ ಅವರ ತಂದೆ ಮುನಿರಾಜು ನಮಗೆ ಗೃಹ ಸಚಿವರ ಮತ್ತು ಮಿಲಿಟರಿ ಸಪೋರ್ಟ್ ಇದೆ ಎಂದು ಬೆದರಿಸಿದ್ದರಂತೆ. ಹೀಗಾಗಿ ಬಿಂದುಶ್ರೀ ತವರುಮನೆ ಚಿಂತಾಮಣಿಗೆ ಬಂದು ನೆಲೆಸಿದ್ದಳು. ತಾಯಿ ದೇವಸ್ಥಾನಕ್ಕೆ ಹೋದ ವೇಳೆ ಬಿಂದುಶ್ರೀ ತನಗೆ ತಿಂಡಿ ತರುವಂತೆ ತಂದೆಗೆ ಹೇಳಿದ್ದಾಳೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಆಕೆ ಮನೆಯ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಇದನ್ನೂ ಓದಿ: Me Too: ಇಂದು ಫಿಲ್ಮ್‌ ಚೇಂಬರ್‌ನಲ್ಲಿ ಮಹತ್ವದ ಸಭೆ

ತಂದೆ ವಾಪಸ್‌ ಬಂದು ನೋಡಿದಾಗ ಬಿಂದುಶ್ರೀ ನೇಣಿನ ಕುಣಿಕೆಯಲ್ಲಿ ಒದ್ದಾಡುತ್ತಿರುವುದನ್ನು ಕಂಡು ಗಾಬರಿಯಿಂದ ಅಕ್ಕಪಕ್ಕದವರನ್ನು ಕೂಗಿ ಕರೆದಿದ್ದಾರೆ. ಕೂಡಲೇ ಆಕೆಯನ್ನು ಕೆಳಕ್ಕೆ ಇಳಿಸಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದ್ದಾರೆ. ಆದರೆ ಬಿಂದುಶ್ರೀ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. 

ಮಗಳ ಸಾವಿನಿಂದ ಮನನೊಂದ ತಂದೆ ಕೆ.ಬಿ.ದೇವರಾಜ್‌ ಸಹ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಗಳ ಆತ್ಮಹತ್ಯೆಯಿಂದ ತಾಯಿಯೂ ಸಹ ಆಘಾತಕ್ಕೊಳಗಾಗಿದ್ದಾರೆ. ಪ್ರಕರಣ ಸಂಬಂಧ ಬಿಂದುಶ್ರೀ ಪತಿ ರಾಘವೇಂದ್ರ, ಮಾವ ಎನ್.ಮುನಿರಾಜು, ಅತ್ತೆ ಲತಾ, ನರಸಿಂಹಯ್ಯ ವಿರುದ್ಧ ಪ್ರಕರಣ ದಾಖಲಾಗಿದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News